ಬುಧವಾರ, ಜೂನ್ 18, 2025
HometechnologyTitan EyeX Smart Glasses : ಟೈಟಾನ್ ಐಎಕ್ಸ್‌ ಮೊಟ್ಟಮೊದಲ ಸ್ಮಾರ್ಟ್‌ಗ್ಲಾಸ್: ಬೆಲೆ ಮತ್ತು ವೈಶಿಷ್ಟ್ಯಗಳ...

Titan EyeX Smart Glasses : ಟೈಟಾನ್ ಐಎಕ್ಸ್‌ ಮೊಟ್ಟಮೊದಲ ಸ್ಮಾರ್ಟ್‌ಗ್ಲಾಸ್: ಬೆಲೆ ಮತ್ತು ವೈಶಿಷ್ಟ್ಯಗಳ ಪರಿಚಯ ಇಲ್ಲಿದೆ

- Advertisement -

ಟೈಟಾನ್ ಐ+ (Titan Eye Plus) ತನ್ನ ಮೊಟ್ಟಮೊದಲ ಸ್ಮಾರ್ಟ್ ಗ್ಲಾಸ್, ಟೈಟಾನ್ ಐಎಕ್ಸ್ Titan EyeX Smart Glasses ) ಅನ್ನು ಬಿಡುಗಡೆ ಮಾಡಿದೆ. ಈ -ಹೊಸ ಟೈಟಾನ್ ಐಎಕ್ಸ್ ಆಡಿಯೋ, ಟಚ್ ನಿಯಂತ್ರಣಗಳು ಮತ್ತು ಫಿಟ್‌ನೆಸ್ ವೈಶಿಷ್ಟ್ಯಗಳೊಂದಿಗೆ ಸಜ್ಜುಗೊಂಡಿದೆ. ಸ್ಮಾರ್ಟ್ ಗ್ಲಾಸ್‌ಗಳು ಕ್ವಾಲ್‌ಕಾಮ್ ಪ್ರೊಸೆಸರ್‌ನಿಂದ ಚಾಲಿತವಾಗಿವೆ ಮತ್ತು ಕಂಪ್ಯಾನಿಯನ್ ಅಪ್ಲಿಕೇಶನ್ ಮೂಲಕ ಆಂಡ್ರಾಯ್ಡ್(Android) ಮತ್ತು ಐಓಎಸ್(iOS )ಸಾಧನಗಳಿಗೆ ಹೊಂದಿಕೊಳ್ಳುತ್ತವೆ.

ಈ ಕನ್ನಡಕಗಳನ್ನು ಸನ್ ಗ್ಲಾಸ್, ಕನ್ನಡಕ ಅಥವಾ ಕಂಪ್ಯೂಟರ್ ಗ್ಲಾಸ್ ಹೀಗೆ ಮಲ್ಟಿ ಉದ್ದೇಶಗಳಿಗಾಗಿ ಬಳಸಬಹುದು ಎಂದು ಕಂಪನಿ ಹೇಳಿಕೊಂಡಿದೆ. ಈ ಸ್ಮಾರ್ಟ್ ಕನ್ನಡಕಗಳು ಸಂಪೂರ್ಣವಾಗಿ ಚಾರ್ಜ್ ಮಾಡಿದಾಗ ಎಂಟು ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡಬಹುದು ಎಂದು ಕಂಪನಿ ಹೇಳಿಕೊಂಡಿದೆ.

ಟೈಟಾನ್ ಐಎಕ್ಸ್ ಸ್ಮಾರ್ಟ್ ಗ್ಲಾಸ್‌ಗಳ ಬೆಲೆ ಮತ್ತು ಲಭ್ಯತೆ
ಟೈಟಾನ್ ಐ ಎಕ್ಸ್ ಸ್ಮಾರ್ಟ್ ಗ್ಲಾಸ್‌ಗಳ ಬೆಲೆ ರೂ 9,999. ಇವುಗಳು ಟೈಟಾನ್‌ನ ಅಧಿಕೃತ ವೆಬ್‌ಸೈಟ್ ಮತ್ತು ಟೈಟಾನ್ ಐ+ ರಿಟೇಲ್ ಸ್ಟೋರ್‌ಗಳ ಮೂಲಕ ಲಭ್ಯವಿರುತ್ತದೆ. ಟೈಟಾನ್ ಈ ಸ್ಮಾರ್ಟ್ ಗ್ಲಾಸ್‌ಗಳನ್ನು ಪ್ರಸ್ತುತ ಮಿಡ್‌ನೈಟ್ ಬ್ಲ್ಯಾಕ್ ಎಂಬ ಒಂದೇ ಕಲರ್ ಮಾರಾಟ ಮಾಡುತ್ತಿದೆ.

