ತಿರುವನಂತಪುರಂ: ಕೇರಳ (Keral) ರಾಜ್ಯದಲ್ಲೀಗ ನಿಫಾ ವೈರಸ್ ಭೀತಿ ಆವರಿಸಿದೆ. ರಾಜ್ಯದಲ್ಲಿ 4 ಮಂದಿಗೆ ನಿಫಾ ವೈರಸ್ (Nipah Virus) ಸೋಂಕು ಇರುವುದು ದೃಢಪಟ್ಟಿದೆ. ಈ ಪೈಕಿ 2 ಮಂದಿ ನಿಫಾ ವೈರಸ್‌ಗೆ ಬಲಿಯಾಗಿದ್ದಾರೆ. ಇದರ ಬೆನ್ನಲ್ಲೇ ನಿಫಾ ವೈರಸ್ ಸೋಂಕಿತರ ಸಂಪರ್ಕ ಮಾಡಿದವರ ಪಟ್ಟಿ ಸಿದ್ದಪಡಿಸಿಲು ಕೇರಳ ಸರಕಾರ ಪೊಲೀಸರ ನೆರವು ಕೋರಿದೆ.

ಕೇರಳ ರಾಜ್ಯದ ಕೋಂಝೀಕ್ಕೋಡ್‌ನಲ್ಲಿ ನಿಫಾ ವೈರಸ್ ಪತ್ತೆಯಾಗಿದೆ. ಅದ್ರಲ್ಲೂ ಕೇರಳ ರಾಜ್ಯದಲ್ಲಿ ಕಳೆದ ಐದು ವರ್ಷಗಳ ಅವಧಿಯಲ್ಲಿ ಇದೀಗ ಮೂರನೇ ಬಾರಿ ನಿಫಾ ವೈರಸ್ ಪತ್ತೆಯಾಗಿದೆ. ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಯಲ್ಲಿ ನಡೆಸಿದ ಪರೀಕ್ಷೆಯಲ್ಲಿ ಆಯಂಚೇರಿಯ ಮಂಗಲತ್ ಹ್ಯಾರಿಸ್ ಎಂಬ 40 ವರ್ಷದ ವ್ಯಕ್ತಿ ಸಾವನ್ನಪ್ಪಿರುವುದು ದೃಢಪಟ್ಟಿದೆ.
ಇದನ್ನೂ ಓದಿ : ಕೇರಳದಲ್ಲಿ ನಿಫಾ ವೈರಸ್ ಹೆಚ್ಚಳ, ಕರ್ನಾಟಕದಲ್ಲಿ ಹೈಲರ್ಟ್, ಏನಿದರ ಲಕ್ಷಣ ?
ಇನ್ನು ನಿಫಾ ವೈರಸ್‌ನಿಂದ ಬಲಿಯಾದ ಕಲ್ಲಟ್ ಮೊಹಮ್ಮದಲಿ ಅವರ ಇಬ್ಬರು ಸಂಬಂಧಿಕರಿಗೆ ಪಾಸಿಟಿವ್ ಬಂದಿದೆ. ಒಂಬತ್ತು ವರ್ಷದ ಮಗ ಹಾಗೂ ಸಹೋದ ಮಾವನಿಗೆ ನಿಫಾ ವೈರಸ್ ದೃಢಪಟ್ಟಿದೆ. ಆದರೆ ನಾಲ್ಕು ವರ್ಷದ ಮಗಳು ಮತ್ತು 10 ತಿಂಗಳ ಮಗುವಿನ ಪರೀಕ್ಷೆ ನೆಗೆಟಿವ್ ಬಂದಿದೆ.
ಎಲ್ಲಾ ಆಸ್ಪತ್ರೆಗಳಲ್ಲಿನ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಸೂಚನೆಯನ್ನು ನೀಡಿದ್ದಾರೆ. ಖುದ್ದು ಕೇಂದ್ರ ಸಚಿವರಾದ ಮನ್ಸುಖ್ ಮಾಂಡವೀಯ ಅವರು ಎನ್‌ಐವಿ ಪರೀಕ್ಷೆಯ ಫಲಿತಾಂಶ ಪ್ರಕಟಿಸಿದ್ದಾರೆ.

