ಸೋಮವಾರ, ಜೂನ್ 16, 2025
HomeSportsCricketBorder-Gavaskar Trophy 3rd Test: ಕಾಂಗರೂಗಳ ಸ್ಪಿನ್ ಬಲೆಗೆ ಬಿದ್ದ ಟೀಮ್ ಇಂಡಿಯಾ 109ಕ್ಕೆ ಆಲೌಟ್

Border-Gavaskar Trophy 3rd Test: ಕಾಂಗರೂಗಳ ಸ್ಪಿನ್ ಬಲೆಗೆ ಬಿದ್ದ ಟೀಮ್ ಇಂಡಿಯಾ 109ಕ್ಕೆ ಆಲೌಟ್

- Advertisement -

ಇಂದೋರ್: (Border-Gavaskar Trophy 3rd Test) ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ (India Vs Australia Border-Gavaskar test series) 3ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಅಲ್ಪ ಮೊತ್ತಕ್ಕೆ ಕುಸಿದಿದೆ. ಹೋಳ್ಕರ್ ಕ್ರಿಕೆಟ್ ಮೈದಾನದಲ್ಲಿ ಆರಂಭಗೊಂಡ 3ನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆದರೆ ಕಾಂಗರೂಗಳ ಸ್ಪಿನ್ ಬಲೆಯಲ್ಲಿ ಬಿದ್ದ ಭಾರತ ಪ್ರಥಮ ಇನ್ನಿಂಗ್ಸ್’ನಲ್ಲಿ ಕೇವಲ 109 ರನ್’ಗಳಿಗೆ ಆಲೌಟಾಯಿತು.

ಕನ್ನಡಿಗ ಕೆ.ಎಲ್ ರಾಹುಲ್ ಬದಲು ನಾಯಕ ರೋಹಿತ್ ಶರ್ಮಾ ಜೊತೆ ಯುವ ಶುಭಮನ್ ಗಿಲ್ ಇನ್ನಿಂಗ್ಸ್ ಆರಂಭಿಸಿದರು. ಈ ಜೋಡಿ ಮೊದಲ ವಿಕೆಟ್’ಗೆ 27 ರನ್ ಸೇರಿಸಿ ಬೇರ್ಪಟ್ಟಿತು. ಕ್ಯಾಪ್ಟನ್ ರೋಹಿತ್ 12 ರನ್ ಗಳಿಸಿ ಔಟಾದರೆ, ಶುಭಮನ್ ಗಿಲ್ 21 ರನ್ ಗಳಿಸಿ ಔಟಾದರು. 3ನೇ ಕ್ರಮಾಂಕದಲ್ಲಿ ಕ್ರೀಸ್’ಗಿಳಿದ ಅನುಭವಿ ಚೇತೇಶ್ವರ್ ಪೂಜಾರ 1 ರನ್ನಿಗೆ ವಿಕೆಟ್ ಒಪ್ಪಿಸಿದ್ರೆ, ಮಾಜಿ ನಾಯಕ ವಿರಾಟ್ ಕೊಹ್ಲಿ 22 ರನ್’ಗಳ ಕಾಣಿಕೆಯಿತ್ತರು.

5ನೇ ಕ್ರಮಾಂಕದಲ್ಲಿ ರವೀಂದ್ರ ಜಡೇಜ 4 ರನ್ ಗಳಿಸಿದ್ರೆ, ಶ್ರೇಯಸ್ ಅಯ್ಯರ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಕೆಳ ಕ್ರಮಾಂಕಗಳಲ್ಲಿ ವಿಕೆಟ್ ಕೀಪರ್ ಕೆ.ಎಸ್ ಭರತ್ 17, ಅಕ್ಷರ್ ಪಟೇಲ್ 12 ಮತ್ತು ವೇಗಿ ಉಮೇಶ್ ಯಾದವ್ 17 ರನ್ ಗಳಿಸಿದ್ದರಿಂದ ಭಾರತದ ಮೊತ್ತ 100ರ ಗಡಿ ದಾಟುವಂತಾಯಿತು. ಭಾರತದ ಬ್ಯಾಟಿಂಗ್ ಲೈನಪ್’ನಲ್ಲಿ ಮಾಜಿ ನಾಯಕ ವಿರಾಟ್ ಕೊಹ್ಲಿ ಗಳಿಸಿದ 22 ರನ್’ಗಳ ಟಾಪ್ ಸ್ಕೋರ್.

ಇದನ್ನೂ ಓದಿ : KL Rahul: ಕೆ.ಎಲ್ ರಾಹುಲ್‌ಗೆ ಪ್ಲೇಯಿಂಗ್ XIನಿಂದ ಕೊಕ್, ಕನ್ನಡಿಗನ ಬದಲು ಸ್ಥಾನ ಪಡೆದ ಗಿಲ್ ಫೇಲ್

ಆಸ್ಟ್ರೇಲಿಯಾ ಪರ ಮಾರಕ ದಾಳಿ ಸಂಘಟಿಸಿದ ಯುವ ಎಡಗೈ ಸ್ಪಿನ್ನರ್ ಮ್ಯಾಥ್ಯೂ ಕುಹ್ನೆಮನ್ 9 ಓವರ್’ಗಳಲ್ಲಿ 16 ರನ್ನಿತ್ತು 5 ವಿಕೆಟ್ ಕಬಳಿಸಿದರು. ಅನುಭವಿ ಆಫ್’ಸ್ಪಿನ್ನರ್ ನೇಥನ್ ಲಯಾನ್ 35 ರನ್ನಿಗೆ 3 ವಿಕೆಟ್ ಪಡೆದ್ರೆ, ಟಾಡ್ ಮರ್ಫಿ 23 ರನ್ನಿಗೆ 1 ವಿಕೆಟ್ ಉರುಳಿಸಿದರು. ಆಸ್ಟ್ರೇಲಿಯಾ ವಿರುದ್ಧದ ಮೊದಲರೆಡು ಟೆಸ್ಟ್ ಪಂದ್ಯಗಳನ್ನು ಸುಲಭವಾಗಿ ಗೆದ್ದಿರುವ ಭಾರತ, ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ 2-0 ಮುನ್ನಡೆಯಲ್ಲಿದೆ.

Border-Gavaskar Trophy 3rd Test: Team India bowled out for 109 after kangaroos spin trap

RELATED ARTICLES

Most Popular