Whatsapp new features : ಹೊಸ ಫೋನ್ ಖರೀದಿ ಮಾಡಿದ್ದೀರೇ..? ಹಾಗಾದರೆ ವಾಟ್ಸಾಪ್ನ್ನು (Whatsapp) ನಿಮ್ಮ ಮೊಬೈಲ್ನಲ್ಲಿ ಲಾಗಿನ್ ಮಾಡಿಕೊಳ್ಳಬೇಕು ಅಂದ್ರೆ ನಿಮ್ಮ ಸಿಮ್ಗೆ ಬರುವ ಒಟಿಪಿಯನ್ನು ಬಳಕೆ ಮಾಡಿ ನೀವು ಲಾಗಿನ್ ಆಗಬಹುದು ಅನ್ನೋದು ಎಲ್ರಿಗೂ ತಿಳಿದಿರೋ ವಿಚಾರ. ಆದರೆ ಒಂದು ವೇಳೆ ನಿಮ್ಮ ಫೋನ್ ಸಂಖ್ಯೆ ಸಕ್ರಿಯವಾಗಿ ಇಲ್ಲದೇ ಇದ್ದರೆ ಅಥವಾ ಯಾರಾದರೂ ನಿಮ್ಮ ಫೋನ್ ಕದ್ದಿದ್ದರೆ ಏನು ಮಾಡುತ್ತೀರಿ..?

ಒಟಿಪಿ ಇಲ್ಲದೆಯೇ ನೀವು ವಾಟ್ಸಾಪ್ಗೆ ಲಾಗಿನ್ ಆಗಲು ಸಾಧ್ಯವಿಲ್ಲ. ಮೊಬೈಲ್ ಸಂಖ್ಯೆ ಇಲ್ಲದೆಯೇ ನೀವು ವಾಟ್ಸಾಪ್ ಲಾಗಿನ್ ಆಗೋಕೆ ಅಸಾಧ್ಯದ ಕೆಲಸವಾಗಿದೆ. ಆದರೆ ಈ ಸಮಸ್ಯೆಗೆ ಪರಿಹಾರ ಹುಡುಕೋಖೆ ವಾಟ್ಸಾಪ್ ಮುಂದಾಗಿದೆ. ಮೊಬೈಲ್ ಸಂಖ್ಯೆಯ (Mobile Numbers) ಬದಲಾಗಿಯೂ ಇಮೇಲ್ ಮೂಲಕ ವಾಟ್ಸಾಪ್ಗೆ ಲಾಗಿನ್ ಮಾಡಲು ಸಾಧ್ಯವಾಗುವಂತಹ ವೈಶಿಷ್ಟ್ಯವನ್ನು ಹೊರತರಲು ಮೆಟಾ (Meta) ಕಂಪನಿ ಪ್ಲಾನ್ ಮಾಡುತ್ತಿದೆ ಎನ್ನಲಾಗಿದೆ.
ಇದರಿಂದ ನೀವು ಮೊಬೈಲ್ ಸಂಖ್ಯೆ ಇಲ್ಲದಿದ್ದರೂ ಸಹ ಇಮೇಲ್ಗೆ ಒಟಿಪಿ ಪಡೆಯುವ ಮೂಲಕ ವಾಟ್ಸಾಪ್ಗೆ ಲಾಗಿನ್ ಆಗಲು ಸಾಧ್ಯವಾಗುತ್ತದೆ. ಈ ವೈಶಿಷ್ಠ್ಯವು ಸಿಮ್ ಕಳೆದು ಹೋದ ಅಥವಾ ಡ್ಯಾಮೇಜ್ ಆದ ಸಂದರ್ಭದಲ್ಲಿ ನಿಜಕ್ಕೂ ಸಹಕಾರಿಯಾಗಲಿದೆ. ವಾಟ್ಸಾಪ್ನ ಇಮೇಲ್ ವೇರಿಫೇಕಷನ್ ವೈಶಿಷ್ಟ್ಯವು ಪ್ರಸ್ತುತ ಆಂಡ್ರಾಯ್ಡ್ ಹಾಗೂ ಐಓಎಸ್ಗಳಲ್ಲಿ ಬೀಟಾ ಆವೃತ್ತಿಯಲ್ಲಿ ಮಾತ್ರ ಲಭ್ಯವಿದೆ.
