ಭಾನುವಾರ, ಏಪ್ರಿಲ್ 27, 2025
HometechnologyTechnology for Disability people : ವಿಕಲಚೇತನರಿಗೂ ಸಹಾಯವಾಗುವ ತಂತ್ರಜ್ಞಾನದ ಬಗ್ಗೆ ನಿಮಗೆ ಗೊತ್ತೇ?

Technology for Disability people : ವಿಕಲಚೇತನರಿಗೂ ಸಹಾಯವಾಗುವ ತಂತ್ರಜ್ಞಾನದ ಬಗ್ಗೆ ನಿಮಗೆ ಗೊತ್ತೇ?

- Advertisement -

ವಿಕಲಚೇತನಿರಿಗೆ ಸಹಾಯವಾಗುವ ಅನೇಕ ಸಾಧನಗಳು ಆವಿಷ್ಕಾರವಾಗಿದೆ (Technology for Disability people). ಅವುಗಳಲ್ಲಿ ಸಹಾಯಕ ತಂತ್ರಜ್ಞಾನವು(Assistive Technology) ಒಂದು. ಇದು ದೈಹಿಕ ನ್ಯೂನತೆ, ಮಾನಸಿಕ ದುರ್ಬಲತೆ, ವಿಕಲಾಂಗ ವ್ಯಕ್ತಗಳಿಗೆ ಸಹಾಯ ಮಾಡಬಲ್ಲದು. ಕಲಿಕೆಯಲ್ಲಿ ಅಸಮರ್ಥ ಹೊಂದಿರುವವರಿಗೆ ಸಹಾಯಕ ತಂತ್ರಜ್ಞಾನ ಬಹಳ ನೆರವು ನೀಡಬಲ್ಲದು.

ಕಲಿಕೆಯನ್ನು ಸುಧಾರಿಸಿಕೊಳ್ಳಲು ತಂತ್ರಜ್ಞಾನದ ಮೊರೆಹೋಗುವುದು ಯುವಜನರಿಗೆ ಒಂದು ಸಹಾಯಕ ವಿಧಾನವಾಗಿದೆ. ಡೌನ್‌ ಸಿಂಡ್ರೋಮ್‌ ಹೊಂದಿರುವ ಮಕ್ಕಳು ತಮ್ಮ ದೌರ್ಬಲ್ಯಗಳನ್ನು ಸರಿಪಡಿಸಿಕೊಳ್ಳಲು, ತಮ್ಮ ಸಾಮರ್ಥ್ಯ ತೋರಿಸಲು, ಸವಾಲುಗಳನ್ನು ಎದುರಿಸಲು ತಂತ್ರಜ್ಞಾನಗಳನ್ನು ಬಳಸಿದಾಗ ಅವರು ಯಶಸ್ವಿಯಾಗುವುದು ಹೆಚ್ಚು. ಸಹಾಯಕ ತಂತ್ರಜ್ಞಾನಗಳು ಅವರ ಪ್ರಪಂಚವನ್ನು ಅತ್ಯುತ್ತಮವಾಗಿ ಸಂಯೋಜಿಸಬಹುದು. ಪೋಷಕರು ತಮ್ಮ ಮಕ್ಕಳ ಕಲಿಕೆಗೆ ನೆರವಾಗಬಲ್ಲ ಸಹಾಯಕ ತಂತ್ರಜ್ಞಾನಗಳ ಬಗ್ಗೆ ತಿಳಿದುಕೊಳ್ಳುವುದು ಅತಿ ಮುಖ್ಯ. ಇದರಿಂದ ನಿಮ್ಮ ಮಗು ಶಾಲೆ, ಮನರಂಜನೆ ಮತ್ತು ಅಂತಿಮವಾಗಿ ಕೆಲಸ ಎಲ್ಲಾ ಕ್ಷೇತ್ರದಲ್ಲೂ ಸಾಧನೆ ಮಾಡುವ ಸಾಧ್ಯತೆ ಹೆಚ್ಚು.

