Vi Offers 2GB Extra Data : ಪ್ರತಿ ತಿಂಗಳು ಎಕ್ಟ್ರಾ 2GB ಡಾಟಾ ಕೊಡುಗೆ ನೀಡುತ್ತಿರುವ ವೊಡಾಫೋನ್‌ ಐಡಿಯಾ : ಈ ಕೊಡುಗೆ ಪಡೆಯಲು ಹೀಗೆ ಮಾಡಿ

ವೊಡಾಫೋನ್‌ ಐಡಿಯಾ, Vi ತನ್ನ ಚಂದಾದರರಿಗೆ ಡಾಟಾ (Data) ವನ್ನು ಉಳಿಸಿಕೊಳ್ಳಲು ಮತ್ತು ಮತ್ತು ಭಾರಿ ಬಳಕೆಯ ದಿನಗಳಲ್ಲಿ ಪುನಃ ಪಡೆಯಲು, ಡೇಟಾ ಡಿಲೈಟ್‌ (Data Delight) ಸೇವೆಯಂತಹ ಹಲವಾರು ಆಯ್ಕೆಗಳನ್ನು ನೀಡಿದೆ. ಅಂತಹ ಕೊಡುಗೆಗಳಲ್ಲಿ ಪ್ರತಿ ತಿಂಗಳಿಗೆ ಬಳಸಬಹುದಾದ 2GB ವರೆಗಿನ (Vi Offers 2GB Extra Data) ಉಚಿತ ಸಂಗ್ರಹಣೆಯೂ ಒಂದಾಗಿದೆ. ಬಳಕೆದಾರರು ಈ ವೈಶಿಷ್ಟ್ಯ ವನ್ನು ಡೇಟಾ ಡಿಲೈಟ್‌ ಕೊಡುಗೆಯ ಮೂಲಕ 2 ಜಿಬಿ ಹೆಚ್ಚಿನ ಮಾಸಿಕ ಡೇಟಾವನ್ನು ಪಡೆಯಬಹುದಾಗಿದೆ. ಇದು ರಿಚಾರ್ಜ್‌ ಯೋಜನೆಯಲ್ಲಿ ದೈನಂದಿನ ಡೇಟಾ ಮಿತಿಯೊಂದಿಗೆ ಲಭ್ಯವಿರುತ್ತದೆ.

ಪ್ರತಿ ತಿಂಗಳು 2 ಜಿಬಿ ಹೆಚ್ಚುವರಿ (Vi Offers 2GB Extra Data) ಡೇಟಾ ಪಡೆಯುವುದು ಹೇಗೆ ?

ಎಲ್ಲಾ Vi ಹೀರೋ ಅನ್‌ಲಿಮಿಟೆಡ್‌ ಬಂಡಲ್‌ ಪ್ರೀಪೇಯ್ಡ್‌ ಯೋಜನೆಗಳು ಇತರ ಪ್ರಯೋಜನಗಳ ಜೊತೆ ಡೇಟಾ ಡಿಲೈಟ್‌ ಕೊಡುಗೆಯನ್ನು ನೀಡುತ್ತದೆ. ಇದು ಹೆಚ್ಚಿನ ಡೇಟಾ ಪ್ರಯೋಜನ್ನೂ ನೀಡುತ್ತದೆ. ಇದರ ಜೊತೆಗೆ ಬಳಕೆದಾರರಿಗೆ ಬಿಂಗೆ–ಆಲ್‌–ನೈಟ್‌ 12 AM ನಿಂದ 6 AM ವರೆಗೆ ಅನ್‌ಲಿಮಿಟೆಡ್‌ ಉಚಿತ ಡೇಟಾವನ್ನು ನೀಡುತ್ತದೆ. ಡೇಟಾ ರೋಲ್‌ಓವರ್‌ ಸೌಲಭ್ಯವು ವಾರಾಂತ್ಯದಲ್ಲಿ ಬಳಕೆಯಾಗುವ ವೀಕ್‌ಎಂಡ್‌ ಡೇಟಾವನ್ನು ಕಾಯ್ದಿರಿಸಲು ಅನುಮತಿ ನೀಡುತ್ತದೆ. ಈ ಪ್ರತಿಯೊಂದು ವಿಭಾಗದಲ್ಲಿ ಬಳಕೆದಾರರು ಪ್ರತಿ ತಿಂಗಳು ಹೆಚ್ಚುವರಿ 2ಜಿಬಿ ವರೆಗೆ ಡೇಟಾವನ್ನು ಅನ್‌ಲಾಕ್‌ ಮಾಡಿಕೊಳ್ಳಬಹುದಾಗಿದೆ.

ಇದನ್ನೂ ಓದಿ : Realme C33 : ಭಾರತದಲ್ಲಿ ಬಿಡುಗಡೆಯಾಗುತ್ತಿರುವ ರಿಯಲ್‌ಮಿ C33 ಸ್ಮಾರ್ಟ್‌ಫೋನ್‌ : ಆಕರ್ಷಕ ಸ್ಯಾಂಡಿ ಗೋಲ್ಡ್‌ ಬಣ್ಣ ಇದರ ವಿಶೇಷತೆ

ಮಾಸಿಕ 2 ಜಿಬಿ ಹೆಚ್ಚುವರಿ ಡೇಟಾ ಪ್ರಯೋಜನ ಪಡೆಯಲು ಹೀಗೆ ಮಾಡಿ:

ಮೊದಲಿಗೆ Vi ವೆಬ್‌ಸೈಟ್‌ ಅಥವಾ Vi ಆಪ್‌ ಗೆ ಭೇಟಿ ಕೊಡಿ.

Vi ಹೀರೋ ಅನ್‌ಲಿಮಿಟೆಡ್‌ ಪೇಜ್‌ಗೆ ಹೋಗಿ.

ವಿವಿಧ ಪ್ರೀಪೇಡ್‌ ಪ್ಲಾನ್‌ಗಳ ಫೀಚರ್‌ ಮತ್ತು ವ್ಯಾಲಿಡಿಟಿ ಪೀರಿಯಡ್‌ ಚೆಕ್ಕ ಮಾಡಿ.

ನಿಮ್ಮಿಷ್ಟದ ಪ್ಲಾನ್‌ ಆಯ್ದುಕೊಳ್ಳಿ.

ಬೈ ಪ್ಯಾಕ್‌ ಮೇಲೆ ಕ್ಲಿಕ್ಕಿಸಿ.

ಟ್ರಾನ್ಸಾಕ್ಷನ್‌ ಪ್ರಕ್ರಿಯೆ ಪೂರ್ಣಗೊಳಿಸಿ.

ಇದನ್ನೂ ಓದಿ : Redmi A1 and Redmi 11 Prime : ಶಿಯೋಮಿಯ ಬಹುನೀರಿಕ್ಷಿತ ರೆಡ್‌ಮಿ A1 ಮತ್ತು ರೆಡ್‌ಮಿ 11 ಪ್ರೈಮ್‌ ಸ್ಮಾರ್ಟ್‌ಫೋನ್‌ ಅನಾವರಣ

(Vi Offers 2GB Extra Data how to get this benefit)

Comments are closed.