ಇದನ್ನೂ ಓದಿ : ಹೆಚ್ಚುವರಿ ಸಿಮ್‌ಕಾರ್ಡ್ ಇಟ್ಟುಕೊಳ್ಳುವಂತಿಲ್ಲ: ಸಿಮ್‌ಕಾರ್ಡ್ ಖರೀದಿಗೂ ಹೊಸ ರೂಲ್ಸ್, ಈ ನಿಯಮ ಮೀರಿದ್ರೆ 10 ಲಕ್ಷ ರೂ. ದಂಡ
ಸೆಟ್ಟಿಂಗ್ಸ್ ವಿಭಾಗದಲ್ಲಿ ಈ ಹೊಸ ವೈಶಿಷ್ಟ್ಯವನ್ನು ಸೇರ್ಪಡೆ ಮಾಡಬಹುದಾಗಿದೆ. ವಾಟ್ಸಾಪ್ನಲ್ಲಿ ಇಮೇಲ್ ವೆರಿಫೇಕಶನ್ ಆಯ್ಕೆಯನ್ನು ಸೇರಿಸಲಾಗಿದೆ. ವಾಟ್ಸಾಪ್ಗೆ ನಿಮ್ಮ ಇಮೇಲ್ ಖಾತೆಯನ್ನು ಲಿಂಕ್ ಮಾಡುವ ಮೂಲಕ ಎಸ್ಎಂಎಸ್ ಜೊತೆಯಲ್ಲಿ ಇಮೇಲ್ ಮೂಲಕವೂ ವಾಟ್ಸಾಪ್ಗೆ ಲಾಗಿನ್ ಆಗುವ ಆಯ್ಕೆಯನ್ನು ನೀವು ಪಡೆದುಕೊಳ್ಳಬಹುದಾಗಿದೆ.
ಇದನ್ನೂ ಓದಿ : Oppo A79 5G : 50MP ಕ್ಯಾಮೆರಾ, 5G ಮೊಬೈಲ್, ಅತ್ಯಂತ ಕಡಿಮೆ ಬೆಲೆಯಲ್ಲಿ ಸಿಗುತ್ತೆ ಒಪ್ಪೋ ಎ 79 5ಜಿ
ವಾಟ್ಸಾಪ್ ಇನ್ನೂ ಈ ಹೊಸದಾದ ಇಮೇಲ್ ವೇರಿಫಿಕೇಶನ್ ವೈಶಿಷ್ಟ್ಯದ ಬಗ್ಗೆ ಪರಿಶೀಲನೆ ನಡೆಸುತ್ತಲೇ ಇದೆ. ಬೀಟಾ ಆವೃತ್ತಿಯ 2.23.24.10 ನವೀಕರಣ ಹೊಂದಿದವರಿಗೆ ಮಾತ್ರ ಈ ಇಮೇಲ್ ವೆರಿಫಿಕೇಶನ್ ಸದ್ಯ ಲಭ್ಯವಾಗಿದೆ. ಪ್ರಸ್ತುತ ಇದು ಬೀಟಾ ಆವೃತ್ತಿಯನ್ನು ಬಳಸುವ ಕೆಲವೇ ಜನರಿಗೆ ಈ ಆಯ್ಕೆ ಲಭ್ಯವಿದ್ದರೂ ಸಹ ವಾಟ್ಸಾಪ್ ಶೀಘ್ರದಲ್ಲಿಯೇ ಈ ಆಯ್ಕೆಯನ್ನು ತನ್ನೆಲ್ಲ ಬಳಕೆದಾರರಿಗೆ ನೀಡಲಿದೆ ಎನ್ನಲಾಗಿದೆ.

ಇದನ್ನೂ ಓದಿ : ಕಾರು ಅಪಘಾತವಾದ್ರೆ ಜೀವ ಉಳಿಸುತ್ತೆ ಗೂಗಲ್ ! ಭಾರತದಲ್ಲಿ ರಿಲಿಸ್ ಆಯ್ತು ಗೂಗಲ್ ಫಿಕ್ಸೆಲ್ ಫೀಚರ್ಸ್
ಈ ಮಧ್ಯೆ ಬಳಕೆದಾರರ ಅನುಭವ ಹಾಗೂ ಸುರಕ್ಷತೆಯನ್ನು ಸುಧಾರಿಸುವ ಸಲುವಾಗಿ ವಾಟ್ಸಾಪ್ ಇತರೆ ವೈಶಿಷ್ಟ್ಯಗಳನ್ನ ತರುವ ಬಗ್ಗೆಯೂ ಕಾರ್ಯ ನಿರ್ವಹಿಸುತ್ತದೆ. ಎಐ ಚಾಲಿತ ಸಪೋರ್ಟ್ ಚಾಟ್ ಸೇರಿದಂತೆ ಇನ್ನೂ ಆಯ್ಕೆಗಳನ್ನು ನೀಡುವ ಬಗ್ಗೆಯೂ ಮೆಟಾ ಕಂಪನಿಯು ಕೆಲಸ ಮಾಡುತ್ತಿದೆ.
whatsapp will soon Allow User to login to ther Account without phone number