order food from their train seat : ರೈಲ್ವೆ ಪ್ರಯಾಣವೇನೋ ಆರಾಮದಾಯಕ. ಆದರೆ ಇಲ್ಲಿ ಕಾಲ ಕಾಲಕ್ಕೆ ಸರಿಯಾಗಿ ಆಹಾರದ ವ್ಯವಸ್ಥೆ ಸಿಗದ ಕಾರಣ ದೂರದ ಊರಿಗೆ ಪ್ರಯಾಣ ಮಾಡುವವರು ಕೊಂಚ ಅಡಚಣೆ ಅನುಭವಿಸುವುದು ಸಹಜ. ಆದರೆ ಭಾರತೀಯ ರೈಲ್ವೆ ಕ್ಯಾಟರಿಂಗ್ ಹಾಗೂ ಪ್ರವಾಸೋದ್ಯಮ ನಿಗಮದ ಆಹಾರ ವಿತರಣಾ ಸರ್ವೀಸ್ ಆದ ಝೂಪ್ ತನ್ನ ಪ್ರಯಾಣಿಕರಿಗೆ ತನ್ನ ಸೀಟಿನಲ್ಲಿಯೇ ಕುಳಿತು ವಾಟ್ಸಾಪ್ನಲ್ಲಿ ಆಹಾರವನ್ನು ಆರ್ಡರ್ ಮಾಡಲು ಅವಕಾಶ ನೀಡಲಿದೆ. ಝೂಪ್ ಮೂಲಕ ರೈಲ್ವೆ ಪ್ರಯಾಣಿಕರು ತಮ್ಮ ಪಿಎನ್ಆರ್ ಸಂಖ್ಯೆಯನ್ನು ಬಳಸಿಕೊಂಡು ರೈಲಿನಿಂದಲೇ ತಮ್ಮ ಆಹಾರವನ್ನು ಬುಕ್ ಮಾಡಬಹುದಾಗಿದೆ. Zoop ಸೇವೆಗಾಗಿ Jio Haptik ಜೊತೆಗೆ ಪಾಲುದಾರಿಕೆ ಹೊಂದಿದೆ.
ರೈಲ್ವೆಯಲ್ಲಿ ಕುಳಿತು ಮೊಬೈಲ್ನಲ್ಲಿ ಹೆಚ್ಚುವರಿ ಅಪ್ಲಿಕೇಶನ್ ಡೌನ್ಲೋಡ್ ಮಾಡದೆಯೇ ಪ್ರಯಾಣಿಕರು ಝೂಪ್ ಮೂಲಕ ಮುಂಬರುವ ಯಾವುದೇ ನಿಲ್ದಾಣದಲ್ಲಿ ಆಹಾರವನ್ನು ಆರ್ಡರ್ ಮಾಡಬಹುದಾಗಿದೆ. ಈ ಸೇವೆಯಲ್ಲಿ ಪ್ರಯಾಣಿಕರು ಆಹಾರವನ್ನು ಆರ್ಡರ್ ಮಾಡಿದ ಬಳಿಕ ಅದನ್ನು ಟ್ರ್ಯಾಕ್ ಮಾಡಲು ಕೂಡ ಸಾಧ್ಯವಾಗುತ್ತದೆ.
Zoop WhatsApp ಸೇವೆಯನ್ನು ಹೇಗೆ ಬಳಸುವುದು?
ಸರಳ ಪ್ರಕ್ರಿಯೆಯನ್ನು ಅನುಸರಿಸುವ ಮೂಲಕ ಪ್ರಯಾಣಿಕರು Zoop WhatsApp bot ಮೂಲಕ ಆಹಾರವನ್ನು ಆರ್ಡರ್ ಮಾಡಬಹುದು.
ಈ ಸೇವೆಯನ್ನು ಆರಂಭಿಸಲು ಪ್ರಯಾಣಿಕರು Zoop WhatsApp ಚಾಟ್‌ಬಾಟ್ ಸಂಖ್ಯೆ +91 7042062070 ನ್ನು ಸೇವ್ ಮಾಡಬೇಕು. ರೈಲಿನಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಈ ಸಂಖ್ಯೆಗೆ ಮೆಸೇಜ್ ಮಾಡಬೇಕು. ಇದಾದ ಬಳಿಕ ಪ್ರಯಾಣಿಕರು https://wa.me/917042062070 ಗೆ ನ್ಯಾವಿಗೇಟ್ ಮಾಡಬಹುದು ಮತ್ತು Zoop ನೊಂದಿಗೆ ಚಾಟ್ ಮಾಡಲು ಪ್ರಾರಂಭಿಸಬಹುದು.
