ಯಾರಾದ್ರೂ ನಮ್ಮ ಕುರಿತು ಮಾತನಾಡುವಾಗ ಅದೇನೆಂದು ತಿಳಿಯುವ ಕುತೂಹಲ ಇದ್ದೇ ಇರುತ್ತದೆ. ಆದರೆ ಚಾಟ್ ಮಾಡುವಾಗ ನಮ್ಮ ಕುರಿತು ಯಾರೋ ಮಾತನಾಡಿದರೆ, ಅದು ನಮಗೆ ತಿಳಿಯುವುದಿಲ್ಲ. ಫ್ರೆಂಡ್ಸ್, ಫ್ಯಾಮಿಲಿ ಸದಸ್ಯರು ಎಲ್ಲರ ನಡುವೆಯೂ ನಾವು ಕೆಲವೊಮ್ಮೆ ಚರ್ಚೆಯ ವಿಷಯವಾಗುತ್ತೇವೆ. ಹೀಗೆ ಮಾತಾಡುವಾಗ ನಮಗೆ ನೋಟಿಫಿಕೇಶನ್ ಬಂದರೆ? ಹೌದು! ವಾಟ್ಸಾಪ್ ಮೆಸೇಜಿಂಗ್ ( WhatsApp) ಸದ್ಯದಲ್ಲೇ ಈ ಫೀಚರ್ ಡೆವಲಪ್ ಮಾಡಲು ಚಿಂತನೆ ನಡೆಸಿದೆ. ಯಾರಾದರೂ ಮೆಸೇಜ್ ಮಾಡುವಾಗ ನಮ್ಮ ಹೆಸರು ಮೆನ್ಷನ್ ಮಾಡಿದರೆ, ನಿಮಗೆ ನೋಟಿಫಿಕೇಶನ್ (WhatsApp Notification) ಮೂಲಕ ತಿಳಿಯಲಿದೆ. ಈ ಹೊಸ ಫೀಚರ್ ಮೂಲಕ ಗ್ರೂಪುಗಳಲ್ಲಿ ಯಾರೇ ಆದರೂ ನಿಮ್ಮ ಹೆಸರನ್ನು ಮೆನ್ಷನ್ ಮಾಡುವುದು, ಅಥವಾ ನಿಮ್ಮ ಕುರಿತು ಮಾತನಾಡಿದರೆ, ರಿಪ್ಲೈ ಮಾಡಿದರೆ ಯಾರು ನಿಮ್ಮ ಕುರಿತು ಹೇಳಿದ್ದಾರೋ ಅವರ ಪ್ರೊಫೈಲ್ ಫೋಟೋ ನೋಟಿಫಿಕೇಶನ್‌ನಲ್ಲಿ (WhatsApp Profile Photo Tricks) ಕಾಣಲಿದೆ.
ಪ್ರಸ್ತುತ ಇದು ಐಒಎಸ್ ಬೀಟಾ (iOS Beta) ಆವೃತ್ತಿಯಲ್ಲಿ ಮಾತ್ರ ಲಭ್ಯವಿದೆ. ವಾಟ್ಸಾಪ್ ಬೀಟಾ (WhatsApp Beta) ಇನ್ಫೋ ರಿಪೋರ್ಟ್ ಪ್ರಕಾರ ” ಈ ಹೊಸ ಫೀಚರ್ ಹೊಸ ವರ್ಷಕ್ಕೆ ಲಾಂಚ್ ಆಗಿದೆ. ಸದ್ಯ ಇದು ಐಒಎಸ್ ಬೀಟಾ ಆವೃತ್ತಿಯಲ್ಲಿ ಮಾತ್ರ ಲಭ್ಯವಿದ್ದು, ಮುಂದೆ ಇತರ ಆಂಡ್ರಾಯ್ಡ್ ಬಳಕೆದಾರರಿಗೂ ಲಭ್ಯವಿರಬಹುದು.” ಮಾಹಿತಿಗಳ ಪ್ರಕಾರ ಇನ್ನು ಮುಂದೆ ವಾಟ್ಸಾಪ್ ನೋಟಿಫಿಕೇಶನ್ ಜೊತೆ ಮೆಸೆಜ್ ಸೆಂಡ್ ಮಾಡುವ ವ್ಯಕ್ತಿಯ ಪ್ರೊಫೈಲ್ ಕೂಡ ಇರಲಿದೆ. ಈ ಫೀಚರ್ ಕೂಡ ಐಒಎಸ್ 15 ( iOS 15)ಹಾಗೂ ಐಒಎಸ್ 15 ಎ ಪ್ಲಸ್ (iOS 15 plus) ಸರಣಿಯ ಫೋನುಗಳಲ್ಲಿ ಮಾತ್ರ ಸಿಗಲಿದೆ.
ಹಾಗಂತ ಉಳಿದವರು ಬೇಜಾರಾಗುವ ಅಗತ್ಯ ಇಲ್ಲ. ಯಾಕೆಂದರೆ ಸದ್ಯ ಇದು ಟೆಸ್ಟಿಂಗ್ ಮೋಡ್ ನಲ್ಲಿದ್ದು ಸಕ್ಸಸ್ ಅದಲ್ಲಿ ಎಲ್ಲಾರಿಗೂ ಈ ಫೀಚರ್ ಲಭ್ಯವಾಗಲಿದೆ.
ಇದರ ಜೊತೆಗೆ ಇನ್ನು ಹೊಸ ಹೊಸ ಫೀಚರ್ ಹೊರ ತರಲು ವಾಟ್ಸಾಪ್ ನಿರ್ಧರಿಸಿದೆ. ವಾಟ್ಸಪ್ ವಾಯ್ಸ್ ಮೆಸೇಜ್, ಪ್ರಿವ್ಯೂ ಮೋಡ್ ಮುಂತಾದ ಫೀಚರ್ಸ್ ಟೆಸ್ಟಿಂಗ್ ಮೋಡ್ ನಲ್ಲಿವೆ. ಅವುಗಳು ಯಾವುದೇ ಇಷ್ಯೂ ಇಲ್ಲದೆ ವರ್ಕ್ ಆದಲ್ಲಿ, ಶೀಘ್ರದಲ್ಲೇ ಆಂಡ್ರಾಯ್ಡ್ ಹಾಗೂ ಐಒಎಸ್ ಬಳಕೆದಾರರಿಗೆ ವಾಟ್ಸಾಪ್ ಅಪ್ಡೇಟ್ ಮಾಡುವಾಗ ಸಿಗಲಿದೆ.
ಇದನ್ನೂ ಓದಿ: Bengaluru Drones Delivery : ಬೆಂಗಳೂರಿನಲ್ಲೂ ಡ್ರೋನ್ ಮೂಲಕ ಮನೆ ಬಾಗಿಲಿಗೆ ಬರಲಿದೆ ಆರ್ಡರ್ ಮಾಡಿದ ಆಹಾರ, ದೈನಂದಿನ ವಸ್ತು!
ಇದನ್ನೂ ಓದಿ: What is Ambergris smuggling: ಏನಿದು ಅಂಬರ್‌ಗ್ರೀಸ್ ಎಂಬ ತಿಮಿಂಗಿಲ ವಾಂತಿ? ಇದನ್ನು ಕಳ್ಳಸಾಗಣೆ ಮಾಡುವುದೇಕೆ?
(WhatsApp Profile Photo Tricks hidden tricks you must know)