Golden Bond : ಚಿನ್ನದ ಬಾಂಡ್‌ ಯೋಜನೆ ಸೋಮವಾರದಿಂದ ಮತ್ತೆ ಆರಂಭ: ಘೋಷಿತ ಬೆಲೆಯನ್ನು ಒಮ್ಮೆ ಗಮನಿಸಿ

ಬೆಂಗಳೂರು: ಸಾವರಿನ್‌ ಚಿನ್ನದ ಬಾಂಡ್‌ನ 2021-22ರ (Sovereign Golden Bond)  ಯೋಜನೆಯ 9ನೇ ಸರಣಿಯು ಜನವರಿ 10ರ ಸೋಮವಾರದಿಂದ ಆರಂಭವಾಗಲಿದ್ದು ಜನವರಿ 14ರವರೆಗಿನ 5 ದಿನಗಳ ಅವಧಿಯಲ್ಲಿ ಹೂಡಿಕೆದಾರರಿಗೆ (Investors) ತೆರೆದಿರುತ್ತದೆ.

ಭಾರತೀಯ ರಿಸರ್ವ್‌ ಬ್ಯಾಂಕ್‌ನ ಪ್ರಕಟಣೆಯ ಪ್ರಕಾರ ಇದರ ಘೋಷಿತ ಬೆಲೆಯು ಪ್ರತಿ ಘಟಕಕ್ಕೆ ಒಂದು ಗ್ರಾಮ್‌ ಚಿನ್ನದ ಬೆಲೆಗೆ ಸಮನಾದ 4,786/= ರೂಪಾಯಿಗಳಾಗಿರುತ್ತವೆ. ಪ್ರತಿ ಕಂತಿಗೆ ಅನ್ವಯವಾಗುವಂತೆ ಇರಲಿದೆ. ಸರಣಿಯನ್ನು ನೀಡಲಾಗುವ ದಿನಾಂಕವನ್ನು ಜನವರಿ 18, 2022ಕ್ಕೆ ನಿಗದಿಪಡಿಸಲಾಗಿದೆ. ಪ್ರಸಕ್ತ ಸರಣಿಯ ನಂತರ, ಇದೇ ಯೋಜನೆಯ ಮತ್ತೊಂದು ಸರಣಿಯು ಇದೇ ಆರ್ಥಿಕ ವರ್ಷದಲ್ಲಿ ಹೂಡಿಕೆದಾರರಿಗೆ ಲಭ್ಯವಾಗಲಿದೆ.

ಚಿನ್ನದ ಬಾಂಡ್‌ಗಳು ಮಾರುಕಟ್ಟೆಯಲ್ಲಿನ ಚಿನ್ನದ ಬೆಲೆಯನ್ನು ಅವಲಂಬಿಸಿರುತ್ತವೆ. ಉತ್ತಮ ಬಡ್ಡಿಯನ್ನು ನೀಡುವ ಇಂತಹ ಬಾಂಡ್‌ಗಳು ನೇರವಾಗಿ ಚಿನ್ನವನ್ನೇ ಖರೀದಿಸುವ ವಿಧಾನಕ್ಕಿಂತ ಹೆಚ್ಚು ಜನಪ್ರಿಯವಾಗಿರುವ ವಿಧಾನವಾಗಿದೆ. ಹೂಡಿಕೆದಾರರಿಗೆ ಶೇ 2.5ರ ನಿಗದಿತ ದರದಲ್ಲಿ 6 ತಿಂಗಳಿಗೊಮ್ಮೆ ನಾಮಮಾತ್ರದ ಬೆಲೆಯ ಮೇಲೆ ಪರಿಹಾರವನ್ನು ನೀಡಲಾಗುತ್ತದೆ.

ಡಿಜಿಟಲ್‌ ವಿಧಾನಗಳಿಂದ ಆನ್‌ಲೈನ್‌ ಮೂಲಕ ಹೂಡಿಕೆ ಮಾಡಲಿಚ್ಛಿಸುವ ಎಲ್ಲಾ ಹೂಡಿಕೆದಾರರಿಗೆ ಪ್ರತಿ ಘಟಕಕ್ಕೆ 50 ರೂಪಾಯಿಗಳ ರಿಯಾಯತಿ ದೊರೆಯಲಿದೆ ಎಂದು ಸೆಂಟ್ರಲ್‌ ಬ್ಯಾಂಕ್‌ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಆನ್‌ಲೈನ್ ಹೂಡಿಕೆದಾರರಿಗೆ ಘೋಷಿತ ಬೆಲೆಯನ್ನು 4,736/= ರೂಪಾಯಿಗಳಿಗೆ ನಿಗದಿಪಡಿಸಲಾಗಿದೆ.

ಸದ್ಯ ಚಿನ್ನದ ಬೆಲೆಯು ಕಳೆದ 2 ತಿಂಗಳಲ್ಲೇ ಕನಿಷ್ಟ ಬೆಲೆಯಾದ  ಪ್ರತಿ 10 ಗ್ರಾಮ್‌ಗೆ 9000/= ರೂಪಾಯಿಗಳ ಕುಸಿತ ಕಂಡಿದೆ.  ಈ ಕುಸಿತಕ್ಕೆ ವೇಗವಾದ ಬೆಲೆ ಏರಿಕೆಯ ನಿರೀಕ್ಷೆ ಹಾಗೂ ಬಾಂಡ್‌ ಕೊಂಡುಕೊಳ್ಳುವಿಕೆಯಲ್ಲಿ ನಿರೀಕ್ಷೆಗಿಂತ ಕಡಿತ ಉಂಟಾಗಿದ್ದು.

ವಿಶ್ವದ ಪ್ರಮುಖ ದೇಶಗಳ ಕೇಂದ್ರೀಯ ಬ್ಯಾಂಕ್‌ಗಳು ತಮ್ಮ ದೇಶದ ಆರ್ಥಿಕ ಸ್ಥಿತಿ-ಗತಿಗಳನ್ನು ಬಹಿರಂಗಗೊಳಿಸುವ ವಿದ್ಯಮಾನವನ್ನು ಆಧರಿಸಿ ಅಮೆರಿಕಾದ ಡಾಲರ್‌ ಬೆಲೆಗಳ ಏರಿಳಿತವು 2022ರಲ್ಲಿ ಚಿನ್ನದ ಬೆಲೆಗಳನ್ನು ನಿರ್ಧರಲಿಸಲಿವೆ ಎಂದು ಮಿಲ್‌ವುಡ್‌ ಕೇನ್‌ ಇಂಟರ್‌ನ್ಯಾಷನಲ್‌ ಸಂಸ್ಥೆಯ ಸ್ಥಾಪಕ ಹಾಗೂ ಮುಖ್ಯ ನಿರ್ವಾಹಕ ಅಧಿಕಾರಿ ನಿಶ್‌ ಭಟ್‌ ಹೇಳಿದ್ದಾರೆ.

ಇದನ್ನೂ ಓದಿ: Buy Gold in Google Pay: ಗೂಗಲ್ ಪೇ ಆ್ಯಪ್‌ನಲ್ಲೇ ಚಿನ್ನ ಖರೀದಿಸಬಹುದು, ಮಾರಬಹುದು! ಹೇಗೆ ಎಂಬ ವಿವರ ಇಲ್ಲಿದೆ

ಇದನ್ನೂ ಓದಿ: gold mine collapse : ಸುಡಾನ್​​ನಲ್ಲಿ ಚಿನ್ನದ ಗಣಿ ಕುಸಿದು 38 ಮಂದಿ ಸಾವು…!

Ninth trench of Sovereign Golden Bond begins on Monday

Comments are closed.