ಭಾನುವಾರ, ಏಪ್ರಿಲ್ 27, 2025
HometechnologyTwitter Data leak: ಸುಂದರ್ ಪಿಚೈ, ಸಲ್ಮಾನ್ ಖಾನ್ ಸೇರಿ 40 ಕೋಟಿ ಟ್ವಿಟರ್ ಅಕೌಂಟ್...

Twitter Data leak: ಸುಂದರ್ ಪಿಚೈ, ಸಲ್ಮಾನ್ ಖಾನ್ ಸೇರಿ 40 ಕೋಟಿ ಟ್ವಿಟರ್ ಅಕೌಂಟ್ ಹ್ಯಾಕ್.. ದತ್ತಾಂಶ ಮಾರಾಟಕ್ಕೆ..!?

- Advertisement -

ನವದೆಹಲಿ: Twitter Data leak: ಗೂಗಲ್ ಸಿಇಓ ಸುಂದರ್ ಪಿಚೈ, ಬಾಲಿವುಡ್ ನಟ ಸಲ್ಮಾನ್ ಖಾನ್ ಸೇರಿದಂತೆ 40 ಕೋಟಿ ಟ್ವಿಟರ್ ಬಳಕೆದಾರರ ವೈಯಕ್ತಿಕ ದತ್ತಾಂಶ ಸೋರಿಕೆ ಆಗಿದೆ ಎಂಬ ಆಘಾತಕಾರಿ ಅಂಶವೊಂದು ಹೊರಬಿದ್ದಿದೆ. ಸೋರಿಕೆ ಆದ ದತ್ತಾಂಶಗಳನ್ನು ಡಾರ್ಕ್ ವೆಬ್ ನಲ್ಲಿ ಮಾರಾಟಕ್ಕಿಡಲಾಗಿದೆ ಎಂದು ಇಸ್ರೇಲ್ ನ ಸೈಬರ್ ಗುಪ್ತಚರ ಕಂಪೆನಿ ಹಡ್ಸನ್ ರಾಕ್ ವರದಿ ತಿಳಿಸಿದೆ. ಅಲ್ಲದೇ ಬಳಕೆದಾರರ ಇ-ಮೇಲ್, ಯೂಸರ್ ನೇಮ್, ಫಾಲೋವರ್ಸ್, ಫೋನ್ ನಂಬರ್ ಗಳನ್ನೂ ಮಾರಾಟಕ್ಕಿಡಲಾಗಿದೆ. 40 ಕೋಟಿ ಬಳಕೆದಾರರ ಸಂಪೂರ್ಣ ಖಾಸಗಿ ಮಾಹಿತಿಯನ್ನು ಮಾರಾಟ ಮಾಡುತ್ತಿರುವುದಾಗಿ ಹ್ಯಾಕರ್ ಹೇಳಿರುವುದಾಗಿ ವರದಿಯಲ್ಲಿ ಉಲ್ಲೇಖಗೊಂಡಿದೆ.

ಉದ್ಯಮಿ ಎಲಾನ್ ಮಸ್ಕ್ ಅವರು ಟ್ವಿಟರ್ ಮಾಲೀಕತ್ವ ವಹಿಸಿಕೊಂಡ ಕೆಲ ದಿನಗಳಲ್ಲೇ 54 ಲಕ್ಷ ಟ್ವಿಟರ್ ಬಳಕೆದಾರರ ದತ್ತಾಂಶ ಸೋರಿಕೆ ಆಗಿತ್ತು. ಸದ್ಯ ಈ ಬಗ್ಗೆ ಐರಿಷ್ ದತ್ತಾಂಶ ಸಂರಕ್ಷಣಾ ಆಯೋಗವು ತನಿಖೆಯನ್ನು ನಡೆಸುತ್ತಿದೆ. ಈ ಬೆನ್ನಲ್ಲೇ ಇದೀಗ ಮತ್ತೆ ಹ್ಯಾಕರ್ ತನ್ನ ಕರಾಮತ್ತು ತೋರಿದ್ದಾನೆ ಅಲ್ಲದೇ ಟ್ವಿಟರ್ ಮಾಲೀಕ ಎಲಾನ್ ಮಸ್ಕ್ ಗೆ ಸವಾಲು ಹಾಕಿದ್ದಾನೆ. ಮಸ್ಕ್ ಅವರೇ, ತಾವು ಈ ಸಂದೇಶ ಓದುತ್ತಿದ್ದರೆ ಗಮನಿಸಿ, ಈಗಾಗಲೇ 54 ಲಕ್ಷ ಬಳಕೆದಾರರ ದತ್ತಾಂಶ ಸೋರಿಕೆ ಆಗಿ ಸಂಕಷ್ಟಕ್ಕೆ ಸಿಲುಕಿದ್ದೀರಿ. ಈಗ ಮತ್ತೆ 40 ಕೋಟಿ ಬಳಕೆದಾರರ ದತ್ತಾಂಶ ಸೋರಿಕೆ ಆಗಿದೆ. ನೇವೇ ಹಣ ಪಾವತಿ ಮಾಡಿ ಈ ದತ್ತಾಂಶಗಳನ್ನು ಖರೀದಿ ಮಾಡುವುದೊಂದೇ ಇದೀಗ ನಿಮ್ಮ ಮುಂದಿರುವ ಉತ್ತಮವಾದ ಆಯ್ಕೆ ಎಂದು ಹ್ಯಾಕರ್ ಸವಾಲೆಸೆದಿದ್ದಾನೆ ಎನ್ನಲಾಗಿದೆ.

