Buddha Purnima 2023 : ಬುದ್ಧ ಪೂರ್ಣಿಮೆ ಯಾವಾಗ? ಈ ದಿನದ ಮಹತ್ವ ಮತ್ತು ಇತಿಹಾಸ

ಬೌದ್ಧ ಧರ್ಮವನ್ನು (Bouddhism) ಸ್ಥಾಪಿಸಿದ ಭಗವಾನ್‌ ಗೌತಮ್‌ ಬುದ್ಧನ ಜನ್ಮದಿನವನ್ನು ಬುದ್ಧ ಪೂರ್ಣಿಮೆ (Buddha Purnima 2023) ಎಂದು ಆಚರಿಸಲಾಗುತ್ತದೆ. ಇದನ್ನು ಬುದ್ಧ ಜಯಂತಿ ಎಂದು ಕರೆಯಲಾಗುತ್ತದೆ. ಪ್ರಪಂಚದಾದ್ಯಂತ ಬೌದ್ಧ ಧರ್ಮದವರು ಶ್ರದ್ಧಾ ಭಕ್ತಿಯಿಂದ ಇದನ್ನು ಆಚರಿಸುತ್ತಾರೆ. ಬುದ್ಧ ಪೂರ್ಣಿಮೆಯು ಪೂರ್ವ ಏಷ್ಯಾ ಮತ್ತು ದಕ್ಷಿಣ ಏಷ್ಯಾದಲ್ಲಿ ಬಹಳ ಮಹತ್ವವನ್ನು ಪಡೆದಿದೆ. ಈ ವರ್ಷವು ಬುದ್ಧನ 2585 ನೇ ಜನ್ಮದಿನದ ಆಚರಣೆಯಾಗಿದೆ. ಈ ವರ್ಷ ಬುದ್ಧ ಪೂರ್ಣಿಮೆಯನ್ನು ಮೇ 5, 2023, ಶುಕ್ರವಾರದಂದು ಆಚರಿಸಲಾಗುತ್ತಿದೆ. ಯೋಗಾಚರಣೆಯಲ್ಲಿ ಬುದ್ಧ ಪೂರ್ಣಿಮೆಯು ವಿಶೇಷವಾಗಿದೆ.

ವಿಶೇಷವೆಂದರೆ ವೈಶಾಖ ಪೂರ್ಣಿಮೆಯಂದು ಕೂರ್ಮ ಜಯಂತಿಯನ್ನೂ ಆಚರಿಸಲಾಗುವುದು. ಭಗವಾನ್ ವಿಷ್ಣುವು ಕೂರ್ಮ ಅವತಾರವನ್ನು ತಾಳಿ ಭೂಮಿಯನ್ನು ರಕ್ಷಿಸಿದನು ಎಂದು ನಂಬಲಾಗುತ್ತದೆ.

ಬುದ್ಧ ಪೂರ್ಣಿಮೆ 2023 ದಿನಾಂಕ:
ಬುದ್ಧ ಪೂರ್ಣಿಮೆಯನ್ನು ಮೇ 5, 2023, ಶುಕ್ರವಾರದಂದು ಆಚರಿಸಲಾಗುತ್ತಿದೆ. ಇದು ವೈಶಾಖ ಮಾಸದ ಪೂರ್ಣಿಮೆಯಾದ್ದರಿಂದ ಇದನ್ನು ವೈಶಾಖ ಪೂರ್ಣಿಮೆಯಂದು ಕರೆಯಲಾಗುತ್ತದೆ. ಈ ದಿನ, ಭಗವಾನ್ ಸತ್ಯನಾರಾಯಣನ ಕಥೆ ಮತ್ತು ಭಗವಾನ್ ಗೌತಮ ಬುದ್ಧನ ಆರಾಧನೆಯನ್ನು ಮಾಡಲಾಗುತ್ತದೆ. ಹುಣ್ಣಿಮೆಯಂದು ಪುಣ್ಯನದಿಯಲ್ಲಿ ಸ್ನಾನ ಮಾಡುವುದರಿಂದ ಏಳು ಜನ್ಮಗಳ ಪಾಪಗಳು ನಾಶವಾಗುತ್ತದೆ ಮತ್ತು ಪುಣ್ಯ ಸಿಗುತ್ತದೆ ಎಂಬ ನಂಬಿಕೆ ಇದೆ. ಈ ದಿನ ಕೂರ್ಮ ಜಯಂತಿಯನ್ನೂ ಆಚರಿಸಲಾಗುತ್ತದೆ.

