ಬೆಂಗಳೂರು : ಡೆಡ್ಲಿ ಕೊರೊನಾ ಮಹಾಮಾರಿಯ ಆರ್ಭಟ ಸಿಲಿಕಾನ್ ಸಿಟಿಯಲ್ಲಿ ಹೆಚ್ಚಳವಾಗಿದ್ದು, ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರಕಾರ ಲಾಕ್ ಡೌನ್, ಸೀಲ್ ಡೌನ್ ಅಸ್ತ್ರ ಪ್ರಯೋಗಕ್ಕೆ ಮುಂದಾಗಿದೆ. ಬೆಂಗಳೂರಿನ 4 ಕಡೆ ಲಾಕ್ ಡೌನ್ ಹಾಗೂ 5 ಕಡೆಗಳಲ್ಲಿ ಸೀಲ್ ಡೌನ್ ಆದೇಶವನ್ನು ಹೇರಿಕೆ ಮಾಡಿದೆ.

ಕೊರೊನಾ ವೈರಸ್ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಿಬಿಎಂಪಿ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಕೊರೊನಾ ಸೋಂಕು ಹರಡುತ್ತಿರುವ ಚಿಕ್ಕಪೇಟೆ, ಕೆ.ಆರ್.ಮಾರ್ಕೆಟ್, ಚಾಮರಾಜಪೇಟೆ, ವಿದ್ಯಾರಣ್ಯಪುರ, ಕಲಾಸಿಪಾಳ್ಯ ವಾರ್ಡ್ ಗಳನ್ನು ಲಾಕ್ ಡೌನ್ ಆದೇಶವನ್ನು ಜಾರಿ ಮಾಡಲಾಗುತ್ತಿದೆ. ಇಂದು ಸಂಜೆಯಿಂದಲೇ ಆದೇಶ ಜಾರಿಗೆ ಬರುತ್ತಿದ್ದು, 14 ದಿನಗಳ ಕಾಲ ಈ ಆದೇಶ ಜಾರಿಯಲ್ಲಿರುತ್ತದೆ ಎಂದು ಕಂದಾಯ ಸಚಿವ ಅಶೋಕ್ ತಿಳಿಸಿದ್ದಾರೆ.

ಇನ್ನು ಸೋಂಕು ಸಮುದಾಯಕ್ಕೆ ಹರಡುವ ಭೀತಿಯ ಹಿನ್ನೆಲೆಯಲ್ಲಿ ಬೆಂಗಳೂರಿನ 5 ಕಡೆಗಳಲ್ಲಿ ಸೀಲ್ ಡೌನ್ ಆದೇಶ ಜಾರಿ ಮಾಡಲಾಗುತ್ತಿದೆ. ಸಿದ್ದಾಪುರ, ವಿವಿಪುಂ, ಧರ್ಮರಾಯಸ್ವಾಮಿ, ಚಾಮರಾಜ ಪೇಟೆ ಗಳಲ್ಲಿ 10 ದಿನಗಳ ಕಾಲ ಸೀಲ್ ಡೌನ್ ಆದೇಶವನ್ನು ಜಾರಿ ಮಾಡಲಾಗಿದೆ. ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರತೀ ವಾರ್ಡಿನಲ್ಲಿಯೂ ಫೀವರ್ ಕ್ಲೀನಿಕ್ ತೆರೆಯಲು ರಾಜ್ಯ ಸರಕಾರ ಸೂಚನೆಯನ್ನು ನೀಡಿದೆ,
ಇನ್ನು ಸೋಂಕಿತ ವಾಸಿಸುತ್ತಿರುವ ರಸ್ತೆಯನ್ನು ಸಂಪೂರ್ಣವಾಗಿ ಸೀಲ್ ಡೌನ್ ಮಾಡಲಾಗುತ್ತದೆ. ಈ ಆದೇಶ ರಾಜ್ಯದ ಪ್ರತೀ ಜಿಲ್ಲೆಗೂ ಅನ್ವಯವಾಗಲಿದೆ ಎಂದು ಅಶೋಕ್ ತಿಳಿಸಿದ್ದಾರೆ.