Smart footwear: ಮಹಿಳೆಯರ ಸಂರಕ್ಷಣೆಗಾಗಿ ಸ್ಮಾರ್ಟ್‌ ಚಪ್ಪಲಿ ಆವಿಷ್ಕರಿಸಿದ ಹತ್ತನೆ ತರಗತಿ ವಿದ್ಯಾರ್ಥಿನಿ

ಕಲ್ಬುರ್ಗಿ: (Smart footwear) ಹತ್ತನೇ ತರಗತಿ ವಿದ್ಯಾರ್ಥಿಯೋರ್ವಳು ಮಹಿಳೆಯರ ಸಂರಕ್ಷಣೆಗಾಗಿ ಸ್ಮಾರ್ಟ್‌ ಚಪ್ಪಲಿಯನ್ನು ಆವಿಷ್ಕರಿಸಿದ್ದಾಳೆ. ಕಲ್ಬುರ್ಗಿಯ ಖಾಸಗಿ ಶಾಲೆಯೊಂದರ ಹತ್ತನೇ ತರಗತಿಯ ವಿದ್ಯಾರ್ಥಿನಿ ವಿಜಯಲಕ್ಷ್ಮಿ ಜಮಾದರ್‌ ಎನ್ನುವಾಕೆಯೇ ಸ್ಮಾರ್ಟ್‌ ಚಪ್ಪಲಿಯನ್ನು ಆವಿಷ್ಕರಿಸಿದ ವಿದ್ಯಾರ್ಥಿನಿ.

ಖಾಸಗಿ ಶಾಲೆಯೊಂದರಲ್ಲಿ ಹತ್ತನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿನಿಯೋರ್ವಳು ಮಹಿಳೆಯರ ರಕ್ಷಣೆಗಾಗಿ ಸ್ಮಾರ್ಟ್‌ ಚಪ್ಪಲಿ(Smart footwear)ಯನ್ನು ಆವಿಷ್ಕರಿಸಿದ್ದು, ಈ ಚಪ್ಪಲಿಯ ಕೆಳಭಾಗದಲ್ಲಿ ಬ್ಯಾಟರಿ ಡಿವೈಸ್‌, ತಾಮ್ರ ತಂತಿಗಳು ಜೊತೆಗೆ ಲಿಂಕ್‌ ಆಪ್‌ ಟೆಕ್ನೋಲಜಿಯನ್ನು ಅಳವಡಿಸಲಾಗಿದೆ. ಇದರ ವಿಶೇಷತೆ ಏನೆಂದರೇ ಮಹಿಳೆಯರ ಮೇಲೆ ಅತ್ಯಾಚಾರ ನಡೆಸಲು ಬಂದರೆ ಅತ್ಯಾಚಾರಿಗಳಿಗೆ ಶಾಕ್‌ ಕೊಡುವ ಸಾಮರ್ಥ್ಯ ಇದಕ್ಕಿದೆ. ಇದು ಫೋನ್‌ ಬೇಸ್‌ ಮೇಲೆ ಕಾರ್ಯ ನಿರ್ವಹಿಸುತ್ತದೆ.

ನಿಮ್ಮ ಮೊಬೈಲ್‌ ನ ಪ್ಲೇ ಸ್ಟೋರ್‌ ಗೆ ಹೋಗಿ ಲಿಂಕ್‌ ಆಪ್‌ ಅನ್ನು ಡೌನ್‌ ಲೋಡ್‌ ಮಾಡಬೇಕು ನಂತರ ನಿಮ್ಮ ಯುಸರ್‌ ಐಡಿ ಹಾಗೂ ಪಾಸ್‌ ವರ್ಡ್‌ ಹಾಕಿದರೆ ನಿಮ್ಮ ಮೊಬೈಲ್‌ ಗೆ ಕನೆಕ್ಟ್‌ ಆಗುತ್ತೆ. ಯಾರಾದರು ನಿಮ್ಮ ಮೇಲೆ ಅತ್ಯಾಚಾರವೆಸಗಲು ಬಂದಾಗ ಚಪ್ಪಲಿಯಲ್ಲಿರುವ ಬಟನ್‌ ಅನ್ನು ತುದಿಗಾಲಿನಲ್ಲಿ ಒತ್ತಿ ಅತ್ಯಾಚಾರ ಮಾಡಲು ಬಂದವರನ್ನು ಮುಟ್ಟಿದರೆ ಸಾಕು, 0.5 ಆಂಪೆರ್‌ ಕರೆಂಟ್‌ ಉತ್ಪತ್ತಿಯಾಗಿ ಶಾಕ್‌ ತಗಲುತ್ತದೆ. ಅಲ್ಲದೇ ಈ ಚಪ್ಪಲಿ ಫೋನ್‌ ಬೇಸ್‌ ಮೇಲೆ ಕಾರ್ಯ ನಿರ್ವಹಿಸುವ ಕಾರಣ ನಿಮ್ಮ ಮೊಬೈಲ್‌ ಸಂಪರ್ಕದಲ್ಲಿರುವ ಪ್ರತಿಯೊಬ್ಬರಿಗು ಮೆಸೆಜ್‌ ಜೊತೆಗೆ ಲೈವ್‌ ಲೊಕೇಶನ್‌ ಕೂಡ ಶೇರ್‌ ಆಗುತ್ತದೆ. ಇದರಿಂದಾಗಿ ಮಹಿಳೆಯರು ಅಪಾಯದಿಂದ ಪಾರಾಗಬಹುದು.

ಇದನ್ನೂ ಓದಿ : Whatsapp new feature: ಇನ್ಮುಂದೆ ವಾಟ್ಸಪ್ ನಲ್ಲಿ ನಿಮಗೆ ನೀವೇ ಮೆಸೇಜ್ ಮಾಡ್ಕೊಳಿ; ಸ್ಟೇಟಸ್ ನಲ್ಲಿ ವಾಯ್ಸ್ ಮೆಸೇಜ್ ಕೂಡಾ ಹಾಕ್ಕೊಳಿ..

ಇದನ್ನೂ ಓದಿ : Whatsapp new feature: ಇನ್ಮುಂದೆ ವಾಟ್ಸಪ್ ನಲ್ಲಿ ನಿಮಗೆ ನೀವೇ ಮೆಸೇಜ್ ಮಾಡ್ಕೊಳಿ; ಸ್ಟೇಟಸ್ ನಲ್ಲಿ ವಾಯ್ಸ್ ಮೆಸೇಜ್ ಕೂಡಾ ಹಾಕ್ಕೊಳಿ..

ಇದೀಗ ಈ ವಿದ್ಯಾರ್ಥಿಯ ಆವಿಷ್ಕಾರಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದರ ವಿಡಿಯೋ ಸಕತ್‌ ವೈರಲ್‌ ಕೂಡ ಆಗುತ್ತಿದೆ.

https://www.youtube.com/watch?v=tyj3xny52tk&feature=youtu.be

(Smart footwear) A student of class 10 has invented smart footwear for the protection of women. Vijayalakshmi Jamadar, a class 10 student of a private school in Kalburgi, is the student who invented the smart shoe.

Comments are closed.