ನವದೆಹಲಿ : ಟೆಕ್ ದೈತ್ಯ ಟ್ವೀಟರ್ ಸಂಸ್ಥೆಯನ್ನು ಈಗಾಗಲೇ ಎಲನ್ ಮಸ್ಕ್ ಖರೀದಿಸಿದ ಬೆನ್ನಲ್ಲೇ ಹಲವು ಬದಲಾವಣೆಗಳು ನಡೆಯುತ್ತಿವೆ. ಈ ನಡುವಲ್ಲೇ ಟ್ವೀಟರ್ ಖಾತೆಗಳಲ್ಲಿ ಇದೀಗ ತಾಂತ್ರಿಕ ದೋಷ (Twitter Down ) ಕಂಡು ಬಂದಿದೆ. ಇದರಿಂದಾಗಿ ವೆಬ್ ಬಳಕೆದಾರರು ತಮ್ಮ ಖಾತೆಗಳನ್ನು ಪ್ರವೇಶಿಸುವಲ್ಲಿ ಬಳಕೆದಾರರು ಸಮಸ್ಯೆಗಳನ್ನು ಎದುರಿಸಿದ್ದಾರೆ. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಹಲವಾರು ಬಳಕೆದಾರರು ತಮ್ಮ Twitter ಖಾತೆಗಳನ್ನು ಪ್ರವೇಶಿಸುವಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಬಳಕೆದಾರರು ತಮ್ಮ ಫೀಡ್ ಅನ್ನು ಪ್ರವೇಶಿಸಲು ಪ್ರಯತ್ನಿಸುತ್ತಿರುವಾಗ ತಮ್ಮ Twitter ಪುಟದಲ್ಲಿ ಏನನ್ನೂ ನೋಡಲು ಸಾಧ್ಯವಾಗದ ಕಾರಣ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಫೀಡ್ ಪುಟವನ್ನು ತೆರೆಯುವಾಗ “ಏನೋ ತಪ್ಪಾಗಿದೆ, ಆದರೆ ಚಿಂತಿಸಬೇಡಿ – ಅದನ್ನು ಮತ್ತೊಂದು ಶಾಟ್ ನೀಡೋಣ ಎಂಬ ಸಂದೇಶ ಶೋ ಆಗುತ್ತಿದೆ.
ಆದರೆ ಅಪ್ಲಿಕೇಶನ್ ಬಳಕೆದಾರರು ಯಾವುದೇ ಸಮಸ್ಯೆಯನ್ನು ಎದುರಿಸಿಲ್ಲ. ಆದರೆ ವೆಬ್ ಬಳಕೆದಾರರು ಮಾತ್ರವೇ ತೊಂದರೆಯನ್ನು ಅನುಭವಿಸಿದ್ದಾರೆ. ಇತ್ತೀಚಿಗಷ್ಟೇ Instagram ಸಹ ಭಾಗಶಃ ಸ್ಥಗಿತಗೊಂಡು, ಹಲವರ ಖಾತೆಗಳು ಡಿಲೀಟ್ ಆಗಿತ್ತು. ಇನ್ನು ಇನ್‌ಸ್ಟಂಟ್ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಸುಮಾರು ಒಂದೆರಡು ಗಂಟೆಗಳ ಕಾಲ ಸ್ಥಗಿತಗೊಂಡಿದ್ದರಿಂದ WhatsApp ತಾಂತ್ರಿಕ ಸಮಸ್ಯೆಯನ್ನು ಎದುರಿಸಿತ್ತು. ಗ್ಲಿಚ್ ಹಲವಾರು ಬಳಕೆದಾರರು ಅಪ್ಲಿಕೇಶನ್‌ನಲ್ಲಿ ಪಠ್ಯಗಳನ್ನು ಕಳುಹಿಸುವ ಮತ್ತು ಸ್ವೀಕರಿಸುವಲ್ಲಿ ಸಮಸ್ಯೆಗಳನ್ನು ವರದಿ ಮಾಡಲು ಕಾರಣವಾಯಿತು. ಜಗತ್ತಿನಾದ್ಯಂತ ಆನ್‌ಲೈನ್ ನಿಲುಗಡೆಗಳನ್ನು ಪತ್ತೆಹಚ್ಚುವ ವೆಬ್‌ಸೈಟ್ ಡೌನ್‌ಡೆಕ್ಟರ್, WhatsApp ನ ಸ್ಥಗಿತವನ್ನು ವರದಿ ಮಾಡುವ ಬಳಕೆದಾರರ ಸಂಖ್ಯೆಯಲ್ಲಿ ತೀವ್ರ ಏರಿಕೆ ಕಂಡು ಬಂದಿದೆ.
ಇದನ್ನೂ ಓದಿ : WhatsApp : ಭಾರತದಲ್ಲಿ 26 ಲಕ್ಷ ಖಾತೆಗಳನ್ನು ಬ್ಯಾನ್ ಮಾಡಿದ ವಾಟ್ಸ್‌ಅಪ್
ದಿನಕ್ಕೆ 12 ಗಂಟೆ, ವಾರಕ್ಕೆ 7 ದಿನ ಕೆಲಸ : ಎಲನ್ ಮಸ್ಕ್ ಆದೇಶಕ್ಕೆ ಟ್ವೀಟರ್ ಉದ್ಯೋಗಿಗಳು ಸುಸ್ತೋ ಸುಸ್ತು
ವಾಷಿಂಗ್ಟನ್ : ಸಾಮಾಜಿಕ ಜಾಲತಾಣ ಟ್ವೀಟರ್ ಖರೀದಿಸಿದ ಕೆಲವೇ ದಿನಗಳಲ್ಲಿ ಎಲನ್ ಮಸ್ಕ್ ಹೊಸ ಆದೇಶಗಳನ್ನು ಜಾರಿಗೆ ತರುತ್ತಿದ್ದಾರೆ. ಇದೀಗ ಕಂಪೆನಿ ಉದ್ಯೋಗಿಗಳಿಗಾಗಿ ʼಮೇಕ್-ಆರ್-ಬ್ರೇಕ್ʼ (Make Or Brake )ನಿಯಮ ಜಾರಿಗೆ ತಂದಿದ್ದು, ದಿನದಲ್ಲಿ 12 ಗಂಟೆ, ವಾರಕ್ಕೆ 7 ದಿನ ಕೆಲಸ ಮಾಡುವಂತೆ ಸೂಚನೆ ನೀಡಿದ್ದಾರೆ. ಇದರಿಂದಾಗಿ ಟ್ವೀಟರ್ ಉದ್ಯೋಗಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಎಲನ್ ಮಸ್ಕ್ ಅಧಿಕಾರ ವಹಿಸಿಕೊಳ್ಳುವ ಮೊದಲು ಟ್ವಿಟರ್‌ನಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಗಳಿಗೆ ತಮ್ಮ ತಂಡದ ಕೆಲಸದ ಪರೀಕ್ಷೆಯನ್ನು ಮಾಡಲಾಗಿತ್ತು. ಅಲ್ಲದೇ ಕಂಪೆನಿಗೆ ಅವರ ಮೌಲ್ಯವನ್ನು ವಿವರಿಸಲು ತಿಳಿಸಲಾಗಿತ್ತು. ಇದೀಗ ಟ್ವೀಟರ್ ಖರೀದಿಸಿದ ಬೆನ್ನಲ್ಲೇ ಎಲನ್ ಮಸ್ಕ್ ಏಳು ದಿನಗಳಲ್ಲಿ 12 ಗಂಟೆಗಳ ಶಿಫ್ಟ್ ನಲ್ಲಿ ಕೆಲಸ ಮಾಡುವಂತೆ ಸೂಚಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
“ಓವರ್‌ಟೈಮ್ ಪೇ ಅಥವಾ ಕಾಂಪ್ ಟೈಮ್” ಅಥವಾ ಕೆಲಸದ ಭದ್ರತೆಯ ಬಗ್ಗೆ ಯಾವುದೇ ಚರ್ಚೆಯನ್ನು ನಡೆಸದೆ ಹೆಚ್ಚುವರಿ ಗಂಟೆಗಳ ಕಾಲ ಕೆಲಸ ಮಾಡಲು ಉದ್ಯೋಗಳಿಗೆ ತಿಳಿಸಳಾಗಿದೆ. ನವೆಂಬರ್ ಆರಂಭದ ವರೆಗೆ ʼಮೇಕ್-ಆರ್-ಬ್ರೇಕ್(Make Or Brake ) ʼ ನಿಯಮದ ಗಡುವು ನೀಡಲಾಗಿದ್ದು, ಕಂಪೆನಿಯ ಅವಶ್ಯಕತೆಗಳನ್ನು ಪೂರೈಸಲು ವಿಫಲವಾದ್ರೆ ಅವರು ಮೈಕ್ರೋ ಬ್ಲಾಗಿಂಗ್ ಸೈಟ್‌ನಲ್ಲಿ ತಮ್ಮ ಉದ್ಯೋಗವನ್ನು ಕಳೆದುಕೊಳ್ಳಬಹುದು. ಇನ್ನು ಟ್ವೀಟರ್ ಖಾತೆಗಳಿಗೆ ದೃಢೀಕರಿಸುವ ಬಳಕೆದಾರರ ಹೆಸರಿನ ಮುಂದೆ ಪರಿಶೀಲನೆಯ ನೀಲಿ ಟಿಕ್ ಈಗ ತಿಂಗಳಿಗೆ ಎಂಟು ಡಾಲರ್‌ಗಳ ಬೆಲೆಯಲ್ಲಿ ಲಭ್ಯವಿರುತ್ತದೆ ಎಂದು ಮಸ್ಕ್ ಘೋಷಿಸಿದರು. ತಿಂಗಳಿಗೆ USD 8 ಕ್ಕೆ ಬ್ಲೂ ಟಿಕ್, ಖರೀದಿ ಸಾಮರ್ಥ್ಯದ ಸಮಾನತೆಗೆ ಹಾಗೂ ದೇಶಕ್ಕೆ ಅನುಗುಣವಾಗಿ ಬೆಲೆಯನ್ನು ಸರಿಹೊಂದಿಸಲಾಗುತ್ತದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ : Digital Currency: ಭಾರತದಲ್ಲಿ ಪ್ರಾಯೋಗಿಕವಾಗಿ ಬಿಡುಗಡೆಯಾದ ಡಿಜಿಟಲ್ ರೂಪಾಯಿ; ಇದರಿಂದಾಗುವ ಲಾಭವೇನು
Twitter Down Several Web Users Report Problems Accessing Accounts