ನಿಮಗೆ ಯಾವುದೇ ಒಂದು ಟೆಲಿಕಾಂ ಕಂಪನಿಯ ಸೇವೆಯು ಇಷ್ಟವಾಗದೇ ಇದ್ದಲ್ಲಿ ಬೇರೊಂದು ಟೆಲಿಕಾಂ ಕಂಪನಿಗೆ ಬದಲಾಯಿಸಿಕೊಳ್ಳಬೇಕು ಅಂದರೆ ಪೋರ್ಟ್ ಎಂಬ ಆಯ್ಕೆಯೊಂದಿದೆ. ನೀವು ಪೋರ್ಟ್ ಎಂದು ಎಸ್ಎಂಎಸ್ ಕಳುಹಿಸುವ ಮೂಲಕ ಇದರ ಪ್ರಯೋಜನ ಪಡೆಯಬಹುದು. ಆದರೆ ಇದೇ ವಿಚಾರವಾಗಿ ಇದೀಗ ರಿಲಯನ್ಸ್ ಜಿಯೋ (Reliance Jio) ಕಂಪನಿಯು ಟೆಲಿಕಾಂ ರೆಗ್ಯೂಲೇಟರಿಗೆ ದೂರು ನೀಡಿದೆ.
ವೋಡಾಫೋನ್ ಐಡಿಯಾ ಕಂಪನಿಯ ಹೊಸ ಪ್ರಿಪೇಯ್ಡ್ ಪ್ಲಾನ್ಗಳ ವಿರುದ್ಧ ಸಮರ ಸಾರಿರುವ ಮುಕೇಶ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಜಿಯೋ ಕಂಪನಿಯು ಟೆಲಿಕಾಂ ರೆಗ್ಯೂಲೇಟರಿಗೆ ದೂರು ನೀಡಿದೆ. ವೋಡಾಫೋನ್ ಐಡಿಯಾದ ಹೊಸ ಪ್ರಿಪೇಯ್ಡ್ ಪ್ಲಾನ್ನಿಂದಾಗಿ ಗ್ರಾಹಕರು ಬೇರೆ ಸೇವೆಗಳಿಗೆ ಪೋರ್ಟ್ ಆಗಲು ಮನಸ್ಸು ಮಾಡುತ್ತಿಲ್ಲ ಎಂದು ಹೇಳಿದೆ. ವೋಡಾಫೋನ್ ಐಡಿಯಾ ಪ್ರಿಪೇಯ್ಡ್ ಗ್ರಾಹಕರಿಗೆ ಎಸ್ಎಂಎಸ್ ಸೇವೆಯನ್ನು 149 ರೂಪಾಯಿ ದರದಿಂದ 179 ರೂಪಾಯಿ ದರದ ಯೋಜನೆಗೆ ವರ್ಗಾವಣೆ ಮಾಡಿದೆ. ಅಂದರೆ ಕಡಿಮೆ ಮೊತ್ತದ ಪ್ರಿಪೇಯ್ಡ್ ಪ್ಲಾನ್ ಪಡೆದಿರುವ ಗ್ರಾಹಕರು ಎಸ್ಎಂಎಸ್ ಸೇವೆಯನ್ನು ಹೊಂದಿರುವುದಿಲ್ಲ.
ವೋಡಾಫೋನ್ ಐಡಿಯಾ ಸೇವೆ ಬೇಡವೆಂದು ಬೇರೆ ಸೇವೆಗೆ ಪೋರ್ಟ್ ಆಗಬೇಕೆಂದು ಗ್ರಾಹಕ ಮನಸ್ಸು ಮಾಡಿದಲ್ಲಿ ಆತ ಅನಿವಾರ್ಯವಾಗಿ ಹೆಚ್ಚಿನ ಮೊತ್ತದ ಕರೆನ್ಸಿ ಹಾಕಿಸಿ ಕೊಳ್ಳಲೇಬೇಕು. ಹೀಗಾಗಿ ಅನೇಕರು ಪೋರ್ಟ್ ಮಾಡುವ ಇಚ್ಛೆಯಿದ್ದರೂ ಸಹ ಈ ವಿಚಿತ್ರ ನಿಯಮದಿಂದಾಗಿ ಸುಮ್ಮನಾಗಿದ್ದಾರೆ. ಆದ್ದರಿಂದ ಟೆಲಿಕಾಂ ಅಥಾರಿಟಿಯು ಈ ಸಂಬಂಧ ವಿಚಾರಣೆ ನಡೆಸಬೇಕಿದೆ ಎಂದು ರಿಲಯನ್ಸ್ ಜಿಯೋ ಕಂಪನಿಯು ಪತ್ರದ ಮೂಲಕ ಕೋರಿದೆ.
ವೋಡಾಫೋನ್ ಐಡಿಯಾ ಕಂಪನಿಯು ತನ್ನೆಲ್ಲ ಗ್ರಾಹಕರಿಗೆ ಎಸ್ಎಂಎಸ್ ಸೇವೆಯನ್ನು ನೀಡಬೇಕು. ಅಥವಾ ಪೋರ್ಟ್ ಆಗಬಯಸುವ ಗ್ರಾಹಕರಿಗೆ ಯಾವುದೇ ರೀತಿಯ ಕಡಿವಾಣ ವಿಧಿಸಬಾರದು ಎಂದು ಪತ್ರದ ಮುಖೇನ ರಿಲಯನ್ಸ್ ಜಿಯೋ ವೋಡಾಫೋನ್ ಇಂಡಿಯಾ ಸಲಹೆಯನ್ನೂ ನೀಡಿದೆ ಎನ್ನಲಾಗಿದೆ.
ಇದನ್ನು ಓದಿ :CHEESEBURGER FISH : ಸಮುದ್ರದಾಳದಲ್ಲಿ ಪತ್ತೆಯಾಯ್ತು ಅಪರೂಪದ ಮೀನು: ಬರ್ಗರ್ ಮಾದರಿಯ ಜಲಚರ ಕಂಡ ನೆಟ್ಟಿಗರು ಶಾಕ್
( Reliance Jio complains against Vodafone Idea, says telco’s new plan will make it difficult for customers to port )