ಹೊಸ ಮೊಬೈಲ್​ ಖರೀದಿಸುವ ಆಲೋಚನೆಯಲ್ಲಿದ್ದೀರೇ..? : ಈ ಮೊಬೈಲ್​ ಪರಿಶೀಲಿಸೋದನ್ನ ಮರೀಬೇಡಿ

ಗಿ ಅತ್ಯಂತ ದುಬಾರಿಯೂ ಅಲ್ಲದ ಕಡಿಮೆಯೂ ಅಲ್ಲದ ಮಧ್ಯಮ ಶ್ರೇಣಿಯ ಮೊಬೈಲ್ ಖರೀದಿ ಮಾಡಬೇಕು ಎಂದುಕೊಂಡಿದ್ದರೆ ಇದಕ್ಕಿಂತ ಒಳ್ಳೆಯ ಸಮಯ ನಿಮಗೆ ಸಿಗಲು ಸಾಧ್ಯವಿಲ್ಲ. ಮಧ್ಯಮ ಶ್ರೇಣಿಯ ಮೊಬೈಲ್​ಗಳು ನಿಮಗೆ 35 ಸಾವಿರ ರೂಪಾಯಿಗಳ ಆಸುಪಾಸಿನಲ್ಲಿ ಲಭ್ಯವಿರುತ್ತದೆ. ಇದು ಅತ್ಯಂತ ದುಬಾರಿಯೂ ಅಲ್ಲದ ಇತ್ತ ಕಡಿಮೆ ದರದ ಕಡಿಮೆ ಗುಣಮಟ್ಟದ ಮೊಬೈಲ್​ ಕೂಡ ಆಗಿರೋದಿಲ್ಲ.

ದೀಪಾವಳಿ ಹಬ್ಬವು ಸಮೀಪಿಸುತ್ತಿರೋದ್ರಿಂದ ವಿವಿಧ ಆನ್​ಲೈನ್​ ವ್ಯಾಪಾರ ವೆಬ್​ಸೈಟ್​ಗಳು ಹಾಗೂ ಶೋರೂಂಗಳಲ್ಲಿ ಎಲೆಕ್ಟ್ರಿಕ್​ ವಸ್ತುಗಳು ಕಡಿಮೆ ದರದಲ್ಲಿ ಲಭ್ಯವಿದೆ. ಹೀಗಾಗಿ ಅತ್ಯಂತ ದುಬಾರಿಯೂ ಅಲ್ಲದ ಕಡಿಮೆಯೂ ಅಲ್ಲದ ಮಧ್ಯಮ ಶ್ರೇಣಿಯ ಮೊಬೈಲ್ ಖರೀದಿ (Mobile Buy)  ಮಾಡಬೇಕು ಎಂದು ಕೊಂಡಿದ್ದರೆ ಇದಕ್ಕಿಂತ ಒಳ್ಳೆಯ ಸಮಯ ನಿಮಗೆ ಸಿಗಲು ಸಾಧ್ಯವಿಲ್ಲ.

ಮಧ್ಯಮ ಶ್ರೇಣಿಯ ಮೊಬೈಲ್​ಗಳು ನಿಮಗೆ 35 ಸಾವಿರ ರೂಪಾಯಿಗಳ ಆಸುಪಾಸಿನಲ್ಲಿ ಲಭ್ಯವಿರುತ್ತದೆ. ಇದು ಅತ್ಯಂತ ದುಬಾರಿಯೂ ಅಲ್ಲದ ಇತ್ತ ಕಡಿಮೆ ದರದ ಕಡಿಮೆ ಗುಣಮಟ್ಟದ ಮೊಬೈಲ್​ ಕೂಡ ಆಗಿರೋದಿಲ್ಲ. ಹೀಗಾಗಿ ಮಧ್ಯಮ ದರದಲ್ಲಿ ನಿಮಗೆ ಹೆಚ್ಚು ಬಾಳಿಕೆ ಬರುವ ಮೊಬೈಲ್​ಗಳ ಸಾಲಿಗೆ ಈ ಶ್ರೇಣಿಯು ಸೇರಿಕೊಳ್ಳುತ್ತದೆ. ಹಾಗಾದರೆ ಈ ದರದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಒಳ್ಳೆಯ ಮೊಬೈಲ್​ಗಳು ಯಾವುದು ಅನ್ನೋದನ್ನ ತಿಳಿದು ಕೊಳ್ಳೋಣ.

Are you thinking of buying a new mobile Dont forget to check this mobile One Plus Nord 3 5G, IQ nio 7 Pro 5G Motorola Edge 40 5G
image Credit to Original Source

1. ವನ್​ ಪ್ಲಸ್​ ನಾರ್ಡ್​ 3 5ಜಿ (One Plus Nord 3 5G) :

ವನ್​​ ಪ್ಲಸ್​ ನಾರ್ಡ್​ 3 5ಜಿ ಫ್ಯಾನ್ಸಿ ಫೋನ್​ ಆಗಿದ್ದು ಉತ್ತಮ ಲುಕ್​ ಹೊಂದಿದೆ. ಈ ಮೊಬೈಲ್​ಗಳು 120Hz AMOLED ಸ್ಕ್ರೀನ್​ಗಳನ್ನು ಹೊಂದಿರುತ್ತವೆ. ಹೀಗಾಗಿ ಈ ಫೋನ್​ಗಳಲ್ಲಿ ನಿಮಗೆ ಫೋಟೋಗಳು ಹಾಗೂ ವಿಡಿಯೋಗಳು ಉತ್ತಮ ಗುಣಮಟ್ಟದಲ್ಲಿ ಕಾಣುತ್ತದೆ. ಅಲ್ಲದೇ ಈ ಮೊಬೈಲ್​ಗಳು ಅತ್ಯಂತ ಸ್ಮೂತ್​ ಆಗಿ ಆಪರೇಟ್​ ಕೂಡ ಆಗುತ್ತವೆ.

ಇದನ್ನೂ ಓದಿ : ದೀಪಾವಳಿ ಬಿಗ್‌ ಸೇಲ್‌ನಲ್ಲಿ ಆಪಲ್‌ ಐಪೋನ್ 15 ಮೇಲೆ ಭರ್ಜರಿ ಡಿಸ್ಕೌಂಟ್‌

ಈ ಮೊಬೈಲ್​ಗಳಲ್ಲಿ ಆಕ್ಸಿಜನ್​ 13 ಸಾಫ್ಟ್​ವೇರ್​ ಇದ್ದು ಇದರಿಂದ ಮೊಬೈಲ್​ನ್ನು ಅತ್ಯಂತ ಸರಳವಾಗಿ ಬಳಕೆ ಮಾಡಬಹುದಾಗಿದೆ. 5,000mAh ಬ್ಯಾಟರಿ ಸಾಮರ್ಥ್ಯ ಈ ಮೊಬೈಲ್​ಗೆ ಇದ್ದು ಅತ್ಯಂತ ವೇಗವಾಗಿ ಚಾರ್ಜ್​ ಆಗುತ್ತದೆ. ಈ ಮೊಬೈಲ್​ನಲ್ಲಿ 16 ಜಿಬಿ ರ್ಯಾಮ್​ ಇರಲಿದೆ. ಹೀಗಾಗಿ ನಿಮ್ಮ ಮೊಬೈಲ್​ ಸ್ಲೋ ಆಗೋದಿಲ್ಲ. ಈ ಮೊಬೈಲ್​ನ ಬೆಲೆ 35 ಸಾವಿರ ರೂಪಾಯಿ ಆಗಿದೆ.

Are you thinking of buying a new mobile Dont forget to check this mobile One Plus Nord 3 5G, IQ nio 7 Pro 5G Motorola Edge 40 5G
image Credit to Original Source

2. ಐಕ್ಯೂ ನಿಯೋ 7 ಪ್ರೋ 5ಜಿ ( IQ nio 7 Pro 5G)

ಐಕ್ಯೂ ನಿಯೋ 7 ಪ್ರೋ 5ಜಿ ತುಂಬಾ ದುಬಾರಿಯೂ ಅಲ್ಲದ ಉತ್ತಮ ಲುಕ್​ ಹೊಂದಿರುವ ಮೊಬೈಲ್​ಗಳ ಸಾಲಿಗೆ ಇದು ಕೂಡ ಸೇರುತ್ತದೆ. ಇದು ಸ್ನಾಪ್​ಡ್ರ್ಯಾಗನ್​ 8 ಪ್ಲಸ್​​ ಜನರೇಷನ್​ 1 ಚಿಪ್​ ಹೊಂದಿದೆ. ಇಂತಹ ಚಿಪ್​ ಹೊಂದಿರುವ ಮಾರುಕಟ್ಟೆಯಲ್ಲಿ ಲಭ್ಯವಿರುವ ಅತೀ ಕಡಿಮೆ ಮೌಲ್ಯದ ಮೊಬೈಲ್​ ಎಂದರೆ ಇದೇ ಆಗಿದೆ.

ಇದನ್ನೂ ಓದಿ : Xiaomi 12 Pro 5G ಮೊಬೈಲ್‌ಗೆ ಬಾರೀ ಡಿಸ್ಕೌಂಟ್‌ : 62,999 ರೂ. ಮೊಬೈಲ್‌ ಕೇವಲ ರೂ.27,999ಕ್ಕೆ ಸೇಲ್

ಇದು ಕೂಡ 5,000mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು ದೀರ್ಘಕಾಲದವರೆಗೆ ಚಾರ್ಜ್​ ನಿಲ್ಲುವುದು ಮಾತ್ರವಲ್ಲದೇ ಬೇಗನೇ ಚಾರ್ಜ್ ಕೂಡ ಆಗುತ್ತದೆ. ಕ್ಯಾಮರಾ ಕೂಡ ಉತ್ತಮ ಕ್ಲಾರಿಟಿ ಹೊಂದಿದೆ. ಅಲ್ಲದೇ ಇದರ ದರ ಕೂಡ ಅಂತಹ ದುಬಾರಿ ಏನಲ್ಲ. ನಿಯೋ 7ಗಿಂತ ನಿಯೋ 7 ಪ್ರೋ ಉತ್ತಮ ಆಯ್ಕೆಯಾಗಿದೆ.

Are you thinking of buying a new mobile Dont forget to check this mobile One Plus Nord 3 5G, IQ nio 7 Pro 5G Motorola Edge 40 5G
image Credit to Original Source

3. ಮೊಟೊರೋಲಾ ಎಡ್ಜ್​ 40 5ಜಿ ( Motorola Edge 40 5G) :

ಮೊಟೊರೋಲಾ ಎಡ್ಜ್​ 40 5ಜಿ ಇದು ಕೂಡ ಮಧ್ಯಮ ಶ್ರೇಣಿಯ ಮೊಬೈಲ್ ಖರೀದಿ ಮಾಡಬೇಕು ಎಂದುಕೊಂಡವರಿಗೆ ಅತ್ಯಂತ ಉತ್ತಮ ಆಯ್ಕೆಯಾಗಿದೆ. . ಇದರ ಬೆಲೆ ಕೇವಲ 29,999 ರೂಪಾಯಿ ಆಗಿದೆ. ಫ್ಲಿಪ್​ಕಾರ್ಟ್​ನಲ್ಲಿ ಈ ಮೊಬೈಲ್​ 27 ಸಾವಿರ ರೂಪಾಯಿಗೆ ಲಭ್ಯವಿದೆ. ಹೀಗಾಗಿ ಈ ಮೊಬೈಲ್​ ಖರೀದಿಸಬೇಕು ಎಂದುಕೊಂಡವರಿಗೆ ಫ್ಲಿಪ್​ಕಾರ್ಟ್ ಉತ್ತಮ ಆಯ್ಕೆಯಾಗಿದೆ.

ಇದನ್ನೂ ಓದಿ : ಸಿಮ್​ ಇಲ್ಲದೆಯೂ ಇನ್ಮೇಲೆ ವಾಟ್ಸಾಪ್​ ಲಾಗಿನ್​ ಆಗಬಹುದು : ಅದ್ಹೇಗೆ ಅಂತೀರಾ..? ಇಲ್ಲಿದೆ ಮಾಹಿತಿ

ಈ ಮೊಬೈಲ್​ ಕೇವಲ 1 ವರ್ಷನ್​ನಲ್ಲಿ ಮಾತ್ರ ಲಭ್ಯವಿದ್ದು 8 ಜಿಬಿ ರ್ಯಾಮ್​ ಹಾಗೂ 256 ಜಿಬಿ ಸ್ಟೋರೇಜ್​ ಸಾಮರ್ಥ್ಯ ಹೊಂದಿದೆ. ಒಂದೇ ವರ್ಷನ್​ ಇರೋದ್ರಿಂದ ನಿಮಗೆ ಇಲ್ಲಿ ಗೊಂದಲಕ್ಕೆ ಜಾಗವಿಲ್ಲ. ಮೆಟಲ್​ ಫ್ರೇಮ್​ ನ್ನು ಹೊಂದಿದ್ದು ಗ್ಲಾಸ್​ ಅಥವಾ ವೇಗನ್​ ಲೆದರ್​ ಬ್ಯಾಕ್​ ನಡುವೆ ನೀವು ಆಯ್ಕೆ ಮಾಡಿಕೊಳ್ಳಬೇಕಾಗುತ್ತೆ. ಇದು ಧೂಳು ಹಾಗೂ ನೀರಿನಿಂದ ನಿಮ್ಮ ಮೊಬೈಲ್​ನ್ನು ಕಾಪಾಡಬಲ್ಲದು. ಇದನ್ನು ನೀವು ವೈರ್​ಲೆಸ್​ ಆಗಿ ಚಾರ್ಜ್ ಕೂಡ ಮಾಡಬಹುದಾಗಿದೆ. ವಿಡಿಯೋವನ್ನು ನೀವು 5ಕೆ ರೆಸಲ್ಯೂಷನ್​ನಲ್ಲಿ ರೆಕಾರ್ಡ್ ಮಾಡಬಹುದಾಗಿದೆ.

Are you thinking of buying a new mobile ? Don’t forget to check this mobile One Plus Nord 3 5G, IQ nio 7 Pro 5G Motorola Edge 40 5G

Comments are closed.