Big Breaking : 2000 ರೂಪಾಯಿ ನೋಟ್‌ ಹಿಂಪಡೆದ ಆರ್‌ಬಿಐ

ನವದೆಹಲಿ : (Rs 2000 Currency Note) ಭಾರತೀಯ ರಿಸರ್ವ್‌ ಬ್ಯಾಂಕ್‌ 2000 ರೂಪಾಯಿ ಮುಖ ಬೆಲೆಯ ನೋಟ್‌ ನ್ನು ಹಿಂಪಡೆದಿದೆ. 2000 ರೂಪಾಯಿ ನೋಟಿನ ಚಲಾವಣೆ ಈ ಕ್ಷಣದಿಂದಲೇ ಸ್ಥಗಿತವಾಗಲಿದೆ. ಆದರೆ 2000 ರೂಪಾಯಿ ನೋಟು ಹೊಂದಿದ್ದವರು ಬ್ಯಾಂಕುಗಳಿಗೆ ತೆರಳಿ ಸೆಪ್ಟೆಂಬರ್ 30 2023ರ ಒಳಗಾಗಿ ನೋಟನ್ನು ಬದಲಾಯಿಸಿಕೊಳ್ಳಲು ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಆರ್‌ಬಿಐ ತಿಳಿಸಿದೆ.

2000 ರೂಪಾಯಿಯ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಧರಿಸಿದೆ. ಆದರೆ ಕರೆನ್ಸಿ ನೋಟುಗಳ ಚಲಾವಣೆ ಸೆಪ್ಟೆಂಬರ್ 30 ರವರೆಗೆ ಕಾನೂನುಬದ್ಧವಾಗಿ ಮುಂದುವರಿಯುತ್ತದೆ . ಸೆಪ್ಟೆಂಬರ್ 30, 2023 ರವರೆಗೆ 2,000 ರೂ ನೋಟುಗಳಿಗೆ ಠೇವಣಿ ಮತ್ತು/ಅಥವಾ ವಿನಿಮಯ ಸೌಲಭ್ಯವನ್ನು ಒದಗಿಸುವಂತೆ RBI ಬ್ಯಾಂಕ್‌ಗಳನ್ನು ಕೇಳಿದೆ.

ಆದರೆ ಬ್ಯಾಂಕುಗಳು ಯಾವುದೇ ಕಾರಣಕ್ಕೂ ಈ ನೋಟುಗಳನ್ನು ಚಲಾವಣೆ ಮಾಡುವಂತಿಲ್ಲ ಎಂದು ಸ್ಪಷ್ಟವಾಗಿ ಸುತ್ತೋಲೆಯಲ್ಲಿ ತಿಳಿಸಿದ. ಎರಡು ಸಾವಿರ ರೂಪಾಯಿಯ ನೋಟು ಹೊಂದಿದ್ದವರು ಆತಂಕ ಪಡುವ ಅಗತ್ಯವಿಲ್ಲ. ಇನ್ನು ಕಳೆದ ಒಂದು ವರ್ಷಗಳಿಗೂ ಅಧಿಕ ಕಾಲದಿಂದಲೂ ಎರಡು ಸಾವಿರ ರೂಪಾಯಿಯ ನೋಟು ಎಟಿಎಂ, ಬ್ಯಾಂಕ್‌ ಶಾಖೆಗಳಲ್ಲಿಯೂ ಲಭ್ಯವಾಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಈ ಹಿಂದೆಯೇ ಎರಡು ಸಾವಿರ ರೂಪಾಯಿಯ ನೋಟು ಬ್ಯಾನ್‌ ಆಗುತ್ತದೆ ಎಂಬ ಮಾತುಗಳು ಕೇಳಿಬಂದಿತ್ತು. ಆದರೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಈ ಕುರಿತು ಯಾವುದೇ ಯೋಚನೆಯೂ ಕೇಂದ್ರ ಸರಕಾರದ ಮುಂದಿಲ್ಲ ಎಂದು ತಿಳಿಸಿದ್ದರು.

ಈ ಹಿಂದೆ ದೇಶದಲ್ಲಿ ನೋಟು ಅಮಾನ್ಯೀಕರಣದ ನಂತರ ಎರಡು ಸಾವಿರ ಮುಖಬೆಲೆಯ ನೋಟುಗಳನ್ನು ಆರ್‌ಬಿಐ ಚಲಾವಣೆಗೆ ತಂದಿತ್ತು. ಸುಮಾರು ಆರು ವರ್ಷಗಳ ತರುವಾಯ ಆರ್‌ಬಿಐ ಎರಡು ಸಾವಿರ ಮುಖ ಬೆಲೆಯ ನೋಟುಗಳ ಚಲಾವಣೆಯನ್ನು ರದ್ದು ಮಾಡಿದೆ. ಸಪ್ಟೆಂಬರ್‌ ವರೆಗೂ ನೋಟುಗಳು ಚಲಾವಣೆಯಲ್ಲಿ ಇರಲಿದ್ದು, ನಂತರದಲ್ಲಿ ಸಂಪೂರ್ಣವಾಗಿ ನೋಟುಗಳ ಚಲಾವಣೆ ರದ್ದಾಗಲಿದೆ.

ಇದನ್ನೂ ಓದಿ : Pradhan Mantri Vaya Vandana Yojana : ಒಮ್ಮೆ ಹಣ ಹೂಡಿಕೆ ಮಾಡಿ, ಪ್ರತಿ ತಿಂಗಳು 10,000 ರೂ. ಪಡೆಯಿರಿ

ಇದನ್ನೂ ಓದಿ : Drinik Virus : ಬ್ಯಾಂಕ್‌ ಗ್ರಾಹಕರೇ ಎಚ್ಚರ! ಇದು ನಿಮ್ಮ ಬ್ಯಾಂಕಿಂಗ್‌ ಮಾಹಿತಿಯನ್ನು ಕದಿಯಬಹುದು

RBI To Withdraw Rs 2000 Currency Note

Comments are closed.