ಅಕ್ರಮ ಆಸ್ತಿ ಪ್ರಕರಣ : ಡಿಕೆ ಶಿವಕುಮಾರ್ ವಿರುದ್ದ ಸಿಬಿಐ ವಿಚಾರಣೆಗೆ ಮಧ್ಯಂತರ ತಡೆಯಾಜ್ಞೆ ನೀಡಿದ ಸುಪ್ರೀಂ ಕೋರ್ಟ್

ನವದೆಹಲಿ : ಕರ್ನಾಟಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ವಿರುದ್ಧ ಅಕ್ರಮ ಆಸ್ತಿ ಪ್ರಕರಣಕ್ಕೆ (Illegal property case) ಸಂಬಂಧಸಿದಂತೆ ತನಿಖೆಗೆ ಮಧ್ಯಂತರ ತಡೆಯಾಜ್ಞೆ ನೀಡಿದ್ದ ಕರ್ನಾಟಕ ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಸಿಬಿಐ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಬುಧವಾರ ಜುಲೈ 14ಕ್ಕೆ ಮುಂದೂಡಿದೆ.

ಡಿ.ಕೆ ಶಿವಕುಮಾರ್‌ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್‌ ಸಿಂಘ್ವಿ ಮೇ13 ರಂದು ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದೆ ಎಂದು ಹೇಳಿದ ನಂತರ ನ್ಯಾಯಮೂರ್ತಿಗಳಾದ ಬಿ. ಆರ್‌. ಗಾವಾಯಿ ಹಾಗೂ ಸಂಜಯ್‌ ಕರೋಲ್‌ ಅವರ ಪೀಠವು ವಿಚಾರಣೆನ್ನು ಮುಂದೂಡಿದೆ. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ ವಿರುದ್ಧದ ಭ್ರಷ್ಟಾಚಾರ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳದ ವಿಚಾರಣೆಗೆ ಕರ್ನಾಟಕ ಹೈಕೋರ್ಟ್‌ ಫೆಬ್ರವರಿ 10 ರಂದು ತಡೆ ನೀಡಿತ್ತು. ತಡೆಯಾಜ್ಞೆಯನ್ನು ನಂತರ ಬೇರೆ ಬೇರೆ ದಿನಾಂಕಗಳಲ್ಲಿ ವಿಸ್ತರಿಸಲಾಗಿದೆ.

ಇದನ್ನೂ ಓದಿ : 6 ರಾಜ್ಯಗಳಲ್ಲಿ ನೂರಕ್ಕೂ ಅಧಿಕ ಸ್ಥಳಗಳಲ್ಲಿ ಎನ್‌ಐಎ ದಾಳಿ

ಇದನ್ನೂ ಓದಿ : ದಿ ಕೇರಳ ಸ್ಟೋರಿ ಸಿನಿಮಾ ಪ್ರದರ್ಶನ ನಿಷೇಧಿಸುವಂತೆ ಸುಪ್ರೀಂ ಕೋರ್ಟ್‌ನ್ನು ಕೇಳಿದ ಪಶ್ಚಿಮ ಬಂಗಾಳ ಸರಕಾರ

ಡಿ ಕೆ ಶಿವಕುಮಾರ್ ವಿರುದ್ಧ ಆದಾಯ ತೆರಿಗೆ ಇಲಾಖೆ 2017ರಲ್ಲಿ ದಾಳಿ ನಡೆಸಿತ್ತು. ಅದರ ಆಧಾರದ ಮೇಲೆ ಜಾರಿ ನಿರ್ದೇಶನಾಲಯ ಅವರ ವಿರುದ್ಧ ತನಿಖೆ ಆರಂಭಿಸಿತ್ತು. ಈಡಿ ತನಿಖೆಯ ನಂತರ, ಸಿಬಿಐ ಡಿ. ಕೆ ಶಿವಕುಮಾರ್‌ ಅವರ ವಿರುದ್ಧ ಎಫ್‌ಐಆರ್‌ ದಾಖಲಿಸಲು ರಾಜ್ಯ ಸರಕಾರದಿಂದ ಅನುಮತಿ ಕೋರಿತು. ಸೆಪ್ಟೆಂಬರ್‌ 25, 2019 ರಂದು ಅನುಮತಿ ದೊರಕಿದೆ.

ಸಿದ್ದರಾಮಯ್ಯ ಸಿಎಂ, ಡಿಕೆ ಶಿವಕುಮಾರ್‌ ಡಿಸಿಎಂ : ಯಾರಿಗೆಲ್ಲಾ ಸಚಿವ ಸ್ಥಾನ, ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌

ಬೆಂಗಳೂರು : ಕಾಂಗ್ರೆಸ್‌ ಪಕ್ಷ ಸ್ಪಷ್ಟ ಬಹುಮತದೊಂದಿಗೆ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah CM) ನಡುವೆ ಮುಖ್ಯಮಂತ್ರಿಗಾದಿಗಾಗಿ ತೀವ್ರ ಪೈಪೋಟಿ ನಡೆಯುತ್ತಿದೆ. ಆದರೆ ಕಾಂಗ್ರೆಸ್‌ ವೀಕ್ಷಕರು ಸಿದ್ದಪಡಿಸಿ ಕಾಂಗ್ರೆಸ್‌ ಹೈಕಮಾಂಡ್‌ಗೆ ತಲುಪಿರುವ ಪಟ್ಟಿ ಬಯಲಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಎರಡನೇ ಅವಧಿಗೆ ಕರ್ನಾಟಕದ ಮುಖ್ಯಮಂತ್ರಿಯಾಗುವುದು ಬಹುತೇಕ ಖಚಿತ. ಇನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಅವರು ಉಪಮುಖ್ಯಮಂತ್ರಿ ಯಾಗಲಿದ್ದಾರಂತೆ. ಇನ್ನು ಯಾವ ಶಾಸಕರು ಸಂಪುಟ ಸೇರುತ್ತಾರೆ ಅನ್ನುವ ಕುರಿತು ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ.

ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಹುದ್ದೆ ನೀಡಲಿದ್ದು, ಗೃಹ ಖಾತೆಯ ಜೊತೆಗೆ ಪವರ್‌ ಖಾತೆ ಕೂಡ ಡಿಕೆ ಶಿವಕುಮಾರ್‌ ಅವರ ಪಾಲಾಗಲಿದೆ. ಇನ್ನು ಕಾಂಗ್ರೆಸ್‌ ಹಿರಿಯ ನಾಯಕರಾದ ರಾಮಲಿಂಗ ರೆಡ್ಡಿ, ಟಿ.ಬಿ.ಜಯಚಂದ್ರ, ಆರ್.‌ ವಿ. ದೇಶಪಾಂಡೆ, ಸತೀಶ್‌ ಜಾರಕಿಹೊಳೆ, ಪ್ರಿಯಾಂಕ ಖರ್ಗೆ, ಎಂ.ಬಿ. ಪಾಟೀಲ್‌, ಈಶ್ವರ ಖಂಡ್ರೆ, ಎಸ್‌.ಎಸ್.‌ ಮಲ್ಲಿಕಾರ್ಜುನ್‌, ದಿನೇಶ್‌ ಗುಂಡೂರಾವ್‌, ಪರಮೇಶ್ವರ ನಾಯಕ್, ಕೆ.ಜೆ.ಚಾರ್ಜ್‌, ಲಕ್ಷ್ಮೀ ಹೆಬ್ಬಾಳ್ಕರ್‌, ಜಮೀರ್‌ ಅಹ್ಮದ್‌, ಸಂತೋಷ್‌ ಲಾಡ್‌, ಎಚ್.ಆರ್.‌ಗವಿಯಪ್ಪ, ವಿನಯ ಕುಲಕರ್ಣಿ, ಯು.ಟಿ.ಖಾದರ್‌, ಕೃಷ್ಣ ಬೈರೇಗೌಡ, ಕೆ.ರಾಘವೇಂದ್ರ, ಬಿ. ನಾಗೇಂದ್ರ, ಎಸ್.‌ ಮಧು ಬಂಗಾರಪ್ಪ, ಮಹಾಂತೇಶ್‌ ಶಿವಾನಂದ ಕೌಲಜಗಿ, ಡಾ.ಅಜಯ್‌ ಸಿಂಗ್‌, ರುದ್ರಪ್ಪ ಲಮಾಣಿ, ಬಸವರಾಜ್‌ ಎನ್.‌ ಶಿವಣ್ಣೂರ, ಕೆ.ಎನ್.‌ ರಾಜಣ್ಣ, ರೂಪಕಲಾ ಎಂ., ಶಾಮನೂರು ಶಿವಶಂಕರಪ್ಪ, ಜಗದೀಶ್‌ ಶೆಟ್ಟರ್‌, ಲಕ್ಷ್ಮಣ ಸವದಿ ಹೆಸರು ಸಂಭಾವ್ಯ ಸಚಿವರ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ.

ಈಗಾಗಲೇ ಹಲವರು ಶಾಸಕರು ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾದ್ರೆ ಸಿದ್ದರಾಮಯ್ಯ ಬೆಂಬಲಿಗ ಶಾಸಕರೇ ಸಚಿವ ಸಂಪುಟದಲ್ಲಿ ಅತೀ ಹೆಚ್ಚು ಮಂದಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಆದರೆ ಅಂತಿಮವಾಗಿ ಕಾಂಗ್ರೆಸ್‌ ಹೈಕಮಾಂಡ್‌ ಯಾರಿಗೆಲ್ಲಾ ಮಣೆ ಹಾಕಲಿದೆ ಅನ್ನೋ ಇನ್ನಷ್ಟೇ ನಿರ್ಧಾರವಾಗಬೇಕಾಗಿದೆ. ಗುರುವಾರ ರಾಜ್ಯದಲ್ಲಿ ಹೊಸ ಸರಕಾರ ಅಧಿಕಾರಕ್ಕೆ ಬರುವ ಸಾಧ್ಯತೆಯಿದೆ.

Illegal property case : Supreme Court granted interim stay on CBI inquiry against DK Shivakumar

Comments are closed.