Low-Calorie Dinner Recipes : ರಾತ್ರಿ ಊಟಕ್ಕೆ ಕಡಿಮೆ ಕ್ಯಾಲೋರಿಯ 3 ಸೂಪರ್‌ ಅಡುಗೆಗಳು! ತಯಾರಿಸುವುದು ಹೇಗೆ ಅಂತೀರಾ?

ನೀವು ಕಡಿಮೆ ಕ್ಯಾಲೋರಿಯ (Low-Calorie) ಆಹಾರಗಳನ್ನು ಸೇವಿಸಿ ದೇಹದ ತೂಕ ಕಾಪಾಡಿಕೊಳ್ಳಬೇಕು ಅಂದುಕೊಂಡಿದ್ದರೆ, ಅದಕ್ಕೆ ರಾತ್ರಿಯ ಊಟ (Dinner) ನಿಮಗೆ ಸಹಾಯ ಮಾಡುತ್ತದೆ. ಆದರೆ ಇದರ ಅರ್ಥ ನೀವು ಊಟ ಕಡಿಮೆ ಮಾಡಬೇಕು ಅನ್ನುವುದೇನೂ ಇಲ್ಲ. ಮನೆಯಲ್ಲೇ ತಯಾರಿಸಿದ ಹೆಲ್ದೀ ಆಗಿರುವ ಮತ್ತು ಕಡಿಮೆ ಕ್ಯಾಲೋರಿಯ (Low-Calorie Dinner Recipes) ಉತ್ತಮ ಆಹಾರಗಳನ್ನು ಸೇವಿಸಬಹುದು. ಮನೆಯಲ್ಲೇ ಇರುವ ರುಚಿಯಾದ ಮತ್ತು ಪೋಷಕಾಂಶಗಳಿಂದ ಕೂಡಿದ ಆಹಾರಗಳಿಂದ ತೂಕ ಇಳಿಕೆ ಮಾಡಿಕೊಳ್ಳುವುದು ಬಹಳ ಸುಲಭ.

ನಿಮಗೆ ರಾತ್ರಿಯ ಊಟಕ್ಕೆ ಸಹಾಯವಾಗುವ ಕಡಿಮೆ ಕ್ಯಾಲೋರಿ ಹೊಂದಿರುವ 3 ಸೂಪರ್‌ ಅಡುಗೆಗಳನ್ನು (Low-Calorie Dinner Recipes) ಇಲ್ಲಿ ಹೇಳಿದ್ದೇವೆ. ನೀವೂ ಟ್ರೈ ಮಾಡಿ.

  1. ಓಟ್ಸ್‌ ಕಿಚಡಿ :

ಬೇಕಾಗುವ ಪದಾರ್ಥಗಳು :
ಹೆಸರು ಬೇಳೆ 1 ಕಪ್‌
ಕ್ಯಾರೆಟ್‌ ಮತ್ತು ಬೀನ್ಸ್‌1 ಕಪ್‌
ಓಟ್ಸ್‌ 1 ಕಪ್‌
ಜೀರಿಗೆ ಪುಡಿ 1 ಚಮಚ
ಚಿಕ್ಕದಾಗಿ ಕತ್ತರಿಸಿದ ಈರುಳ್ಳಿ 1
ಚಿಕ್ಕದಾಗಿ ಕತ್ತರಿಸಿದ ಟೊಮೊಟೋ 1
ಶುಂಠಿ–ಬೆಳ್ಳುಳ್ಳಿ ಪೇಸ್ಟ್‌ 1 ಚಮಚ
ಅರಿಶಿಣ ಪುಡಿ 1 ಚಮಚ
ತುಪ್ಪ 2 ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಸ್ವಲ್ಪ ಕೊತ್ತೊಂಬರಿ ಸೊಪ್ಪು