ಬುದ್ಧ ಪೂರ್ಣಿಮೆ ಆಚರಣೆ ಹೇಗೆ?
ಪಂಚಾಂಗದ ಪ್ರಕಾರ, ವೈಶಾಖ ಪೂರ್ಣಿಮಾ ತಿಥಿಯು 4 ಮೇ 2023 ರಂದು ಬೆಳಿಗ್ಗೆ 11.44 ಕ್ಕೆ ಪ್ರಾರಂಭವಾಗುತ್ತದೆ. ಇದು ಮರುದಿನ ಮೇ 5, 2023 ರಂದು ರಾತ್ರಿ 11.03 ಕ್ಕೆ ಕೊನೆಗೊಳ್ಳುತ್ತದೆ.

ಸ್ನಾನದ ಸಮಯ – ಬೆಳಿಗ್ಗೆ 04.12 – ಬೆಳಿಗ್ಗೆ 04.55
ಸತ್ಯನಾರಾಯಣ ಪೂಜೆ ಮುಹೂರ್ತ – ಬೆಳಿಗ್ಗೆ 07:18 ರಿಂದ 08:58
ಚಂದ್ರೋದಯಕ್ಕೆ ಅರ್ಘ್ಯ ಅರ್ಪಿಸುವ ಸಮಯ – ಸಂಜೆ 06:45
ಲಕ್ಷ್ಮೀ ಪೂಜೆ ಮುಹೂರ್ತ – 05 ಮೇ 2023, 11:56 pm – 06 ಮೇ 2023, 12:39 am
ಕೂರ್ಮ ಜಯಂತಿ ಪೂಜೆ ಮುಹೂರ್ತ – ಸಂಜೆ 04.18 – 06.59 ಕ್ಕೆ

ಇತಿಹಾಸ :
ಕಪಿಲವಸ್ತುವಿನ ರಾಜಕುಮಾರನಾಗಿ ಜನಿಸಿದ ಗೌತಮ ಬುದ್ಧನ ಮೂಲ ಹೆಸರು ಸಿದ್ದಾರ್ಥ. ಜ್ಯೋತಿಷ್ಯದ ಪ್ರಕಾರ ಅವನು ಶ್ರೇಷ್ಠ ರಾಜನಾಗಬಹುದು ಅಥವಾ ಮಹಾನ್‌ ಸನ್ಯಾಸಿಯಾಗಬಹುದು ಎಂಬುದು ಭವಿಷ್ಯವಾಣಿಯಾಗಿತ್ತು. ಕಪಿಲವಸ್ತುವು ರಾಜಕುಮಾರನನ್ನು ಕಳೆದುಕೊಳ್ಳುವ ಭಯದಲ್ಲಿ ಅವನ ಕುಟುಂಬವು ಅವನನ್ನು ಅರಮನೆಗೆ ಮಾತ್ರ ಸೀಮಿತಗೊಳಿಸಿತು. ಆದರೆ 29 ವರ್ಷಕ್ಕೆ ಕಾಲಿಟ್ಟಾಗ ಮೊದಲ ಬಾರಿಗೆ ಮುದುಕ, ಮೃತ ದೇಹ ಮತ್ತು ಅಸ್ವಸ್ಥತೆಯ ದೃಶ್ಯಗಳನ್ನು ನೋಡಿದನು. ಆ ದೃಶ್ಯಗಳು ಅವನಿಗೆ ಜೀವನವು ದುಃಖದಿಂದ ಕೂಡಿದೆ ಎಂಬುದನ್ನು ಅರಿವು ಮಾಡಿಸಿತು. ಇದರಿಂದಾಗಿ ಅವನು ರಾಜ ವೈಭೋಗವನ್ನು ತ್ಯಜಿಸಿ, ಸತ್ಯವನ್ನು ಹುಡುಕಲು ಹೊರಟನು. ನಂತರ ಬೋಧಿ ವೃಕ್ಷದ ಕೆಳಗೆ ಅವನಿಗೆ ಜ್ಞಾನೋದಯವಾಯಿತು. ಅಂದಿನಿಂದ ಅವನನ್ನು ಭಗವಾನ್‌ ಬುದ್ಧನೆಂದು ಕರೆದರು.

ಇದನ್ನೂ ಓದಿ : ಕಾರ್ಮಿಕ ದಿನ ಆರಂಭಗೊಂಡಿದ್ದು ಯಾವಾಗ ? ಏನಿದರ ಇತಿಹಾಸ, ಮಹತ್ವ

ಇದನ್ನೂ ಓದಿ : Lunar Eclipse 2023: ವರ್ಷದ ಮೊದಲ ಚಂದ್ರ ಗ್ರಹಣ; ಭಾರತದಲ್ಲಿ ಗೋಚರಿಸಲಿದೆಯಾ? ದಿನ, ಸಮಯ ಮತ್ತು ವೀಕ್ಷಣೆ ಹೇಗೆ…

(When is Buddha Purnima 2023. Know the date, time and history of Bhagavan Buddha)

Comments are closed.