ಇದನ್ನೂ ಓದಿ: Covid Positive case: ಬೆಂಗಳೂರಿಗೆ 2,867 ವಿದೇಶಿ ಪ್ರಯಾಣಿಕರ ಆಗಮನ: 12 ಮಂದಿಗೆ ಕೋವಿಡ್‌ ಸೋಂಕು ದೃಢ

ಮಧ್ಯವರ್ತಿಗಳ ಮೂಲಕ ವ್ಯವಹಾರ ಕುದುರಿಸಲು ಸಹಮತವಿದೆ ಎಂದು ಹ್ಯಾಕರ್ ಹೇಳಿರುವುದಾಗಿ ಹಡ್ಸನ್ ರಾಕ್ ವರದಿ ತಿಳಿಸಿದೆ. ವ್ಯವಹಾರ ಸಕ್ಸಸ್ ಆದರೆ ಈ ಮೆಸೇಜ್ ಡಿಲೀಟ್ ಮಾಡುತ್ತೇನೆ ಹಾಗೂ ಮತ್ತೊಂದು ಬಾರಿ ದತ್ತಾಂಶ ಮಾರಾಟ ಮಾಡುವುದಿಲ್ಲ ಎಂದು ಹ್ಯಾಕರ್ ಭರವಸೆ ನೀಡಿರುವುದಾಗಿ ವರದಿಯಲ್ಲಿ ತಿಳಿಸಲಾಗಿದೆ.

ಯಾವೆಲ್ಲಾ ಗಣ್ಯರ ಹಾಗೂ ಸಂಸ್ಥೆಗಳ ದತ್ತಾಂಶ ಸೋರಿಕೆ ಆಗಿದೆ..?

  • ಸುಂದರ್ ಪಿಚೈ
  • ಸಲ್ಮಾನ್ ಖಾನ್
  • ಭಾರತ ಮಾಹಿತಿ ಮತ್ತು ಪ್ರಸಾರ ಸಚಿವಾಲಯ
  • ವಿಶ್ವ ಆರೋಗ್ಯ ಸಂಘಟನೆಯ ಸಾಮಾಜಿಕ ಜಾಲತಾಣ ಹ್ಯಾಂಡಲ್
  • ಚಾರ್ಲಿ ಪುತ್
  • ಶಾನ್ ಮೆಂಡಿಸ್
  • ಅಲೆಕ್ಸಾಂಡ್ರಿಯಾ ಒಕಾಸಿಯೊ- ಕಾರ್ಟೆಜ್
  • ಸಿಬಿಎಸ್ ಮೀಡಿಯಾ
  • ಡೊನಾಲ್ಡ್ ಟ್ರಂಪ್
  • ಡೋಜಾ ಕ್ಯಾಟ್
  • ನಾಸಾದ ಜೆಡಬ್ಲ್ಯೂ ಎಸ್ ಟಿ ಖಾತೆ
  • ಎನ್ ಬಿಎ

ಇದನ್ನೂ ಓದಿ: Covid test compulsory: ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಕೋವಿಡ್‌ ಪರೀಕ್ಷೆ ಕಡ್ಡಾಯ

Twitter Data leak: Twitter data breach affects 400 million handles including of Salman Khan, Sundar Pichai

RELATED ARTICLES

Most Popular