ನಟಿಸಿದ ಕೆಲವೇ ಕೆಲವು ಚಿತ್ರಗಳ ಮೂಲಕವೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ನಟಿ ಸಪ್ತಮಿ ಗೌಡ ( Sapthami Gowda) ಸದ್ಯ ಕಾಂತಾರ 2 (Kantara-2 ) ಸಿನಿಮಾದ ನೀರಿಕ್ಷೆಯಲ್ಲಿರುವ ಸಪ್ತ ಮಿ ಗೌಡ ಹೊಸದೊಂದು (Sapthami Gowda PhotoShoot) ಪೋಟೋಶೂಟ್ ಮೂಲಕ ಅಭಿಮಾನಿಗಳಿಗೆ ಹಬ್ಬದೂಟ ಬಡಿಸಿದ್ದಾರೆ. ಗಣೇಶ ಹಬ್ಬದ (Ganesha FestivaL) ಎದುರು ಅದ್ದೂರಿ ಅಲಂಕಾರ ಕಾಮನ್. ಆದರೆ ಸಪ್ತಮಿಗೌಡ ಮಾತ್ರ ಅಚ್ಚ ಬಿಳಿಯ ಔಟ್ ಫಿಟ್ ನಲ್ಲಿ ಶ್ವೇತಸುಂದರಿಯಂತೆ ಮಿಂಚಿದ್ದಾರೆ.

ಸಪ್ತಮಿ ಗೌಡ ಖಡಕ್ ಪೊಲೀಸ್ ಅಧಿಕಾರಿಯಾಗಿ ಪುತ್ರಿಯಾಗಿ ಬೆಳೆದು ಬಂದವರು.ಬಣ್ಣದ ನಂಟೇ ಇಲ್ಲದ ಕುಟುಂಬದಿಂದ ಬಂದರೂ ಬಣ್ಣದ ಮೇಲೆ ಅಪಾರ ಒಲವು ಹೊಂದಿದ್ದ ಸಪ್ತಮಿ ಗೌಡ ಸಿವಿಲ್ ಬಿಇ ಪದವಿ ಪಡೆದು ಕೆಲಕಾಲ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿದರು. ಬಳಿಕ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ.

ನಟಿಸಿದ ಮೊದಲ ಚಿತ್ರ ಪಾಪ್ ಕಾರ್ನ್ ಮಂಕಿ ಟೈಗರ್ ನಲ್ಲಿ ಅತ್ಯುತ್ತಮ ಚೊಚ್ಚಲ ನಟಿ ಪ್ರಶಸ್ತಿ ಪಡೆದ ಸಪ್ತಮಿ ಗಿರಿಜಾ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದರು ಎಂಬ ಹೊಗಳಿಕೆಯನ್ನು ಅಭಿಮಾನಿಗಳಿಂದ ಪಡೆದುಕೊಂಡಿದ್ದಾರೆ. ಇದಾದ ಬಳಿಕ ಸಪ್ತತಿ ಅತ್ಯಂತ ಸರಳವಾಗಿ ಕಾಣಿಸಿಕೊಂಡ ಗ್ಲ್ಯಾಮರ್ ಪಾತ್ರ ಲೀಲಾ ಆಕೆಗೆ ಅತ್ಯಂತ ಹೆಚ್ಚಿನ ಪ್ರಸಿದ್ಧಿ ಹಾಗೂ ಕೀರ್ತಿಯನ್ನು ತಂದುಕೊಟ್ಟಿತು. ಹಲವು ಭಾಷೆಗಳಲ್ಲಿ ಪ್ರದರ್ಶನ ಕಂಡ ಕಾಂತಾರ ಸಿನಿಮಾ ಸಪ್ತಮಿ ಗೌಡ ಸಿನಿ ಬದುಕಿಗೆ ಹೊಸ ಆಯಾಮವನ್ನೇ ನೀಡಿತು.
ಇದನ್ನೂ ಓದಿ : ಅನ್ವೇಶಿ ಜೈನ್ ಎಂಬ ಮಾದಕಕನ್ಯೆ : ಸೋಷಿಯಲ್ ಮೀಡಿಯಾದಲ್ಲಿ ಮೋಡಿ ಮಾಡಿದ ಮಾರ್ಟಿನ್ ಚೆಲುವೆ

ಕೇವಲ ನಟನೆ ಮಾತ್ರವಲ್ಲ ಮಾಡೆಲಿಂಗ್ ನಲ್ಲಿ ಗುರುತಿಸಿಕೊಂಡಿರೋ ಸಪ್ತಮಿಗೌಡ ಆಗಾಗ ಪೋಟೋಶೂಟ್ ಗಳ ಮೂಲಕ ಅಭಿಮಾನಿಗಳಿಗೆ ತಮ್ಮ ಸೌಂದರ್ಯದರ್ಶನ ಮಾಡಿಸುತ್ತಲೇ ಇರುತ್ತಾರೆ. ಸಿನಿಮಾಗಳ ಜೊತೆ ಸೋಷಿಯಲ್ ಮೀಡಿಯಾದಲ್ಲೂ ಆಕ್ಟಿವ್ ಆಗಿರೋ ಲೀಲಾ ಅಲಿಯಾಸ್ ಸಪ್ತಮಿ ಗಣೇಶ ಹಬ್ಬದ ಹೊತ್ತಿನಲ್ಲಿ ಅಚ್ಚ ಬಿಳುಪಿನ ಲಾಂಗ್ ಗೌನ್ ನಲ್ಲಿ ಮಿಂಚಿದ್ದಾರೆ.
ಇದನ್ನೂ ಓದಿ : ಪಾರ್ವತಿಯಾದ್ರು ಪ್ರಜ್ವಲ್ ದೇವರಾಜ್ ಪತ್ನಿ: ಪೋಟೋಶೂಟ್ ನಲ್ಲಿ ಮಿಂಚಿದ ರಾಗಿಣಿ

