ಬೆಂಗಳೂರು: ಇಂಗ್ಲೆಂಡ್’ನ ದಿಗ್ಗಜ ವೇಗದ ಬೌಲರ್ ಸ್ಟುವರ್ಟ್ ಬ್ರಾಡ್ (James Anderson – Stuart Broad) ಸೋಮವಾರ ಅಂತ್ಯಗೊಂಡ ಆಶಸ್ ಟೆಸ್ಟ್ ಸರಣಿಯ 5ನೇ ಟೆಸ್ಟ್ ಪಂದ್ಯದ ನಂತರ ಅಂತರಾಷ್ಟ್ರೀಯ ಕ್ರಿಕೆಟ್’ಗೆ ವಿದಾಯ ಹೇಳಿದ್ದಾರೆ. ಆಸ್ಟ್ರೇಲಿಯಾದ ಕೊನೆಯ ವಿಕೆಟ್ ಪಡೆದು ಇಂಗ್ಲೆಂಡ್’ನ 49 ರನ್’ಗಳ ಗೆಲುವು ತಂದುಕೊಟ್ಟಿರುವ ಸ್ಟುವರ್ಟ್ ಬ್ರಾಡ್ ವಿದಾಯದ ಪಂದ್ಯವನ್ನು ಸ್ಮರಣೀಯವಾಗಿಸಿಕೊಂಡಿದ್ದಾರೆ. ಸ್ಟುವರ್ಟ್ ಬ್ರಾಡ್ ವಿದಾಯದೊಂದಿಗೆ ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಡೆಡ್ಲಿ ಬೌಲಿಂಗ್ ಕಾಂಬಿನೇಷನ್ ಒಂದರ ಯುಗಾಂತ್ಯವಾಗಿದೆ.
ಇಂಗ್ಲೆಂಡ್’ನ ವೇಗದ ಬೌಲರ್’ಗಳಾದ ಜೇಮ್ಸ್ ಆ್ಯಂಡರ್ಸನ್ (James Anderson) ಮತ್ತು ಸ್ಟುವರ್ಟ್ ಬ್ರಾಡ್ (Stuart Broad) ಟೆಸ್ಟ್ ಕ್ರಿಕೆಟ್’ನ ಡೆಡ್ಲಿ ಬೌಲಿಂಗ್ ಕಾಂಬಿನೇ|ನ್ ಎಂದೇ ಫೇಮಸ್. ಟೆಸ್ಟ್ ಕ್ರಿಕೆಟ್’ನಲ್ಲಿ ಬೌಲಿಂಗ್ ಜೊತೆಯಾಟದಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ವಿಶ್ವದಾಖಲೆ ಆ್ಯಂಡರ್ಸನ್ ಮತ್ತು ಬ್ರಾಡ್ ಹೆಸರಲ್ಲಿದೆ. ಈ ಜೋಡಿ ಜೊತೆಯಾಗಿ ಟೆಸ್ಟ್ ಕ್ರಿಕೆಟ್’ನಲ್ಲಿ ಒಟ್ಟು 1037 ವಿಕೆಟ್ ಪಡೆದಿದೆ. ಬೌಲಿಂಗ್ ಜೊತೆಯಾಟದಲ್ಲಿ 2ನೇ ಅತೀ ಹೆಚ್ಚು ವಿಕೆಟ್ ಪಡೆದ ದಾಖಲೆ ಆಸ್ಟ್ರೇಲಿಯಾದ ವೇಗಿ ಗ್ಲೆನ್ ಮೆಗ್ರಾತ್ ಮತ್ತು ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ಹೆಸರಲ್ಲಿದೆ. ಈ ಜೋಡಿ ಜೊತೆಯಾಗಿ 1001 ವಿಕೆಟ್’ಗಳನ್ನುಪಡೆದಿದೆ.
