KGF BABU : ಕೈ- ಕಮಲ ಟ್ವೀಟ್ ವಾರ್ : ಕೆಜಿಎಫ್ ಬಾಬು ಆಸ್ತಿಮೂಲಕ ಕೆಣಕಿದ ಬಿಜೆಪಿ

ಬೆಂಗಳೂರು : ರಾಜ್ಯದಲ್ಲಿ ಪರಿಷತ್ ಚುನಾವಣಾ ಕಣ ರಂಗೇರುತ್ತಿದೆ. ಈ ಮಧ್ಯೆ ವಿದ್ಯಾವಂತರ ವೇದಿಕೆ, ಚಿಂತಕರ ಚಾವಡಿ ಎಂದೆಲ್ಲ ಕರೆಯಿಸಿಕೊಳ್ಳುವ ವಿಧಾನ ಪರಿಷತ್ ಗೆ ಕಾಂಗ್ರೆಸ್, ಬೆಂಗಳೂರು ನಗರದ ಅಭ್ಯರ್ಥಿಯಾಗಿ ಕೆಜಿಎಫ್ ಬಾಬು (KGF BABU) ಅಲಿಯಾಸ್ ಯೂಸೂಫ್ ಷರೀಪ್ ( Yousuf Shariff ) ಗೆ ಟಿಕೇಟ್ ನೀಡಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.

ಕೆಜಿಎಫ್ ಬಾಬು ಹಿನ್ನೆಲೆ, ಆಸ್ತಿ ಹಾಗೂ ಅವರ ಮೇಲಿನ ಪೊಲೀಸ್ ಪ್ರಕರಣಗಳನ್ನು ಕಾರಣವಾಗಿಟ್ಟುಕೊಂಡು ಬಿಜೆಪಿ ಸತತ ವಾಗ್ದಾಳಿ ನಡೆಸಿದ್ದು, ಕೆಲ ದಿನಗಳ ಹಿಂದೆಯಷ್ಟೇ ಸಚಿವ ಎಸ್.ಟಿ.ಸೋಮಶೇಖರ್ ಮಂಡ್ಯದಲ್ಲಿ ಮಾತನಾಡುವ ವೇಳೆ ಕೆಜಿಎಫ್ ಬಾಬು ಮೇಲೆ ಮಗಳ ಮೇಲೆ ಅತ್ಯಾಚಾರ ಎಸಗಿದ ಆರೋಪವಿದೆ. ಅತ್ಯಾಚಾರಿಗೆ ಕಾಂಗ್ರೆಸ್ ಟಿಕೇಟ್ ನೀಡಿದೆ ಎಂದು ಆರೋಪಿಸಿದ್ದರು.

ಇದಕ್ಕೆ ಉತ್ತರವಾಗಿ ಕುಟುಂಬ ಸಮೇತ ಅಂದ್ರೇ ಪತ್ನಿಯರು ಹಾಗೂ ಪುತ್ರಿ ಸಮ್ಮುಖದಲ್ಲಿಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ್ದ ಕಾಂಗ್ರೆಸ್ ಅಭ್ಯರ್ಥಿ ಯುಸೂಫ್ ಷರೀಫ್ ಅಲಿಯಾಸ್ ಕೆಜಿಎಫ್ ಬಾಬು ನನ್ನ ಗೆಲುವನ್ನು ತಡೆಯಲು ಹೀಗೆ ಅಪಪ್ರಚಾರ ಮಾಡಲಾಗುತ್ತಿದೆ ಎಂದಿದ್ದರು.ಇದಾದ ಬಳಿಕ ಬಿಜೆಪಿ ಕೆಜಿಎಫ್ ಬಾಬು ವಿರುದ್ಧ ಟ್ವೀಟ್ ವಾರ್ ಮುಂದುವರೆಸಿದ್ದು , ಕೆಜಿಎಫ್ ಬಾಬು ಚುನಾವಣಾ ಆಯೋಗಕ್ಕೆ ತಮ್ಮ ಆಸ್ತಿ ಬಗ್ಗೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿದೆ.

ಯುಸೂಫ್ ಷರೀಫ್ ಚುನಾವಣಾ ಆಯೋಗಕ್ಕೆ 1734 ಕೋಟಿ ಹೊಂದಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ. ಆದರೆ ಸಾರ್ವಜನಿಕವಾಗಿ ಬೇರೆ ಬೇರೆ ಲೆಕ್ಕ ಕೊಡುತ್ತಿದ್ದಾರೆ.ನಿಮ್ಮ ಅಭ್ಯರ್ಥಿಯ ಆಸ್ತಿ ಮೌಲ್ಯ 4000 ಕೋಟಿಯೋ 7000 ಸಾವಿರ ಕೋಟಿಯೋ.? ಎಂದು ಸ್ಪಷ್ಟಪಡಿಸಿ ಎಂದು ಕಮಲ ಪಾಳಯ ಸವಾಲೊಡ್ಡಿದೆ. ಅಲ್ಲದೇ ಸಭ್ಯರ ಮನೆ ಎಂದು ಪರಿಗಣಿಸಲ್ಪಡುವ ಪರಿಷತ್ ಪ್ರವೇಶಿಸಲು ಪೊಲೀಸ್‌ ರೌಡಿಶೀಟರ್ ಕೆಜಿಎಫ್ ಬಾಬು ಅವರು ತಮ್ಮ ಆಸ್ತಿಯ ಅನಾರೋಗ್ಯಕರ ಪ್ರದರ್ಶನ ಮಾಡುವುದಕ್ಕಿಂತ ಆಸ್ತಿಯ ಮೂಲವನ್ನು ತೋರುವುದು ಸಕ್ರಮ ವಿಧಾನ.

ಡಿಕೆಶಿ ನಿರ್ದೇಶಿತ ಸಿರಿವಂತ ಅಭ್ಯರ್ಥಿಗೆ ತಮ್ಮ ಆಸ್ತಿಯ ಮೂಲ ಹಾಗೂ ಗಳಿಕೆ ವಿಧಾನ ತಿಳಿಸಲು ಸಾಧ್ಯವೇ?‌ ಎಂದು ವ್ಯಂಗ್ಯವಾಡಿದೆ. ಬಿಜೆಪಿ ಈ ಟ್ವೀಟ್ ಈಗ ಎಲ್ಲೆಡೆ ವೈರಲ್ ಆಗಿದೆ. ಕೇವಲ ಟ್ವೀಟ್ ಮಾತ್ರವಲ್ಲದೇ ಬಿಜೆಪಿ ಯುಸೂಫ್ ಷರಿಫ್ ವಿರುದ್ಧ ಈಗಾಗಲೇ ಮತದಾರರಿಗೆ ಆಮಿಷ ಒಡುತ್ತಿರುವ ಆರೋಪ ಮಾಡಿದ್ದು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ.

ಇದನ್ನೂ ಓದಿ : BJP MLA FIGHTING : ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಎದುರಲ್ಲೇ ಬಿಜೆಪಿ ಶಾಸಕರಿಬ್ಬರ ಗಲಾಟೆ

ಇದನ್ನೂ ಓದಿ : Actor Shivaram : ಖ್ಯಾತ ಹಿರಿಯ ನಟ ಶಿವರಾಮ್‌ ಗಂಭೀರ : ಆಸ್ಪತ್ರೆಗೆ ದಾಖಲು

( KGF Babu or Yousuf Shariff MLC Election ticket controversy: BJP Congress tweet)

Comments are closed.