Reliance Jio Fixed-Line Service : ಬಿಎಸ್‌ಎನ್‌ಎಲ್‌ ಹಿಂದಿಕ್ಕಿದ ಜಿಯೋ : ಫಿಕ್ಸಡ್‌–ಲೈನ್‌ ಸರ್ವೀಸ್‌ನಲ್ಲೂ ಜಿಯೋದೇ ಪ್ರಾಬಲ್ಯ

TRAI ವರದಿಯ ಪ್ರಕಾರ, ಖಾಸಗಿ ಟೆಲಿಕಾಂ ಆಪರೇಟರ್ ರಿಲಯನ್ಸ್ ಜಿಯೋ (Reliance Jio) ಆಗಸ್ಟ್‌ನಲ್ಲಿ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ (BSNL) ಅನ್ನು ಹಿಂದಿಕ್ಕಿ ದೇಶದಲ್ಲೇ ಅತಿ ದೊಡ್ಡ ಫಿಕ್ಸಡ್‌–ಲೈನ್ ಸರ್ವೀಸ್‌ (Reliance Jio Fixed-Line Service) ಪೂರೈಕೆದಾರರಾಗಿದ್ದಾರೆ. ದೇಶದಲ್ಲಿ ಟೆಲಿಕಾಂ ಸೇವೆಗಳು ಪ್ರಾರಂಭವಾದ ನಂತರ ಇದೇ ಮೊದಲ ಬಾರಿಗೆ ಖಾಸಗಿ ಆಪರೇಟರ್ ಮೊದಲ ಸ್ಥಾನವನ್ನು ಅಲಂಕರಿಸಿದೆ. TRAI ವರದಿಯ ಪ್ರಕಾರ ಆಗಸ್ಟ್‌ನಲ್ಲಿ ಜಿಯೋದ ವೈರ್‌ಲೈನ್‌ ಚಂದಾದಾರರ ಸಂಖ್ಯೆಯು 73.52 ಲಕ್ಷಕ್ಕೆ ತಲುಪಿದ್ದರೆ, ಬಿಎಸ್‌ಎನ್‌ಎಲ್ 71.32 ಲಕ್ಷಕ್ಕೆ ತಲುಪಿದೆ.

ಬಿಎಸ್‌ಎನ್‌ಎಲ್ ಕಳೆದ 22 ವರ್ಷಗಳಿಂದ ವೈರ್‌ಲೈನ್‌ ಸೇವೆಗಳನ್ನು ಒದಗಿಸುತ್ತಿದೆ. ಆದರೆ ಜಿಯೋ ವೈರ್‌ಲೈನ್‌ ಕೊಡುಗೆಯನ್ನು 3 ವರ್ಷಗಳ ಹಿಂದೆಯಷ್ಟೇ ಪ್ರಾರಂಭಿಸಿದೆ. ಜುಲೈನಲ್ಲಿ 2.56 ಕೋಟಿಯಿದ್ದ ವೈರ್‌ಲೈನ್‌ ಚಂದಾದಾರ ಸಂಖ್ಯೆಯು ಆಗಸ್ಟ್‌ನಲ್ಲಿ 2.59 ಕೋಟಿಗೆ ಏರಿಕೆಯಾಗಿದೆ. ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆಗಳಾದ BSNL ಮತ್ತು MTNL ಆಗಸ್ಟ್‌ನಲ್ಲಿ ಕ್ರಮವಾಗಿ 15,734 ಮತ್ತು 13,395 ವೈರ್‌ಲೈನ್ ಗ್ರಾಹಕರನ್ನು ಕಳೆದುಕೊಂಡಿವೆ. ಜಿಯೋ 2.62 ಲಕ್ಷ ಹೊಸ ಗ್ರಾಹಕರನ್ನು, ಭಾರ್ತಿ ಏರ್‌ಟೆಲ್ 1.19 ಲಕ್ಷ, ವೊಡಾಫೋನ್ ಐಡಿಯಾ (Vi) 4,202 ಮತ್ತು ಟಾಟಾ ಟೆಲಿಸರ್ವಿಸಸ್ 3,769 ಹೊಸ ಗ್ರಾಹಕರನ್ನು ಪಡೆದುಕೊಳ್ಳುವುದರೊಂದಿಗೆ ಖಾಸಗಿ ವಲಯವು ಪ್ರಾಬಲ್ಯ ಸಾಧಿಸಿದೆ.

ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ವರದಿಯ ಪ್ರಕಾರ, ದೇಶದ ಒಟ್ಟಾರೆ ಟೆಲಿಕಾಂ ಚಂದಾದಾರರ ಸಂಖ್ಯೆಯು ಆಗಸ್ಟ್‌ನಲ್ಲಿ 117.5 ಕೋಟಿಗೆ ಬೆಳೆದಿದೆ. ಇದರಲ್ಲಿ ಜಿಯೋ ಹೆಚ್ಚಿನ ಹೊಸ ಗ್ರಾಹಕರನ್ನು ಪಡೆದಿದೆ. ನಗರ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶಗಳಲ್ಲೇ ಹೆಚ್ಚ ಬೆಳವಣಿಗೆಯನ್ನು ಸಾಧಿಸಿದೆ. ನಗರ ಮತ್ತು ಗ್ರಾಮೀಣ ದೂರವಾಣಿ ಚಂದಾದಾರಿಕೆಗಳ ಮಾಸಿಕ ಬೆಳವಣಿಗೆ ದರಗಳು ಕ್ರಮವಾಗಿ ಶೇಕಡಾ 0.10 ಮತ್ತು ಶೇಕಡಾ 0.14 ಆಗಿದೆ.