ಮಾಡುವ ವಿಧಾನ :
ಪ್ರೆಶರ್‌ ಕುಕ್ಕರ್‌ ಬಿಸಿ ಮಾಡಿ, ಅದಕ್ಕೆ ತುಪ್ಪ ಹಾಕಿ. ಶುಂಠಿ–ಬೆಳ್ಳುಳ್ಳಿ ಪೇಸ್ಟ್‌ ಸೇರಿಸಿ ಒಂದು ನಿಮಿಷ ಹುರಿದುಕೊಳ್ಳಿ. ಅದಕ್ಕೆ ಕತ್ತರಿಸಿದ ಈರುಳ್ಳಿ ಟೊಮೆಟೋ ಸೇರಿಸಿ.
ತರಕಾರಿಗಳನ್ನು ಸೇರಿಸಿ ಒಂದು ನಿಮಿಷ ಹುರಿದುಕೊಳ್ಳಿ. ಅದಕ್ಕೆ ಅರಿಶಿಣ, ಜೀರಿಗೆ ಪುಡಿ, ಉಪ್ಪು, ಸ್ವಲ್ಪ ಖಾರದ ಪುಡಿ ಸೇರಿಸಿ ಸ್ವಲ್ಪ ಹುರಿದುಕೊಳ್ಳಿ. ಈಗ ಹೆಸರು ಬೇಳೆ ಮತ್ತು ಓಟ್ಸ್‌ ಸೇರಿಸಿ, ಚೆನ್ನಾಗಿ ಮಿಕ್ಸ್‌ ಮಾಡಿ. ಮೂರು ಕಪ್‌ (ಓಟ್ಸ್‌ ಅಳತೆ ಮಾಡಿದ ಕಪ್ ಅನ್ನೇ ತೆಗೆದುಕೊಳ್ಳಿ) ನೀರು ಸೇರಿಸಿ. ಎಂಟು ನಿಮಿಷ (2 ವಿಷಲ್‌) ಗಳ ವರೆಗೆ ಕುದಿಸಿ.
ಕೊತ್ತೊಂಬರಿ ಸೊಪ್ಪು ಸೇರಿಸಿ, ಬಿಸಿ ಇರುವಾಗಲೇ ಸೇವಿಸಿ.

  1. ನವಣೆ ಅಕ್ಕಿಯ ತರಕಾರಿ ಪುಲಾವ್‌:‌

ಬೇಕಾಗುವ ಪದಾರ್ಥಗಳು :
ನವಣೆ ಅಕ್ಕಿ – 2 ಕಪ್‌
ಹೆಚ್ಚಿದ ಕ್ಯಾರೆಟ್‌– 1 ಕಪ್‌
ಹೆಚ್ಚಿದ ಕ್ಯಾಪ್ಸಿಕಮ್‌ –1 ಕಪ್‌
ಕಾರ್ನ್‌ –1 ಕಪ್‌
ಈರುಳ್ಳಿ–1
ಟೊಮೆಟೋ –1
ಹಸಿ ಮೆಣಸಿನಕಾಯಿ–2
ಶುಂಠಿ ಬೆಳ್ಳುಳ್ಳಿ ಪೇಸ್ಟ್‌ – 1 ಚಮಚ
ಆಲೀವ್‌ ಎಣ್ಣೆ – 1 ಚಮಚ
ಕೊತ್ತಂಬರಿ ಸೊಪ್ಪು
ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ :
ಒಂದು ಪ್ಯಾನ್‌ಗೆ ಆಲೀವ್‌ ಎಣ್ಣೆ ಹಾಕಿ. ಬಿಸಿಯಾದ ನಂತರ ಅದಕ್ಕೆ ಶುಂಠಿ–ಬೆಳ್ಳುಳ್ಳಿ ಪೇಸ್ಟ್‌ ಸೇರಿಸಿ. ಅದಕ್ಕೆ ಕತ್ತರಿಸಿದ ಹಸಿ ಮೆಣಸಿನಕಾಯಿ, ಈರುಳ್ಳಿ, ಟೊಮೆಟೋ ಸೇರಿಸಿ 2 ನಿಮಿಷ ಹುರುದುಕೊಳ್ಳಿ. ನಂತರ ತರಕಾರಿಗಳನ್ನು ಸೇರಿಸಿ ಚೆನ್ನಾಗಿ ಮಿಕ್ಸ್‌ ಮಾಡಿ.
ನಂತರ ಉಪ್ಪು, ಖಾರದ ಪುಡಿ ಸೇರಿಸಿ. ಸ್ವಲ್ಪ ಹುರಿದು ಕೊಳ್ಳಿ.
ಅದಕ್ಕೆ ನವಣೆ ಅಕ್ಕಿಯಿಂದ ಮಾಡಿದ ಅನ್ನ ಸೇರಿಸಿ. ಚಿನ್ನಾಗಿ ಮಿಕ್ಸ್‌ ಮಾಡಿ. ಮೇಲಿನಿಂದ ಕೊತ್ತೊಂಬರಿ ಸೊಪ್ಪು ಸೇರಿಸಿ.

