ಮೇಷರಾಶಿ
ಹಣಕಾಸು ಸಮಸ್ಯೆ ಹೆಚ್ಚಾಗುವುದು, ಸಾಲ ಬಾಧೆ, ಋಣ ಬಾಧೆ, ಸರಕಾರಿ ಕೆಲಸ ಕಾರ್ಯಗಳಲ್ಲಿ ಆಗಾಗ ಅಡಚಣೆಗಳು ಕಂಡುಬಂದಾವು. ಯೋಗ್ಯ ವಯಸ್ಕರಿಗೆ ಸದ್ಯದಲ್ಲೇ ವೈವಾಹಿಕ ಭಾಗ್ಯ ಒದಗಿ ಬಂದೀತು. ವಿದ್ಯಾರ್ಥಿಗಳು ಪ್ರಯತ್ನಹೀನರಾದಾರು. ಸಂಚಾರದಲ್ಲಿ ಜಾಗ್ರತೆ. ಮಿತ್ರರೊಂದಿಗೆ ಕಿರಿಕಿರಿ, ವ್ಯವಹಾರದಲ್ಲಿ ಎಚ್ಚರಿಕೆ, ಮನಸ್ಸಿನಲ್ಲಿ ಆತಂಕ.
ವೃಷಭರಾಶಿ
ಇಲ್ಲ ಸಲ್ಲದ ಅಪವಾದ, ಆರೋಗ್ಯದಲ್ಲಿ ಅಲ್ಪ ವ್ಯತ್ಯಾಸ, ಶ್ರೀ ದೇವತಾನುಗ್ರಹದಿಂದ ನಿಮ್ಮ ಮನೋಕಾಮನೆ ಗಳು ಸಿದ್ಧಿಸಲಿವೆ. ಬಂಧುಮಿತ್ರರ ಸಹಕಾರದಿಂದ ಕಾರ್ಯ ಸಾಧನೆಯಾಗಲಿದೆ. ಆರ್ಥಿಕ ಪರಿಸ್ಥಿತಿ ತುಂಬಾ ಉತ್ತಮವಿರುತ್ತದೆ. ವೃತ್ತಿರಂಗದಲ್ಲಿ ಏಳಿಗೆ ಇದೆ. ಆತ್ಮೀಯರೊಂದಿಗೆ ವೈಮನಸ್ಸು, ಸಾಲ ಮರುಪಾವತಿ ಆಲೋಚನೆ, ಉದ್ಯೋಗದಲ್ಲಿ ಬಡ್ತಿ-ನೆಮ್ಮದಿ, ಶತ್ರು ನಾಶ, ಭಾಗ್ಯ ವೃದ್ಧಿ.
ಮಿಥುನರಾಶಿ
ಕೆಲಸ ಕಾರ್ಯಗಳಲ್ಲಿ ಮುನ್ನಡೆ, ವಿದ್ಯಾಭ್ಯಾಸಕ್ಕೆ ಕಿರಿಕಿರಿ, ದೇಹಾರೋಗ್ಯದ ಬಗ್ಗೆ ಹೆಚ್ಚಿನ ಗಮನವಿರಲಿ. ಆರ್ಥಿಕವಾಗಿ ನಾನಾ ರೀತಿಯಲ್ಲಿ ಅಡಚಣೆಗಳು ಕಂಡುಬಂದಾವು. ಕಾರ್ಮಿಕ ವರ್ಗದವರಿಗೆ ಮಾನಸಿಕವಾಗಿ ಹತೋಟಿ ಇರಲಾರದು. ದಿನಾಂತ್ಯ ಶುಭವಿದೆ. ಶೀತ ಸಂಬಂಧಿತ ರೋಗ, ಭೂ ವ್ಯವಹಾರದಲ್ಲಿ ಲಾಭ, ಮಾತೃವಿನಿಂದ ಶುಭ ಹಾರೈಕೆ, ಭೋಗ ವಸ್ತು ಪ್ರಾಪ್ತಿ,

ಕಟಕರಾಶಿ
ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ದೇವತಾನುಗ್ರಹದಿಂದ ಅನಿರೀಕ್ಷಿತವಾಗಿ ಕಾರ್ಯ ಸಾಧನೆಯಾಗಲಿದೆ. ರೈತಾಪಿ ವರ್ಗದವರಿಗೆ ಉತ್ಸಾಹ ತೋರಿಬರಲಿದೆ. ನ್ಯಾಯಾಲಯದ ಕೆಲಸ ಕಾರ್ಯಗಳು ನಿಮ್ಮ ಪರವಾಗಿ ತೀರ್ಮಾನಗೊಂಡು ಸಂತಸವಿರುತ್ತದೆ. ಸರ್ಕಾರಿ ಕೆಲಸಗಳಲ್ಲಿ ಪ್ರಗತಿ, ವಸ್ತ್ರಾಭರಣ ಖರೀದಿ ಯೋಗ, ಅವಿವಾಹಿತರಿಗೆ ವಿವಾಹ ಯೋಗ, ಆರೋಗ್ಯದಲ್ಲಿ ವೃದ್ಧಿ.
ಸಿಂಹರಾಶಿ
ವಾಹನ ಖರೀದಿಗೆ ಆಲೋಚನೆ, ಅನಿರೀಕ್ಷಿತ ರೂಪದಲ್ಲಿ ನಾನಾ ರೀತಿಯಲ್ಲಿ ಶುಭ ಕಾರ್ಯಗಳು, ಸಂತಸ ತಂದಾವು. ಆರ್ಥಿಕವಾಗಿ ಹೂಡಿಕೆಗಳು ವ್ಯಾಪಾರ, ವ್ಯವಹಾರದಲ್ಲಿ ಲಾಭ ತಂದಾವು. ವಿದ್ಯಾರ್ಥಿಗಳು ಪ್ರಯತ್ನಶೀಲರಾದಾರು. ಉದ್ವೇಗ ಬೇಡ. ಹಣಕಾಸು ವ್ಯವಹಾರದಲ್ಲಿ ಹಿನ್ನಡೆ, ಸಮಾಜದಲ್ಲಿ ಉತ್ತಮ ಗೌರವ, ವಿದ್ಯಾಭ್ಯಾಸಕ್ಕೆ ಒಲವು, ಮಕ್ಕಳ ಭವಿಷ್ಯದ ಬಗ್ಗೆ ಚಿಂತನೆ, ಸ್ಥಿರಾಸ್ತಿ ಆಲೋಚನೆ ಹೆಚ್ಚಾಗುವುದು, ಸಂಗಾತಿಗೆ ಅನುಕೂಲ ಸಾಧ್ಯತೆ.
ಕನ್ಯಾರಾಶಿ
ಹಣಕಾಸು ಮುಗ್ಗಟ್ಟು, ಸ್ನೇಹಿತರಿಂದ ಸಹಕಾರ, ನಾನಾ ರೀತಿಯ ಅಡಚಣೆಗಳಿಂದಲೇ ನಿಮ್ಮ ಕಾರ್ಯಸಾಧನೆಯಾಗಲಿದೆ. ಕೌಟುಂಬಿಕವಾಗಿ ಮನಸ್ಸಿಗೆ ನೆಮ್ಮದಿ ಇಲ್ಲದ ದಿನಗಳಿವು. ದೂರ ಸಂಚಾರದಲ್ಲಿ ಅಪಘಾತ ಭೀತಿ ತಂದೀತು. ವಿದ್ಯಾರ್ಥಿಗಳಿಗೆ ನಿರುತ್ಸಾಹವಿದೆ. ಆತ್ಮೀಯರಿಂದ ಉತ್ತಮ ಸಲಹೆ, ಮೋಜು-ಮಸ್ತಿಗಾಗಿ ಮನಸ್ಸು, ನೀವಾಡುವ ಮಾತಿನಿಂದ ಅನರ್ಥ, ಮಕ್ಕಳ ವಿವಾಹಕ್ಕೆ ಅಡೆತಡೆ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ.

