ಡೊಮಿನಿಕಾ : India tour of West Indies : ಆತಿಥೇಯ ವೆಸ್ಟ್ ಇಂಡೀಸ್ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯಕ್ಕಾಗಿ ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾ ಆಟಗಾರರು ಡೊಮಿನಿಕಾ ತಲುಪಿದ್ದಾರೆ. ಬಾರ್ಬೆಡೋಸ್ನಲ್ಲಿ ಒಂದು ವಾರದ ಅಭ್ಯಾಸ ಶಿಬಿರದ ನಂತರ ಅಭ್ಯಾಸ ಪಂದ್ಯವಾಡಿದ ಟೀಮ್ ಇಂಡಿಯಾ, ಶನಿವಾರ ಡೊಮಿನಿಕಾ ತಲುಪಿದೆ.
ಹೊಸ ಜರ್ಸಿ ಸ್ಪಾನ್ಸರ್ ಆಗಿರುವ ಅಡಿಡಾಸ್, ಟೀಮ್ ಇಂಡಿಯಾ ಆಟಗಾರರಿಗೆ ಕಪ್ಪು ಬಣ್ಣದ ಟ್ರಾವೆಲ್ ಜರ್ಸಿಯನ್ನು ಸಿದ್ಧ ಪಡಿಸಿದ್ದು, ಬ್ಲ್ಯಾಕ್ ಡ್ರೆಸ್ನಲ್ಲಿ ಆಟಗಾರರು ಮಿಂಚಿದ್ದಾರೆ. ಹೊಸ ಜರ್ಸಿಯಲ್ಲಿ ಮಿಂಚುತ್ತಿರುವ ಟೀಮ್ ಇಂಡಿಯಾ ಆಟಗಾರರ ಚಿತ್ರಗಳನ್ನು ಭಾರತ ಕ್ರಿಕೆಟ್ ತಂಡದ ಅಧಿಕೃತ ಇನ್ಸ್ಟಾಗ್ರಾಂ ಖಾತೆಯಲ್ಲಿ ಪ್ರಕಟಿಸಲಾಗಿದೆ.
ಕೆರಿಬಿಯನ್ ನಾಡಿನಲ್ಲಿ (India tour of West Indies) ಟೀಮ್ ಇಂಡಿಯಾ 2 ಟೆಸ್ಟ್, 3 ಏಕದಿನ ಹಾಗೂ 5 ಟಿ20 ಪಂದ್ಯಗಳ ಸರಣಿಯನ್ನಾಡಲಿದ್ದು, ಪ್ರಥಮ ಟೆಸ್ಟ್ ಪಂದ್ಯ ಜುಲೈ 12ರಂದು ಡೊಮಿನಿಕಾದಲ್ಲಿರುವ ವಿಂಡ್ಸರ್ ಪಾರ್ಕ್ ಮೈದಾನದಲ್ಲಿ ಆರಂಭವಾಗಲಿದೆ. ಪ್ರಥಮ ಟೆಸ್ಟ್ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಜೊತೆ ಯುವ ಎಡಗೈ ಬ್ಯಾಟ್ಸ್”ಮನ್ ಯಶಸ್ವಿ ಜೈಸ್ವಾಲ್ ಭಾರತ ತಂಡದ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಹೀಗಾಗಿ ಮತ್ತೊಬ್ಬ ಓಪನರ್ ಶುಭಮನ್ ಗಿಲ್ 3ನೇ ಕ್ರಮಾಂಕದಲ್ಲಿ ಆಡಲಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡ:
ರೋಹಿತ್ ಶರ್ಮಾ (ನಾಯಕ), ಅಜಿಂಕ್ಯ ರಹಾನೆ (ಉಪನಾಯಕ), ಶುಭಮನ್ ಗಿಲ್, ರುತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ಕೆ.ಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜ, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಮೊಹಮ್ಮದ್ ಸಿರಾಜ್, ಮುಕೇಶ್ ಕುಮಾರ್, ಜೈದೇವ್ ಉನಾದ್ಕಟ್, ನವದೀಪ್ ಸೈನಿ.
ಭಾರತದ ವೆಸ್ಟ್ ಇಂಡೀಸ್ ಪ್ರವಾಸದ ವೇಳಾಪಟ್ಟಿ (India tour of West Indies 2023 Fixtures)
ಟೆಸ್ಟ್ ಸರಣಿ:
ಪ್ರಥಮ ಟೆಸ್ಟ್: ಜುಲೈ12-16 (ವಿಂಡ್ಸರ್ ಪಾರ್ಕ್, ಡೊಮಿನಿಕಾ)
ದ್ವಿತೀಯ ಟೆಸ್ಟ್: ಜುಲೈ 20-24 (ಕ್ವೀನ್ಸ್ ಪಾರ್ಕ್ ಓವಲ್, ಟ್ರಿನಿಡಾಡ್)
India tour of West Indies: Team India reached Dominica for the first test match, players shone in black dress