Mallikarjun Kharge Disappointment : ಗುಲಾಂ ನಬಿ ಆಜಾದ್​​ ರಾಜೀನಾಮೆಗೆ ತೀವ್ರ ಬೇಸರ ವ್ಯಕ್ತಪಡಿಸಿದ ಮಲ್ಲಿಕಾರ್ಜುನ ಖರ್ಗೆ

ಬೆಂಗಳೂರು : Mallikarjun Kharge Disappointment : ಕಾಂಗ್ರೆಸ್​ ಪಾಲಿಗೆ ಇಂದಿನ ಶುಕ್ರವಾರ ಖಂಡಿತವಾಗಿಯೂ ಶುಭವಾಗಿಲ್ಲ. ಕಳೆದ ಐದು ದಶಕಗಳಿಂದ ಕಾಂಗ್ರೆಸ್​ನಲ್ಲಿ ಸಕ್ರಿಯರಾಗಿದ್ದ ಗುಲಾಂ ನಬಿ ಆಜಾದ್​ ಇಂದು ಪಕ್ಷದಿಂದ ಹೊರನಡೆದಿದ್ದಾರೆ. ಇವರ ಬೆನ್ನಲ್ಲೇ ಜಮ್ಮು & ಕಾಶ್ಮೀರದ ಐವರು ಕಾಂಗ್ರೆಸ್​ ನಾಯಕರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆಯನ್ನು ನೀಡಿದ್ದಾರೆ. ರಾಜೀನಾಮೆ ಪತ್ರದಲ್ಲಿ ಗುಲಾಂ ನಬಿ ಆಜಾದ್​​ ರಾಹುಲ್​ ಗಾಂಧಿ ನಡೆಯಿಂದ ತಾವು ಪಕ್ಷಕ್ಕೆ ರಾಜೀನಾಮೆ ನೀಡಿರುವುದಾಗಿ ಬಹಿರಂಗವಾಗಿಯೇ ಹೇಳಿದ್ದು ಈ ವಿಚಾರ ಇದೀಗ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಯಾಗ್ತಿದೆ .


ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಗುಲಾಂ ನಬಿ ಆಜಾದ್​ ರಾಜೀನಾಮೆ ವಿಚಾರವಾಗಿ ಇಂದು ಪತ್ರಿಕಾ ಪ್ರಕಟಣೆ ಹೊರಡಿಸುವ ಮೂಲಕ ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಗುಲಾಂ ನಬಿ ಆಜಾದ್​​ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿರುವಂತೆ ಅವರು ಕಾಂಗ್ರೆಸ್​ಗಾಗಿ ಐದು ದಶಕಗಳ ಕೆಲಸ ಮಾಡಿದ್ದಾರೆ. ಅದೇ ರೀತಿ ಪಕ್ಷ ಕೂಡ ಅವರಿಗೆ ನಿರೀಕ್ಷೆ ಮೀರಿ ಅವಕಾಶ ನೀಡಿದೆ. ಆದರೆ ಇಂದು ಅವರ ರಾಜೀನಾಮೆ ಪತ್ರವನ್ನು ನೋಡಿ ನನಗೆ ಬೇಸರವಾಗಿದೆ ಎಂದಿದ್ದಾರೆ,


ಗುಲಾಂ ನಬಿ ಆಜಾದ್​ ಜನರ ಸೇವೆ ಮಾಡಲು ಅವಕಾಶ ಒದಗಿಸಿದ್ದು ಕಾಂಗ್ರೆಸ್​ ಪಕ್ಷ. ಕಾಂಗ್ರೆಸ್​ನಿಂದ ಅವಕಾಶ ಸಿಕ್ಕ ಬಳಿಕ ಸಮಾಜ ಹಾಗೂ ದೇಶಕ್ಕಾಗಿ ಗುಲಾಂ ನಬಿ ಆಜಾದ್​ ಕೆಲಸ ಮಾಡಿದ್ದಾರೆ. ಪ್ರಸ್ತುತ ದೇಶದಲ್ಲಿ ಕೋಮುವಾದದ ಆಡಳಿತವೇ ನಡೆಯುತ್ತಿರುವ ಈ ಸಂದರ್ಭದಲ್ಲಿ ಇವರು ಪಕ್ಷವನ್ನು ತೊರೆಯುವ ನಿರ್ಧಾರ ಮಾಡಿದ್ದು ವಿಷಾದನೀಯ ಎಂದು ಬೇಸರ ವ್ಯಕ್ತಪಡಿದ್ದಾರೆ.


ದೇಶದಲ್ಲಿ ದಲಿತರು ಹಾಗೂ ಅಲ್ಪಸಂಖ್ಯಾತರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ರಾಹುಲ್​ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಭಾರತ್​ ಜೋಡೋ ಪಾದಯಾತ್ರೆ ನಡೆಸುತ್ತಿದೆ. ಈ ಮೂಲಕ ದೇಶವನ್ನು ಒಗ್ಗೂಡಿಸುವ ಕಾರ್ಯವನ್ನು ಕಾಂಗ್ರೆಸ್​ ಮಾಡ್ತಿದೆ. ಆದರೆ ಈ ಸಂದರ್ಭದಲ್ಲಿ ಗುಲಾಂ ನಬಿ ಆಜಾದ್​​ ಕಾಂಗ್ರೆಸ್​ ಪಕ್ಷವನ್ನು ತೊರೆಯುವ ಮೂಲಕ ದೇಶದ ಸಂವಿಧಾನ ಪರವಾಗಿರುವ ಹೋರಾಟ ಹಾಗೂ ಕೋಮುವಾದಿಗಳ ವಿರುದ್ಧದ ಹೋರಾಟವನ್ನು ದುರ್ಬಲಗೊಳಿಸಿದ್ದಾರೆ.ಗುಲಾಂ ನಬಿ ಆಜಾದ್​ರಿಂದ ನಾನು ಇದನ್ನು ನಿರೀಕ್ಷೆ ಮಾಡಿರಲಿಲ್ಲ. ಕೋಮುವಾದಿಗಳ ವಿರುದ್ಧ ನಾವು ಒಗ್ಗಟ್ಟಾಗಿ ಹೋರಾಡಬೇಕಾಗಿದ್ದ ಈ ಸಂದರ್ಭದಲ್ಲಿ ಅವರು ಪಕ್ಷವನ್ನು ತೊರೆದಿದ್ದು ಅವರ ಬದ್ಧತೆಯನ್ನೇ ಪ್ರಶ್ನೆ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ : bs yeddiyurappa : ಸಂಸದೀಯ ಮಂಡಳಿ ಆಯ್ಕೆ ಬಳಿಕ ಮೊದಲ ಬಾರಿಗೆ ದೆಹಲಿಗೆ ಹಾರಿದ ಬಿಎಸ್​ವೈ : ರಾಜ್ಯಾಧ್ಯಕ್ಷ ಸ್ಥಾನ ಬದಲಾವಣೆ ಸುಳಿವು

ಇದನ್ನೂ ಓದಿ : Another jolt to Congress: ಕಾಂಗ್ರೆಸ್​ಗೆ ಮತ್ತಷ್ಟು ಆಘಾತ: ಗುಲಾಂ ನಬಿ ಆಜಾದ್​ ಬೆನ್ನಲ್ಲೇ ಮತ್ತೆ ಐವರು ‘ಕೈ’ ನಾಯಕರಿಂದ ರಾಜೀನಾಮೆ

Congress Mallikarjun Kharge Disappointment On Ghulam Nabi Azad Resignation Should Rethink His Decision

Comments are closed.