ಪಾರ್ವತಿಯಾದ್ರು ಪ್ರಜ್ವಲ್ ದೇವರಾಜ್ ಪತ್ನಿ: ಪೋಟೋಶೂಟ್ ನಲ್ಲಿ ಮಿಂಚಿದ ರಾಗಿಣಿ

ಸ್ಯಾಂಡಲ್ ವುಡ್ ನಲ್ಲೂ ಗಣೇಶ ಹಬ್ಬದ ಸಂಭ್ರಮ ಇಮ್ಮಡಿಸಿದ್ದು,‌ ನಟ ಪ್ರಜ್ವಲ್‌ ದೇವರಾಜ್‌ (Actor Prajwal Devaraj) ಪತ್ನಿ ನಟಿ ಹಾಗೂ ಮಾಡೆಲ್, ಡ್ಯಾನ್ಸರ್ ರಾಗಿಣಿ ಪ್ರಜ್ವಲ್ ( Ragini Prajwal Devaraj) ಗೌರಿ ಗಣೇಶ್ ಹಬ್ಬಕ್ಕೆ ವಿಶೇಷ ಪೋಟೋಶೂಟ್ ಮೂಲಕ ಅಭಿಮಾನಿಗಳಿಗೆ ಸಪ್ರೈಸ್ ನೀಡಿದ್ದಾರೆ.

ನಾಡಿನೆಲ್ಲೆಡೆ ಗಣೇಶ್ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಸ್ಯಾಂಡಲ್ ವುಡ್ ನಲ್ಲೂ ಹಬ್ಬದ ಸಂಭ್ರಮ ಇಮ್ಮಡಿಸಿದ್ದು,‌ ನಟ ಪ್ರಜ್ವಲ್‌ ದೇವರಾಜ್‌ (Actor Prajwal Devaraj) ಪತ್ನಿ ನಟಿ ಹಾಗೂ ಮಾಡೆಲ್, ಡ್ಯಾನ್ಸರ್ ರಾಗಿಣಿ ಪ್ರಜ್ವಲ್ ( Ragini Prajwal Devaraj) ಗೌರಿ ಗಣೇಶ್ ಹಬ್ಬಕ್ಕೆ ವಿಶೇಷ ಪೋಟೋಶೂಟ್ ಮೂಲಕ ಅಭಿಮಾನಿಗಳಿಗೆ ಸಪ್ರೈಸ್ ನೀಡಿದ್ದಾರೆ.

Actor Prajwal Devaraj Wife Ragini Photoshoot as a Parvathi in Ganesh Chaturthi
Image Credit : Ragini Instagram

ನಟಿ ಹಾಗೂ ಮಾಡೆಲ್, ಫಿಟನೆಸ್ ಟ್ರೈನರ್, ಡ್ಯಾನ್ಸರ್ ಹೀಗೆ ಬಹುಮುಖಿ ಪ್ರತಿಭೆ ರಾಗಿಣಿ ಪ್ರಜ್ವಲ್. ಮೈಯಲ್ಲಿ ಎಲುಬುಗಳಿದಂತೆ ನರ್ತಿಸೋ ರಾಗಿಣಿ ಪ್ರಜ್ವಲ್ ಮನಸೆಳೆಯೋ ಸೌಂದರ್ಯದ ಖಣಿ. ಆದರೆ ಮೇನ್ ಸ್ಟ್ರೀಮ್ ಸಿನಿಮಾಗಳಲ್ಲಿ ಹೆಚ್ಚಿನ ಅವಕಾಶ ಸಿಗದ ಕಾರಣಕ್ಕೋ ಏನೋ ರಾಗಿಣಿ ಹೆಚ್ಚಿನ ಪ್ರಸಿದ್ಧಿ ಪಡೆದಿಲ್ಲ.

ಆದರೆ‌ ಮಹಿಳಾ ಪ್ರಧಾನ ಸಿನಿಮಾಗಳ ಮೂಲಕ ರಾಗಿಣಿ ಜನಮೆಚ್ಚುಗೆ ಪಡೆದಿರೋದಂತು ಸತ್ಯ.‌ಇಂತಿಪ್ಪ ನಟಿ ರಾಗಿಣಿ ಗೌರಿ ಗಣೇಶ ಹಬ್ಬದಂದು ವಿಶೇಷ ಪೋಟೋಶೂಟ್ ಶೇರ್ ಮಾಡಿದ್ದಾರೆ.‌ ಗೌರಿ ಗಣೇಶ್ ಹಬ್ಬದ ವಿಶೇಷತೆ ಗೌರಿ ಹಾಗೂ ಗಣೇಶನ ನಡುವಿನ ಬಾಂಧವ್ಯ. ಈ ವಿಶೇಷ ಬಾಂಧವ್ಯವನ್ನು ಬಿಂಬಿಸಲು ನೊರೆಂಟು ಪುರಾಣದ ಕತೆಗಳು ಇವೆ.

ಇದನ್ನೂ ಓದಿ : 2ನೇ ಮಗುವಿಗೆ ತಂದೆಯಾದ ಧ್ರುವ ಸರ್ಜಾ: ಗಂಡು ಮಗುವಿಗೆ ಜನ್ಮನೀಡಿದ ಪ್ರೇರಣಾ

ಹೀಗಾಗಿ ಇದೇ ಬಾಂಧವ್ಯವನ್ನು ಹೊತ್ತ ಪೋಟೋಶೂಟ್ ಗೆ ರಾಗಿಣಿ ಪ್ರಜ್ವಲ್ ಮಾಡೆಲ್ ಆಗಿದ್ದಾರೆ. ಸುಂದರವಾದ ಸೀರೆ ಉಟ್ಟು, ಆಭರಣಗಳ ಜೊತೆ ಸಿದ್ಧವಾಗಿ ಮಡಿಲಲ್ಲಿ ಗಣೇಶನನ್ನು ಕೂರಿಸಿಕೊಂಡು ರಾಗಿಣಿ ಪ್ರಜ್ವಲ್ ಪೋಸ್ ನೀಡಿದ್ದು, ಪೋಟೋಶೂಟ್ ಮನೋಹರವಾಗಿ ಮೂಡಿಬಂದಿದೆ.

Actor Prajwal Devaraj Wife Ragini Photoshoot as a Parvathi in Ganesh Chaturthi 2
Image Credit : Ragini Instagram

ಒನ್ ಹಾರಿಜಾನ್ ಮೇಕಪ್ ಹಾಗೂ ಕೊರಿಯೋಗ್ರಫಿಯಲ್ಲಿ ರಾಗಿಣಿ ಪ್ರಜ್ವಲ್ ಅಲಂಕಾರ ಹಾಗೂ ಪೋಟೋಶೂಟ್ ಮೂಡಿಬಂದಿದೆ. ರಾಗಿಣಿ ಮತ್ತು ಪ್ರಜ್ವಲ್ ಬರೋಬ್ಬರಿ 17 ವರ್ಷಗಳ ಕಾಲ ಪರಸ್ಪರ ಪ್ರೀತಿಸಿದ್ದರು. ಅಂದ್ರೇ ತಮ್ಮ ಸ್ಕೂಲ್ ಡೇಸ್ ನಿಂದಲೂ ಒಂದೇ ಡ್ಯಾನ್ಸ್ ತರಬೇತಿ ಕೇಂದ್ರದಲ್ಲಿ ಡ್ಯಾನ್ಸ್ ಕಲಿಯುತ್ತಿದ್ದ ಈ ಜೋಡಿ ಮೊದಲು ಸ್ನೇಹಿತರಾಗಿ ಬಳಿಕ ಪ್ರೇಮಿಗಳಾಗಿ ಬಳಿಕ ಪರಸ್ಪರ ಹಿರಿಯರ ಒಪ್ಪಿಗೆ ಪಡೆದು ಸತಿಪತಿಗಳಾಗಿದ್ದಾರೆ.

 

ಇದನ್ನೂ ಓದಿ : ಕಾವಾಲಯ್ಯ ಬೆಡಗಿಯ ಕಾವೇರಿಸುವ ಫೋಟೋ: ಇಲ್ಲಿದೆ ಮಿಲ್ಕಿ ಬ್ಯೂಟಿ ನಟಿ ತಮನ್ನಾ ಎಕ್ಸಕ್ಲೂಸಿವ್ ಪೋಟೋಶೂಟ್

ಸ್ಯಾಂಡಲ್ ವುಡ್ ನ ಕ್ಯೂಟ್ ಜೋಡಿಗಳಲ್ಲಿ ಒಂದಾಗಿರೋ ರಾಗಿಣಿ ಪ್ರಜ್ವಲ್ ಒಂದೇ ಸಿನಿಮಾದಲ್ಲಿ ನಟಿಸಲಿದ್ದಾರೆ ಅನ್ನೋ ಮಾತು ಹಲವು ಸಲ ಕೇಳಿಬಂದಿತ್ತಾದರೂ ಇನ್ನು ನಿಜವಾಗಿಲ್ಲ. ಆದರೆ ರಾಗಿಣಿ ಈಗಾಗಲೇ ಸಿನಿಮಾಗಳಲ್ಲಿ‌ ನಟಿಸಿದ್ದಾರೆ. ರಚಿತಾರಾಮ್ ನಟನೆಯ ರಿಷಭಪ್ರಿಯ ಸಿನಿಮಾದಲ್ಲಿ ರಾಗಿಣಿ ನಟಿಸಿದ್ದರು.

Actor Prajwal Devaraj Wife Ragini Photoshoot as a Parvathi in Ganesh Chaturthi
Image Credit : Ragini Instagram

ಇದಾದ ಬಳಿಕ ಲಾ ಸಿನಿಮಾದ ಮೂಲಕ ರಾಗಿಣಿ ಸಂಪೂರ್ಣ ಪ್ರಮಾಣದಲ್ಲಿ ನಾಯಕಿಯಾಗಿ ಚಂದನವನಕ್ಕೆ ಕಾಲಿಟ್ಟಿದ್ದಾರೆ. ಕೇವಲ ರಾಗಿಣಿ ಮಾತ್ರವಲ್ಲ ಮಿಸ್ ಸುಪ್ರಾ ಇಂಟರನ್ಯಾಶನಲ್ ಖ್ಯಾತಿಯ ನಟಿ ಆಶಾ ಭಟ್ ಕೂಡ ಟ್ರೆಡಿಶನಲ್ ಗೌರಿ ಗಣೇಶ್ ಹಬ್ಬಕ್ಕೆ ಸಜ್ಜಾಗಿದ್ದಾರೆ.

ಇದನ್ನೂ ಓದಿ : ಕೊನೆಗೂ ಒಂದಾಗಲಿಲ್ಲ ಸುದೀಪ್-ದರ್ಶನ್ ! ಕಾರಣ ಏನು ಗೊತ್ತಾ?!

ಸಾಂಪ್ರದಾಯಿಕವಾಗಿ ಮನೆಯ ಮುಂದೇ ಚುಕ್ಕಿ ರಂಗೋಲಿ ಇಡೋ ವಿಡಿಯೋವೊಂದನ್ನು ಆಶಾ ಭಟ್  ಅವರು ತಮ್ಮ ಇನ್ ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಹಲವು ಹೊಸ ಚಿತ್ರಗಳು ರಿಲೀಸ್ ಗೆ ಸಿದ್ಧವಿದ್ದು, ಎಲ್ಲಾ ಚಿತ್ರ ತಂಡಗಳು ಕೂಡ ಹಬ್ಬಕ್ಕೆ ಶುಭಕೋರಿದ್ದಾರೆ. ಕಾಲಾಪತ್ಥರ್, ಕಾಟೇರಾ ಸೇರಿದಂತೆ ಹಲವು ಚಿತ್ರದ ನಟ-ನಟಿಯರು ಹೊಸ ಹೊಸ ಪೋಸ್ ಗಳಲ್ಲಿ ಪೋಟೋ ಶೇರ್ ಮಾಡಿಕೊಂಡು ಸಂಭ್ರಮಿಸಿದ್ದಾರೆ.

Actor Prajwal Devaraj Wife Ragini Photoshoot as a Parvathi in Ganesh Chaturthi

Comments are closed.