ಸೋಮವಾರ, ಮೇ 12, 2025
HomeCinemaರಾಜ್ಯದಾದ್ಯಂತ ರಸದೌತಣ ಅಡುಗೆ ಬಡಿಸುತ್ತಿದೆ ರಾಘವೇಂದ್ರ ಸ್ಟೋರ್ಸ್

ರಾಜ್ಯದಾದ್ಯಂತ ರಸದೌತಣ ಅಡುಗೆ ಬಡಿಸುತ್ತಿದೆ ರಾಘವೇಂದ್ರ ಸ್ಟೋರ್ಸ್

- Advertisement -

ಕಳೆದ ವಾರ ಬಿಡುಗಡೆ ಆಗಿರುವ ಹಿರಿಯ ನಟ, ನವರಸ ನಾಯಕ ಜಗ್ಗೇಶ್‌ ಅಭಿನಯದ ರಾಘವೇಂದ್ರ ಸ್ಟೋರ್ಸ್‌ ಸಿನಿಮಾ ಭರ್ಜರಿ ಪ್ರದರ್ಶನ (Raghavendra Stores Collection) ಕಾಣುತ್ತಿದೆ. ‌42 ವರ್ಷ ತುಂಬಿದ್ದರೂ ಸಿಂಗಲ್‌ ಸುಂದರನಾಗಿಯೇ ಇರುವ ಹಯವದನನ ಮದುವೆ ತಯಾರಿ ನೋಡಿ ಸಿನಿಪ್ರೇಕ್ಷಕರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ. ಅದರೊಂದಿಗೆ ಕೊನೆಯ ಹದಿನೈದು ನಿಮಿಷ ಒಂದೊಳ್ಳೆ ಸಂದೇಶದ ಮೂಲಕ ಸಿನಿಮಾ ಕೊನೆಗೊಳ್ಳುತ್ತದೆ. ನಿರ್ದೇಶಕ ಸಂತೋಷ್‌ ಆನಂದ್‌ ರಾಮ್‌ ಒಂದೊಳ್ಳೆ ಸದಭಿರುಚಿ ಸಿನಿಮಾ ತೆರೆ ಮೇಲೆ ತರುವುದರಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ರಾಜ್ಯದಾದ್ಯಂತ ರಸದೌತಣದ ಊಟದ ಪರಿಮಳ ಹರಡಿದೆ. ಇನ್ನೂ ಈ ಸಿನಿಮಾದ ಓಟಿಟಿಗೆ ಹಾಗೂ ಟಿವಿಗೆ ಯಾವಾಗ ಬರಲಿದೆ ಎನ್ನುವ ಮಾಹಿತಿ ಕೂಡ ದೊರಕಿದೆ.

ರಾಘವೇಂದ್ರ ಸ್ಟೋರ್ಸ್‌ ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಓಪನಿಂಗ್‌ ಪಡೆದುಕೊಂಡಿದ್ದು, ರುಚಿ ರುಚಿಯಾದ ಹಾಸ್ಯದ ಊಟವನ್ನು ಉಂಡು ಖುಷಿಪಡುತ್ತಿದ್ದಾರೆ. 35 ವರ್ಷ ಮೇಲ್ಪಟ್ಟ ಹುಡುಗರು ಮದಿವೆ ಆಗಲು ಏನೆಲ್ಲಾ ಸರ್ಕಸ್‌ ಮಾಡುತ್ತಾರೆ. ಮುದುವೆ ನಂತರ ಕೆಲವರಿಗೆ ಎದುರಾಗುವಂತಹ ಸಮಸ್ಯೆಗಳ ಬಗ್ಗೆ ಸಿನಿಮಾದಲ್ಲಿ ಕಾಣಬಹುದು. ಹೊಂಬಾಳೆ ಫಿಲ್ಮ್ಸ್ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇನ್ನು ಈ ಸಿನಿಮಾ ಡಿಜಿಟಲ್ ರೈಟ್ಸ್ ಅಮೇಜಾನ್ ಪ್ರೈಮ್‌ ಪಡೆದುಕೊಂಡಿದೆ. ಜೊತೆಗೆ ಸ್ಯಾಟಲೈಟ್(ಟಿವಿ) ರೈಟ್ಸ್ ಸ್ಟಾರ್‌ ಸುವರ್ಣ ಗಿಟ್ಟಿಸಿಕೊಂಡಿದೆ.

