Gujarat Court :ಅತ್ಯಾಚಾರ ನಡೆದ ಒಂದೇ ತಿಂಗಳಲ್ಲಿ ಆರೋಪಿಗೆ ಶಿಕ್ಷೆ ಪ್ರಕಟಿಸಿದೆ ಈ ನ್ಯಾಯಾಲಯ..!

ನಮ್ಮಲ್ಲಿ ಯಾವುದೇ ಪ್ರಕರಣಗಳು ದಾಖಲಾದರೂ ಸಹ ಅದು ಕೋರ್ಟ್​ ಮೆಟ್ಟಿಲೇರಿ ವಿಚಾರಣೆ ನಡೆದು ತೀರ್ಪು ಬರುವಷ್ಟರಲ್ಲಿ ವರ್ಷಗಳೇ ಕಳೆದಿರುತ್ತದೆ. ಅತ್ಯಾಚಾರ ಪ್ರಕರಣಗಳಲ್ಲಂತೂ ಎಲ್ಲಾ ಸಾಕ್ಷ್ಯಗಳು ಎದುರಿಗಿದ್ದರೂ ಸಹ ತೀರ್ಪು ಬರುವುದು ಮಾತ್ರ ಐದಾರು ವರ್ಷಗಳ ಬಳಿಕವೇ ಎಂಬಂತಾಗಿದೆ. ಆದರೆ ಈ ಎಲ್ಲಾ ಮಾತಿಗೆ ವಿರುದ್ಧವಾಗಿ ಎಂಬಂತೆ ಗುಜರಾತ್​ನಲ್ಲಿ(Gujarat Court) ಅತ್ಯಾಚಾರ ( rape )ನಡೆದ ಕೇವಲ 28 ದಿನಗಳಲ್ಲಿ ಆರೋಪಿಯನ್ನು ( man for rape ) ದೋಷಿ ಎಂದು ಕೋರ್ಟ್ ಪರಿಗಣಿಸಿದೆ.

ಎರಡೂವರೆ ವರ್ಷದ ಕಂದಮ್ಮನ ಮೇಲೆ ಅತ್ಯಾಚಾರವೆಸಗಿ ಬಳಿ ಕೊಲೆಗೈದಿದ್ದ ವಲಸೆಕಾರ್ಮಿಕನನ್ನು ಪೊಲೀಸರು ಬಂಧಿಸಿ ನ್ಯಾಯಾಂಗದ ಮುಂದೆ ಹಾಜರುಪಡಿಸಿದ್ದರು. ಈ ಸಂಬಂಧ ವಿಚಾರಣೆ ಕೈಗೆತ್ತಿಕೊಂಡ ಗುಜರಾತ್​ ವಿಶೇಷ ನ್ಯಾಯಾಲಯ ಘಟನೆ ನಡೆದ ಕೇವಲ 1 ತಿಂಗಳೊಳಗಾಗಿ ಆರೋಪಿಯನ್ನು ದೋಷಿ ಎಂದು ಪರಿಗಣಿಸಿದೆ. ಬಿಹಾರ ಮೂಲದ ವಲಸೆ ಕಾರ್ಮಿಕನಾಗಿದ್ದ ಸೂರತ್​ ನಗರದ ಪಾಂಡೇಸರ ಎಂಬಲ್ಲಿ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಈತನಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದರು. ಬಿಹಾರ ಮೂಲದ ವಲಸೆ ಕಾರ್ಮಿಕ ದಂಪತಿಯ ಎರಡೂವರೆ ವರ್ಷದ ಮಗುವನ್ನು ಅಪಹರಿಸಿದ್ದ ಯಾದವ್​​​​ ಆಕೆಯ ಮೇಲೆ ಅತ್ಯಾಚಾರಗೈದು ಬಳಿಕ ಕೊಲೆ ಮಾಡಿದ್ದ. ನವೆಂಬರ್​ 4ರಂದು ಈ ಘಟನೆ ನಡೆದಿತ್ತು.

ಪಬ್ಲಿಕ್​ ಪ್ರಾಸಿಕ್ಯೂಟರ್​​ ನಯನ್​​ ಸುಖದ್ವಾಲಾ ಅತ್ಯಾಚಾರಿ ಯಾದವ್​​ಗೆ ಮರಣದಂಡನೆ ನೀಡುವಂತೆ ಆಗ್ರಹಿಸಿದ್ದರು. ಆದರೆ ಆತನಿಗೆ ಇಬ್ಬರು ಮಕ್ಕಳಿರುವ ಹಿನ್ನೆಲೆ ಅವರ ಭವಿಷ್ಯ ಅತಂತ್ರವಾಗದಂತೆ ನೋಡಿಕೊಳ್ಳುವ ಸಲುವಾಗಿ ಮರಣದಂಡನೆ ನೀಡದಂತೆ ಕೋರ್ಟ್​ ಎದುರು ಯಾದವ್​ ಪರ ವಕೀಲರು ಮನವಿ ಮಾಡಿದ್ದರು. ವಾದ – ವಿವಾದಗಳನ್ನು ಆಲಿಸಿದ ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶೆ ಪಿ.ಎಸ್​​ ಕಲಾ ಆರೋಪಿ ಯಾದವ್​ನನ್ನು ದೋಷಿ ಎಂದು ಪರಿಗಣಿಸಿದ್ದು ತೀರ್ಪನ್ನು ಇಂದಿಗೆ ಕಾಯ್ದಿರಿಸಿದೆ.

ಇದನ್ನು ಓದಿ: Girl Molested : ವಿದ್ಯುತ್‌ ಮೀಟರ್‌ ರೀಡಿಂಗ್‌ಗೆ ಮನೆಗೆ ಬಂದ : 12 ವರ್ಷದ ಬಾಲಕಿಗೆ ಲೈಂಗಿಕ ದೌರ್ಜನ್ಯವೆಸಗಿದ ಕಾಮುಕ

ಇದನ್ನು ಓದಿ : Records Intimate Video : ಕ್ಲಿನಿಕ್​​ನಲ್ಲಿಯೇ ಸ್ನೇಹಿತನೊಂದಿಗೆ ವೈದ್ಯೆಯ ಲವ್ವಿ-ಡವ್ವಿ..! ವಿಡಿಯೋ ರೆಕಾರ್ಡ್​ ಮಾಡಿದ ಕಾಂಪೌಂಡರ್​ ಮಾಡಿದ್ದೇನು ಗೊತ್ತಾ..?

Gujarat Court convicts man for rape, murder of minor girl within month of his arrest

Comments are closed.