Guruvappa Bayaru : ರಂಗಸ್ಥಳದಲ್ಲೇ ಹೃದಯಾಘಾತ : ಕಟೀಲು ಮೇಳದ ಯಕ್ಷಗಾನ ಕಲಾವಿದ ಗುರುವಪ್ಪ ಬಾಯಾರು ವಿಧಿವಶ

ಮಂಗಳೂರು: ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದ ವೇಳೆಯಲ್ಲಿ ಶಿಶುಪಾಲನ ಪಾತ್ರಧಾರಿಯಾಗಿದ್ದ ಕಲಾವಿದ ರಂಗಸ್ಥಳದಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಕಟೀಲಿನಲ್ಲಿ ನಡೆದಿದೆ. ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ (Kateelu mela) ನಾಲ್ಕನೇ‌ ಮೇಳದ ಗುರುವಪ್ಪ ಬಾಯಾರು (Guruvappa Bayaru) ಎಂಬವರೇ ಮೃತ ಕಲಾವಿದ. ಅವರಿಗೆ 58 ವರ್ಷ ವಯಸ್ಸಾಗಿತ್ತು.

ದಕ್ಷಿಣ ಕನ್ನಡ ಜಿಲ್ಲೆಯ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಸರಸ್ವತಿ ಸದನದಲ್ಲಿ ತ್ರಿಜನ್ಮ ಮೋಕ್ಷ ಯಕ್ಷಗಾನ ಪ್ರದರ್ಶನ ನಡೆಯುತ್ತಿತ್ತು. ಈ ವೇಳೆಯಲ್ಲಿ ಗುರುವಪ್ಪ ಬಾಯಾರು ಅವರು ಶಿಶುಪಾಲನ ಪಾತ್ರ ಮಾಡಿದ್ದರು. ರಂಗಸ್ಥಳದಲ್ಲಿ ಯಕ್ಷಗಾನ ಪ್ರದರ್ಶನ ನೀಡುವ ವೇಳೆಯಲ್ಲಿಯೇ ಗುರುವಪ್ಪ ಬಾಯಾರು ಹೃದಯಾಘಾತವಾಗಿ ರಂಗಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರೂ ಕೂಡ ಚಿಕಿತ್ಸೆ ಫಲಕಾರಿಯಾಗದೇ ಅವರು ಬಾರದ ಲೋಕಕ್ಕೆ ಪಯಣಿಸಿದ್ದಾರೆ.

ಕಳೆದ ಹಲವು ವರ್ಷಗಳಿಂದಲೂ ಯಕ್ಷಗಾನ ಕಲಾವಿದರಾಗಿ ಗುರುವಪ್ಪ ಬಾಯಾರು ಖ್ಯಾತಿಯನ್ನು ಗಳಿಸಿಕೊಂಡಿದ್ದರು. 2013 ರಲ್ಲಿ ಕಟೀಲು ಮೇಳಕ್ಕೆ ಸೇರ್ಪಡೆಯಾಗಿದ್ದು, ಅಂದಿನಿಂದ ಇಂದಿನ ವರೆಗೂ ಹಲವು ಪಾತ್ರಗಳನ್ನು ನಿರ್ವಹಿಸಿದ್ದರು. ದೇವಿ ಮಹಾತ್ಮೆಯ ಮಧುಕೈಟಭ ಪಾತ್ರ ಹೆಚ್ಚು ಪ್ರಸಿದ್ದಿಯನ್ನು ತಂದುಕೊಟ್ಟಿತ್ತು. ಕಿರೀಟ ವೇಷಗಳ ಮೂಲಕವೇ ಹೆಚ್ಚು ಪ್ರಸಿದ್ದಿ ಪಡೆದುಕೊಂಡಿದ್ದರು. ಕಲಾವಿದರಾಗಿ ಮಾತ್ರವಲ್ಲದೇ ಅಷ್ಟಮಂಗಲ ಪ್ರಸಂಗವನ್ನು ಬರೆದಿದ್ದು, ಮಂಗಳೂರಿನ ಪುರಭವನದಲ್ಲಿ ಪ್ರದರ್ಶನವನ್ನೂ ಕಂಡಿತ್ತು. ಹಿರಿಯ ಕಲಾವಿದ ಗುರುವಪ್ಪ ಬಾಯಾರು ನಿಧನಕ್ಕೆ ಯಕ್ಷಗಾಲ ಕಲಾವಿದರು, ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

