Namaz inside Class room : ಹಿಜಾಬ್‌ ಬೆನ್ನಲ್ಲೇ ಮಂಗಳೂರಿನ ಶಾಲೆಯಲ್ಲಿ ನಮಾಜ್‌ ಮಾಡಿದ ವಿದ್ಯಾರ್ಥಿಗಳು : ವಿಡಿಯೋ ವೈರಲ್‌

ಮಂಗಳೂರು : ರಾಜ್ಯದಾದ್ಯಂತ ಹಿಜಾಬ್‌ ವಿವಾದ ಕಿಚ್ಚು ಹೊತ್ತಿಸಿದೆ ಈ ನಡುವಲ್ಲೇ ದಕ್ಷಿಣ ಕನ್ನಡ ಜಿಲ್ಲೆಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿನ ಮಕ್ಕಳು ನಮಾಜ್‌ (Namaz inside Class room) ಮಾಡಿದ್ದಾರೆ. ಕಳೆದ ವಾರದಿಂದಲೂ ಶಾಲೆಯಲ್ಲಿನ ವಿದ್ಯಾರ್ಥಿಗಳು ನಮಾಜ್‌ ಮಾಡುತ್ತಿದ್ದಾರೆ ಅನ್ನೋದು ತಿಳಿದು ಬಂದಿದೆ. ಶಾಲೆಯಲ್ಲಿ ವಿದ್ಯಾರ್ಥಿಗಳು ನಮಾಜ್‌ ಮಾಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಅಂಕತ್ತಡ್ಕ ಸರಕಾರಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಶಾಲೆಯಲ್ಲಿ ಮಕ್ಕಳು ಕಳೆದ ಮೂರು ವಾರಗಳಿಂದ ಶಾಲಾ ಕೊಠಡಿಯಲ್ಲಿ ವಿದ್ಯಾರ್ಥಿಗಳು ನಮಾಜ್ ಮಾಡುತ್ತಿದ್ದಾರೆ. 6 ನೇ ಮತ್ತು 7 ನೇ ತರಗತಿ ಮಕ್ಕಳು ಪ್ರಾರ್ಥನೆಯಲ್ಲಿ ತೊಡಗಿದ್ದಾರೆ. ವಿದ್ಯಾರ್ಥಿಗಳು ಶಾಲೆಯಲ್ಲಿಯೇ ನಮಾಜ್‌ ಮಾಡುತ್ತಿದ್ದರೂ ಕೂಡ ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿಗಳು ಈ ಕುರಿತು ಗಮನ ಹರಿಸಿಲ್ಲ.

ನಿನ್ನೆ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಪ್ರವೀಣ್‌ ಭಂಡಾರಿ ಅವರು ಖುದ್ದು ಶಾಲೆಗೆ ಭೇಟಿ ನೀಡಿದ ವೇಳೆಯಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಶಾಲೆಯಲ್ಲಿ ನಮಾಜ್‌ ಮಾಡುತ್ತಿರುವು ದನ್ನು ಪ್ರವೀಣ್‌ ಭಂಡಾರಿ ಅವರು ಖಂಡಿಸಿದ್ದಾರೆ. ನಮಾಜ್‌ ಮಾಡಬೇಕಾದ್ರೆ ಅರ್ಧ ದಿನ ಶಾಲೆಗೆ ರಜೆ ಹಾಕಿ ಮಸೀದಿಗೆ ಹೋಗಲಿ ಎಂದಿದ್ದಾರೆ. ಅಲ್ಲದೇ ಕಳೆದ ಈ ಹಿಂದೆ ಯಾರೂ ಕೂಡ ಶಾಲೆಯಲ್ಲಿ ನಮಾಜ್‌ ಮಾಡಿಲ್ಲ. ಕಳೆದ ಮೂರು ವಾರಗಳಿಂದ ಹೀಗೆ ನಡೆಯುತ್ತಿದೆ. ಇನ್ನುಳಿದ ವಿದ್ಯಾರ್ಥಿಗಳು ನಮಾಜ್‌ ಮಾಡೋದಾದ್ರೆ ನಾವು ಭಜನೆ ಮಾಡ್ತೇವೆ ಅಂತಿದ್ದಾರೆ. ಆದರೆ ಭಜನೆ ಹಾಗೂ ನಮಾಜ್‌ ಮಾಡೋದಕ್ಕೆ ಶಾಲೆಯಲ್ಲಿ ಅವಕಾಶ ನೀಡುವುದಿಲ್ಲ ಎಂದು ಅವರು ಮಾಧ್ಯಮಗಳಿಗೆ ಮಾಹಿತಿಯನ್ನು ನೀಡಿದ್ದಾರೆ.

ರಾಜ್ಯದಲ್ಲಿ ಹಿಜಾಬ್‌ ವಿವಾದ ಇದೀಗ ಹೈಕೋರ್ಟ್‌ ಮೆಟ್ಟಿಲೇರಿದೆ. ನ್ಯಾಯಾಲಯ ಮಧ್ಯಂತರ ತೀರ್ಪು ನೀಡಿದ್ದು ಧಾರ್ಮಿಕ ಆಚರಣೆಗೆ ಶಾಲೆಯಲ್ಲಿ ಅವಕಾಶವಿಲ್ಲ ಎಂದಿದೆ. ರಾಜ್ಯ ಸರಕಾರ ಕೂಡ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕಾಲೇಜುಗಳಿಗೆ ಫೆ.16ರವರೆಗೂ ರಜೆಯನ್ನು ಮುಂದುವರಿಸಿದೆ. ಇದೀಗ ನಮಾಜ್‌ ಮಾಡಿರುವ ಶಾಲೆಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಇಂದು ಭೇಟಿ ನೀಡಿ ಪರಿಶೀಲನೆಯನ್ನು ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ : Twitter Down: ತಡರಾತ್ರಿ ಟ್ವಿಟರ್‌ ಆ್ಯಪ್‌ನಲ್ಲಿ ಸಮಸ್ಯೆ; ಬಳಕೆದಾರರಿಂದ ದೂರು; ಮೀಮ್‌ಗಳ ಸುರಿಮಳೆ

ಇದನ್ನೂ ಓದಿ : ಹಿಜಾಬ್‌ ವಿವಾದ ವಿಚಾರಣೆ ಮುಂದೂಡಿಕೆ : ಅಂತಿಮ ಆದೇಶದವರೆಗೂ ಹಿಜಾಬ್‌, ಕೇಸರಿ ಧರಿಸುವಂತಿಲ್ಲ

(Students Namaz inside Class room in Mangaluru Videos Goes Viral)

Comments are closed.