ಶಬರಮಲೆಯಲ್ಲಿ ಮಕರಸಂಕ್ರಾಂತಿ ಸಂಭ್ರಮ : ಸಂಜೆ 6.45ಕ್ಕೆ ಮಕರ ಜ್ಯೋತಿ ದರ್ಶನ

0

ಶಬರಿಮಲೆ : ಶಬರಿಮಲೆಯ ಧರ್ಮಶಾಸ್ತ ಅಯ್ಯಪ್ಪನ ಸನ್ನಿಧಿಯಲ್ಲೀಗ ಮಕರ ಸಂಕ್ರಾಂತಿಯ ಸಂಭ್ರಮ. ಈ ಹಿನ್ನೆಲೆಯಲ್ಲಿ ಶಬರಿಮಲೆ ಯಾತ್ರೆ ಇದೀಗ ಅಂತಿಮಘಟ್ಟವನ್ನು ತಲುಪಿದ್ದು, ಇಂದು ಸಂಜೆ 6.46ಕ್ಕೆ ಮಕರ ಜ್ಯೋತಿಯ ದರ್ಶನವಾಗಲಿದೆ.

ಪೊನ್ನಂಬಳಮೇಡಂ ಬೆಟ್ಟದಲ್ಲಿ ಸಂಜೆ ಮಕರ ಜ್ಯೋತಿ ದರ್ಶನವಾಗಲಿದ್ದು, ಈ ಹಿನ್ನೆಲೆಯಲ್ಲಿ ಶಬರಿಮಲೆ ಅಯ್ಯಪ್ಪ ದೇಗುಲದಲ್ಲಿ ಶುದ್ಧೀಕರಣ ಪ್ರಕ್ರಿಯೆ ನಡೆಸಲಾಗಿದ್ದು, ಪಂಪಾ ವಿಳಕ್ಕು ಹಾಗೂ ಪಂಪಾಸಧ್ಯ ಪೂಜಗಳು ನಡೆದಿದೆ. ನಿನ್ನೆ ತಡರಾತ್ರಿಯಿಂದಲೇ 2 ಗಂಟೆಯಿಂದಲೇ ಮಕರ ಸಂಕ್ರಮಣ ಪೂಜೆಗಳು ಆರಂಭಗೊಂಡಿದ್ದು, ಸಂಜೆ 6.45ರ ವೇಳಗೆ ಪೊನ್ನಂಬಳಮೇಡುವಿನಲ್ಲಿ ಪವಿತ್ರ ಮಕರ ಜ್ಯೋತಿಯ ದರ್ಶನವಾಗಲಿದೆ.

ಫೈಲ್ ಚಿತ್ರ

ಮಕರ ಸಂಕ್ರಾಂತಿಯ ಹಿನ್ನೆಲೆಯಲ್ಲಿ ಶಬರಿಮಲೆಗೆ ಲಕ್ಷಾಂತರಮಂದಿ ಮಾಲಾಧಾರಿಗಳು ಆಗಮಿಸಿ ಅಯ್ಯಪ್ಪನ ದರ್ಶನ ಪಡೆಯುತ್ತಿದ್ದಾರೆ. ಸಂಜೆ ಮಕರ ಜ್ಯೋತಿಯ ದರ್ಶನಕ್ಕಾಗಿ ಕಾತರರಾಗಿದ್ದಾರೆ. ಜನವರಿ 16ರಿಂದ 20ರವರೆಗೆ ಸಾರ್ವಜನಿಕ ದರ್ಶನಕ್ಕೆ ದೇಗುಲ ತೆರೆದಿರಲಿದ್ದು, ಜನವರಿ 21 ರಂದು ಪಂದಳ ರಾಜ ಮನೆತನದ ಪೂಜಾ ಕಾರ್ಯಗಳು ಅಂತಿಮಗೊಂಡ ಬಳಿಕ ದೇಗುಲದ ಬಾಗಿಲು ಮುಚ್ಚಲಿದೆ.

Leave A Reply

Your email address will not be published.