ACB Raid : ಬೋವಿ ಅಭಿವೃದ್ದಿ ನಿಗಮದ ಮೇಲೆ ಎಸಿಬಿ ದಾಳಿ

ಬೆಂಗಳೂರು : ನೂರಾರು ಕೋಟಿ ರೂಪಾಯಿ ಅವ್ಯವಹಾರ ನಡೆದಿರುವ ಆರೋಪದ ಹಿನ್ನೆಲೆಯಲ್ಲಿ ಬೋವಿ ಅಭಿವೃದ್ದಿ ನಿಗಮದ ಕಚೇರಿಯ ಮೇಲೆ ಎಸಿಬಿ (ACB Raid)ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿಯ ವೇಳೆಯಲ್ಲಿ ಮಹತ್ವದ ಕಡತಗಳು ಪತ್ತೆಯಾಗಿದ್ದು, ಅಧಿಕಾರಿಗಳು ದಾಳಿಯನ್ನು ಮುಂದುವರಿಸಿದ್ದಾರೆ.

ಬೆಂಗಳೂರು ನಗರದ ಮಹಾಲಕ್ಷ್ಮೀ ಲೇಔಟ್‌ನಲ್ಲಿರುವ ಬೋವಿ ಅಭಿವೃದ್ದಿ ನಿಗಮದ ಕಚೇರಿಯ ಮೇಲೆ ಎಸಿಬಿ ಎಸ್‌ಪಿ ಯತೀಶ್ಚಂದ್ರ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಬೋವಿ ಅಭಿವೃದ್ದಿ ನಿಗಮದ ಜಿಎಂ ನಾಗರಾಜ್‌ ಹಾಗೂ ಎಂಡಿ ಲೀಲಾವತಿ ಅವರ ವಿರುದ್ದ ಆರೋಪ ಕೇಳಿಬಂದಿದೆ.

ಬೋವಿ ಅಭಿವೃದ್ದಿ ನಿಗಮದಲ್ಲಿ ನಡೆದಿರುವ ಸುಮಾರು ನೂರು ಕೋಟಿಗೂ ಅಧಿಕ ಅವ್ಯವಹಾರದ ಕುರಿತು ಅಭಿವೃದ್ದಿ ನಿಗಮದ ಡೈರೆಕ್ಟರ್‌ಗಳು ಎಸಿಬಿಗೆ ದೂರು ನೀಡಿದ್ದು, ತನಿಖೆ ನಡೆಸುವಂತೆ ಮನವಿ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲೀಗ ಎಸಿಬಿ ಅಧಿಕಾರಿಗಳು ತನಿಖೆಯನ್ನು ಮುಂದುವರಿಸಿದ್ದಾರೆ.

ದಾಳಿಯ ವೇಳೆಯಲ್ಲಿ ಹಲವು ಮಹತ್ವದ ದಾಖಲೆಗಳು ಲಭ್ಯವಾಗಿದೆ ಎನ್ನಲಾಗುತ್ತಿದೆ. ಕಚೇರಿಯ ಮೇಲೆ ದಾಳಿ ನಡೆದಿದ್ದು, ಅಧಿಕಾರಿಗಳ ಮನೆಗಳ ಮೇಲಯೂ ದಾಳಿ ನಡೆಯುವ ಸಾಧ್ಯತೆಯಿದೆ.

ಇದನ್ನೂ ಓದಿ : ಹಿಂದೂ ದೇವಾಲಯಗಳಿಗೆ ವಾರ್ನಿಂಗ್ : ಬೆಂಗಳೂರು ಪೊಲೀಸರ ಕ್ರಮಕ್ಕೆ ಆಕ್ರೋಶ

ಇದನ್ನೂ ಓದಿ : ದಿನದ 24 ಗಂಟೆಯೂ ಬಾಗಿಲು ತೆರೆಯುತ್ತಾ ಬೆಂಗಳೂರು : ಹೊಟೇಲ್ ಸಂಘದ ಮನವಿಗೆ ಆಯುಕ್ತರು ಹೇಳಿದ್ದೇನು ?

ACB Raid on Karnataka Bhovi Development Corporation

Comments are closed.