ಅಬ್ಬಬ್ಬಾ ಲಾಟರಿ…! ಕೇವಲ 2599 ರೂ.ಗೆ ಸ್ಮಾರ್ಟ್​ ಫೋನ್​ ಮಾರುಕಟ್ಟೆಗೆ ತಂದಿದೆ ರಿಲಯನ್ಸ್​ ಕಂಪನಿ..!

ದೀಪಾವಳಿ ಹಬ್ಬ ಬಂತು ಅಂದರೆ ಸಾಕು ಹಲವಾರು ಬ್ರ್ಯಾಂಡ್​ಗಳು ತಮ್ಮ ಪ್ರಾಡಕ್ಟ್​ಗಳ ಮೇಲೆ ಆಫರ್​ಗಳ ಮೇಲೆ ಆಫರ್​ ಬಿಡುತ್ತವೆ. ಈ ಸಾಲಿಗೆ ಕೋಟ್ಯಾಧಿಪತಿ, ರಿಲಯನ್ಸ್​ ಗ್ರೂಪ್​ ಮಾಲೀಕ ಮುಕೇಶ್​ ಅಂಬಾನಿ ಕೂಡ ಸೇರಿದ್ದಾರೆ. ಮುಕೇಶ್​ ಅಂಬಾನಿ ಪ್ರತಿ ವರ್ಷವೂ ದೀಪಾವಳಿ ಸಂದರ್ಭದಲ್ಲಿ ತಮ್ಮ ಕಂಪನಿಯ ಉತ್ಪನ್ನಗಳಿಗೆ ರಿಯಾಯಿತಿ ನೀಡುವ ಕಾರ್ಯವನ್ನು ಮಾಡುತ್ತಲೇ ಬಂದಿದ್ದಾರೆ. ಈ ಬಾರಿಯ ದೀಪಾವಳಿಗೂ ಸಹ ಗ್ರಾಹಕರಿಗೆ ಮುಕೇಶ್​ ಅಂಬಾನಿ ಭರ್ಜರಿ ಆಫರ್​ಗಳನ್ನೇ ಬಿಟ್ಟಿದ್ದಾರೆ. ಈ ಬಾರಿ ಅತ್ಯಂತ ಕಡಿಮೆ ದರಕ್ಕೆ ಆಂಡ್ರಾಯ್ಡ್​ ಸ್ಮಾರ್ಟ್​ಫೋನ್​ನ್ನು ಮಾರುಕಟ್ಟೆಗೆ ತಂದಿದ್ದಾರೆ. ಏನಿದರ ವಿಶೇಷ..? ಈ ಮೊಬೈಲ್​ನ ಬೆಲೆ ಎಷ್ಟು..? ಎಲ್ಲವನ್ನೂ ತಿಳಿದುಕೊಳ್ಳೋಣ .

ದೀಪಾವಳಿ ಹಬ್ಬ (Diwali festival) ಬಂತು ಅಂದರೆ ಸಾಕು ಹಲವಾರು ಬ್ರ್ಯಾಂಡ್​ಗಳು ತಮ್ಮ ಪ್ರಾಡಕ್ಟ್​ಗಳ ಮೇಲೆ ಆಫರ್​ಗಳ ಮೇಲೆ ಆಫರ್​ ಬಿಡುತ್ತವೆ. ಈ ಸಾಲಿಗೆ ಕೋಟ್ಯಾಧಿಪತಿ, ರಿಲಯನ್ಸ್​ ಗ್ರೂಪ್​ ಮಾಲೀಕ ಮುಕೇಶ್​ ಅಂಬಾನಿ ಕೂಡ ಸೇರಿದ್ದಾರೆ. ಮುಕೇಶ್​ ಅಂಬಾನಿ (Mukesh Ambani) ಪ್ರತಿ ವರ್ಷವೂ ದೀಪಾವಳಿ ಸಂದರ್ಭದಲ್ಲಿ ತಮ್ಮ ಕಂಪನಿಯ ಉತ್ಪನ್ನಗಳಿಗೆ ರಿಯಾಯಿತಿ ನೀಡುವ ಕಾರ್ಯವನ್ನು ಮಾಡುತ್ತಲೇ ಬಂದಿದ್ದಾರೆ.

ಈ ಬಾರಿಯ ದೀಪಾವಳಿಗೂ ಸಹ ಗ್ರಾಹಕರಿಗೆ ಮುಕೇಶ್​ ಅಂಬಾನಿ ಭರ್ಜರಿ ಆಫರ್​ಗಳನ್ನೇ ಬಿಟ್ಟಿದ್ದಾರೆ. ಈ ಬಾರಿ ಅತ್ಯಂತ ಕಡಿಮೆ ದರಕ್ಕೆ ಆಂಡ್ರಾಯ್ಡ್​ ಸ್ಮಾರ್ಟ್​ಫೋನ್​ನ್ನು ಮಾರುಕಟ್ಟೆಗೆ ತಂದಿದ್ದಾರೆ. ಏನಿದರ ವಿಶೇಷ..? ಈ ಮೊಬೈಲ್​ನ ಬೆಲೆ ಎಷ್ಟು..? ಎಲ್ಲವನ್ನೂ ತಿಳಿದುಕೊಳ್ಳೋಣ . ಭಾರತದಲ್ಲಿ ಆಂಡ್ರಾಯ್ಡ್​ ಫೋನ್​ಗಳು 8000 ರೂಪಾಯಿಗಳ ಆಸುಪಾಸಿನಲ್ಲಿ ಆರಂಭಗೊಳ್ಳುತ್ತದೆ.

mukesh ambani Reliance Company 2599 diwali gift launches one of indias cheapest phone with whatsapp youtube
Image credit to Original Source

ಆದರೆ ಜಿಯೋ ಕಂಪನಿಯ ಜಿಯೋ ಪೋನ್‌ ಪ್ರಿಮಾ ( JioPhone Prima 4G) ಮೊಬೈಲ್​ ಕೇವಲ 2599 ರೂಪಾಯಿಗಳಿಗೆ ಲಭ್ಯವಿದೆ. ಅತ್ಯಂತ ಕಡಿಮೆ ದರದ ಈ ಅಂಡ್ರಾಯ್ಡ್​ ಫೋನ್​ ಯುಟ್ಯೂಟ್​, ವಾಟ್ಸಾಪ್​ ಸೇರಿದಂತೆ ಎಲ್ಲಾ ಸೌಕರ್ಯಗಳನ್ನು ಹೊಂದಿದೆ ಎನ್ನಲಾಗಿದೆ. ಭಾರತದ ಅತ್ಯಂತ ಕಡಿಮೆ ದರದ ಸ್ಮಾರ್ಟ್​ಪೋನ್​ ಎಂದರೆ ಇದೇ ಆಗಿದೆ.

ಇದನ್ನೂ ಓದಿ : ವಾಟ್ಸಾಪ್​ ಬಳಕೆದಾರರಿಗೆ ಖಡಕ್​ ವಾರ್ನಿಂಗ್​ ನೀಡಿದೆ ಸುಪ್ರೀಂಕೋರ್ಟ್: ಇದನ್ನು ಪಾಲಿಸದಿದ್ದಲ್ಲಿ ನಿಮ್ಮ ಗೌಪ್ಯ ಮಾಹಿತಿಗಳಾಗಬಹುದು ಲೀಕ್​

ಮುಕೇಶ್​ ಅಂಬಾನಿ ಪುತ್ರ ಆಕಾಶ್​ ಅಂಬಾನಿ ಕಡಿಮೆ ದರದ ಸ್ಮಾರ್ಟ್ ಫೋನ್​ಗಳ ಹಿಂದಿನ ಮಾಸ್ಟರ್​ಮೈಂಡ್​ ಆಗಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ಇನ್ನೊಂದು 4ಜಿ ಮೊಬೈಲ್​ ಕೂಡ ಕಡಿಮೆ ದರದಲ್ಲಿ ಜಿಯೋ ಕಂಪನಿಯಿಂದ ಮಾರುಕಟ್ಟೆಗೆ ಬಂದಿತ್ತು. ದೇಶದಲ್ಲಿ 25 ಕೋಟಿಗೂ ಅಧಿಕ 2 ಜಿ ಮೊಬೈಲ್​ ಬಳಕೆದಾರರನ್ನು ಗುರಿಯಾಗಿಸಿಕೊಂಡು ಆಕಾಶ್​ ಅಂಬಾನಿ ತಮ್ಮ ಮಾರುಕಟ್ಟೆ ಸ್ಟ್ರಾಟರ್ಜಿಯನ್ನು ಬದಲಾಯಿಸುತ್ತಿದ್ದಾರೆ.

mukesh ambani Reliance Company 2599 diwali gift launches one of indias cheapest phone with whatsapp youtube
Image Credit to Original Source

ರಿಲಯನ್ಸ್​ ಕಂಪನಿಯು ಕೆಲವು ಸಮಯಗಳ ಹಿಂದೆ ಕೇವಲ 999 ರೂಪಾಯಿಗಳಿಗೆ ಮೊಬೈಲ್​ ಮಾರುಕಟ್ಟೆಗೆ ತಂದಿದ್ದು ನೆನಪಿದ್ದಿರಬಹುದು. ಜಿಯೋ ಭಾರತ್​ ವಿ 2 ಹೆಸರಿನ ಮೊಬೈಲ್​ ಫೋನ್​ ಅತೀ ಕಡಿಮೆ ದರದಲ್ಲಿ ಹೆಚ್ಚು ವೈಶಿಷ್ಟ್ಯವನ್ನು ಹೊಂದಿತ್ತು. ಇದೀಗ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಗ್ರಾಹಕರನ್ನು ಇನ್ನಷ್ಟು ಖುಷಿಯಾಗಿಸಲು ಮತ್ತೊಂದು ಹೊಸ 4ಜಿ ಮೊಬೈಲ್​ ಮಾರುಕಟ್ಟೆಗೆ ಬಂದಂತಾಗಿದೆ.

ಇದನ್ನೂ ಓದಿ : ಹೊಸ ಮೊಬೈಲ್​ ಖರೀದಿಸುವ ಆಲೋಚನೆಯಲ್ಲಿದ್ದೀರೇ..? : ಈ ಮೊಬೈಲ್​ ಪರಿಶೀಲಿಸೋದನ್ನ ಮರೀಬೇಡಿ

ಈ ಸ್ಮಾರ್ಟ್​ಫೋನ್​ನಲ್ಲಿ ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ನ್ಯೂಸ್​ ಹೀಗೆ ಜಿಯೋ ಕಂಪನಿಯ ಎಲ್ಲಾ ಸೌಕರ್ಯಗಳನ್ನೂ ಬಳಕೆ ಮಾಡಿಕೊಳ್ಳಬ ಹುದಾಗಿದೆ. ಸದ್ಯ ಈ ಮೊಬೈಲ್ ಗ್ರಾಹಕರಿಗೆ ನೀಲಿ ಹಾಗೂ ಹಳದಿ ಬಣ್ಣಗಳಲ್ಲಿ ಮಾತ್ರ ಲಭ್ಯವಿದೆ. ಈ ಮೊಬೈಲ್​ನಲ್ಲಿ ನೀವು 23 ಭಾಷೆಗಳನ್ನು ಬಳಕೆ ಮಾಡಬಹುದಾಗಿದೆ. 128 ಜಿಬಿವರೆ ಮೆಮೊರಿಯನ್ನು ಹೊಂದಿದೆ.

ಎ 53 ಪ್ರೊಸೆಸರ್​ ಈ ಮೊಬೈಲ್​ನಲ್ಲಿದೆ. ಫೋನ್ ಒಂದೇ ಸಿಮ್ ಮತ್ತು 3.5 ಎಂಎಂ ಆಡಿಯೊ ಜ್ಯಾಕ್‌ ಹೊಂದಿದೆ. 1800mAh ಬ್ಯಾಟರಿಯನ್ನು ಈ ಮೊಬೈಲ್​ ಹೊಂದಿದೆ. ಇನ್ನು ಜಿಯೋ ಸ್ಮಾರ್ಟ್ ಫೋನ್​ಗೆ Firefox OS ಅನ್ನು ಆಧರಿಸಿದ ಆಪರೇಟಿಂಗ್ ಸಿಸ್ಟಮ್ ಇರಿಸಲಾಗಿದೆ. KaiOS ನಲ್ಲಿ ಈ ಮೊಬೈಲ್​ ಕಾರ್ಯ ನಿರ್ವಹಿಸುತ್ತದೆ .

ಇದನ್ನೂ ಓದಿ : ಆಧಾರ್‌ ಕಾರ್ಡ್‌ ಮಾಹಿತಿ ಸೋರಿಕೆ : ಡಾರ್ಕ್‌ವೆಬ್‌ನಲ್ಲಿ 81 ಕೋಟಿ ಭಾರತೀಯರ ಮಾಹಿತಿ ಮಾರಾಟ

ಜಿಯೋ ಕಂಪನಿಯ ಈ ಸ್ಮಾರ್ಟ್​ ಫೋನ್​ ಅತೀ ಕಡಿಮೆ ದರದಲ್ಲಿ ಲಭ್ಯವಿರೋದ್ರ ಜೊತೆಯಲ್ಲಿ ಗ್ರಾಹಕರು ಕ್ಯಾಶ್​ಬ್ಯಾಕ್​ ಸೌಕರ್ಯ ಕೂಡ ಪಡೆಯಲಿದ್ದಾರೆ. ಅಲ್ಲದೇ ವಿವಿಧ ಬ್ಯಾಂಕ್​ಗಳು ಇಎಂಐ ಆಫರ್​ ಕೂಡ ನೀಡುತ್ತಿವೆ. ಕೂಪನ್​ಗಳನ್ನು ಬಳಕೆ ಮಾಡಿಕೊಂಡು ನೀವು ಈ ಕಡಿಮೆ ದರದ ಮೊಬೈಲ್​ ಜೊತೆಯಲ್ಲಿ ಇನ್ನೂ ಹೆಚ್ಚಿನ ಆಫರ್​ಗಳನ್ನು ನಿಮ್ಮದಾಗಿಸಿಕೊಳ್ಳಬಹುದಾಗಿದೆ

mukesh ambani Reliance Company 2599 diwali gift launches one of indias cheapest phone with whatsapp youtube

Comments are closed.