ಸ್ಮಾರ್ಟ್‌ಫೋನ್ (smartphone) ಖರೀದಿ ಮಾಡುವಾಗ ಮೊದಲು ನೋಡುವುದು ಬ್ಯಾಟರಿ ಬ್ಯಾಕ್‌ಅಪ್. ಎಷ್ಟು ಸಮಯದ ತನಕ ಚಾರ್ಜ್ ಉಳಿಯುತ್ತದೆ, ಯಾರೂ ಸಹ ಚಾರ್ಜಿಂಗ್ ಸ್ಪೀಡ್ ಇದೆಲ್ಲಾ ನೋಡದೆ ಫೋನ್ ಖರೀದಿ ಮಾಡುವುದಿಲ್ಲ. ಇಷ್ಟೆಲ್ಲ ನೋಡಿದ ಮೇಲೆ ಉತ್ತಮ ಬ್ಯಾಟರಿ ಆಯ್ಕೆಯನ್ನು ಹೊಂದಿರುವ ಫೋನ್ ಅನ್ನು ಖರೀದಿಸುತ್ತೇವೆ. ಆದರೆ ಬ್ಯಾಟರಿ ಇನ್ನೂ ವೇಗವಾಗಿ ಖಾಲಿಯಾಗುತ್ತಿದೆ ಎಂದು ತಲೆಬಿಸಿ ಮಾಡಿಕೊಂಡಿದ್ದೀರಾ? ಬ್ಯಾಟರಿ ಬಾಳಿಕೆ ಸೇರಿದಂತೆ ಎಲ್ಲ ವಿಷಯದಲ್ಲಿ ಸ್ಮಾರ್ಟ್‌ಫೋನ್‌ಗಳು ಇತ್ತೀಚಿನ ವರ್ಷಗಳಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಬದಲಾವಣೆಯಾಗುತ್ತಿವೆ. ಹಲವು ಸ್ಮಾರ್ಟ್‌ಫೋನ್‌ಗಳಲ್ಲಿ ಹೊಸ ತಂತ್ರಜ್ಞಾನದ ಜೊತೆಗೆ, ವೇಗದ ಚಾರ್ಜಿಂಗ್‌ನಂತಹ ಕೆಲವು ಉತ್ತಮ ವೈಶಿಷ್ಟ್ಯಗಳನ್ನು ಸೇರಿಸಲಾಗಿದೆ. (smartphone battery life).
ಭವಿಷ್ಯದಲ್ಲಿ ಎಂತಹ ಸ್ಮಾರ್ಟ್‌ಫೋನ್‌ಗಳು ಬೇಕಾದರೂ ಬದಬಹುರರು, ಈಗ ನನ್ನ ಸ್ಮಾರ್ಟ್‌ಫೋನ್ ಬ್ಯಾಟರಿ ಪದೇ ಪದೇ ಖಾಲಿಯಾಗುತ್ತಿದೆ, ಎಷ್ಟು ಸಲ ಚಾರ್ಜ್ ಹಾಕಿದರೂ ಸಾಲದು ಎಂದು ಚಿಂತಿತರಾಗಿದ್ದರೆ ನಿಮ್ಮ ಚಿಂತೆ ಬಿಟ್ಟುಬಿಡಿ. ಯಾವ್ದಕ್ಕೂ ಈ ಸ್ಟೋರಿಯ ಮುಂದಿನ ಭಾಗ ಓದಿ.
- ವೈಬ್ರೇಷನ್ ಮೋಡ್‌ನಲ್ಲಿರಿಸುವುದನ್ನು ತಪ್ಪಿಸಿ. ಇದು ಸಾಕಷ್ಟು ಪ್ರಮಾಣದಲ್ಲಿ ಬ್ಯಾಟರಿ ಚಾರ್ಜ್ ಖಾಲಿ ಮಾಡುತ್ತದೆ. ಅಗತ್ಯವಿದ್ದರೆ ಮಾತ್ರ ಈ ಫೀಚರ್ ಬಳಸಿ.