ಈ ಸಿನಿಮಾದಲ್ಲಿ ಹಿರಿಯ ನಟ ಜಗ್ಗೇಶ್‌ ಅಡುಗೆ ಭಟ್ಟನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, 40 ವರ್ಷ ದಾಟಿದರೂ ಮದುವೆಯಾಗದೇ ಅಡುಗೆ ಭಟ್ಟನ ಪಾತ್ರದಲ್ಲಿ ಸಿನಿಪ್ರೇಕ್ಷಕರಿಗೆ ಕಚಗುಳಿ ನೀಡಲು ಸಿದ್ದರಾಗಿದ್ದಾರೆ. ಇನ್ನು ಈ ಸಿನಿಮಾದಲ್ಲಿ ನಾಯಕಿ ಪಾತ್ರದಲ್ಲಿ ಶ್ವೇತಾ ಶ್ರೀವಾತ್ಸವ್‌ ಅಭಿನಯಿಸಲಿದ್ದಾರೆ.

ಮೊದಲು ಸಿನಿಮಾ ರಿಲೀಸ್‌ ಆಗಿ ನೂರು ದಿನ ಓಡಿದ ನಂತರ ಓಟಿಟಿ ಹಾಗೂ ಟಿವಿಯಲ್ಲಿ ಪ್ರಸಾರವಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ದೊಡ್ಡ ದೊಡ್ಡ ಸಿನಿಮಾಗಳು ಕೂಡ ತಿಂಗಳಿಗೂ ಮುನ್ನ ಟಿಜಿಟಲ್‌ ಪ್ಲಾಟ್‌ಫಾರ್ಮ್‌ಗೆ ಬರುತ್ತಿದೆ. ಸದ್ಯ ಬಿಡುಗಡೆಯಾಗಿರುವ ರಾಘವೇಂದ್ರ ಸ್ಟೋರ್ಸ್‌ ಅಮೇಜಾನ್ ಪ್ರೈಮ್‌ನಲ್ಲಿ ಯಾವಾಗ ಸ್ಟ್ರೀಮಿಂಗ್ ಆಗುತ್ತದೆ ಎನ್ನುವುದು ಜನರ ಕುತೂಹಲಕ್ಕೆ ಕಾರಣವಾಗಿದೆ.

ಇದನ್ನೂ ಓದಿ : ತರುಣ್‌ ಸುಧೀರ್‌ ನಿರ್ದೇಶನದ ಕಾಟೇರಗಾಗಿ ಸಖತ್‌ ವರ್ಕ್‌ ಓಟ್‌ ಶುರುಮಾಡಿದ ನಟ ದರ್ಶನ್‌

ಇದನ್ನೂ ಓದಿ : ಸಾವಿನ ಬಗ್ಗೆ ಸುಳ್ಳು ವದಂತಿ ಸ್ಪಷ್ಟನೆ ನೀಡಿದ ಹಿರಿಯ ನಟ ದ್ವಾರಕೀಶ್‌

ಈ ಸಿನಿಮಾದಲ್ಲಿ ನಟ ಜಗ್ಗೇಶ್‌ ಅವರಿಗೆ ಜೋಡಿಯಾಗಿ ಶ್ವೇತಾ ಶ್ರೀವಾತ್ಸವ್ ಅಭಿನಯಿಸಿದ್ದಾರೆ. ಹಯವದನನ ತಂದೆಯಾಗಿ ಹಿರಿಯ ನಟ ದತ್ತಣ್ಣ ನಟಿಸಿದ್ದಾರೆ. ಇನ್ನು ರವಿಶಂಕರೇ ಗೌಡ ಹಾಗೂ ಮಿತ್ರಾ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಮುಖ ಪಾತ್ರದಲ್ಲಿ ಅಚ್ಯುತ್ ಕುಮಾರ್ ಕಾಣಿಸಿಕೊಂಡಿದ್ದಾರೆ. ಶ್ರೀಶ ಕುದುವಳ್ಳಿ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತ ಸಿನಿಮಾಕ್ಕಿದೆ.

ಇದನ್ನೂ ಓದಿ : ತಾಯಿಯ ಕ್ರಿಯೆಯಂದು ಭಾವುಕರಾದ ನಟಿ ಮಾನ್ವಿತಾ ಕಾಮತ್‌

Raghavendra Stores Collection : Actor Jaggesh is doing well across the state Raghavendra Stores

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular