Soujanya case : ಸೌಜನ್ಯ ಪ್ರಕರಣಕ್ಕೆ “ಭೀಮಬಲ”: ಧರ್ಮಸ್ಥಳಕ್ಕೆ‌ ಹೋಗಲ್ಲ ಎಂದ ದುನಿಯಾ ವಿಜಿ

ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣ (Soujanya case) ಮತ್ತೆ ಮರುಜೀವ ಪಡೆದುಕೊಳ್ಳುತ್ತಿದೆ. ‌ನೈಜ ಆರೋಪಿ ಪತ್ತೆಗಾಗಿ ಮರುತನಿಖೆಗೆ ಆಗ್ರಹ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಧರ್ಮಸ್ಥಳದ ಹೆಗ್ಗಡೆ ಕುಟುಂಬದ ವಿರುದ್ಧವೂ ಆರೋಪ ಕೇಳಿಬರಲಾರಂಭಿಸಿದೆ. ಈ ಮಧ್ಯೆ ಸ್ಯಾಂಡಲ್ ವುಡ್ ಸಲಗ ದುನಿಯಾ ವಿಜಿ ಪ್ರಕರಣದ ಕುರಿತು ಮೌನಮುರಿದಿದ್ದು ಅಚ್ಚರಿಯ ಪ್ರತಿಜ್ಞೆ ಮಾಡಿದ್ದಾರೆ.

ಹೌದು ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ತನಿಖೆ,ನ್ಯಾಯಾಲಯದ ತೀರ್ಪಿನ ಬಳಿಕ ಈಗ ಮತ್ತೆ ಸದ್ದು ಮಾಡುತ್ತಿದೆ. ಆರೋಪಿ ಸಂತೋಷ್ ರಾವ್ ನಿರಪರಾಧಿ ಎಂದು ಬಿಡುಗಡೆಯಾಗ್ತಿದ್ದಂತೆ ನೈಜ ಆರೋಪಿ ಬಂಧನಕ್ಕೆ ಒತ್ತಡ ಹೆಚ್ಚಿದೆ. ಈ ಮಧ್ಯೆ ಪ್ರಕರಣದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಕುಟುಂಬದ ಹೆಸರು ಕೇಳಿಬರಲಾರಂಭಿಸಿದ್ದು, ನೈಜ ಆರೋಪಿಗಳನ್ನು ರಕ್ಷಿಸಲಾಗುತ್ತಿದೆ ಎಂಬ ಆರೋಪ‌ಕೇಳಿಬಂದಿದೆ. ಅಲ್ಲದೇ ಧರ್ಮಸ್ಥಳದ ಬಗ್ಗೆಯೂ ಅವಹೇಳನಕಾರಿ ಪ್ರಚಾರ ನಡೆದಿದೆ ಎಂಬ ನೋವು ಭಕ್ತವಲಯದಿಂದ ಕೇಳಿಬರುತ್ತಿದೆ.

ಇವೆಲ್ಲದರ ಮಧ್ಯೆ ಈಗ ಸೌಜನ್ಯ ಪ್ರಕರಣದ‌ಬಗ್ಗೆ ಸ್ಯಾಂಡಲ್ ವುಡ್ ಸಲಗ ದುನಿಯಾ ವಿಜಯ್ ಮೌನ ಮುರಿದಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರೋ ದುನಿಯಾ ವಿಜಿ, ಪ್ರತಿ ವರ್ಷ ಧರ್ಮಸ್ಥಳದ ಮಂಜುನಾಥಸ್ವಾಮಿ ದರ್ಶನ ಪಡೆಯೋದು ವಾಡಿಕೆಯಾಗಿತ್ತು. ಆದರೆ ಸೌಜನ್ಯ ಪ್ರಕರಣದ ಇಂದಿನ ಬೆಳವಣಿಗೆ ನೋಡಿ ಸೌಜನ್ಯ ಹಾಗೂ ಕುಟುಂಬಸ್ಥರಿಗೆ ನ್ಯಾಯ ಸಿಗುವರೆಗೂ ಮಂಜುನಾಥನ ದರ್ಶನ ಮಾಡಕೂಡದು ಅನ್ನಿಸುತ್ತಿದೆ ಎಂದು ಬರೆದಿದ್ದಾರೆ.

ಮಾತ್ರವಲ್ಲದೇ ಸತ್ಯ ಎಂಬುದು ಸೂರ್ಯನ ಬೆಳಕಿದ್ದಂತೆ ಯಾರು ಹೆಚ್ಚು ಸಮಯ ಮರೆಮಾಚಲಾಗದು- ಬುದ್ಧ ಎನ್ನುವ ಮೂಲಕ ಸೌಜನ್ಯ ಪ್ರಕರಣಕ್ಕೆ ತಮ್ಮ ಬೆಂಬಲ ಸೂಚಿಸಿದ್ದಾರೆ. ಜಸ್ಟಿಸ್ ಫಾರ್ ಸೌಜನ್ಯ ಎಂಬುದರ ಜೊತೆ ಸೌಜನ್ಯ ಹಾಗೂ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಮಿ ಪೋಟೋ ಕೂಡ ಶೇರ್ ಮಾಡಿದ್ದಾರೆ. ದುನಿಯಾ ವಿಜಯ್ ಈ ಟ್ವೀಟ್ ಸ್ಯಾಂಡಲ್ ವುಡ್ ನಲ್ಲಿ ತೀವ್ರ ಸಂಚಲನ ಮೂಡಿಸಿದೆ. ಇದುವರೆಗೂ ಸ್ಯಾಂಡಲ್ ವುಡ್ ನಟರು ನೆಲ ಜಲದ ವಿಚಾರದಲ್ಲಿ ಹೋರಾಟಗಳನ್ನು ಬೆಂಬಲಿಸಿದ್ದರು.

ಇದನ್ನೂ ಓದಿ : JAILER Kaavaalaa : ತಮಿಳಿನ ಹಾಡಿಗೆ ಕನ್ನಡತಿಯರ ಸಖತ್ ಸ್ಪೆಪ್ : ನು ಕಾವಾಲಯ್ಯ ಎಂದ ನಟಿಮಣಿಯರು ವಿಡಿಯೋ ವೈರಲ್

ಆದರೆ ಕೊಲೆ ಅತ್ಯಾಚಾರದಂತಹ ಪ್ರಕರಣಗಳಲ್ಲಿ ಪ್ರತಿಕ್ರಿಯೆ ನೀಡಿದ್ದು, ಹೋರಾಟಗಳಿಗೆ ಬೆಂಬಲ ನೀಡಿದ್ದು ವಿರಳ. ಆದರೆ ಈಗ ದುನಿಯಾ ವಿಜಯ್ ಬಹಿರಂಗವಾಗಿ ಸೌಜನ್ಯ ಪೋಷಕರ ಬೆಂಬಲಕ್ಕೆ ನಿಲ್ಲುವ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇದುವರೆಗೂ ನಟ ಅಹಿಂಸಾ ಚೇತನ್ ಮಾತ್ರ ಇಂತಹ ಹೋರಾಟಗಳಿಗೆ ಕೈ ಜೋಡಿಸಿದ್ದರು. ಈಗ ದುನಿಯಾ ಸೌಜನ್ಯ ಕುಟುಂಬಕ್ಕೆ ಭೀಮಬಲ ನೀಡಿದ್ದು, ಈ ಸಂಗತಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

Soujanya case : “Bheemabala” for Soujanya case: Duniyaviji says not to go to Dharmasthala

Comments are closed.