ಹೆಚ್ಚಾಗಿ ಸಹಾಯಕ ತಂತ್ರಜ್ಞಾನ ಎಂಬ ಪದವನ್ನು ಕಂಪ್ಯೂಟರ್‌ ಹಾರ್ಡ್‌ವೇರ್‌, ಸಾಫ್ಟ್‌ವೇರ್‌ ಮತ್ತು ಎಲೆಕ್ಟ್ರಾನಿಕ್‌ ಗ್ಯಾಜೆಟ್‌ಗಳಿಗೆ ಬಳಸಲಾಗುತ್ತದೆ. ಅನೇಕ ಸಹಾಯಕ ತಂತ್ರಜ್ಞಾನ ಉಪಕರಣಗಳು ಇಂಟರ್ನೆಟ್‌ ನಲ್ಲಿ ಲಭ್ಯವಿದೆ. ಇವುಗಳು ನಿಮ್ಮ ಮಗುವಿನ ಕಲಿಕಾ ನ್ಯೂನತೆಯನ್ನು ಪರಿಹಾರ ಮಾಡಬಲ್ಲದು.

ಅಬ್ರಿವೇಷನ್‌ ಎಕ್ಸಪಾಂಡರ್ಸ್‌ :
ಈ ಸಾಫ್ಟ್‌ವೇರ್‌ ಪರಿಕರಗಳು ಸಾಮಾನ್ಯವಾಗಿ ಬಳಸುವ ಪದಗಳು ಅಥವಾ ಪದಗುಚ್ಛಗಳನ್ನು ಸಂಕ್ಷಿಪ್ತವಾಗಿ ರಚಿಸಲು, ಸೇವ್‌ ಮಾಡಲು ಮತ್ತು ಮರುಬಳಕೆ ಮಾಡಲು ಬಳಕೆದಾರರಿಗೆ ಅನುಮತಿ ನೀಡುತ್ತದೆ. ಸಂಕ್ಷಿಪ್ತಗಳಾಗಿ ವರ್ಗೀಕರಿಸಲಾದ ಪದಗಳು ಮತ್ತು ಪದಗುಚ್ಛಗಳ ಸರಿಯಾದ ಸ್ಪೆಲ್ಲಿಂಗ್‌ಗಳನ್ನು ಕೀಸ್ಟ್ರೋಕ್‌ಗಳನ್ನು ಸೇವ್‌ಮಾಡಿಕೊಳ್ಳುವುದರ ಮೂಲಕ ಬಳಕೆದಾರರು ಖಾತ್ರಿಪಡಿಸಿಕೊಳ್ಳಬಹುದು.

ಪರ್ಯಾಯ ಕೀಬೋರ್ಡ್‌ಗಳು :
ಈ ಪ್ರೋಗ್ರಾಮೇಬಲ್‌ ಕೀಬೋರ್ಡ್‌ಗಳು ಸಾಮಾನ್ಯ ಕೀಬೋರ್ಡ್‌ನ ವಿನ್ಯಾಸ ಮತ್ತು ಕಾರ್ಯವನ್ನು ಬದಲಾಯಿಸುವ ವಿಶಿಷ್ಟ ಓವರ್‌ಲೇಗಳನ್ನು ಒಳಗೊಂಡಿದೆ. ಕಲಿಕಾ ನ್ಯೂನತೆಯನ್ನು ಹೊಂದಿರುವ ವಿದ್ಯಾರ್ಥಿಗಳು ಅಥವಾ ಟೈಪಿಂಗ್‌ ಸಮಸ್ಯೆಗಳನ್ನು ಹೊಂದಿರುವ ವಿದ್ಯಾರ್ಥಿಗಳು ಇನ್‌ಪುಟ್‌ ಆಯ್ಕೆಗಳನ್ನು ರಿಸ್ಟ್ರಿಕ್ಟ್‌ ಮಾಡಬಹುದು. ಬಣ್ಣ ಅಥವಾ ಲೊಕೇಷನ್‌ ಮೂಲಕ ಕೀ ಗಳನ್ನು ಜೋಡಿಸುವ ಮತ್ತು ಚಿತ್ರಗಳ ಮೂಲಕ ಗ್ರಹಿಸಿಕೊಳ್ಳಲು ಸಾಧ್ಯವಾಗುವಂತೆ ಕೀಗಳನ್ನು ಜೋಡಿಸಿಕೊಳ್ಳಬಹುದಾಗಿದೆ.