‘‘ಭಾರತದಲ್ಲಿ ಟೆಲಿಫೋನ್ ಚಂದಾದಾರರ ಸಂಖ್ಯೆಯು ಜುಲೈ-22 ರ ಅಂತ್ಯದ ವೇಳೆಗೆ 1,173.66 ದಶಲಕ್ಷದಿಂದ ಆಗಸ್ಟ್ -22 ರ ಅಂತ್ಯದ ವೇಳೆಗೆ 1,175.08 ದಶಲಕ್ಷಕ್ಕೆ ಏರಿತು, ಇದರಿಂದಾಗಿ ಮಾಸಿಕ ಬೆಳವಣಿಗೆ ದರವು ಶೇಕಡಾ 0.12 ರಷ್ಟಿದೆ’’ ಎಂದು ಟ್ರಾಯ್‌ನ ಆಗಸ್ಟ್ 2022 ರ ಚಂದಾದಾರರ ವರದಿ ಹೇಳಿದೆ.

ರಿಲಯನ್ಸ್‌ ಜಿಯೋ 32.81 ಲಕ್ಷ ಹೊಸ ಗ್ರಾಹಕರನ್ನು ಮೊಬೈಲ್‌ ಗ್ರಾಹಕರನ್ನು ಪಡೆದುಕೊಂಡಿದ್ದರೆ, ಭಾರ್ತಿ ಏರ್‌ಟೆಲ್ 3.26 ಲಕ್ಷ ಹೊಸ ಮೊಬೈಲ್ ಗ್ರಾಹಕರನ್ನು ಪಡೆದುಕೊಂಡಿದೆ. ಆದರೆ ಸಾಲದ ಸುಳಿಯಲ್ಲಿ ಸಿಲುಕಿರುವ ಖಾಸಗಿ ಸಂಸ್ಥೆ Vi ಆಗಸ್ಟ್‌ನಲ್ಲಿ ಅತಿ ಹೆಚ್ಚು ನಷ್ಟವನ್ನು ಅನುಭವಿಸಿದೆ. Vi 19.58 ಲಕ್ಷ ಮೊಬೈಲ್ ಗ್ರಾಹಕರನ್ನು ಕಳೆದುಕೊಂಡಿದ್ದರೆ, ಬಿಎಸ್‌ಎನ್‌ಎಲ್ (BSNL) 5.67 ಲಕ್ಷ, ಎಂಟಿಎನ್‌ಎಲ್ (MTNL) 470 ಮತ್ತು ರಿಲಯನ್ಸ್ ಕಮ್ಯುನಿಕೇಷನ್ಸ್ 32 ಗ್ರಾಹಕರನ್ನು ಕಳೆದುಕೊಂಡಿದೆ ಎಂದು ವರದಿ ತಿಳಿಸಿದೆ.

ದೇಶದಲ್ಲಿ ಜುಲೈನಲ್ಲಿ 80.74 ಕೋಟಿಯಿದ್ದ ಬ್ರಾಡ್‌ಬ್ಯಾಂಡ್ ಚಂದಾದಾರರ ಸಂಖ್ಯೆಯು ಆಗಸ್ಟ್‌ ಅಂತ್ಯಕ್ಕೆ 81.39 ಕೋಟಿ (ಶೇಕಡಾ 0.81)ಗೆ ಏರಿಕೆಯಾಗಿದೆ. ಆಗಸ್ಟ್‌ನಲ್ಲಿ ಒಟ್ಟೂ ಬ್ರಾಡ್‌ಬ್ಯಾಂಡ್‌ ಚಂದಾದಾರರ ಪೈಕಿ ಶೇಕಡಾ 98.39 ರಷ್ಟನ್ನು ದೇಶದ 5 ಪ್ರಮುಖ ಟೆಲಿಕಾಂ ಕಂಪನಿಗಳೇ ಹೊಂದಿವೆ.

ಇದನ್ನೂ ಓದಿ : BHEL Recruitment 2022 : BHEL ನೇಮಕಾತಿ 2022 : 30 ಪ್ರಾಜೆಕ್ಟ್ ಇಂಜಿನಿಯರ್, ಪ್ರಾಜೆಕ್ಟ್ ಸೂಪರ್‌ವೈಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಇದನ್ನೂ ಓದಿ : JioFiber : ಜಿಯೊದಿಂದ ಡಬಲ್‌ ಫೆಸ್ಟಿವಲ್‌ ಬೊನಾಂಜಾ ಕೊಡುಗೆ ಪ್ರಾರಂಭ : ಜಿಯೊಫೈಬರ್‌ ಹೊಸ ಸಂಪರ್ಕದಲ್ಲಿ ಪಡೆಯಿರಿ ಭಾರಿ ಲಾಭ

(TRAI reported Reliance Jio Fixed-Line Service become a largest fixed-line service provider in August)

Comments are closed.