ಟೈಟಾನ್ ಐಎಕ್ಸ್ ಸ್ಮಾರ್ಟ್ ಗ್ಲಾಸ್ ವಿಶೇಷಣಗಳು
ಟೈಟಾನ್ ಐ ಎಕ್ಸ್ ನಿಜವಾದ ವೈರ್‌ಲೆಸ್ ಸ್ಟಿರಿಯೊ (TWS) ಕಾರ್ಯನಿರ್ವಹಣೆಯೊಂದಿಗೆ ಓಪನ್ ಇಯರ್ ಸ್ಪೀಕರ್‌ಗಳನ್ನು ಹೊಂದಿದೆ.
ಕಂಪನಿಯ ಪ್ರಕಾರ, ಸ್ಮಾರ್ಟ್ ಗ್ಲಾಸ್‌ಗಳು ಕ್ಲಿಯರ್ ವಾಯ್ಸ್ ಕ್ಯಾಪ್ಚರ್ (ಸಿವಿಸಿ) ತಂತ್ರಜ್ಞಾನವನ್ನು ಹೊಂದಿದ್ದು, ಇದು ಡೈನಾಮಿಕ್ ವಾಲ್ಯೂಮ್ ಕಂಟ್ರೋಲ್‌ನೊಂದಿಗೆ ಸ್ಪಷ್ಟ ಧ್ವನಿ ಗುಣಮಟ್ಟವನ್ನು ನೀಡುತ್ತದೆ, ಇದು ಸುತ್ತುವರಿದ ಶಬ್ದವನ್ನು ಅವಲಂಬಿಸಿ ವಾಲ್ಯೂಮ್ ಮಟ್ಟವನ್ನು ಸರಿಹೊಂದಿಸುತ್ತದೆ. ಈ ವೈಶಿಷ್ಟ್ಯವು ಟೈಟಾನ್ ಐ ಎಕ್ಸ್ ಅನ್ನು ಔಟ್ ಡೋರ್ ನಲ್ಲಿ ಬಳಸಲು ಸುಲಭಗೊಳಿಸುತ್ತದೆ ಎಂದು ಕಂಪನಿಯು ಹೇಳಿಕೊಂಡಿದೆ.

ಈ ಸ್ಮಾರ್ಟ್ ಗ್ಲಾಸ್ ಪೆಡೋಮೀಟರ್ ಡೈಲಿ ಫೂಟ್ ಸ್ಟೆಪ್ಸ್, ನಡೆದಾಡಿದ ದೂರ ಮತ್ತು ಬರ್ನ್ಟ್ ಕ್ಯಾಲೊರಿಗಳನ್ನು ಟ್ರ್ಯಾಕ್ ಮಾಡುತ್ತದೆ. ಇದು ಕಾಲ್ ರಿಸೀವ್ ಮಾಡಲು ಮತ್ತು ರಿಜೆಕ್ಟ್ ಮಾಡಲು, ಸಂಗೀತವನ್ನು ನಿಯಂತ್ರಿಸಲು ಮತ್ತು ಸೆಲ್ಫಿ ಕ್ಲಿಕ್ ಮಾಡಲು ಎಡ ಮತ್ತು ಬಲ ಬದಿಗಳಲ್ಲಿ ಟಚ್ ನಿಯಂತ್ರಣಗಳನ್ನು ಹೊಂದಿದೆ.
ಅಷ್ಟೇ ಅಲ್ಲದೇ ಬಳಕೆದಾರರು ತಮ್ಮ ಕನ್ನಡಕವನ್ನು ತಪ್ಪಾಗಿ ಇರಿಸಿದರೆ ಅವುಗಳನ್ನು ಪತ್ತೆಹಚ್ಚಲು ಇನ್ ಬಿಲ್ಟ್ ಟ್ರ್ಯಾಕರ್ ಕೂಡ ಇದೆ.

ಇದನ್ನೂ ಓದಿ: OnePlus 10 Pro: ಸುಧಾರಿತ ಫೀಚರ್‌ಗಳುಳ್ಳ ಒನ್ ಪ್ಲಸ್‌ 10 ಪ್ರೊ; ಏನೆಲ್ಲ ಬದಲಾವಣೆ ಆಗಿದೆ?

(Titan EyeX Smart Glasses Price and Specifications)

RELATED ARTICLES

Most Popular