ಎಲೆಕ್ಟ್ರಾನಿಕ್‌ ಗಣಿತ ವರ್ಕ್‌ಶೀಟ್‌ಗಳು:
ಈ ವರ್ಕ್‌ಶೀಟ್‌ಗಳು ಸಾಫ್ಟ್‌ವೇರ್‌ ಪ್ರೋಗ್ರಾಮ್‌ಗಳಾಗಿವೆ. ಇದು ಬಳಕೆದಾರರು ಕಂಪ್ಯೂಟರ್‌ ಪರದೆಯ ಮೇಲೆ ಅಂಕಗಣಿತದ ಪ್ರಾಬ್ಲಮ್‌ಗಳನ್ನು ಬಗೆಹರಿಸಲು ಮತ್ತು ಅವುಗಳನ್ನು ಜೋಡಿಸಲು ಅವಕಾಶವನ್ನು ನೀಡುತ್ತದೆ. ಜೋರಾಗಿ ಸಂಖ್ಯೆಗಳನ್ನು ಓದಲು ಸ್ಪೀಚ್‌ ಸಿಂಥಸೈಜರ್‌ ಅನ್ನು ಬಳಸಬಹುದಾಗಿದೆ. ಇದು ಪೆನ್ಸಿಲ್‌ ಮತ್ತು ಪೇಪರ್‌ ಬಳಸಿ ಗಣಿತದ ಸಮಸ್ಯೆಗಳನ್ನು ಪರಿಹರಿಸಲು ತೊಂದರೆ ಇರುವವರಿಗೆ ಬಹಳ ಪ್ರಯೋಜನಕಾರಿಯಾಗಬಹುದು.

ಡೇಟಾಬೇಸ್‌ ಸಾಫ್ಟ್‌ವೇರ್‌ :
ವರ್ಡ್‌ ಪ್ರೋಸೆಸಿಂಗ್‌ ಅಥವಾ ಇತರೆ ಪ್ರೋಗ್ರಾಂಗಳನ್ನು ಬಳಸಿದಾಗ ಈ ಉಪಕರಣವು ಬಳಕೆದಾರರಿಗೆ ಜೊಟ್ಟಿಂಗ್‌ ಡೌನ್‌ ಮೂಲಕ ಎಲೆಕ್ಟ್ರಾನಿಕ್‌ ನೋಟ್ಸಗಳನ್ನು ರಚಿಸಲು ಮತ್ತು ಉಳಿಸಿಕೊಳ್ಳಲು ಅನುಮತಿ ನೀಡುತ್ತದೆ. ಒರಿಜಿನಲ್‌ ಮೆಸ್ಸೇಜ್‌ನ ಯಾವುದೇ ಅಂಶವನ್ನು ಟೈಪ್‌ ಮಾಡುವುದರ ಮೂಲಕ ಮಾಹಿತಿಯನ್ನು ಸುಲಭವಾಗಿ ಅಕ್ಸೆಸ್‌ ಮಾಡಿಕೊಳ್ಳಬಹುದಾಗಿದೆ.

ಗ್ರಾಫಿಕ್‌ ಒರ್ಗನೈಜರ್‌ ಮತ್ತು ಓಟ್‌ಲೈನಿಂಗ್‌ ಅಪ್ಲಿಕೇಶನ್‌ಗಳು:
ಬರವಣೆಗೆಯಲ್ಲಿ ವಸ್ತುಗಳನ್ನು ಜೋಡಿಸಲು ಮತ್ತು ವಿವರಿಸಲು ಕಷ್ಟಪಡುವ ಬಳಕೆದಾರರಿಗೆ ಸಹಾಯ ಮಾಡುತ್ತದೆ. ಇದು ಬಳಕೆದಾರರು ವಸ್ತುಗಳನ್ನು ಸರಿಯಾದ ಕ್ರಮದಲ್ಲಿ ಆರ್ಗನೈಜ್‌ ಮಾಡಲು ಅನುವು ಮಾಡಿಕೊಡುತ್ತದೆ.

ಇದನ್ನೂ ಓದಿ : WhatsApp Pay : ಗ್ರಾಹಕರನ್ನು ಸೆಳೆಯಲು ವಾಟ್ಸಾಪ್ ಹೊಸ ತಂತ್ರ; ಬಳಕೆದಾರರಿಗೆ ನೀಡುತ್ತಿದೆ ಭರ್ಜರಿ ಕ್ಯಾಶ್ ಬ್ಯಾಕ್

ಇದನ್ನೂ ಓದಿ : YouTube Shorts ಅನ್ನು ಸುಲಭವಾಗಿ ರಚಿಸುವುದು ಹೇಗೆ ಗೊತ್ತೇ?

(Technology for Disability people helps to solve their problems)

RELATED ARTICLES

Most Popular