ಭಾನುವಾರ, ಜೂನ್ 15, 2025
HometechnologyWiFi Router Tips : ವೈಫೈ ರೂಟರ್‌ ನಿರ್ವಹಣೆ ಹೇಗೆ :ಇಲ್ಲಿದೆ ಕೆಲವು ಟಿಪ್ಸ್‌

WiFi Router Tips : ವೈಫೈ ರೂಟರ್‌ ನಿರ್ವಹಣೆ ಹೇಗೆ :ಇಲ್ಲಿದೆ ಕೆಲವು ಟಿಪ್ಸ್‌

- Advertisement -

ಇಂದು ವೈಫೈ ರೂಟರ್‌(Wi-Fi Router)ಗಳು ಜೀವನದ ಅವಿಭಾಜ್ಯ ಅಂಗವಾಗಿ ಹೋಗಿವೆ. ಕೊರೊನದಿಂದಾಗಿ ಅನೇಕರಿಗೆ ಮತ್ತೆ ಮನೆಯಿಂದಲೇ ಕೆಲಸ (Work From Home) ಮಾಡಲು ಸರಕಾರ ಆದೇಶ ಹೊರಡಿಸಿದೆ. ಹಾಗಾಗಿ ವೈ-ಫೈ ರೂಟರ್‌ಗಳು ಪ್ರಮುಖ ಗ್ಯಾಜೆಟ್(Gadget) ಆಗಿ ಹೊರಹೊಮ್ಮಿವೆ. ಕೆಲಸ ಮಾಡಲು, ಆನ್ಲೈನ್ ಕ್ಲಾಸ್(Online Class) ಮತ್ತು ಸ್ನೇಹಿತರು/ಕುಟುಂಬದೊಂದಿಗೆ ದೂರದಿಂದಲೇ ಸಂಪರ್ಕದಲ್ಲಿರಲು ಅಗತ್ಯವಿರುವುದರಿಂದ ಬಳಕೆದಾರರು ಈಗ ಇಂಟರ್ನೆಟ್ ಸಂಪರ್ಕಗಳಿಗಾಗಿ ರೂಟರ್‌ಗಳ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಆದ್ದರಿಂದ, ನಿಮ್ಮ ಇಂಟರ್ನೆಟ್ ಸರ್ವಿಸ್ ಪ್ರೋವೈಡರ್ಸ್ (ISP) ಮಾಸಿಕ ಶುಲ್ಕವನ್ನು ಪಾವತಿಸಿದ ನಂತರವೂ ನೀವು ಇಂಟರ್ನೆಟ್ ತೊಂದರೆಗಳನ್ನು ಎದುರಿಸುತ್ತಿದ್ದರೆ, ನಿಮ್ಮ ರೂಟರ್ ಪ್ಲೇಸ್‌ಮೆಂಟ್ ಅನ್ನು (WiFi Router Tips) ಬದಲಾಯಿಸುವ ಮೂಲಕ ನೀವು ಅದನ್ನು ಸರಿಪಡಿಸಬಹುದು.

ಇಂಟರ್ನೆಟ್ ಸ್ಪೀಡ್‌ನ್ನು ಬಾಧಿಸುವ ಅಂಶಗಳು (WiFi Router Tips)
ಇಂಟರ್ನೆಟ್ ಒಂದೊಂದು ಸ್ಥಳದಲ್ಲಿ ವಿಭಿನ್ನವಾಗಿ ಇರುತ್ತವೆ. ಹಾಗಾಗಿ ನಾವು ಎಲ್ಲಿ ರೂಟರ್ ಸ್ಥಾಪಿಸುತ್ತೇವೆ ಎಂಬುದು ಮುಖ್ಯವಾಗುತ್ತದೆ.

ರೂಟರ್ ಎಲ್ಲಿ ಇಡಬೇಕು?

ವೈಫೈ ಸಿಗ್ನಲ್ ನಿಗದಿತ ದೂರ ಮಾತ್ರ ಸಂಚರಿಸುತ್ತವೆ. ಅಲ್ಲಲ್ಲಿ ಗೋಡೆ ಅಥವಾ ಇತರ ಅಡೆ ತಡೆ ಇದ್ದರೆ, ಸಿಗ್ನಲ್ ಬ್ರೇಕ್ ಆಗುತ್ತದೆ. ಹಾಗಾಗಿ ಆದಷ್ಟು ಓಪನ್ ಪ್ಲೇಸ್ ಇರುವಲ್ಲಿ ವೈಫೈ ಇರಿಸಿ. ಮನೆಯಲ್ಲಿ ರೂಟರ್ ಬಳಸುವುದಾದರೆ, ಮನೆಯ ಮಧ್ಯಭಾಗದಲ್ಲಿ ಇರಿಸುವುದು ಉತ್ತಮ. ಹಾಗೆ ನಿಮಗೆ ಎಲ್ಲಿ ಸಿಗ್ನಲ್ ಬೇಕೋ ಅಲ್ಲಿಯ ಜಾಗದ ಮಧ್ಯದಲ್ಲಿ ರೂಟರ್ ಕನೆಕ್ಟ್ ಮಾಡಿ.

ರೂಟರ್ ಎತ್ತರದಲ್ಲಿರಿಸಿ
ವೈಫೈ ರೂಟರ್‌ಗಳು ತಮ್ಮ ಸಿಗ್ನಲ್ ಗಳನ್ನು ಕೆಳಭಾಗಕ್ಕೆ ಕಳುಹಿಸುತ್ತವೆ. ಹಾಗಾಗಿ ಮನೆಯಲ್ಲಿ ಬುಕ್ ಶೆಲ್ಫ್, ಗೋಡೆ ಮೇಲೆ ಅಥವಾ ಎತ್ತರದ ಸ್ಥಳದಲ್ಲಿ ಇಟ್ಟರೆ ಒಳ್ಳೇದು.

ಇತರ ಇಲೆಕ್ಟ್ರಿಕ್ ಸಾಧನಗಳಿಂದ ದೂರವಿರಿಸಿ
ಮೈಕ್ರೋವೇವ್ ಓವನ್ ಅಥವಾ ಇತರ ಯಾವುದೇ ಇಲೆಕ್ಟ್ರಾನಿಕ್ ಸಾಧನಗಳು ವೈಫೈ ಸಿಗ್ನಲ್ ಮೇಲೆ ನೆಗೆಟಿವ್ ಪ್ರಭಾವ ಬೀರುವ ಸಾಧ್ಯತೆ ಇದೆ.

ಆಂಟೇನ ಪೊಸಿಷನ್ ಸರಿ ಇರುವಂತೆ ನೋಡಿಕೊಳ್ಳಿ
ಸಾಧಾರಣವಾಗಿ ವೈ-ಫೈ ರೂಟರ್‌ಗಳು ಎರಡು ಅಥವಾ ಹೆಚ್ಚಿನ ಆಂಟೇನ ಹೊಂದಿರುತ್ತದೆ. ಇವುಗಳು ಸಿಗ್ನಲ್ ಸರಿಯಾಗಿ ಸಿಗಲು ಸಹಾಯಕವಾಗಿವೆ. ಇವುಗಳೆಲ್ಲವನ್ನು ಒಂದೇ ಡೈರೆಕ್ಷನ್ ಇಡುವ ಬದಲು ವಿರುದ್ಧ ದಿಕ್ಕಿನಲ್ಲಿ ಇರಿಸಿ.

ರೂಟರ್ ಹಾಗೂ ಮೊಡೆಮ್ ಸಪರೇಟ್ ಆಗಿರಿಸಿ

ರೂಟರ್ ಯಾವಾಗಲೂ ಮೊಡೆಮ್ ಜೊತೆ ಕನೆಕ್ಟ್ ಆಗಬೇಕು ಎಂದಿಲ್ಲ. ಇದರ ಬದಲು ಎಥರ್ನೆಟ್ ಕೇಬಲ್ ಬಳಸಿ ಮೊಡೆಮ್ ಹಾಗೂ ರೂಟರ್ ಕನೆಕ್ಟ್ ಮಾಡಬಹುದು.

ಇದನ್ನೂ ಓದಿ: Google ಎಚ್ಚರಿಕೆ ! ನಿಮ್ಮ ಫೋನ್‌ಗಳಲ್ಲಿ ಈ 151 ಆಪ್‌ಗಳಿದ್ರೆ ಕೂಡಲೇ ತೆಗೆಯಿರಿ

(WiFi Router tips to maintain good internet speed)

RELATED ARTICLES

Most Popular