ಇದನ್ನೂ ಓದಿ : ನವವಿವಾಹಿತರಿಗೆ ಸಿಹಿ ಸುದ್ದಿ : ಕೇಂದ್ರ ಸರಕಾರದಿಂದ 2.50 ಲಕ್ಷ ರೂ. ಉಚಿತ ಧನ ಸಹಾಯ

ಇದನ್ನೂ ಓದಿ : Coronavirus Lockdown News Today : ಕ್ರಿಸ್‌ಮಸ್‌, ಹೊಸ ವರ್ಷಕ್ಕೂ ಮೊದಲು ಭಾರತದಲ್ಲಿ ಕೋವಿಡ್ ನಿರ್ಬಂಧ ಸಾಧ್ಯತೆ

ವರದಕ್ಷಿಣೆ ಆಸೆಗೆ ಮೂರು ತಿಂಗಳ ಗರ್ಭಿಣಿ ಪತ್ನಿಯನ್ನೇ ಬಲಿಕೊಟ್ಟ ಪತಿ

ಹಾಸನ : ಕೆಲವು ವರ್ಷಗಳ ಹಿಂದೆ ವರದಕ್ಷಿಣೆ ಆಸೆಗೆ ಹೆತ್ತವರನ್ನು ಬಿಟ್ಟು ಗಂಡ ಹಾಗೂ ಗಂಡನ ಮನೆಯವರೇ ಎಲ್ಲಾ ಎಂದು ನಂಬಿ ಬಂದ ಹೆಣ್ಣು ಮಗಳನ್ನು ಕಿರುಕುಳ ಕೊಟ್ಟು ಕೊಲೆ ಮಾಡುತ್ತಿದ್ದರು. ಆದರೆ ಜಗತ್ತು ಇಷ್ಟೊಂದು ಮುಂದುವರೆದಿದ್ದರೂ ಇಂತಹ ಘಟನೆಗಳು ಇನ್ನೂ ನಡೆಯುತ್ತಿದೆ. ಅದಕ್ಕೆ ಸಾಕ್ಷಿ ಎನ್ನುವಂತೆ ವರದಕ್ಷಿಣೆ ಕಿರುಕುಳಕ್ಕೆ ಮೂರು ತಿಂಗಳ ಗರ್ಭಿಣಿ ಬಲಿಯಾಗಿರುವ ಘಟನೆ ಸಂಭವಿಸಿದೆ.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಸಮುದ್ರವಳ್ಳಿ ಬಳಿ ರೋಹಿಣಿ 23ವರ್ಷ ಮೃತ ಪಟ್ಟ ಗರ್ಭಿಣಿ ಎಂದು ಗುರುತಿಸಲಾಗಿದೆ. ಆಕೆಯ ಪೋಷಕರು ತಮ್ಮ ಮಗಳ ಸಾವಿಗೆ ಆಕೆಯ ಪತಿಯೇ ಕಾರಣ ಎಂದು ಆರೋಪಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೈಸೂರು ಜಿಲ್ಲೆಯ ಕೆ.ಆರ್‌.ನಗರ ತಾಲೂಕಿನ ಗ್ರಾಮದ ಕುಮಾರ್‌ ಮತ್ತು ಸುಧಾ ದಂಪತಿಗಳ ಮಗಳು ರೋಹಿಣಿಯನ್ನು ಅರಕಲಗೂಡು ತಾಲೂಕಿನ ಕಲ್ಲಹಳ್ಳಿ ಗ್ರಾಮದ ಸುಮಂತ್‌ ಎಂಬಾತನಿಗೆ ಮೇ 28ರಂದು ಕೇರಾಳಪುರದ ಕಲ್ಯಾಣಮಂಟಪದಲ್ಲಿ ಬಹಳ ಅದ್ಧೂರಿಯಾಗಿ ಮದುವೆ ಮಾಡಿಕೊಟ್ಟಿದ್ದರು. ಮದುವೆ ವೇಳೆ ಸುಮಂತ್‌ಗೆ 250ಗ್ರಾಂ ಚಿನ್ನ ಮತ್ತು 20 ಲಕ್ಷ ರೂ ಖರ್ಚು ಮಾಡಿ ಮದುವೆ ಮಾಡಿಕೊಟ್ಟಿದ್ದಾರೆ.

https://www.youtube.com/watch?v=ITrTXQ6cXNQ

Kateelu mela Yakshagana Artist Guruvappa Bayaru Passed Away Heart Attack on stage

Comments are closed.