ಟೆಸ್ಟ್ ಕ್ರಿಕೆಟ್’ನ ಯಶಸ್ವಿ ಬೌಲಿಂಗ್ ಕಾಂಬಿನೇಷನ್ (Most successful bowling combination)
- 1039 ವಿಕೆಟ್: ಆ್ಯಂಡರ್ಸನ್ + ಸ್ಟುವರ್ಟ್ ಬ್ರಾಡ್
- 1001 ವಿಕೆಟ್: ಗ್ಲೆನ್ ಮೆಗ್ರಾತ್ + ಶೇನ್ ವಾರ್ನ್
- 895 ವಿಕೆಟ್: ಮುತ್ತಯ್ಯ ಮುರಳೀಧರನ್ + ಚಮಿಂಡಾ ವಾಸ್
- 762 ವಿಕೆಟ್: ಕರ್ಟ್ಲಿ ಆಂಬ್ರೋಸ್+ ಕೋರ್ಟ್ನಿ ವಾಲ್ಶ್
- 612 ವಿಕೆಟ್: ಮಿಚೆಲ್ ಸ್ಟಾರ್ಕ್+ ನೇಥನ್ ಲಯಾನ್
ಇದನ್ನೂ ಓದಿ : Dhoni car craze : ರಾಂಚಿ ಬೀದಿಯಲ್ಲಿ ಬಿಂದಾಸ್ ಆಗಿ 1973 Pontiac Trans Am SD-455 ಕಾರು ಓಡಿಸಿದ ಧೋನಿ
ಇದನ್ನೂ ಓದಿ : Jasprit Bumrah : ಜಸ್ಪ್ರೀತ್ ಬುಮ್ರಾ ಕಂಪ್ಲೀಟ್ ಫಿಟ್, ಆಲೂರಿನಲ್ಲಿ ಪ್ರಾಕ್ಟೀಸ್ ಮ್ಯಾಚ್ ಆಡಿದ ಟೀಮ್ ಇಂಡಿಯಾ ವೇಗಿ
ಇಂಗ್ಲೆಂಡ್’ನ ಮಾಜಿ ಕ್ರಿಕೆಟಿಗ, ಹಾಲಿ ಮ್ಯಾಚ್ ರೆಫರಿ ಕ್ರಿಸ್ ಬ್ರಾಡ್ ಅವರ ಪುತ್ರನಾಗಿರುವ ಸ್ವುವರ್ಟ್ ಬ್ರಾಡ್, 2006ರಲ್ಲಿ ಚೊಚ್ಚಲ ಏಕದಿನ ಪಂದ್ಯವಾಡುವ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದರ. 2007ರಲ್ಲಿ ಟೆಸ್ಟ್ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದ ಬಲಗೈ ವೇಗಿ ಸ್ಟುವರ್ಟ್ ಬ್ರಾಡ್, ಕಳೆದ 16 ವರ್ಷಗಳಲ್ಲಿ 167 ಟೆಸ್ಟ್ ಪಂದ್ಯಗಳನ್ನಾಡಿದ್ದು, 604 ವಿಕೆಟ್ ಪಡೆದಿದ್ದಾರೆ. ಇನ್ನಿಂಗ್ಸ್ ಒಂದರಲ್ಲಿ 15 ರನ್ನಿಗೆ 8 ವಿಕೆಟ್ ಪಡೆದಿರುವುದು ಸ್ಟುವರ್ಟ್ ಬ್ರಾಡ್ ಅವರ ಬೆಸ್ಟ್ ಬೌಲಿಂಗ್ ಪರ್ಫಾಮೆನ್ಸ್. ಇಂಗ್ಲೆಂಡ್ ಪರ 121 ಏಕದಿನ ಪಂದ್ಯಗಳನ್ನಾಡಿರುವ ಬ್ರಾಡ್, 178 ವಿಕೆಟ್ ಕಬಳಿಸಿದ್ದಾರೆ. 56 ಟಿ20 ಪಂದ್ಯಗಳಿಂದ 65 ವಿಕೆಟ್ ಸಹಿತ ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ 847 ವಿಕೆಟ್ ಪಡೆದಿದ್ದಾರೆ.
James Anderson – Stuart Broad: Test Cricket’s Deadly Bowling Combination, Anderson-Broad “1039” Top