- ಬ್ಲಾಕ್ ವಾಲ್ ಪೇಪರ್ ಬಳಸಿ. ಸಾಧ್ಯವಾದಷ್ಟು ಬ್ರೈಟ್ ಕಲರ್ ವಾಲ್ ಪೇಪರ್ ಅವಾಯ್ಡ್ ಮಾಡಿ. ಬ್ರೈಟ್ ಕಲರ್ ಬ್ಯಾಟರಿ ಡ್ರೈನ್ ಮಾಡುತ್ತವೆ. ಹಾಗಾಗಿ ಕಪ್ಪು ಬಣ್ಣದ ವಾಲ್ ಪೇಪರ್ ಬಳಕೆ ಒಳ್ಳೆಯದು. ಇದರಿಂದ ಫೋನ್ ಚಾರ್ಜ್ ಕೂಡ ಸಾಕಷ್ಟು ಸಮಯ ಬರುತ್ತದೆ
- ಅಗತ್ಯ ಇಲ್ಲದಿರುವಾಗ ವೈಫೈ, ಬ್ಲೂಟೂತ್, ಡಾಟಾ, ಜಿಪಿ ಎಸ್ ಲೋಕೇಶನ್ ಮುಂತಾದ ಸೌಲಭ್ಯಗಳನ್ನು ಆಫ್ ಮಾಡಿ. ಇದರಿಂದ ಚಾರ್ಜ್ ಸೇವ್ ಮಾಡಬಹುದು.
- ಆಟೋಮೆಟಿಕ್ ಸಿಂಕ್ ಫೀಚರ್ ಆಫ್ ಮಾಡಿ. ವಾಟ್ಸಾಪ್, ಟ್ವಿಟ್ಟರ್, ಮೇಲ್ ಮುಂತಾದ ಆ್ಯಪ್‌ಗಳು ಆಟೋಮೆಟಿಕ್ ಸಿಂಕ್ ಆಗುತ್ತವೆ. ಇದರಿಂದ ಹೊಸ ಅಪ್ಡೇಟ್ ತಿಳಿಯಲು ಸಹಾಯವಾಗುತ್ತದೆ. ಆದರೆ, ನೆನಪಿರಲಿ ಇಂತಹ ಫೀಚರ್ ಮೊಬೈಲ್ ಬ್ಯಾಟರಿಗೆ ಹಾನಿಕಾರಕ. ಅವುಗಳನ್ನು ಆಫ್ ಮಾಡಿಟ್ಟರೆ ನಿಮ್ಮ ಸ್ಮಾರ್ಟ್‌ಫೋನ್ ಚಾರ್ಜ್ ಇನ್ನಷ್ಟು ಕಾಳ ಉಳಿಯಬಲ್ಲದು.
- ಅನಗತ್ಯ ವಿಜೆಟ್ಸ್ ಡಿಲೀಟ್ ಮಾಡಿ. ವಿಜೆಟ್ಸ್ ಗಳು ನಮಗೆ ಅರಿವಿಲ್ಲದೆ ಸಾಕಷ್ಟು ಬ್ಯಾಟರಿ ಪವರ್ ಅನ್ನು ಖಾಲಿ ಮಾಡುತ್ತವೆ.
ಭವಿಷ್ಯದಲ್ಲಿ ಜನರು ಪೋರ್ಟಬಲ್ ಬ್ಯಾಟರಿಗಳನ್ನು ಚಾರ್ಜ್ ಮಾಡುವುದನ್ನು ನೀವು ನೋಡುವುದಿಲ್ಲ. ಏಕೆಂದರೆ ನಮ್ಮ ಸ್ಮಾರ್ಟ್‌ಫೋನ್‌ಗಳ ಬ್ಯಾಟರಿಗಳು ಅರ್ಧ ದಿನದಲ್ಲೇ ಖಾಲಿಯಾಗುವ ದಿನಗಳು ಕಳೆದುಹೋಗಿವೆ.
ಇದನ್ನೂ ಓದಿ : Reliance Jio Prepaid Plans: ಡಿಸ್ನಿ+ಹಾಟ್ ಸ್ಟಾರ್ ಪ್ರಿಪೇಯ್ಡ್ ಶುಲ್ಕ ಏರಿಸಿದ ರಿಲಯನ್ಸ್ ಜಿಯೋ: ಯಾವ ಪ್ಲಾನಿಗೆ ಏನೇನು ಸಿಗುತ್ತೆ?
(Save Your smartphone Battery Life here is the tips in Kannada)