Nandini Milk Price : ರಾಜ್ಯದಲ್ಲಿ ಇಂದಿನಿಂದ ನಂದಿನಿ ಹಾಲು ಮೊಸರು ದುಬಾರಿ : ಎಷ್ಟೆಷ್ಟು ಏರಿಕೆಯಾಗಿದೆ ಗೊತ್ತಾ ?

ಬೆಂಗಳೂರು : ಪ್ರತಿ ತಿಂಗಳ ಆರಂಭದಲ್ಲಿ ವಾಣಿಜ್ಯ ಕ್ಷೇತ್ರದಲ್ಲಿ ಹಲವಾರು ಬದಲಾವಣೆಗಳು (Nandini Milk Price) ಆಗುತ್ತದೆ. ಇಂದು ಬೆಳಗ್ಗೆಯಿಂದಲೇ ನಂದಿನಿ ಹಾಲಿನ ದರ ಪ್ರತಿ ಲೀಟರ್‌ಗೆ 3 ರೂಪಾಯಿ ಏರಿಕೆ ಕಂಡಿದೆ. ಕೇವಲ ಹಾಲಿನ ದರ ಮಾತ್ರವಲ್ಲದೇ ಮೊಸರಿನ ಬೆಲೆ ಕೂಡ ಏರಿಕೆ ಕಂಡಿದೆ.

ಸಾಮಾನ್ಯವಾಗಿ ಜನರು ಅರ್ಧ ಲೀಟರ್‌ ಹಾಲನ್ನು ಖರೀದಿ ಮಾಡುವುದರಿಂದ ಅರ್ಧ ಲೀಟರ್‌ಗೆ 1.50 ಪೈಸೆಯಷ್ಟು ರೂಪಾಯಿ ಹೆಚ್ಚಳವಾಗಿದೆ. ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳಿ ನಂದಿನ ಹಾಲು ಮತ್ತು ಮೊಸರಿನ ದರವನ್ನು ಇಂದಿನಿಂದ ಹೆಚ್ಚಿಸಲಾಗಿದೆ. ಈ ದರ ಹೆಚ್ಚಳದ ಮೊತ್ತವನ್ನು ರೈತರಿಗೆ ವರ್ಗಾವಣೆ ಮಾಡಲಾಗುವುದು ಎಂದು ಹೇಳಲಾಗಿದೆ. ಹಾಲು ಉತ್ಪಾದನೆ ಮತ್ತು ಹಾಲು ಸಂಸ್ಕರಣಾ ವೆಚ್ಚ ಹೆಚ್ಚಾಗುತ್ತಿರುವುದರಿಂದ ದರ ಏರಿಕೆಯಾಗಿದೆ ಎಂದು ಕೆಎಂಎಫ್‌ ತಿಳಿಸಿದೆ. ಅಷ್ಟೇ ಅಲ್ಲದೇ ರಾಜ್ಯದಲ್ಲಿ ಹೈನುಗಾರಿಕೆಗೆ ಪ್ರೋತ್ಸಾಹಿಸುವ ಉದ್ದೇಶದಿಂದ ಹಾಲಿನ ದರ ಏರಿಕೆ ಮಾಡಲಾಗಿದೆ.

ವಿವಿಧ ನಂದಿನಿ ಹಾಲಿನ ದರದ ವಿವರ :

ಹಾಲಿನ ಹೆಸರು ಹಿಂದಿನ ದರ ಈಗೀನ ದರ

  • ನೀಲಿ ಪ್ಯಾಕೇಟ್‌ನ ಟೋನ್ಡ್‌ ಹಾಲು 39 ರೂ. 42 ರೂ.
  • ಹೋಮೀಜಿನೈಸ್ಡ್‌ ಟೋನ್ಡ್‌ ಹಾಲು 40 ರೂ. 43 ರೂ.
  • ಹಸಿರು ಪ್ಯಾಕೇಟ್‌ ಹಾಲು 43 ರೂ. 46 ರೂ.
  • ಶುಭಂ ಹಾಲು 45 ರೂ. 48 ರೂ.
  • ಮೊಸರು (ಒಂದು ಕೆಜಿ) 45 ರೂ. 48 ರೂ.
  • ಮಜ್ಜಿಗೆ 8 ರೂ. 10 ರೂ.

ಇದನ್ನೂ ಓದಿ : Milk – Bus fare increase : ಗ್ರಾಹಕರಿಗೆ ಬರೆ : ನಾಳೆಯಿಂದ ಹಾಲು, ಬಸ್ ದರ ಏರಿಕೆ

ಇದನ್ನೂ ಓದಿ : KMF President Bheema Naik : ತಿರುಪತಿ ಲಡ್ಡಿಗಿಲ್ಲ ನಂದಿನಿ ತುಪ್ಪ : ಬಿಜೆಪಿ ಅವಧಿಯಲ್ಲೇ ಸ್ಥಗಿತ : ಕೆಎಂಎಫ್‌ ಅಧ್ಯಕ್ಷ ಭೀಮಾ ನಾಯ್ಕ್‌

ಕಳೆದ ವರ್ಷ ಪಶುಗಳಲ್ಲಿ ಚರ್ಮ ಗಂಟು ರೋಗ ಕಂಡು ಬಂದಿದರಿಂದ ರೈತರು ಹೈನುಗಾರಿಕೆಯಿಂದ ಕೈ ಬಿಟ್ಟಿದ್ದರು. ಇದರಿಂದ ಒಕ್ಕೂಟದಲ್ಲಿ ಹಾಲಿನ ಸಂಗ್ರಹ ಕಡಿಮೆಯಾಗಿತ್ತು. ಪ್ರತಿದಿನ 10 ಲಕ್ಷ ಲೀಟರ್‌ ಹಾಲು ಸಂಗ್ರಹ ಕಡಿಮೆಯಾಗಿದೆ. ದರ ಹೆಚ್ಚಿಸುವ ಮೂಲಕ ಹೈನುಗಾರರಿಗೆ ಉತ್ತೇಜನ ನೀಡಲು ಉದ್ದೇಶಿಸಲಾಗಿದೆ ಎಂದು ಕೆಎಂಎಫ್‌ ನೀಡಿದ್ದಾರೆ.

Nandini Milk Price: Nandini Milk Yoghurt is expensive in the state from today: Do you know how much it has increased?

Comments are closed.