X Audio Video Calls : ಟ್ವೀಟರ್‌ನಲ್ಲಿ ಆಡಿಯೋ ವಿಡಿಯೋ ಕಾಲ್‌ : ಎಲೋನ್‌ ಮಸ್ಕ್‌

X Audio Video Calls : X Twitter ನಲ್ಲಿ ಇನ್ಮುಂದೆ ಆಡಿಯೋ ವಿಡಿಯೋ ಕರೆಗಳ ಸೌಲಭ್ಯವನ್ನು ಪರಿಚಯಿಸಿದೆ. ಪೋನ್‌ ಸಂಖ್ಯೆ ಇಲ್ಲದೇಯೇ ಬಳಕೆದಾರರು ಈ ಹೊಸ ತಂತ್ರಜ್ಞಾನವನ್ನು ಬಳಸಿಕೊಳ್ಳಬಹುದಾಗಿದೆ ಎಂದು Elon Musk ಘೋಷಿಸಿದ್ದಾರೆ.

Elon Musk  ವಿಶ್ವದ ಪ್ರಮುಖ ಸಾಮಾಜಿಕ ಜಾಲತಾಣ ಎನಿಸಿಕೊಂಡಿರುವ ಎಕ್ಸ್‌ ಟ್ವಿಟರ್‌ (Twitter X)  ಹೊಸ ಹೊಸ ತಂತ್ರಜ್ಞಾನವನ್ನು ಗ್ರಾಹಕರಿಗೆ ಪರಿಚಯಿಸುತ್ತಿದೆ. ಟ್ವೀಟರ್‌ ಸಿಇಒ ಎಲೋನ್‌ ಮಸ್ಕ್‌ (Elon Musk) ಇತ್ತೀಚಿಗಷ್ಟೆ ಟ್ವೀಟರ್‌ ಲೋಗೋವನ್ನು ಬದಲಾಯಿಸಿದ್ದರು. ಅಲ್ಲದೇ ವಿಶ್ವಕ್ಕೆ ಎಕ್ಸ್‌ ಟ್ವಿಟರ್‌ ಪರಿಚಯಿಸಿದ್ದರು. ಇದೀಗ ಟ್ವೀಟರ್‌ ಎಕ್ಸ್‌ ಆಡಿಯೋ ಮತ್ತು ವಿಡಿಯೋ ಕಾಲ್‌ (X Audio Video Calls) ಸೌಲಭ್ಯವನ್ನು ತನ್ನ ಗ್ರಾಹಕರಿಗೆ ಪರಿಚಯಿಸಿದೆ.

ಟ್ವೀಟರ್‌ ಸಿಇಒ ಎಕ್ಸ್‌ ಟ್ವಿಟರ್‌ ಎಲೋನ್ ಮಸ್ಕ್ ಏನೇ ಮಾಡಿದರೂ ಸೆನ್ಸೇಷನಲ್. ಕಳೆದ ವರ್ಷ ಮೈಕ್ರೋ-ಬ್ಲಾಗಿಂಗ್ ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ‘ಟ್ವಿಟರ್’ (ಎಕ್ಸ್) ಅನ್ನು ವಹಿಸಿಕೊಂಡ ಮಸ್ಕ್, ಅಂದಿನಿಂದ ಹಲವು ಸಂವೇದನಾಶೀಲ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಇದುವರೆಗೂ ಟ್ವೀಟರ್‌ನ ಎಲ್ಲಾ ಸೇವೆಗಳು ಸಂಪೂರ್ಣವಾಗಿ ಉಚಿತವಾಗಿದ್ದವು. ಆದ್ರೀಗ ಎಲೋನ್‌ ಮಸ್ಕ್‌ ಉಚಿತ ಸೇವೆಗಳನ್ನು ರದ್ದು ಪಡಿಸಿ ಪಾವತಿಸಿದ ಸೇವೆಗಳಾಗಿ ಪರಿವರ್ತಿಸಿದ್ದರು.

ಇದನ್ನೂ ಓದಿ : Google AI ಗೂಗಲ್ ಚಾಲಿತ ಹುಡುಕಾಟ ಭಾರತದಲ್ಲಿ ಲಭ್ಯ : ಹೊಸ ತಂತ್ರಜ್ಞಾನದ ವೈಶಿಷ್ಟ್ಯತೆಯನ್ನು ಬಳಸುವುದು ಹೇಗೆ 

ಇದೀಗ ಎಲೋನ್‌ ಮಸ್ಕ್‌ ಹೊಸ ತಂತ್ರಜ್ಞಾನವನ್ನು ಗ್ರಾಹಕರಿಗೆ ಪರಿಚಯಿಸಲು ಸಜ್ಜಾಗಿದ್ದಾರೆ. ವೀಡಿಯೊ ಮತ್ತು ಆಡಿಯೊ ಕರೆಗಳನ್ನು ಶೀಘ್ರದಲ್ಲೇ ಟ್ವಿಟರ್‌ನಲ್ಲಿ ಲಭ್ಯವಾಗಲಿದೆ ಎಂದು ಟ್ವಿಟರ್‌ ಘೋಷಿಸಿದೆ. ಈ ಸೌಲಭ್ಯ ಆಂಡ್ರಾಯ್ಡ್, ಐಒಎಸ್, ಮ್ಯಾಕ್ ಮತ್ತು ಪಿಸಿಯಲ್ಲಿ ಈ ಸೌಲಭ್ಯ ಲಭ್ಯವಾಗಲಿದೆ ಟ್ವಿಟರ್‌ ತಿಳಿಸಿದೆ.

ಈಗಾಗಲೇ ಸಾಮಾಜಿಕ ಜಾಲತಾಣಗಳಾದ ವಾಟ್ಸಾಪ್‌, ಫೇಸ್‌ಬುಕ್‌ ಆಡಿಯೋ ವಿಡಿಯೋ ಕಾಲ್‌ ಸೌಲಭ್ಯವನ್ನು ಗ್ರಾಹಕರಿಗೆ ಒದಗಿಸುತ್ತಿವೆ. ಇದೀಗ ಎಕ್ಸ್‌ ಟ್ವಿಟರ್‌ ಮೂಲಕ ಆಡಿಯೋ ಮತ್ತು ವಿಡಿಯೋ ಕರೆ ಮಾಡಲು ಯಾವುದೇ ದೂರವಾಣಿ ಸಂಖ್ಯೆಯ ಅಗತ್ಯವಿಲ್ಲ ಎಂದು ಎಕ್ಸ್ ಸಿಇಒ ಲಿಂಡಾ ಯಾಕಾರಿನೊ ಕೆಲವು ದಿನಗಳ ಹಿಂದೆಯಷ್ಟೇ ಸಂದರ್ಶನವೊಂದರಲ್ಲಿ ತಿಳಿಸಿದ್ದರು.

ಇದನ್ನೂ ಓದಿ : Vivo Smartphones : ಭಾರತದ ಮಾರುಕಟ್ಟೆಗೆ ಎಂಟ್ರಿ ಕೊಡಲು ರೆಡಿಯಾಯ್ತು ವಿವೋ V29E : ಏನಿದರ ವೈಶಿಷ್ಟ್ಯತೆ

ಇದೀಗ ಇನ್ನು ಟ್ವೀಟರ್‌ ಎಕ್ಸ್‌ ಕಂಪೆನಿಯಲ್ಲಿ ಡಿಸೈನರ್‌ ಆಗಿ ಕೆಲಸ ಮಾಡುತ್ತಿರುವ ಆಂಡ್ರಿಯಾ ಕಾನ್ವೇ ಒಂದು ತಿಂಗಳ ಹಿಂದೆಯಷ್ಟೆ ವಿಡಿಯೋ ಕಾಲಿಂಗ್‌ ಸೌಲಭ್ಯ ಹೇಗೆ ಇರಲಿದೆ ಅನ್ನೋದನ್ನು ಚಿತ್ರದ ಮೂಲಕ ಹಂಚಿಕೊಂಡಿದ್ದರು ಆಡಿಯೋ ಮತ್ತು ವಿಡಿಯೋ ಕರೆಯ ಸೌಲಭ್ಯ ಬ್ಲೂ ಟಿಕ್ ಚಂದಾದಾರಿಕೆಯನ್ನು ಹೊಂದಿರುವ ಬಳಕೆದಾರರಿಗೆಮಾತ್ರವೇ ಲಭ್ಯವಾಗಲಿದೆ.‌

 

X Audio Video Calls facility introduce twitter X CEO Elon Musk
Image Credit to Original Source

