ಹಣಕಾಸಿನ ವಹಿವಾಟುಗಳಿಗಾಗಿ ನೀವು ವಾಟ್ಸಾಪ್ ( WhatsApp Payments ) ಪೇಮೆಂಟ್ಗಳ ವೈಶಿಷ್ಟ್ಯವನ್ನು ಪ್ರಯತ್ನಿಸಿದ್ದೀರಾ? ನೀವು ಈಗಾಗಲೇ ಗೂಗಲ್ ಪೇ, ಫೋನ್ ಪೇ,ಪೇಟಿಎಂ ಇತರವುಗಳಂತಹ ಹಣಕಾಸಿನ ಅಪ್ಲಿಕೇಶನ್ ಬಳಸಿರಬಹುದು. ಇದೀಗ ವಾಟ್ಸಾಪ್ ಕೂಡ ಅದರ ಪೇಮೆಂಟ್ ವೈಶಿಷ್ಟ್ಯಗಳೊಂದಿಗೆ ಬಂದಿದೆ.ಇದು ಬಳಕೆದಾರರಿಗೆ ಒಂದೇ ಅಪ್ಲಿಕೇಶನ್ ಅಡಿಯಲ್ಲಿ ಸಂದೇಶಗಳು, ಚಿತ್ರಗಳು, ವೀಡಿಯೊಗಳು, ವಾಯ್ಸ್ ಕಳುಹಿಸಲು ನೆರವಾಗುತ್ತದೆ. ಇನ್ನು ಮುಂದೆ ಪೇಮೆಂಟ್ ಕೂಡ ಸಾಧ್ಯವಾಗಲಿದೆ. ನೀವು ಈ ವೈಶಿಷ್ಟ್ಯವನ್ನು ಸಹ ಪ್ರಯತ್ನಿಸಲು ಬಯಸಿದರೆ, ಬ್ಯಾಂಕ್-ಟು-ಬ್ಯಾಂಕ್ ಹಣ ವರ್ಗಾವಣೆಯನ್ನು ಸಕ್ರಿಯಗೊಳಿಸಲು ನೀವು ಏಕೀಕೃತ ಪಾವತಿ ಇಂಟರ್ಫೇಸ್ (UPI) ಅನ್ನು ಪ್ರವೇಶಿಸುವ ಅಗತ್ಯವಿದೆ ಎಂಬುದನ್ನು ಗಮನಿಸಬೇಕು.
ವಹಿವಾಟುಗಳನ್ನು ಪ್ರಾರಂಭಿಸಲು ಹೆಚ್ಚು ಸುಲಭವಾಗಿಸಲು, ವಾಟ್ಸಾಪ್ ( WhatsApp Payments) ನಿಮ್ಮ ಬ್ಯಾಂಕ್ ಖಾತೆಯ ಮಾಹಿತಿಯನ್ನು ಗುರುತಿಸಲು ನಿಮ್ಮ ಖಾತೆಯೊಂದಿಗೆ ಲಿಂಕ್ ಆಗಿರುವ ಫೋನ್ ಸಂಖ್ಯೆಯನ್ನು ಬಳಸುತ್ತದೆ. ನಿಮ್ಮ ಯುಪಿಐ ಪಿನ್ 4 ಅಥವಾ 6 ಅಂಕೆಗಳ ಸಂಖ್ಯೆ ಎಂದು ನೀವು ತಿಳಿದುಕೊಳ್ಳಬೇಕು . ಮತ್ತು ಪ್ರತಿ ಪೆಮೆಂಟ್ ಮಾಡುವ ಮೊದಲು ನೀವು ನಮೂದಿಸಬೇಕಾಗುತ್ತದೆ. ನೀವು ಮಾಡುವ ಪ್ರತಿಯೊಂದು ಪಾವತಿಯು ನಿಮ್ಮ ವೈಯಕ್ತಿಕ ಯುಪಿಐ ಪಿನ್‌ನಿಂದ ರಕ್ಷಿಸಲ್ಪಟ್ಟಿದೆ ಮತ್ತು ಇದನ್ನು ಬೇರೆಯವರೊಂದಿಗೆ ಹಂಚಿಕೊಳ್ಳಬಾರದು. ನಿಮ್ಮ ಬ್ಯಾಂಕ್ ಖಾತೆಗಾಗಿ ನೀವು ಈಗಾಗಲೇ ಯುಪಿಐ ಪಿನ್ ಹೊಂದಿದ್ದರೆ, ನೀವು ವಾಟ್ಸಾಪ್ ನಲ್ಲಿ ಹೊಸ ಯುಪಿಐ ಪಿನ್ ಅನ್ನು ರಚಿಸುವ ಅಗತ್ಯವಿಲ್ಲ.
ನೀವು ಪಾವತಿ ಮಾಡಿದ ನಂತರ ನಿಮ್ಮ ಬ್ಯಾಂಕ್ ಖಾತೆಯ ಬ್ಯಾಲೆನ್ಸ್ ಅನ್ನು ಪರಿಶೀಲಿಸುವುದು ಸಹ ಮುಖ್ಯವಾಗಿದೆ. ಆದರೆ ವಾಟ್ಸಾಪ್ (WhatsApp Payments) ಮೂಲಕ ನಿಮ್ಮ ಖಾತೆಯ ಬ್ಯಾಲೆನ್ಸ್ ಅನ್ನು ನೀವು ಪರಿಶೀಲಿಸಬಹುದು ಎಂದು ನಿಮಗೆ ತಿಳಿದಿದೆಯೇ? ನಿಮ್ಮ ಖಾತೆಯ ಬ್ಯಾಲೆನ್ಸ್ ಅನ್ನು ನೀವು ಪರಿಶೀಲಿಸಲು ಬಯಸಿದರೆ, ನೀವು ಮಾಡಬೇಕಾದದ್ದು ಇಲ್ಲಿದೆ:
ವಾಟ್ಸಾಪ್ ಪೇಮೆಂಟ್ (WhatsApp Payments ) : ನಿಮ್ಮ ಬ್ಯಾಂಕ್ ಖಾತೆಯ ಬ್ಯಾಲೆನ್ಸ್ ಅನ್ನು ಹೇಗೆ ಪರಿಶೀಲಿಸುವುದು
- ವಾಟ್ಸಾಪ್ ತೆರೆಯಿರಿ.
- ನೀವು ಆಂಡ್ರಾಯ್ಡ್ ಹೊಂದಿದ್ದರೆ, ವ್ಯೂ ಮೋರ್ ಟ್ಯಾಪ್ ಮಾಡಿ. ನೀವು ಐಫೋನ್ ಹೊಂದಿದ್ದರೆ, ಸೆಟ್ಟಿಂಗ್‌ಗಳನ್ನು ಟ್ಯಾಪ್ ಮಾಡಿ.
- ಪೇಮೆಂಟ್ಸ್ ಮೇಲೆ ಕ್ಲಿಕ್ ಮಾಡಿ.
- ಪೇಮೆಂಟ್ ವಿಧಾನಗಳ ಅಡಿಯಲ್ಲಿ, ಸಂಬಂಧಿತ ಬ್ಯಾಂಕ್ ಖಾತೆಯ ಮೇಲೆ ಕ್ಲಿಕ್ ಮಾಡಿ.
- ನಂತರ ನೀವು ಖಾತೆಯ ಬ್ಯಾಲೆನ್ಸ್ ಅನ್ನು ವೀಕ್ಷಿಸಿ ಕ್ಲಿಕ್ ಮಾಡಬೇಕಾಗುತ್ತದೆ.
- ನಿಮ್ಮ ಯುಪಿಐ ಪಿನ್ ನಮೂದಿಸಿ. ನಿಮ್ಮ ಖಾತೆಯ ಬ್ಯಾಲೆನ್ಸ್ ಅನ್ನು ನೀವು ನೋಡಲು ಸಾಧ್ಯವಾಗುತ್ತದೆ.
ವಾಟ್ಸಾಪ್ ಪೇಮೆಂಟ್ (WhatsApp Payments ): ಹಣವನ್ನು ಕಳುಹಿಸುವಾಗ ಖಾತೆಯ ಬ್ಯಾಲೆನ್ಸ್ ಅನ್ನು ಹೇಗೆ ಪರಿಶೀಲಿಸುವುದು
ಹಂತ 1:
ಪೇಮೆಂಟ್ ಮೆಸೇಜ್ ಪರದೆಯಿಂದ, ನಿಮ್ಮ ಲಭ್ಯವಿರುವ ಪೇಮೆಂಟ್ ವಿಧಾನವನ್ನು ನೀವು ಟ್ಯಾಪ್ ಮಾಡಬೇಕಾಗುತ್ತದೆ.
ಹಂತ 2:
ನಂತರ ವ್ಯೂ ಅಕೌಂಟ್ ಬಾಲನ್ಸ್ ಕ್ಲಿಕ್ ಮಾಡಿ.
ಹಂತ 3:
ನಿಮ್ಮ ವಾಟ್ಸಾಪ್ ಖಾತೆಗೆ ನೀವು ಬಹು ಬ್ಯಾಂಕ್ ಖಾತೆಗಳನ್ನು ಲಿಂಕ್ ಮಾಡಿದ್ದರೆ, ಸಂಬಂಧಿತ ಬ್ಯಾಂಕ್ ಖಾತೆಯನ್ನು ಆಯ್ಕೆಮಾಡಿ.
ಹಂತ 4:
ನಂತರ ಅಂತಿಮವಾಗಿ ನಿಮ್ಮ ಯುಪಿಐ ಪಿನ್ ಅನ್ನು ನಮೂದಿಸಿ ಮತ್ತು ನಿಮ್ಮ ಖಾತೆಯ ಬ್ಯಾಲೆನ್ಸ್ ಅನ್ನು ನೀವು ನೋಡಲು ಸಾಧ್ಯವಾಗುತ್ತದೆ.
ಇದನ್ನೂ ಓದಿ: Apple iPhone SE3: ಅಗ್ಗದ ಬೆಲೆಗೆ ಸ್ಮಾರ್ಟ್ ಫೋನ್ ಲಾಂಚ್ ಮಾಡಲಿರುವ ಆಪಲ್; 1 ಬಿಲಿಯನ್ ಆಂಡ್ರಾಯ್ಡ್ ಬಳಕೆದಾರರನ್ನು ತನ್ನತ್ತ ಸೆಳೆಯುವ ಗುರಿ
( WhatsApp payments know how to check bank balance )