Zoop ಪ್ರಯಾಣಿಕರಿಗೆ 10 ಸಂಖ್ಯೆಯ ಪಿಎನ್ಆರ್ನ್ನು ನಮೂದಿಸುವಂತೆ ಕೇಳುತ್ತಿದೆ. ಪಿಎನ್ಆರ್ ನಂಬರ್ ಸಿಕ್ಕ ಬಳಿಕ Zoop ತಾನಾಗಿಯೇ ನಿಮ್ಮ ರೈಲಿನಲ್ಲಿ ನಿಮ್ಮ ಕೋಚ್ ಹಾಗೂ ಬರ್ತ್ ಯಾವುದು ಎಂಬುದನ್ನು ಕಂಡು ಹಿಡಿಯುತ್ತದೆ.
ಇದಾದ ಬಳಿಕ chatbot ಪ್ರಯಾಣಿಕರಿಗೆ ಅವರ ಪ್ರಯಾಣದ ಮಾಹಿತಿಯನ್ನು ಮರು ಪರಿಶೀಲಿಸುವಂತೆ ಕೇಳುತ್ತದೆ. ನೀವು ಎಲ್ಲಿ ಆಹಾರದ ಆರ್ಡರ್ ಪಡೆಯಲು ಬಯಸುತ್ತೀರಿ ಎಂಬುದನ್ನು ತಿಳಿದುಕೊಳ್ಳಲು ಮುಂದಿನ ನಿಲ್ದಾಣದ ಬಗ್ಗೆ ಮಾಹಿತಿ ಕೇಳುತ್ತದೆ.
ರೆಸ್ಟಾರೆಂಟ್ಗಖ ಮೂಲಕ ಪ್ರಯಾಣಿಕರಿಗೆ chatbot ಮಾರ್ಗದರ್ಶನ ನೀಡುತ್ತದೆ.ಆಹಾರವನ್ನು ಆಯ್ಕೆಯನ್ನು ಮಾಡಿ ಆರ್ಡರ್ ಮಾಡಿದ ಬಳಿಕ ಅದೇ ಆ್ಯಪ್ನಲ್ಲಿಯೇ ಗ್ರಾಹಕರು ಹಣ ಪಾವತಿ ಮಾಡಬಹುದಾಗಿದೆ.
ಒಮ್ಮೆ ಹಣ ಪಾವತಿ ಮುಗಿದ ಬಳಿಕ ಪ್ರಯಾಣಿಕರು ಚಾಟ್ಬಾಕ್ಸ್ನಲ್ಲಿ ತಮ್ಮ ಆಹಾರ ಎಲ್ಲಿದೆ ಅನ್ನೋದನ್ನು ಟ್ರ್ಯಾಕ್ ಮಾಡಬಹುದಾಗಿದೆ. ನೀವು ಸ್ಟೇಷನ್ ಆಯ್ಕೆ ಮಾಡಿರುತ್ತಿರೋ ಅಲ್ಲಿ ನಿಮ್ಮ ಆಹಾರವನ್ನು ಪಡೆದುಕೊಳ್ಳಬಹುದಾಗಿದೆ.
ಇದನ್ನು ಓದಿ : Another jolt to Congress: ಕಾಂಗ್ರೆಸ್ಗೆ ಮತ್ತಷ್ಟು ಆಘಾತ: ಗುಲಾಂ ನಬಿ ಆಜಾದ್ ಬೆನ್ನಲ್ಲೇ ಮತ್ತೆ ಐವರು ‘ಕೈ’ ನಾಯಕರಿಂದ ರಾಜೀನಾಮೆ
ಇದನ್ನೂ ಓದಿ : Modi tops most popular : ವಿಶ್ವದ ಜನಪ್ರಿಯ ನಾಯಕರ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದ ಪ್ರಧಾನಿ ಮೋದಿ
Now, passengers can order food from their train seat on WhatsApp; here’s how