13 ಮಂದಿ ಆಟಗಾರರೊಂದಿಗೆ ಆಡುವ ಮುಂಬೈ ಇಂಡಿಯನ್ಸ್, ಐಪಿಎಲ್‌ನಲ್ಲಿ ಏನಿದು ಹೊಸ ಕಥೆ?

ಮುಂಬೈ: ಕ್ರಿಕೆಟ್’ನಲ್ಲಿ ಮೈದಾನಕ್ಕಿಳಿಯುವ ಆಟಗಾರರು 11. ಅಂದ್ರೆ ಎಲ್ಲಾ ತಂಡಗಳು ಪ್ಲೇಯಿಂಗ್ XIನೊಂದಿಗೆ ಆಡುತ್ತವೆ. ಆದರೆ ಐಪಿಎಲ್’ನಲ್ಲಿ (IPL) 5 ಬಾರಿ ಚಾಂಪಿಯನ್ ಪಟ್ಟಕ್ಕೇರಿರುವ ಮುಂಬೈ ಇಂಡಿಯನ್ಸ್ (Mumbai Indians) ತಂಡ 13 ಮಂದಿಯೊಂದಿಗೆ ಆಡುತ್ತದೆ ಎಂದು ಜನ ಮಾತಾಡಿಕೊಳ್ಳುತ್ತಾರೆ. ಅವರ ಪ್ರಕಾರ 12 ಮತ್ತು 13ನೇ ಆಟಗಾರರೆಂದರೆ ಫೀಲ್ಡ್ ಅಂಪೈರ್’ಗಳು.

ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳ ಮಧ್ಯೆ ವಾಂಖೆಡೆ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಇದಕ್ಕೆ ಮತ್ತೊಂದು ಸಾಕ್ಷಿ ಸಿಕ್ಕಿದೆ ಎಂದು ಕ್ರಿಕೆಟ್ ಪ್ರಿಯರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಹೊರ ಹಾಕುತ್ತಿದ್ದಾರೆ.

ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಿರುವ ಮುಂಬೈ ಆಟಗಾರ ಯಶಸ್ವಿ ಜೈಸ್ವಾಲ್ (Yashaswi Jaiswal) ಮುಂಬೈ ಇಂಡಿಯನ್ಸ್ ವಿರುದ್ಧ ಸಿಡಿಲಬ್ಬರದ ಶತಕ ಬಾರಿಸಿ ಅಬ್ಬರಿಸಿದ್ದರು. ಕೇವಲ 62 ಎಸೆತಗಳಲ್ಲಿ 16 ಬೌಂಡರಿಗಳು ಹಾಗೂ 8 ಸಿಕ್ಸರ್’ಗಳ ನೆರವಿನಿಂದ ಜೈಸ್ವಾಲ್ 124 ರನ್ ಚಚ್ಚಿದ್ದರು. ಆದರೆ 19.4ನೇ ಓವರ್’ನಲ್ಲಿ ಮುಂಬೈನ ಯುವ ಎಡಗೈ ವೇಗದ ಬೌಲರ್ ಅರ್ಶದ್ ಖಾನ್ ಬೌಲಿಂಗ್’ನಲ್ಲಿ ಜೈಸ್ವಾಲ್ ಕಾಟ್ & ಬೌಲ್ಡ್ ಆಗಿ ಔಟಾಗಿದ್ದರು. ಆದರೆ ಜೈಸ್ವಾಲ್ ಔಟಾದ ರೀತಿ ವಿವಾದಕ್ಕೆ ಕಾರಣವಾಗಿದ್ದಾರೆ.

ಜೈಸ್ವಾಲ್ ಔಟಾದ ಎಸೆತ ಸೊಂಟಕ್ಕಿಂತ ಮೇಲಿನ ಭಾಗದಲ್ಲಿ ಹಾದು ಹೋಗುತ್ತಿದ್ದ ಕಾರಣ ಅಂದು ನೋಬಾಲ್ ಆಗಿತ್ತು. ಅಷ್ಟೇ ಅಲ್ಲ, ಯಶಸ್ವಿ ಜೈಸ್ವಾಲ್ ಕ್ರೀಸ್’ನಿಂದ ಒಳಗಿದ್ದರು. ಹೀಗಾಗಿ ಎಂತಹ ಕಳಪೆ ಅಂಪೈರ್ ಕೂಡ ಅದನ್ನು ಸರಿಯಾದ ಎಸೆತ ಎಂದು ಕರೆಯಲು ಸಾಧ್ಯವಿಲ್ಲ. ಆದರೆ ಬೇರೆ ಬೇರೆ ಆ್ಯಂಗಲ್’ಗಳಲ್ಲಿ ರೀಪ್ಲೇ ಫೂಟೇಜ್’ಗಳನ್ನು ನೋಡಿದ ಮೇಲೂ ಟಿವಿ ಅಂಪೈರ್ ಔಟ್ ಎಂದು ತೀರ್ಪಿತ್ತಿದ್ದರು. ಇದರ ವಿರುದ್ಧ ಕ್ರಿಕೆಟ್ ಪ್ರಿಯರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರ ಹಾಕುತ್ತಿದ್ದಾರೆ.

ಇದನ್ನೂ ಓದಿ : Kohli Parnel : 2008 ಜೂನಿಯರ್ ವಿಶ್ವಕಪ್‌ನಲ್ಲಿ ಎದುರಾಳಿ ನಾಯಕರು, ಆರ್‌ಸಿಬಿಯಲ್ಲಿ ಟೀಮ್ ಮೇಟ್ಸ್

ಮಾರ್ಚ್’ನಲ್ಲಿ ನಡೆದ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಮಹಿಳಾ ಪ್ರೀಮಿಯರ್ ಲೀಗ್ ಫೈನಲ್ ಪಂದ್ಯದಲ್ಲೂ ಇಂಥದ್ದೇ ಘಟನೆ ನಡೆದಿತ್ತು. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಓಪನರ್ ಶೆಫಾಲಿ ಸೊಂಟದ ಮೇಲಿಂದ (above the waist) ಹಾದು ಹೋಗುತ್ತಿದ್ದ ಎಸೆತಕ್ಕೆ ಔಟಾಗಿದ್ದರು. ಚೆಂಡು ಕ್ಲಿಯರ್ ನೋಬಾಲ್ ಆಗಿದ್ದು ಟಿವಿ ರಿಪ್ಲೇಗಳಲ್ಲಿ ಸ್ಪಷ್ಟವಾಗಿ ಕಂಡು ಬಂದಿತ್ತು. ಆದರೆ ಟಿವಿ ಅಂಪೈರ್ ‘ಲೀಗಲ್ ಎಸೆತ’ ಎಂದು ಮುಂಬೈ ಇಂಡಿಯನ್ಸ್ ಪರ ತೀರ್ಪು ಕೊಟ್ಟು ಬಿಟ್ಟಿದ್ದ.

Mumbai Indians : Mumbai Indians playing with 13 players, what is the new story in IPL?

Comments are closed.