ವಿದೇಶದಲ್ಲಿ ನಡೆದಿದ್ದ ಕಾಂತಾರ ಅವಾರ್ಡ್ ಫಂಕ್ಷನ್ ಗಾಗಿ ಸಪ್ತಮಿ ಗೌಡ ಈ ಔಟ್ ಫಿಟ್ ತೊಟ್ಟಿದ್ದು ತಮ್ಮ ಆಸೆಯಂತೆ ವೈಟ್ ಔಟ್ ಫಿಟ್ ನ್ನು ಕಾಂತಾರದ ತಮ್ಮ ಪಾತ್ರಕ್ಕೆ ಸರಿಹೊಂದುವಂತೆ ಸುಂದರವಾಗಿ ಸಿದ್ಧಪಡಿಸಿಕೊಟ್ಟವರಿಗೆ, ಡ್ರೆಸ್ ಗೆ ಸೂಕ್ತವಾದ ಮೇಕಪ್ , ಹೇರ್ ಸ್ಟೈಲ್ ಒದಗಿಸಿದವರಿಗೂ ಧನ್ಯವಾದ ಹೇಳುತ್ತಾ ಸಪ್ತಮಿ, ಲೀಲಾ ಎಂಬ ಟ್ಯಾಗ್ ಲೈನ್ ನಲ್ಲಿ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಹೊಸ ಪೋಟೋಶೂಟ್ ಶೇರ್ ಮಾಡಿದ್ದಾರೆ.

ಅಷ್ಟೇ ಅಲ್ಲ ಇಂತಹದೊಂದು ಔಟ್ ಫಿಟ್ ಸಿದ್ಧಪಡಿಸಿ ಅವಾರ್ಡ್ ತೆಗೆದುಕೊಳ್ಳುವಂತ ಸಂದರ್ಭಕ್ಕೆ ಅವಕಾಶ ಕೊಟ್ಟ ಹಾಗೂ ಅನುವು ಮಾಡಿಕೊಟ್ಟ ಕಾಂತಾರ ತಂಡಕ್ಕೂ ಧನ್ಯವಾದ ಹೇಳಲು ಸಪ್ತಮಿ ಮರೆತಿಲ್ಲ. ಹಾಗೇ ನೋಡಿದರೇ ಇದು ಸಪ್ತಮಿಯವರ ಮೊದಲ ಪೋಟೋಶೂಟ್ ಅಲ್ಲ. ಕಾಂತಾರ ಸಿನಿಮಾದಲ್ಲಿ ಸಪ್ತಮಿ ಗೌಡ ಡಿ ಗ್ಲ್ಯಾಮರ್ ಪಾತ್ರದಲ್ಲಿ ಕಾಣಿಸಿಕೊಂಡರೂ, ಅಸಲಿ ಬದುಕಿನಲ್ಲಿ ಸಪ್ತಮಿಗೌಡ ಫ್ಯಾಶನ್ ಪಾಲೋವರ್. ಯಾವುದೇ ಟ್ರೆಂಡಿ ಡ್ರೆಸ್, ಸ್ಟೈಲ್ ಗಳನ್ನು ಸಪ್ತಮಿ ಗೌಡ ಮಿಸ್ ಮಾಡೋದೇ ಇಲ್ಲ.
ಇದನ್ನೂ ಓದಿ : ಚಿರು ಆಸೆಯಂತೆ ನಟನೆಯಲ್ಲಿ ಬ್ಯುಸಿಯಾದ ಮೇಘನಾ ರಾಜ್ ಸರ್ಜಾ : ತತ್ಸಮ ತದ್ಭವ ಬಳಿಕ ಅಮರ್ಥಕ್ಕೆಜೈ ಎಂದ ನಟಿ

ಇದಕ್ಕೂ ಮುನ್ನ ಸಪ್ತಮಿ , ಅಚ್ಚ ಬಿಳುಪಿಗೆ ತೆಳು ಹಳದಿ ಸೇರಿದಂತ ಕ್ರೀಂ ಕಲರ್ ಸೀರೆಯಲ್ಲಿ ಮೋಹಕ ಲುಕ್ ನೀಡಿದ್ದರು. ಸೀರೆ ಸಪ್ತಮಿಯವರ ಮೆಚ್ಚಿನ ಉಡುಪಾಗಿದ್ದರೂ ಮಾರ್ಡನ್ ಓಫನ್ ಶೋಲ್ಡರ್ ಸೇರಿದಂತೆ ವೈರೈಟಿ ವೈರೈಟಿ ಡ್ರೆಸ್ ಗಳಲ್ಲಿ ಸಪ್ತಮಿ ಪೋಸ್ ನೀಡಿದ್ದಾರೆ. ಸದ್ಯ ದೊಡ್ಮನೆ ಮೊಮ್ಮಗ ನ ಜೊತೆ ಯುವಾ ಸಿನಿಮಾದಲ್ಲಿ ನಟಿಸುತ್ತಿರುವ ಸಪ್ತಮಿ ಕಾಂತಾರಾ 2 ಸಿನಿಮಾ ಶೂಟಿಂಗ್ ಆರಂಭಕ್ಕೆ ಕಾಯುತ್ತಿದ್ದಾರೆ.
Kantara Kannada Movie Actress Sapthami Gowda Latest Photoshoot