  1. ಬೀಟ್ರೂಟ್‌ ಸೂಪ್‌ :

ಬೇಕಾಗುವ ಪದಾರ್ಥಗಳು :
ಸಿಪ್ಪೆ ತೆಗೆದು ಕುದಿಸಿದ 2 ಬೀಟ್ರೂಟ್‌
ಚಿಕ್ಕದಾಗಿ ಹೆಚ್ಚಿದ 1 ಈರುಳ್ಳಿ
ಚಿಕ್ಕದಾಗಿ ಹೆಚ್ಚಿದ 1 ಟೊಮೆಟೋ
2 ಚಮಚ ಆಲೀವ್‌ ಎಣ್ಣೆ
ರುಚಿಗೆ ತಕ್ಕಷ್ಟು ಉಪ್ಪು ಮತ್ತು ಕರಿಮೆಣಸು
ಚಿಕ್ಕದಾಗಿ ಕತ್ತರಿಸಿದ ಕೊತ್ತೊಂಬರಿ ಸೊಪ್ಪು

ಮಾಡುವ ವಿಧಾನ :
ಮೊದಲಿಗೆ ಬೀಟ್ರೂಟ್‌ ಅನ್ನು ಚಿಕ್ಕದಾಗಿ ತುರಿದುಕೊಳ್ಳಿ, ಇಲ್ಲವೇ ಸ್ಮಾಶ್‌ ಮಾಡಿ.
ಒಂದು ಪಾನ್‌ಗೆ ಆಲೀವ್‌ ಎಣ್ಣೆ ಹಾಕಿ ಅದಕ್ಕೆ ಈರುಳ್ಳಿ, ಟೊಮೆಟೋ ಹಾಕಿ ಚೆನ್ನಾಗಿ ಫ್ರೈ ಮಾಡಿ. ಈಗ ಬೀಟ್ರೂಟ್‌ ಸೇರಿಸಿ.
ಅದಕ್ಕೆ ಸ್ವಲ್ಪ ನೀರು ಸೇರಿಸಿ ಸೂಪ್‌ ರೀತಿಯಲ್ಲಿ ಇರಲಿ, ಉಪ್ಪು ಮತ್ತು ಕರಿಮೆಣಸು ಸೇರಿಸಿ ಚೆನ್ನಾಗಿ ಕುದಿಸಿ.
ಬಿಸಿ ಇರುವಾಗಲೇ ಕೊತ್ತೊಂಬರಿ ಸೊಪ್ಪು ಸೇರಿಸಿ ಸವಿಯಿರಿ.

ಇದನ್ನೂ ಓದಿ : Chocolate Face Mask : ಸೌಂದರ್ಯವನ್ನು ವೃದ್ದಿಸುತ್ತೆ ಚಾಕೋಲೆಟ್ ಫೇಸ್‌ ಮಾಸ್ಕ್‌

ಇದನ್ನೂ ಓದಿ : Potato Peels : ಆಶ್ಚರ್ಯವಾಗುತ್ತಿದೆಯಾ? ಆದರೂ ಹೌದು, ಆಲೂಗಡ್ಡೆ ಸಿಪ್ಪೆಯಿಂದಲೂ ರುಚಿಕರವಾದ ಸ್ನಾಕ್ಸ್‌ ಮಾಡಬಹುದು!

(Low-Calorie Dinner Recipes do you know how to make these superfoods)

Comments are closed.