X ಅಪ್ಲಿಕೇಶನ್‌ನ ಮುಂಬರುವ ನವೀಕರಣಗಳಲ್ಲಿ ಈ ಹೊಸ ಆಡಿಯೊ-ವಿಡಿಯೋ ಕರೆ ಮಾಡುವ ವೈಶಿಷ್ಟ್ಯವನ್ನು ತರಬಹುದು. ಈಗಾಗಲೇ ಟಕ್ಸ್‌ ಎಲೋನ್‌ ಮಸ್ಕ್‌ ಅಧಿಕೃತ ಘೋಷಣೆಯನ್ನು ಮಾಡಿದ್ದಾರೆ. ಆದರೆ ಯಾವ ದಿನದಿಂದ ಗ್ರಾಹಕರಿಗೆ ಲಭ್ಯವಾಗಲಿದೆ ಅನ್ನೋ ಮಾಹಿತಿಯನ್ನು ನೀಡಿಲ್ಲ.  ಟ್ವೀಟರ್‌ ಪರಿಚಯಿಸುತ್ತಿರುವ ಹೊಸ ಫೀಚರ್ಸ್‌ ಇತರ ಸಾಮಾಜಿಕ ಜಾಲತಾಣಗಳಿಗೆ ಭರ್ಜರಿ ಪೈಪೋಟಿಯನ್ನು ತಂದೊಡ್ಡಲಿದೆ.

ಇದನ್ನೂ ಓದಿ : Elon Musk’s X (Twitter) : ಭಾರತದಲ್ಲಿ ಎಕ್ಸ್ (ಟ್ವಿಟ್ಟರ್) ಬಳಕೆದಾರರಿಗೆ ತೆರಿಗೆ ವಿಧಿಸಿದ ಎಲೋನ್ ಮಸ್ಕ್

ಇಷ್ಟು ದಿನ ತಮ್ಮ ಪೋಸ್ಟ್‌ಗಳಿಗಾಗಿ ಟ್ವೀಟರ್‌ ಬಳಕೆ ಮಾಡಲಾಗುತ್ತಿತ್ತು. ಇದೀಗ ಆಡಿಯೋ ಮತ್ತು ವಿಡಿಯೋ ಸೌಲಭ್ಯ ದೂರವಾಣಿ ಸಂಖ್ಯೆಯ ಅಗತ್ಯವಿಲ್ಲದೇ ಲಭ್ಯವಾಗುವುದರಿಂದ ಸಾಕಷ್ಟು ಮಂದಿ ಟ್ವೀಟರ್‌ ಖಾತೆಯನ್ನು ಓಪನ್‌ ಮಾಡುವುದರ ಜೊತೆಗೆ ಬ್ಲೂಟಿಕ್‌ ಚಂದಾದಾರಿಕೆಯನ್ನು ಪಡೆದುಕೊಳ್ಳುವ ಸಾಧ್ಯತೆಯಿದೆ. ಎಲೋನ್‌ ಮಸ್ಕ್‌ ಟ್ವೀಟರ್‌ ಖರೀದಿ ಮಾಡಿದ ಬೆನ್ನಲ್ಲೇ ಕಂಪೆನಿ ಭರ್ಜರಿ ಲಾಭದಲ್ಲಿಯೇ ಮುನ್ನೆಡೆಯುತ್ತಿದೆ.

X Audio Video Calls facility introduce twitter X CEO Elon Musk
Image Credit To Original Source

ಇನ್ನೊಂದೆಡೆಯಲ್ಲಿ ಟ್ವೀಟರ್‌ ಲೋಗೋ ಬದಲಾವಣೆಯಿಂದ ಕಂಪೆನಿಯ ಬ್ರ್ಯಾಂಡ್‌ಗೆ ಹೊಡೆತ ಬೀಳಲಿದೆ ಅನ್ನೋ ಲೆಕ್ಕಾಚಾರ ಉಲ್ಟಾ ಆಗಿದೆ. ಎಕ್ಸ್‌ ಇದೀಗ ಹೊಸ ಫೀಚರ್ಸ್‌ ಗ್ರಾಹಕರಿಗೆ ಪರಿಚಯಿಸುವ ಮೂಲಕ ಇತರ ಕಂಪೆನಿಗಳಿಗೂ ಟಕ್ಕರ್‌ ಕೊಡಲು ಸಜ್ಜಾಗಿದೆ. ಒಟ್ಟಿನಲ್ಲಿ ಟ್ವೀಟರ್‌ನ ಘೋಷಿಸಿರುವ ಹೊಸ ಫೀಚರ್ಸ್‌ ಹೇಗೆ ಬಳಕೆ ಮಾಡುವುದು, ಯಾವಾಗಿನಿಂದ ಗ್ರಾಹಕರಿಗೆ ಲಭ್ಯವಾಗಲಿದೆ ಅನ್ನೋ ಲೆಕ್ಕಾಚಾರವೂ ಶುರುವಾಗಿದೆ.

X Audio Video Calls facility introduce twitter X CEO Elon Musk

Comments are closed.