ಭಾನುವಾರ, ಜೂನ್ 15, 2025
HomeCrimeಬಾಲಕಿಯ ಪ್ರೀತಿಗಾಗಿ 14 ವರ್ಷದ ಸಹಪಾಠಿಯನ್ನೇ ಕೊಂದ ಸ್ನೇಹಿತರು

ಬಾಲಕಿಯ ಪ್ರೀತಿಗಾಗಿ 14 ವರ್ಷದ ಸಹಪಾಠಿಯನ್ನೇ ಕೊಂದ ಸ್ನೇಹಿತರು

- Advertisement -

ಉತ್ತರಪ್ರದೇಶ : ( Schoolmates Kill) ಬಾಲಕಿಯೋರ್ವಳು ತಮ್ಮನ್ನು ಪ್ರೀತಿಸದೇ ತನ್ನ ಸ್ನೇಹಿತನನ್ನು ಪ್ರೀತಿಸಿದ್ದಾಳೆ ಅನ್ನೋ ಕಾರಣಕ್ಕೆ ಸಹಪಾಠಿಗಳೇ 14 ವರ್ಷದ ಬಾಲಕನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಬರೇಲಿಯಾ ಅಯೋನ್ಲಾ ಪ್ರದೇಶದ ಹಳ್ಳಿಯಲ್ಲಿ ನಡೆದಿದೆ. ಮೇ 15 ರಂದು ತನ್ನ ಸ್ನೇಹಿತರನ್ನು ಭೇಟಿಯಾಗಲು ಹೋದಾಗ ಬರೇಲಿಯ ಅಯೋನ್ಲಾ ಪ್ರದೇಶದ ಹಳ್ಳಿಯಲ್ಲಿ ಈ ದುರಂತ ಘಟನೆ ಸಂಭವಿಸಿದೆ. ಬಾಲಕ ಮನೆಗೆ ವಾಪಾಸಾಗದ ಹಿನ್ನೆಲೆಯಲ್ಲಿ ಮರುದಿನ ಬೆಳಗ್ಗೆ ಅರಣ್ಯ ಪ್ರದೇಶದಲ್ಲಿ ಶವಪತ್ತೆಯಾಗಿತ್ತು.

ಮೃತ ಬಾಲಕ ಹಾಗೂ ಆರೋಪಿಗಳಾದ 14 ಮತ್ತು 16 ವರ್ಷದ ಹುಡುಗರು ಕೂಡ ಸಹಪಾಠಿಗಳಾಗಿದ್ದು, ಮೃತ ಬಾಲಕ 13 ವರ್ಷದ ಬಾಲಕಿಯೊಂದಿಗೆ ಸ್ನೇಹವನ್ನು ಹೊಂದಿದ್ದನು. ಬಾಲಕಿ ಆರೋಪಿಗಳನ್ನು ಒಪ್ಪಲಿಲ್ಲ ಅನ್ನುವ ಕಾರಣಕ್ಕೆ ಈ ಕೊಲೆ (Schoolmates Kill) ಮಾಡಲಾಗಿದೆ ಅನ್ನೋದು ತನಿಖೆಯಿಂದ ಬಯಲಾಗಿದೆ. ಆರೋಪಿಗಳ ಪೈಕಿ ಓರ್ವ ಬಾಲಕ ಇತ್ತೀಚೆಗೆ 10 ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದ. ಶವಪತ್ತೆಯಾಗಿರುವ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಮರಣೋತ್ತರ ಪರೀಕ್ಷೆಯ ವರದಿಯು ಚೂಪಾದ ವಸ್ತುವಿನಿಂದ ಗಂಟು ಸೇರಿ ಹಲವು ಭಾಗಗಳಿಗೆ ಕ್ರೂರವಾಗಿ ಇರಿಯಲಾಗಿದೆ ಅನ್ನೋದು ತಿಳಿದು ಬಂದಿದೆ. ಘಟನೆಯ ನಂತರ, ಬಾಲಕನ ತಂದೆ ಮಗನ ಸ್ನೇಹಿತರ ವಿರುದ್ದ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ನಡೆಸಿದ ವೇಳೆಯಲ್ಲಿ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಹೆಚ್ಚುವರಿ ಎಸ್‌ಪಿ (ಗ್ರಾಮೀಣ) ರಾಜ್‌ಕುಮಾರ್ ಅಗರ್ವಾಲ್, ಹುಡುಗಿ ಮೂವರು ಹುಡುಗರ ಜೊತೆಗೆ ಸ್ನೇಹವನ್ನು ಹೊಂದಿದ್ದಳು. ಆದರೆ ಆದರೆ ಮೃತ ಬಾಲಕ ಅವಳೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದ, ಇದನ್ನು ಸಹಿಸದ ಇಬ್ಬರು ಆರೋಪಿಗಳು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಆರೋಪಿತ ಬಾಲಕರನ್ನು ಬಂಧಿಸಿರುವ ಪೊಲೀಸರು ಕೊಲೆಗೆ ಬಳಸಿರುವ ಆಯುಧ, ಚಾಕುವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸದ್ಯ ಇಬ್ಬರನ್ನೂ ಬಾಲಾಪರಾಧಿ ಗೃಹಕ್ಕೆ ಕಳುಹಿಸಿಕೊಟ್ಟಿದ್ದಾರೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ : ಖಾಸಗಿ ಬಸ್‌ಗೆ ಟ್ರಕ್‌ ಢಿಕ್ಕಿ : 4 ಸಾವು, 14 ಮಂದಿ ಗಾಯ

ಇದನ್ನೂ ಓದಿ : ಕುಡಿದ ಮತ್ತಲ್ಲಿ ಅಡ್ಡಾಡಿದ್ದಿ ಕಾರು ಚಲಾಯಿಸಿ ಅಪಘಾತ : ಮಹಿಳೆಯಿಂದ ಚಾಲಕನಿಗೆ ಚಪ್ಪಲಿ ಸೇವೆ

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular