ವಾಟ್ಸಪ್ (WhatsApp) ವಿಶ್ವದಲ್ಲಿ ಜನಪ್ರಿಯ ಮೆಸ್ಸೇಜಿಂಗ್ ಆಪ್ ಆಗಿದೆ. ಇದು ನಮ್ಮ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಟೆಕ್ಸ್ಟ್ ಮೆಸ್ಸೇಜ್, ವಿಡಿಯೋ ಕಾಲ್, ಆಡಿಯೋ ಕಾಲ್ ಮುಂತಾದ ಆಕರ್ಷಕವಾಗಿ ವಿಶೇಷ ರೀತಿಯಲ್ಲಿ ಸಂಹರಿಸಲು ತನ್ನ ಬಳಕೆದಾರರಿಗೆ ನೀಡಿದೆ. ಅದರ ಈ ಜನಪ್ರಿಯತೆಯಿಂದಾಗಿಯೇ ವಂಚಕರು ಇದೇ ಸೋಶಿಯಲ್ ಮೀಡಿಯಾ ವೇದಿಕೆ ಆಯ್ದುಕೊಂಡಿದ್ದಾರೆ. ವ್ಯಾಟ್ಸಪ್ ಬಳಕೆದಾರರು ಅತಿ ಸುಲಭವಾಗಿ ಇದಕ್ಕೆ ಗುರಿಯಾಗುತ್ತಿದ್ದಾರೆ ಎನ್ನಲಾಗುತ್ತದೆ. ಅದಕ್ಕಾಗಿ ನಕಲಿ ವಾಟ್ಸಪ್ ಅಕೌಂಟ್ ಉಪಯೋಗಿಸುತ್ತಿದ್ದಾರೆ ಅನ್ನುವ ಮಾಹಿತಿ ಬಹಿರಂಗವಾಗಿದೆ. ಸ್ಕಾಮರ್‌ಗಳು ಬಳಕೆದಾರರ ವೈಯಕ್ತಿಕ ಮಾಹಿತಿ ಕದಿಯಲು ವಿವಿಧ ಟ್ರಿಕ್ ಬಳಸುತ್ತಿದ್ದಾರೆ. ಹಾಗಾದರೆ ವಾಟ್ಸಪ್‌ನಲ್ಲಿ ನಕಲಿ ಅಕೌಂಟ್‌ಗಳನ್ನು ಕಂಡುಹಿಡಿಯುವುದು ಹೇಗೆ ಎಂದು ಇಲ್ಲಿದೆ ನೋಡಿ.
ಅಸಲಿ ಮತ್ತು ನಕಲಿ ವಾಟ್ಸಪ್ ಅಕೌಂಟ್ ಪತ್ತೆಹಚ್ಚುವುದು ಹೇಗೆ?
ನೀವು ಚಾಟ್ ಮಾಡುತ್ತಿರಬೇಕಾದರೆ ಚಾಟ್ ವಿಂಡೋದಲ್ಲಿ ವೆರಿಫ್ಐ ಬ್ಯಾಡ್ಜ್ ಕಾಂಟ್ಯಾಕ್ಟ್ ನೆಮ್ ಮತ್ತು ಅವರ ಚಾಟ್ ಮಾಹಿತಿಯ ಪಕ್ಕದಲ್ಲಿ ಕಾಣಿಸುತ್ತದೆ. ಒಂದು ವೇಳೆ ಬ್ಯಾಡ್ಜ್ ಬೇರೆ ಕಡೆ ಕಾಣಿಸಿದರೆ ಆಗ ಅದು ನಕಲಿ ಅಕೌಂಟ್ ಎಂದು ತಿಳಿಯಬಹುದು.
ವಾಟ್ಸಪ್ ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಎಂದೂ ಕೇಳುವುದಿಲ್ಲ. ಆದರೆ ಪರಿಚಿತ ಕಾಂಟ್ಯಾಕ್ಟ್‌ಗಳು ನಿಮ್ಮ ವೈಯಕ್ತಿಕ ಮಾಹಿತಿಗಳಾದ ಬ್ಯಾಂಕ್ ಡಿಟೇಲ್ಸ್ ಅಥವಾ 6 ಅಂಕಿಗಳ OTP ಹೀಗೆ ಮುಂತಾದವುಗಳನ್ನು ತಿಳಿಯಲು ಪ್ರಯತ್ನಿಸುತ್ತವೆ. ಆಗ ನೀವು ಆ ಕಾಂಟಾಕ್ಟ್ ನಕಲಿ ಎಂದು ತಿಳಿದು ಸಂಪರ್ಕವನ್ನು ಕಡಿತಗೊಳಿಸುವುದು ಉತ್ತಮವಾಗಿದೆ.
ಇಂತಹ ನಕಲಿ ವಾಟ್ಸಪ್ ಅಕೌಂಟ್ ಗಳು ನಿಮ್ಮನ್ನು ಸಂಪರ್ಕಿಸಲು ಪ್ರಯತ್ನಿಸಿದರೆ ಅಂತಹವುಗಳನ್ನು ತಕ್ಷಣವೇ ಬ್ಲಾಕ್ ಮಾಡಿ ಮತ್ತು ಅದು ನಕಲಿ ಕಾಂಟ್ಯಾಕ್ಟ್ ಎಂದು ರಿಪೋರ್ಟ್ ಮಾಡಿ. ನೀವು ಇದನ್ನು ಸುಲಭವಾಗಿ ಮಾಡಬಹುದು ಹೇಗೆಂದರೆ ಆ ಚಾಟ್ ಇನ್ಫೋ ಮೇಲೆ ಟಾಪ್ ಮಾಡಿ ಮತ್ತು ರಿಪೋರ್ಟ್ ಎಂದು ಟ್ಯಾಪ್ ಮಾಡಿ. ಅದು ಕಡೆಯ 5 ಚಾಟ್‌ಗಳ ಜೊತೆ ಅಧಿಕೃತ ವಾಟ್ಸಪ್ ಮಾಡರೇಷನ್ ಟೀಮ್‌ಗೆ ಮೆಸ್ಸೇಜ್ ಮಾಡುವುದು. ಇದರಿಂದ ಅವರ ನಕಲಿ ಅಕೌಂಟ್ ಅನ್ನು ಸುಲಭವಾಗಿ ಸರಿಯಾದ ಸಮಯಕ್ಕೆ ನಿರ್ಭಂದಿಸಬಹುದು.
ಇದನ್ನೂ ಓದಿ : WhatsApp Chat Lock : ನಿಮ್ಮ ಮುಖ್ಯವಾದ ವಾಟ್ಸ್‌ಅಪ್‌ನ ಚಾಟ್‌ಗಳನ್ನು ಬೇರೆಯವರು ಓದದಂತೆ ಲಾಕ್ ಮಾಡುವುದು ಹೇಗೆ ಗೊತ್ತೇ?
ಇದನ್ನೂ ಓದಿ :WhatsApp Payments : ವಾಟ್ಸಾಪ್ ಪೇಮೆಂಟ್ ಮೂಲಕ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸೋದು ಹೇಗಂತಿರ;ಇಲ್ಲಿದೆ ಸಂಪೂರ್ಣ ಮಾಹಿತಿ
(WhatsApp beware of fake whatsapp account scam)