Mobile Number Secrete : ಈಗಿನ ಕಾಲದಲ್ಲಿ ಮೊಬೈಲ್ ಬಳಕೆ ಮಾಡದೇ ಇರುವವರು ಯಾರೂ ಇಲ್ಲ. ಎಂಥವರ ಕೈಯಲ್ಲೂ ಮೊಬೈಲ್ ಇದ್ದೇ ಇರುತ್ತದೆ. ಕೆಲವರು ಮೊಬೈಲ್ಗೆ ಯಾವ ರೇಂಜ್ಗೆ ಅಡಿಕ್ಟ್ ಆಗಿರುತ್ತಾರೆ ಅಂದ್ರೆ ಅವರಿಗೆ ಟಾಯ್ಲೆಟ್ ಹೋಗೋಕೂ ಮೊಬೈಲ್ ಬೇಕು ಎಂಬಂಥಾ ಪರಿಸ್ಥಿತಿ ಇರುತ್ತದೆ. ಮಕ್ಕಳಿಂದ ಹಿಡಿದು ವೃದ್ಧರವರೆಗೂ ಈಗ ಮೊಬೈಲ್ ಬಳಕೆ ಮಾಡುವವರೇ ಆಗಿದ್ದಾರೆ.
ಸೋಶಿಯಲ್ ಮೀಡಿಯಾದ ಬಳಕೆ ಹೆಚ್ಚಾದಂತೆಲ್ಲ ಮೊಬೈಲ್ ಬಳಕೆ ಮಾಡುವವರ ಸಂಖ್ಯೆ ಕೂಡ ಹೆಚ್ಚುತ್ತಲೇ ಇದೆ ಎಂದು ಹೇಳಬಹುದು. ನೀವು ಎಷ್ಟೇ ಹಣ ಕೊಟ್ಟು ಮೊಬೈಲ್ ಖರೀದಿ ಮಾಡಿದ್ದರೂ ಸಹ ಸಿಮ್ ಇಲ್ಲದೇ ನಿಮಗೆ ಏನನ್ನೂ ಬಳಕೆ ಮಾಡಲು ಆಗೋದಿಲ್ಲ. ಹೀಗಾಗಿ ಮೊಬೈಲ್ಗೆ ಸಿಮ್ ಅನಿವಾರ್ಯವಾಗಿದೆ.
ನಮ್ಮ ಪ್ರೀತಿಪಾತ್ರರೊಂದಿಗೆ ಸಂಪರ್ಕ ಬೆಳೆಸುವಲ್ಲಿ ಮೊಬೈಲ್ ಫೋನ್ಗಳು ಪ್ರಮುಖ ಪಾತ್ರ ವಹಿಸುತ್ತವೆ. ಆದರೆ ನೀವು ಬಳಕೆ ಮಾಡುವ ಮೊಬೈಲ್ ಸಿಮ್ಗಳ ಬಗ್ಗೆ ಎಂದಾದರೂ ಯೋಚಿಸಿದ್ದೀರಾ..? ಸಾಮಾನ್ಯವಾಗಿ ಎಲ್ಲರ ಮೊಬೈಲ್ ಸಂಖ್ಯೆಯೂ ಆರು, ಏಳು 8 ಅಥವಾ 9 ಅಂಕೆಯಿಂದಲೇ ಆರಂಭವಾಗಿರುತ್ತದೆ. ಹೀಗೆ ಏಕೆ ಎಂಬ ಚಿಂತೆ ನಿಮಗೆ ಎಂದಾದರೂ ಕಾಡಿದ್ಯಾ..? ಹೌದು ಎಂದಾದಲ್ಲಿ ನೀವು ಈ ಸ್ಟೋರಿಯನ್ನು ಓದಲೇಬೇಕು.