ತುಲಾರಾಶಿ
ಶತ್ರುಗಳಿಂದ ತೊಂದರೆ, ಕುತಂತ್ರಕ್ಕೆ ಸಿಲುಕುವ ಸಾಧ್ಯತೆ, ಆಗಾಗ ನಿಮ್ಮ ಮಾನಸಿಕ ಸ್ಥಿತಿ ಏರುಪೇರು ಆಗುತ್ತಲೇ ಇರುತ್ತದೆ. ಹಣಕಾಸಿನ ಬಗ್ಗೆ ಹೆಚ್ಚಿನ ಗಮನಹರಿಸಿರಿ. ಅನಾವಶ್ಯಕವಾಗಿ ಸಂಶಯ ಪ್ರವೃತ್ತಿಯಿಂದ ಕಾರ್ಯಾಚರಣೆಯಲ್ಲಿ ಅಡಚಣೆಗಳು ತೋರಿಬಂದಾವು. ಹಣಕಾಸು ಪರಿಸ್ಥಿತಿ ಚೇತರಿಕೆ, ಆದಾಯಕ್ಕಿಂತ ಖರ್ಚು ಹೆಚ್ಚು, ವಾಹನದಿಂದ ಅಧಿಕ ಖರ್ಚು, ದೇಹಾಲಸ್ಯ, ಕೆಲಸದಲ್ಲಿ ನಿರಾಸಕ್ತಿ.
ವೃಶ್ಚಿಕರಾಶಿ
ನಾನಾ ರೀತಿಯ ಆಲೋಚನೆ, ನೆಮ್ಮದಿ ಇಲ್ಲದ ಜೀವನ, ಶುಭಮಂಗಲ ಕಾರ್ಯಗಳು ದೈವಾನುಗ್ರಹ ದಿಂದ ಪರಿಪೂರ್ಣವಾದಾವು. ನಾನಾ ರೀತಿಯಲ್ಲಿ ಖರ್ಚುಗಳು ಬಂದರೂ ಉತ್ತಮ ಕೆಲಸಗಳಿಗಾಗಿ ಧನವ್ಯಯವಿದೆ. ಬಂಧುಮಿತ್ರರ ಸಹಕಾರದಿಂದ ಕಾರ್ಯಸಿದ್ಧಿ ಆಗಲಿದೆ. ಕೆಲಸ ಕಾರ್ಯಗಳಲ್ಲಿ ವಿಳಂಬ, ಅವಿವಾಹಿತರಿಗೆ ವಿವಾಹ ಯೋಗ, ಕುಟುಂಬದಲ್ಲಿ ಸಹಕಾರ, ಆತ್ಮೀಯರೊಂದಿಗೆ ಮಾತುಕತೆ, ಇಷ್ಟಾರ್ಥ ನೆರವೇರಿಕೆಗಾಗಿ ಪರಿಶ್ರಮ, ಆಸ್ತಿ ವಿಚಾರದಲ್ಲಿ ಕಲಹ.
ಧನಸ್ಸುರಾಶಿ
ಕುಟುಂಬದಲ್ಲಿ ನೆಮ್ಮದಿ ವಾತಾವರಣ, ನೆಮ್ಮದಿಯ ದಿನಗಳಿವು. ವೃತ್ತಿರಂಗದಲ್ಲಿ ಕಾರ್ಯಗಳು ಯಥಾಪ್ರಕಾರವಾಗಿ ನಡೆದು ಹೋಗಲಿವೆ. ಖರ್ಚು ವೆಚ್ಚಗಳಿದ್ದರೂ ಆರ್ಥಿಕ ಸ್ಥಿತಿಗೆ ಮೋಸವಿಲ್ಲ. ಅನಿರೀಕ್ಷಿತವಾಗಿ ದೇವತಾದರ್ಶನದ ಭಾಗ್ಯವಿರುವುದು. ಯತ್ನ ಕಾರ್ಯದಲ್ಲಿ ಪ್ರಗತಿ, ವ್ಯಾಪಾರ-ವ್ಯವಹಾರದಲ್ಲಿ ಅನುಕೂಲ, ಮಕ್ಕಳಿಗೆ ಅನಾರೊಗ್ಯ, ಉದ್ಯೋಗದಲ್ಲಿ ಕಿರಿಕಿರಿ, ಹಿತ ಶತ್ರುಗಳ ಕಾಟ, ಮಿಶ್ರ ಫಲ ಯೋಗ.

ಮಕರರಾಶಿ
ಅಕ್ರಮ ಸಂಬಂಧಗಳಿಂದ ಸಂಕಷ್ಟಕ್ಕೆ ಸಿಲುಕುವಿರಿ, ಪ್ರಾಮಾಣಿಕತೆಯಿಂದ ಅಭಿವೃದ್ಧಿ, ಹಣಕಾಸು ಪರಿಸ್ಥಿತಿ ಅಲ್ಪ ಚೇತರಿಕೆ, ವ್ಯವಹಾರಿಕ ಒಪ್ಪಂದಗಳನ್ನು ಮುಂದೂಡಿ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಮನೆಯ ಸಲಕರಣೆಗಾಗಿ ಖರ್ಚು ವೆಚ್ಚಗಳು ಹೆಚ್ಚಲಿವೆ. ವೃತ್ತಿರಂಗದಲ್ಲಿ ನಿಮ್ಮ ಚಿಂತನೆಗೆ ಬೆಲೆ ಬರಲಿದೆ. ಪ್ರಯತ್ನಬಲ, ಕ್ರಿಯಾಶೀಲತೆಗೆ ಒತ್ತು ನೀಡಿರಿ. ಕಾರ್ಯಸಿದ್ಧಿ ನಿಶ್ಚಿತ. ಸಂಚಾರದಲ್ಲಿ ಜಾಗ್ರತೆ. ಪತಿ-ಪತ್ನಿ ಮಧ್ಯೆ ವೈಮನಸ್ಸು, ನಂಬಿದ ಜನರಿಂದ ಮೋಸ.
ಕುಂಭರಾಶಿ
ಪುಣ್ಯಕ್ಷೇತ್ರ ದರ್ಶನಕ್ಕೆ ಹಂಬಲ, ಅನಾವಶ್ಯಕವಾಗಿ ಮಾನಸಿಕ ಅಸ್ಥಿರತೆ ಕಾಡಲಿದೆ ಹಾಗೂ ಭಯಭೀತಿ ತಂದೀತು. ವೃತ್ತಿರಂಗದಲ್ಲಿ ನಿಮ್ಮ ಮಾತಿಗೆ ಬೆಲೆ ಬಂದೀತು. ಹಿರಿಯರೊಡನೆ ಅನಾವಶ್ಯಕವಾಗಿ ಭಿನ್ನಾಭಿಪ್ರಾಯಕ್ಕೆ ಕಾರಣರಾಗದಿರಿ. ಗುರು ಹಿರಿಯರ ಭೇಟಿ, ಹಣಕಾಸು ಲಾಭ, ನೀವಾಡುವ ಮಾತಿನಿಂದ ಕಲಹ, ಮನಸಿನಲ್ಲಿ ಕೆಟ್ಟಾಲೋಚನೆ, ಕೆಲಸ ಕಾರ್ಯಗಳಲ್ಲಿ ಎಚ್ಚರಿಕೆ ಅಗತ್ಯ, ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿವಹಿಸಿ.
ಮೀನರಾಶಿ
ಸ್ಥಿರಾಸ್ತಿ ವಿಚಾರದಲ್ಲಿ ಕಲಹ, ಹಣಕಾಸು ಸಮಸ್ಯೆ ಎದುರಾಗುವುದು, ಈ ಸಮಯದಲ್ಲಿ ಉತ್ತಮ ಫಲಗಳು ಹಂತ ಹಂತವಾಗಿ ತೋರಿಬರುತ್ತವೆ. ಆರ್ಥಿಕ ಪರಿಸ್ಥಿತಿಯು ಸಮಾಧಾನ ತಂದೀತು. ಬಂಧುಬಳಗದವರ ಸಮಾಗಮದಿಂದ ಸಂತೋಷಭರಿತರಾಗುವಿರಿ. ಅಲ್ಪ ಆದಾಯ ಅಧಿಕವಾದ ಖರ್ಚು, ನೆಮ್ಮದಿ ಇಲ್ಲದ ಜೀವನ, ತೀರ್ಥಕ್ಷೇತ್ರ ದರ್ಶನಕ್ಕೆ ಮನಸ್ಸು, ದೂರ ಪ್ರಯಾಣ, ಮಾನಸಿಕ ನೆಮ್ಮದಿಗೆ ಭಂಗ,