Haryana road accident : ಕ್ರೂಸರ್‌ ಬಸ್‌ ಢಿಕ್ಕಿ 8 ಮಂದಿ ಸಾವು, 12 ಮಂದಿಗೆ ಗಾಯ

ಹರಿಯಾಣ : Haryana road accident : ಕ್ರೂಸರ್‌ವೊಂದು ಬಸ್‌ಗೆ ಢಿಕ್ಕಿಯಾದ ಪರಿಣಾಮವಾಗಿ 8 ಮಂದಿ ಸಾವು, 12 ಮಂದಿ ಗಾಯಗೊಂಡಿರುವ ಆಘಾತಕಾರಿ ಘಟನೆಯೊಂದು ನಡೆದಿದೆ. ಅಪಘಾತಕ್ಕೆ ಒಳಗಾಗದವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಈ ಘಟನೆಯು ಹರಿಯಾಣದ ಜಿಂದ್‌ನ ಭಿವಾನಿ ರಸ್ತೆಯ ಬಿಬಿಪುರ ಗ್ರಾಮದ ಬಳಿ ಬಸ್ ಮತ್ತು ಕ್ರೂಸರ್ ನಡುವೆ ಡಿಕ್ಕಿ ಸಂಭವಿಸಿದ್ದು ದೊಡ್ಡ ರಸ್ತೆ ಅಪಘಾತ ನಡೆದಿದೆ. ಈ ಅಪಘಾತದಲ್ಲಿ ಎಂಟು ಮಂದಿ ಸಾವನ್ನಪ್ಪಿದ್ದು,12 ಜನರು ಗಾಯಗೊಂಡಿದ್ದಾರೆ. ಬಸ್ ಮತ್ತು ಕ್ರೂಸರ್ ಮುಖಾಮುಖಿ ಡಿಕ್ಕಿ ಹೊಡೆದು ಎಂಟು ಜೀವಗಳನ್ನು ಕಳೆದುಕೊಂಡ ಘಟನೆ ನಡೆದಿದೆ. ಗಾಯಾಳುಗಳನ್ನು ತಕ್ಷಣ ಜಿಂದ್ ಜನರಲ್ ಆಸ್ಪತ್ರೆಗೆ ವೈದ್ಯಕೀಯ ಚಿಕಿತ್ಸೆಗಾಗಿ ರವಾನಿಸಲಾಯಿತು.

ಇದನ್ನೂ ಓದಿ : Udupi Crime : ಅಕ್ರಮ ಅಸ್ತಿ ಪ್ರಕರಣ: ಉಡುಪಿ ಸರಕಾರಿ ಅಧಿಕಾರಿಗೆ 1ವರ್ಷ ಶಿಕ್ಷೆ ಹಾಗೂ ರೂ 1ಲಕ್ಷ ದಂಡ

ಇದನ್ನೂ ಓದಿ : Acharya Shri 108 Kamkumarnandi Maharaj : ಕಣ್ಮರೆಯಾಗಿದ್ದ ಜೈನಮುನಿ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರು ಬರ್ಬರ ಕೊಲೆ

ಈ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟವರ ದೇಹವನ್ನು ಸಂಬಂಧಪಟ್ಟವರಿಗೆ ಹಸ್ತಾಂತರಿಸಲಾಯಿತು. ಗಾಯಗೊಂಡವರಿಗೆ ಚಿಕಿತ್ಸೆ ನಡೆಯುತ್ತಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಈ ಅಪಘಾತಕ್ಕೆ ಸಂಬಂಧಪಟ್ಟಂತೆ ಪ್ರಕರಣ ದಾಖಲಿಸಲಾಗಿದ ಎಂದು ಹೇಳಿದರು.

Haryana road accident: 8 killed, 12 injured in cruiser bus collision

Comments are closed.