ಟ್ವಿಟರ್ ವೆಬ್‌ಸೈಟ್ ಮತ್ತು ಅಪ್ಲಿಕೇಶನ್ ಶುಕ್ರವಾರ ಸಾವಿರಾರು ಬಳಕೆದಾರರಿಗೆ ಸ್ಥಗಿತಗೊಂಡಿದೆ ಎಂದು ಔಟ್ಟೇಜ್ ಟ್ರ್ಯಾಕಿಂಗ್ ವೆಬ್‌ಸೈಟ್ Downdetector.com ತಿಳಿಸಿದೆ. ಬಳಕೆದಾರರು ಸಲ್ಲಿಸಿದ ಟ್ವಿಟರ್‌ನ ಸುಮಾರು 15,000 ಬಳಕೆದಾರುಈ ಸಮಸ್ಯೆಯನ್ನು ವರದಿ ಮಾಡಿದ್ದಾರೆ ಎಂದು ವರದಿಯಾಗಿದೆ. ಟ್ವಿಟರ್ ಸ್ಥಗಿತದ ನಂತರ ಜಗತ್ತಿನಾದ್ಯಂತದ ಬಳಕೆದಾರರು ಈ ಸಮಸ್ಯೆಗಳ ಬಗ್ಗೆ ದೂರು ನೀಡಿದರೆ, ಕೆಲವರು ಅಡ್ಡಿಪಡಿಸುವಿಕೆಯನ್ನು ಗಮನಿಸಲಿಲ್ಲ. ಅನೇಕ ಬಳಕೆದಾರರು ಈ ಟ್ವಿಟರ್ ಸಮಸ್ಯೆಯ ಬಗ್ಗೆ ಮಜ ಮಜವಾದ ಮೀಮ್‌ಗಳನ್ನು ಇನ್ಸ್‌ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
ಜಗತ್ತಿನ ಅತಿ ಪ್ರಮುಖ ಸಾಮಾಜಿಕ ಮಾಧ್ಯಮ ಕಂಪನಿಯಾದ ಟ್ವಿಟರ್ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಿಂದ “ಈಗ ಸಾಮಾನ್ಯ ಸ್ಥಿತಿಗೆ ಮರಳಿದೆ” ಎಂದು ಟ್ವೀಟ್ ಮಾಡಿದೆ. ತಾಂತ್ರಿಕ ದೋಷದಿಂದ ಈ ಪರಿಸ್ಥಿತಿ ಉಂಟಾಗಿದ್ದು, ಅದನ್ನು ಈಗ ಸರಿಪಡಿಸಲಾಗಿದೆ ಮತ್ತು ಅಡಚಣೆಗಳಿಗೆ ಕ್ಷಮೆಯಾಚಿಸುತ್ತೇವೆ ಎಂದು Twitter Inc ಹೇಳಿದೆ. ಈ ಮೂಲಕ ಸಮಸ್ಯೆಯನ್ನು ಪರಿಹರಿಸಲಾಗಿದೆ ಎಂದು ತಿಳಿಸಿದೆ. ರಾತ್ರಿ 11.44 ಕ್ಕೆ ಈಕುರಿತು ಟ್ವಿಟರ್ ಅಧಿಕೃತವಾಗಿ ಟ್ವೀಟ್ ಮಾಡಿದೆ.
Loyal #Twitter citizens after #TwitterDown: pic.twitter.com/YzFk5fzBt4
— Parvathi Joshi (@joshi_parvathi) February 11, 2022
Me and my homie checking the WiFi router:#twitterdown#INDvWI pic.twitter.com/i0SiuEcWQe
— Andy (@iamandy1987) February 12, 2022
Twitter Article: ಟ್ವಿಟರ್ ಆರ್ಟಿಕಲ್ ಫೀಚರ್; ಉದ್ದ ಪೋಸ್ಟ್ ಟ್ವೀಟ್ ಮಾಡಲು ಸಿಗಲಿದೆ ಅವಕಾಶ
ಜನಪ್ರಿಯ ಸೋಷಿಯಲ್ ಮೀಡಿಯಾ ಅಪ್ಲಿಕೇಶನ್ ಟ್ವಿಟರ್ “ಟ್ವಿಟರ್ ಆರ್ಟಿಕಲ್ಸ್” (Twitter Article) ಎಂಬ ಫೀಚರ್ ಬಿಡುಗಡೆಗೊಳಿಸಲಿದೆ ಎಂದು ವರದಿಯಾಗಿದೆ. ಈ ಹೊಸ ಫೀಚರ್ ಬಳಕೆದಾರರಿಗೆ ದೀರ್ಘ ಪಠ್ಯದೊಂದಿಗೆ ಟ್ವೀಟ್‌ಗಳನ್ನು ಪೋಸ್ಟ್ ಮಾಡಲು ಅನುಮತಿಸುತ್ತದೆ. ಟ್ವಿಟರ್‌ನ ಎಂಜಿನಿಯರಿಂಗ್ ತಜ್ಞರು ಹಂಚಿಕೊಂಡ ವಿವರಗಳ ಪ್ರಕಾರ, ಟ್ವಿಟರ್ ಆರ್ಟಿಕಲ್ಸ್ ಫೀಚರ್ ಪ್ಲಾಟ್‌ಫಾರ್ಮ್‌ನಲ್ಲಿ ಅಸ್ತಿತ್ವದಲ್ಲಿರುವ 280-ಅಕ್ಷರಗಳ ಮಿತಿಯನ್ನು ಮೀರಿ ಪೋಸ್ಟ್‌ಗಳನ್ನು ಬರೆಯಲು ಕಂಪನಿಯು ಬಳಕೆದಾರರನ್ನು ಅನುಮತಿಸಬಹುದು. ಪ್ರಸ್ತುತ, ಬಳಕೆದಾರರು ಥ್ರೆಡ್‌ಗಳನ್ನು ಬಳಸಿಕೊಂಡು ದೀರ್ಘವಾದ ಪಠ್ಯ ತುಣುಕುಗಳನ್ನು ಟ್ವೀಟ್ ಮಾಡಬಹುದು. ಆದರೆ ಹೊಸ ವೈಶಿಷ್ಟ್ಯವು ಒಂದೇ ಟ್ವೀಟ್‌ನಲ್ಲಿ ಅಡಚಣೆಯಿಲ್ಲದ ಪಠ್ಯವನ್ನು ಬರೆಯಲು ಅನುಮತಿಸುತ್ತದೆ. ಭವಿಷ್ಯದಲ್ಲಿ ಟ್ವಿಟರ್ ಲೇಖನಗಳ ಬಗ್ಗೆ ವಿವರಗಳನ್ನು ಬಹಿರಂಗಪಡಿಸುವುದಾಗಿ ಟ್ವಿಟರ್ ಹೇಳಿದೆ.
ಹೊಸ ಟ್ವಿಟರ್ ಲೇಖನಗಳ ವಿಭಾಗವನ್ನು ರಿವರ್ಸ್ ಇಂಜಿನಿಯರಿಂಗ್ ತಜ್ಞ ಜೇನ್ ಮಂಚುನ್ ವಾಂಗ್ ಅವರು ಗುರುತಿಸಿದ್ದಾರೆ. ಅವರು ಟ್ವಿಟರ್ ವೆಬ್ ಇಂಟರ್ಫೇಸ್‌ನ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದಾರೆ. ಚಿತ್ರವು ಪಠ್ಯವನ್ನು ತೋರಿಸುತ್ತದೆ . ಆದರೆ ಇನ್ನೂ ಯಾವುದೇ ಲೇಖನಗಳಿಲ್ಲ. ಇದು ಬಳಕೆದಾರರಿಗೆ ಟ್ವಿಟರ್ ನಲ್ಲಿ ದೀರ್ಘರೂಪದ ಲೇಖನಗಳನ್ನು ಪೋಸ್ಟ್ ಮಾಡಲು ಸಾಧ್ಯವಾಗುತ್ತದೆ ಎಂದು ಸೂಚಿಸುತ್ತದೆ. ಈ ವೈಶಿಷ್ಟ್ಯವು ಪ್ರಸ್ತುತ ಟ್ವಿಟರ್‌ನಲ್ಲಿ ಬಳಕೆದಾರರಿಗೆ ಲಭ್ಯವಿಲ್ಲ.
ಇದನ್ನೂ ಓದಿ: Twitter Article: ಟ್ವಿಟರ್ ಆರ್ಟಿಕಲ್ ಫೀಚರ್; ಉದ್ದ ಪೋಸ್ಟ್ ಟ್ವೀಟ್ ಮಾಡಲು ಸಿಗಲಿದೆ ಅವಕಾಶ
(Twitter Down Netizens complaint of being logged out of accounts invite memes)