ಮೃತ ವ್ಯಕ್ತಿಯ ಜೊತೆಗೆ ಸಂಪರ್ಕ ಇರುವ ಐದು ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಈ ಪೈಕಿ ಇಬ್ಬರಿಗೆ ಪಾಸಿಟಿವ್ ಇರುವುದು ದೃಢಪಟ್ಟಿದೆ. ಅಲ್ಲದೇ ಅವರನ್ನು ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ. ಈ ನಡುವಲ್ಲೇ ಮೃತ ಪಟ್ಟಿರುವ ಇಬ್ಬರು ವ್ಯಕ್ತಿಗಳು ಸುಮಾರು 168 ಸಂಪರ್ಕ ಹೊಂದಿರುವುದನ್ನು ಗುರುತಿಸಲಾಗಿದೆ.
ಪಾಸಿಟಿವ್ ವ್ಯಕ್ತಿಗಳ ಜೊತೆಗೆ ಸಂಪರ್ಕ ಹೊಂದುವವರನ್ನು ಎರಡು ಪಟ್ಟಿಗಳಾಗಿ ವರ್ಗೀಕರಿಸಲಾಗುತ್ತದೆ. ಇದೀಗ ನಿಫಾ ವೈರಸ್ ಸೋಂಕಿತ ವ್ಯಕ್ತಿಗಳ ಸಂಪರ್ಕಿತರನ್ನು ಮೊಬೈಲ್ ಲೊಕೇಷನ್ ಮೂಲಕ ಪತ್ತೆ ಹೆಚ್ಲಾಗುತ್ತಿದ್ದು, ಸರಕಾರ ಈಗಾಗಲೇ ಪೊಲೀಸರ ಸಹಾಯ ಯಾಚಿಸಿದೆ.
ಖುದ್ದು ಆರೋಗ್ಯ ಸಚಿವೆ ವೀಣಾ ಚಾರ್ಜ್ ಅವರು ನಿಫಾ ಪರಿಶೀಲನಾ ಸಭೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಸಂಪರ್ಕಿತರ ಪಟ್ಟಿ ಸಿದ್ದಪಡಿಸುವಾಗ ಪೊಲೀಸರ ಸಹಾಯ ಪಡೆಯುವಂತೆ ಸೂಚಿಸಿದ್ದಾರೆ. ಇಂದು ನಿಫಾ ಸೋಂಕಿತರ ಸಂಪರ್ಕದಲ್ಲಿ ಇದ್ದ 15 ಜನರ ಮಾದರಿಗಳನ್ನು ಇಂದು ಪರೀಕ್ಷೆಗೆ ಕಳುಹಿಸಲಾಗಿದೆ.
ಈಗಾಗಲೇ ನಿಫಾ ವೈರಸ್ ಪತ್ತೆಯಾಗಿರುವ ಕೋಝಿಕ್ಕೋಡ್ ಜಿಲ್ಲೆಯಲ್ಲಿ ಸಾರ್ವಜನಿಕರಿಗೆ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. ಇನ್ನು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಸಲುವಾಗಿ ಎನ್.ಐ.ವಿ. ಪುಣೆಯ ಮೊಬೈಲ್ ತಂಡ ಸಿದ್ಧವಾಗಿದೆ. ಅಲ್ಲದೇ ರಾಜೀವ್ ಗಾಂಧಿ ಸೆಂಟರ್ ಫಾರ್ ಬಯೋಟೆಕ್ನಾಲಜಿಯ ಮೊಬೈಲ್ ತಂಡವೂ ಬರಲಿದೆ.

ಒಂದೊಮ್ಮೆ ನಿಫಾ ಪ್ರಕರಣಗಳು ಹೆಚ್ಚಾದ ಸಂದರ್ಭದಲ್ಲಿ ಪ್ಲಾನ್ ಬಿ ಭಾಗವಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡ್‌ಗಳನ್ನು ಸ್ಥಾಪಿಸಲಾಗಿದೆ. ಔಷಧಿಗಳು ಮತ್ತು ಸುರಕ್ಷತಾ ಸಾಮಗ್ರಿಗಳ ಹೆಚ್ಚುವರಿ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಸಚಿವರು ಕೆಎಂಎಸ್‌ಸಿಎಲ್ ( KMSCL ) ಗೆ ಸೂಚನೆ ನೀಡಿದರು.
ಕೇರಳ ರಾಜ್ಯದಲ್ಲಿ ಒಟ್ಟು 950 ಮಂದಿ ಈಗ ನಿಪಾ ಸಂಪರ್ಕ ಪಟ್ಟಿಯಲ್ಲಿದ್ದಾರೆ. ನಿಫಾ ಕಣ್ಗಾವಲಿನಲ್ಲಿ ಗುರುವಾರ ಸುಮಾರು 234 ಹೊಸ ಜನರನ್ನು ಕಣ್ಗಾವಲು ಪತ್ತೆಗೆ ಸೇರ್ಪಡೆ ಗೊಳಿಸಲಾಗಿದೆ. ಈ ಪೈಕಿ 213 ಮಂದಿ ಹೈ ರಿಸ್ಕ್ ಲಿಸ್ಟ್ ನಲ್ಲಿದ್ದಾರೆ. 287 ಆರೋಗ್ಯ ಕಾರ್ಯಕರ್ತರು ಸಂಪರ್ಕ ಪಟ್ಟಿಯಲ್ಲಿದ್ದಾರೆ.
ಇದನ್ನೂ ಓದಿ : ನಿಫಾ ವೈರಸ್ ಪ್ರಕರಣ ಹೆಚ್ಚಳ: ಶಾಲೆಗಳಿಗೆ ರಜೆ ಘೋಷಣೆ, ಕೇರಳದಲ್ಲಿ ಲಾಕ್‌ಡೌನ್ ಜಾರಿ ?
ಇನ್ನು ಖಾಸಗಿ ಆಸ್ಪತ್ರೆಗಳಲ್ಲಿ 4 ಜನರು ಹೆಚ್ಚಿನ ಅಪಾಯದ ವರ್ಗದಲ್ಲಿದ್ದಾರೆ. ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ 17 ಮಂದಿ ನಿಗಾದಲ್ಲಿದ್ದಾರೆ. ಬುಧವಾರ ಪೋಸ್ಟ್ ಮಾಡಿದ ವ್ಯಕ್ತಿಯ ಮಾರ್ಗ ನಕ್ಷೆಗೆ ಅಗತ್ಯ ಮಾಹಿತಿ ಸಂಗ್ರಹಿಸಿದೆ.
ಭಾಗವಹಿಸಿದ್ದರು.
Nifa virus contact list: Kerala government has sought police help