ಭಾನುವಾರ, ಮೇ 11, 2025
HomeCrimeಹಿರಿಯ ವಕೀಲ, ಎಐಎಂಪಿಎಲ್ಬಿ ಕಾರ್ಯದರ್ಶಿ ಝಫರ್ಯಾಬ್‌ ಜೀಲಾನಿ ನಿಧನ

ಹಿರಿಯ ವಕೀಲ, ಎಐಎಂಪಿಎಲ್ಬಿ ಕಾರ್ಯದರ್ಶಿ ಝಫರ್ಯಾಬ್‌ ಜೀಲಾನಿ ನಿಧನ

- Advertisement -

ನವದೆಹಲಿ : ಅಖಿಲ ಭಾರತದ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಕಾರ್ಯದರ್ಶಿ ಹಾಗೂ ಹಿರಿಯ ವಕೀಲ (AIMPLB Secretary Zafaryab Jilani) ಝಫರ್ಯಾಬ್‌ ಜೀಲಾನಿ (73 ವರ್ಷ) ಅವರು ಲಕ್ನೋದಲ್ಲಿ ಇಂದು ಇಹಲೋಕವನ್ನು ತ್ಯಜಿಸಿದ್ದಾರೆ.

ಹಿರಿಯ ವಕೀಲ ಝಫರ್ಯಾಬ್‌ ಜೀಲಾನಿ ಅವರು ಸ್ವಲ್ಪ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ವಯೋ ಸಹಜದಿಂದಾಗಿ ಚಿಕಿತ್ಸೆ ಫಲಕಾರಿ ಆಗದೇ ಬಾರದ ಲೋಕಕ್ಕೆ ಪ್ರಯಾಣಿಸಿದ್ದಾರೆ.

ಬಾಬರಿ ಮಸೀದಿ ಕ್ರಿಯಾ ಸಮಿತಿಯ ಸಂಚಲಾಕರಾಗಿ ಹಿರಿಯ ವಕೀಲ ಝಫರ್ಯಾಬ್‌ ಜೀಲಾನಿ ಅವರು ರಾಮ ಜನ್ಮಭೂಮಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿದ್ದರು. ಈ ಹಿಂದೆ ಉತ್ತರ ಪ್ರದೇಶದ ಹೆಚ್ಚುವರಿ ಜನರಲ್‌ ನಾಯ್ಯಧೀಶರಾಗಿ ಕೂಡ ಸೇವೆ ಸಲ್ಲಿಸಿದ್ದಾರೆ.

ಇದನ್ನೂ ಓದಿ : ಅಕ್ರಮ ಆಸ್ತಿ ಪ್ರಕರಣ : ಡಿಕೆ ಶಿವಕುಮಾರ್ ವಿರುದ್ದ ಸಿಬಿಐ ವಿಚಾರಣೆಗೆ ಮಧ್ಯಂತರ ತಡೆಯಾಜ್ಞೆ ನೀಡಿದ ಸುಪ್ರೀಂ ಕೋರ್ಟ್

ಇದನ್ನೂ ಓದಿ : ದಿ ಕೇರಳ ಸ್ಟೋರಿ ಸಿನಿಮಾ ಪ್ರದರ್ಶನ ನಿಷೇಧಿಸುವಂತೆ ಸುಪ್ರೀಂ ಕೋರ್ಟ್‌ನ್ನು ಕೇಳಿದ ಪಶ್ಚಿಮ ಬಂಗಾಳ ಸರಕಾರ

ಹಿರಿಯ ವಕೀಲರು ಬಾಬರಿ ಮಸೀದಿ ಕ್ರಿಯಾ ಸಮಿತಿಯ (ಬಿಎಂಎಸಿ) ಸಂಚಾಲಕರೂ ಆಗಿದ್ದಾರೆ ಮತ್ತು ಅಯೋಧ್ಯೆ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು ಮುಸ್ಲಿಂ ಸಮಸ್ಯೆಗಳ ಬಗ್ಗೆ ಸಕ್ರಿಯ ಧ್ವನಿಯಾಗಿದ್ದಾರೆ, ನಾಗರಿಕ ಸಮಾಜದ ಒಳಗೊಂಡಿರುವ ಸದಸ್ಯರು, ಮುಸ್ಲಿಂ ವೈಯಕ್ತಿಕ ಕಾನೂನು ಮತ್ತು ಭಾರತೀಯ ದಂಡ ಸಂಹಿತೆಯ ಪರಿಣಿತರು. ಅವರು AIMPLB ಯ ಕಾನೂನು ಕೋಶದ ಹಿರಿಯ ಸದಸ್ಯರೂ ಆಗಿದ್ದಾರೆ.