ವೈಯಕ್ತಿಕ ಬಳಕೆಗಾಗಿ ಬಳಸುವ ಸಿಮ್ಗಳು ಯಾವುದೇ ಕಂಪನಿಗೆ ಸೇರಿದ್ದರೂ ಸಹ ಅವುಗಳ ನಂಬರ್ 6,7,8 ಅಥವಾ 9 ರಿಂದಲೇ ಆರಂಭಗೊಳ್ಳುತ್ತದೆ. ಇದರ ಹಿಂದೆ ಒಂದು ಕುತೂಹಲಕಾರಿ ಕಾರಣವಿದೆ. ಅದು ಏನೆಂದರೆ 1 ಎನ್ನುವುದು ಒಂದು ವಿಶೇಷ ಸಂಖ್ಯೆಯಾಗಿದೆ. ಈ ನಂಬರ್ನ್ನು ಪೊಲೀಸ್, ಅಗ್ನಿಶಾಮಕ ದಳ ಹಾಗೂ ಆಂಬ್ಯೂಲೆನ್ಸ್ ಸೇವೆ ಸೇರಿದಂತೆ ವಿವಿಧ ತುರ್ತು ಸೇವೆಗಳ ಸಂಖ್ಯೆಯ ಆರಂಭಿಕ ಅಂಕೆಯಾಗಿ ಬಳಕೆ ಮಾಡಲಾಗುತ್ತದೆ.
ಅದೇ ರೀತಿ 2,3,4 ಹಾಗೂ ಐದು ಕೂಡ ಸಹಾಯವಾಣಿ ಸಂಖ್ಯೆಗಳ ಆರಂಭಿಕ ನಂಬರ್ ಆಗಿ ಬಳಕೆಯಾಗುತ್ತದೆ. ಹೀಗಾಗಿ ಸಾಮಾನ್ಯರಿಗೆ ನೀಡುವ ಮೊಬೈಲ್ ಸಿಮ್ಗಳು 1ರಿಂದ ಐದರವರೆಗಿನ ಆರಂಭಿಕ ಸಂಖ್ಯೆಗಳನ್ನು ಹೊಂದಿರುವುದಿಲ್ಲ. 0 ಕೂಡ ಯಾರ ಮೊಬೈಲ್ ನಂಬರ್ರ ಆರಂಭಿಕ ಅಂಕೆಯ ಸ್ಥಾನವನ್ನು ಪಡೆಯುವುದಿಲ್ಲ. ಇದಕ್ಕೂ ಕೂಡ ಕಾರಣವಿದೆ.
ಏಕೆಂದರೆ ಸೊನ್ನೆಯನ್ನು ಅನೇಕ ದೂರವಾಣಿ ಸಂಖ್ಯೆಗಳಿಗೆ ಎಸ್ಟಿಡಿ ಕೋಡ್ ಆಗಿ ಬಳಕೆ ಮಾಡಲಾಗುತ್ತದೆ. ಭಾರತ ದೇಶದ ಕೋಡ್ +91 ಆಗಿದ್ದು ಈ ಆರಂಭಿಕ ಸಂಖ್ಯೆಯಿಂದ ಬರುವ ಯಾವುದೇ ಕರೆಯು ಭಾರತದಲ್ಲಿ ಖರೀದಿಸಿದ ಸಿಮ್ನಿಂದಲೇ ಆಗಿರುತ್ತದೆ ಎಂದು ನೀವು ತಿಳಿಯಬಹುದಾಗಿದೆ.

ಅಂದ ಹಾಗೆ ಮೊಬೈಲ್ ಸಿಮ್ಗಳ ಆರಂಭಿಕ ಸಂಖ್ಯೆ ಆರರ ನಂತರದಿಂದಲೇ ಆರಂಭವಾಗಬೇಕು ಅಂತಾ ಯಾವುದೇ ಕಡ್ಡಾಯ ನಿಯಮಗಳಿಲ್ಲ. ಇಲ್ಲಿಯವರೆಗೂ ಈ ರೀತಿಯ ಒಂದು ಕ್ರಮ ನಡೆದುಕೊಂಡು ಬಂದಿದೆ. ಮುಂದಿನ ದಿನಗಳಲ್ಲಿ ಇದು ಬದಲಾವಣೆ ಕೂಡ ಹೊಂದಬಹುದಾಗಿದೆ. ಹೀಗಾಗಿ ಇದು ಅಧಿಕೃತ ಮಾಹಿತಿ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಸದ್ಯಕ್ಕೆ ಲಭ್ಯವಿರುವ ಸಾಕ್ಷ್ಯಾಧಾರಗಳನ್ನು ಗಮನಿಸಿದಾಗ ಆರರ ನಂತರವೇ ಮೊಬೈಲ್ ನಂಬರ್ ಇರೋದಕ್ಕೆ ಈ ಕಾರಣವನ್ನು ನೀಡಬಹುದಾಗಿದೆ.
Why Mobile Number starts With 6 7 8 9 here is Intersting Secrete