6 ರಾಜ್ಯಗಳಲ್ಲಿ ನೂರಕ್ಕೂ ಅಧಿಕ ಸ್ಥಳಗಳಲ್ಲಿ ಎನ್‌ಐಎ ದಾಳಿ

ನವದೆಹಲಿ : ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) (NIA raids) ಬುಧವಾರ ಹರಿಯಾಣ, ಪಂಜಾಬ್‌, ರಾಜಸ್ಥಾನ, ಉತ್ತರಪ್ರದೇಶ, ಉತ್ತರಾಖಂಡ ಹಾಗೂ ಮಧ್ಯಪ್ರದೇಶದ ಆರು ರಾಜ್ಯಗಳ ನೂರಕ್ಕೂ ಅಧಿಕ ಸ್ಥಳಗಳಲ್ಲಿ ಶೋಧ ಕಾರ್ಯಚಾರಣೆ ನಡೆಸುತ್ತಿದ್ದಾರೆ. ಹೀಗಾಗಿ ಆರೋಪಿಗಳ ಬಂಧನಕ್ಕೆ ಪಣ ತೊಟ್ಟಂತೆ ಕಾಣುತ್ತಿದೆ.

ದೇಶದಲ್ಲಿ ವಿವಿಧ ಗ್ಯಾಂಗ್‌ ಸ್ಟಾರ್‌ಗಳು, ಮಾದಕ ವಸ್ತು ಸಾಗಣೆಯಲ್ಲಿ ತೊಡಗಿರುವವರು, ಉಗ್ರ ಚುಟುವಟಿಕೆಗಳಲ್ಲಿ ತೊಡಗಿಸಿಕೊಂಡವರು ಹಾಗೂ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಂಡವರ ಮೇಲೆ ದಾಳಿ ಮಾಡಲಾಗಿದೆ ಎಂದು ಎನ್‌ಐಎ ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯ ಪೊಲೀಸ್‌ಗಳೊಂದಿಗೆ ನಿಕಟ ಸಮನ್ವದೊಂದಿಗೆ ಭಯೋತ್ಪಾದನಾ ನಿಗ್ರಹ ಸಂಸ್ಥೆ ಬುಧವಾರ ಮುಂಜಾನೆಯಿಂದ ಶಂಕಿತರಿಗೆ ಸಂಬಂಧಿಸಿದ ಕಚೇರಿ, ನಿವಾಸಗಳು ಸಹಿತ ಇತರ ಸ್ಥಳಗಳಲ್ಲಿ ಈ ದಾಳಿಗಳನ್ನು ನಡೆಸಿ ಸಿಕ್ಕ ದಾಖಲೆ ಪತ್ರಗಳನ್ನು ಪರಿಶೀಲನೆ ನಡೆಸಿತು. ದಾಳಿಗಳು ಇನ್ನೂ ಮುಂದುವರಿದಿದೆ. ಕೆಲವರ ಬಳಿ ಇದ್ದ ಸುಧಾರಿತ ಸ್ಫೋಟಕಗಳು, ಗನ್‌ಗಳು ಸೇರಿದಂತೆ ಆರ್‌ಡಿಎಕ್ಸ್‌ ಸಾಮಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ. ಕಳೆದ ವರ್ಷ ಎನ್‌ಐಎ ದಾಖಲಿಸಿದ ಮೂರು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಈ ದಾಳಿಗಳನ್ನು ನಡೆಸಲಾಗುತ್ತಿದೆ.

Senior Advocate AIMPLB Secretary Zafaryab Jilani Passed Away

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular