ಭಾನುವಾರ, ಏಪ್ರಿಲ್ 27, 2025
HomeCoastal Newsಹೆರಿಗೆಗೆಂದು ತವರಿಗೆ ಬಂದಿದ್ದ ಪತ್ನಿಗೆ ವಿದೇಶದಲ್ಲೇ ಕುಳಿತು ತ್ರಿವಳಿ ತಲಾಕ್‌ ನೀಡಿದ ಪತಿ

ಹೆರಿಗೆಗೆಂದು ತವರಿಗೆ ಬಂದಿದ್ದ ಪತ್ನಿಗೆ ವಿದೇಶದಲ್ಲೇ ಕುಳಿತು ತ್ರಿವಳಿ ತಲಾಕ್‌ ನೀಡಿದ ಪತಿ

- Advertisement -

ಮಂಗಳೂರು: ದೇಶದಲ್ಲಿ ತಿವ್ರಳಿ ತಲಾಖ್‌ಗೆ ( Tripple talaq )  ನಿಷೇಧ ಹೇರಲಾಗಿದೆ. ಯಾರಾದ್ರೂ ತ್ರಿವಳಿ ತಲಾಖ್‌ ಘೋಷಿಸಿದ್ರೆ ಅಂತಹವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಲಾಗುತ್ತದೆ. ಆದ್ರೆ ಇಲ್ಲೊಬ್ಬ ಪತಿರಾಯ ಹೆರಿಗೆಗೆ ಅಂತಾ ತವರಿಗೆ ಬಂದಿದ್ದ ಪತ್ನಿಗೆ ವಾಟ್ಸಾಪ್‌ ಮೂಲಕ ತ್ರಿವಳಿ ತಲಾಖ್‌ ಘೋಷಣೆ ಮಾಡಿದ್ದಾರೆ.

ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಸುಳ್ಳು ತಾಲೂಜಿನ ಮಿಸ್ರೀಯಾ ಎಂಬಾಕೆಗೆ ಕೇರಳ ಮೂಲದ ಅಬ್ದುಲ್‌ ರಶೀದ್‌ ಎಂಬಾತನ ಜೊತೆಗೆ ಸುಮಾರು ಆರು ವರ್ಷದ ಹಿಂದೆಯೇ ಮದುವೆ ಆಗಿತ್ತು. ಮದುವೆ ಆದ ನಂತರ ದಂಪತಿ ವಿದೇಶದಲ್ಲಿ ನೆಲೆಸಿದ್ದರು. ಮದುವೆಯಾದ ಆರಂಭದಲ್ಲಿ ದಂಪತಿಯ ನಡುವೆ ಎಲ್ಲವೂ ಚೆನ್ನಾಗಿಯೇ ಇತ್ತು.

Mangalore husband gave triple talaq to his wife, who had come 2nd baby Delivery while sitting abroad
Image Credit To Original Source

ಮೊದಲ ಮದುವೆ ಆದ ನಂತರವೂ ದಂಪತಿ ವಿದೇಶದಲ್ಲಿಯೇ ನೆಲೆಸಿದ್ದರು. ಆದರೆ ಆಕೆ ಕಳೆದ ಕೆಲವು ತಿಂಗಳ ಹಿಂದೆಯಷ್ಟೇ ಎರಡನೇ ಹೆರಿಗೆಗೆ ಅಂತಾ ಪತ್ನಿ ಮಿಸ್ರೀಯಾ ತವರಿಗೆ ಬಂದಿದ್ದಾಳೆ. ಈ ವೇಳೆಯಲ್ಲಿ ಅಬ್ದುಲ್‌ ರಶೀದ್‌ ಹಾಗೂ ಮಿಸ್ರೀಯಾ ನಡುವೆ ಮನಸ್ತಾಪ ಉಂಟಾಗಿದೆ. ಇಬ್ಬರ ನಡುವಿನ ಮನಸ್ತಾಪ ಹೆಚ್ಚಳ ಆಗುತ್ತಿದ್ದಂತೆಯೇ ಅಬ್ದುಲ್‌ ರಶೀದ್‌ ಪತ್ನಿಗೆ ವಾಟ್ಸಾಪ್‌ ಮೂಲಕ, ತ್ರಿವಳಿ ತಲಾಖ್‌ ಸಂದೇಶ ರವಾನಿಸಿದ್ದಾನೆ. ಈ ಹಿನ್ನೆಲೆಯಲ್ಲೀಗ ಪತ್ನಿ ಮಿಸ್ರೀಯಾ ಸುಳ್ಯ ಪೊಲೀಸ್‌ ಠಾಣೆಗೆ (Sulya Police Station) ಪತಿಯ ದೂರು ನೀಡಿದ್ದಾಳೆ.

ರಾತ್ರಿಪಾಳಯದಲ್ಲಿ ಮಹಿಳಾ ಇಂಜಿನಿಯರ್‌ ಜೊತೆ ಅಸಭ್ಯ ವರ್ತನೆ : 

ರಾಯಚೂರಿನಲ್ಲಿ ಜೆಸ್ಕಾಂ  *JESCOM ) ಮಹಿಳಾ ಇಂಜಿನಿಯರ್‌ ಗೆ ಹಿರಿಯ ಇಂಜಿನಿಯರ್‌ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣ ನಡೆದಿದೆ. ಈ ಹಿನ್ನೆಲೆಯಲ್ಲೀಗ ಜೆಸ್ಕಾಂ ಇಇ ಶ್ರೀನಿವಾಸ್ (JESCOM JEE Srinivas) ನನ್ನು ಅಮಾನತುಗೊಳಿಸಲಾಗಿದೆ. ಮಹಿಳಾ ಇಂಜಿನಿಯರ್‌ ಜೊತೆಗೆ ರೀಡಿಂಗ್‌ ಮಾಪನ ತೆಗೆದುಕೊಳ್ಳಲು ತೆರಳಿದ್ದ ವೇಳೆಯಲ್ಲಿ ಜೆಇಇ ಇಂಜಿನಿಯರ್‌ ಅಸಭ್ಯವಾಗಿ ವರ್ತಿಸಿದ್ದ.

ಇದನ್ನೂ ಓದಿ : ಭೂಗಳ್ಳರಿಗೆ ಬ್ರೇಕ್ ಹಾಕೋಕೆ ಸಜ್ಜಾದ ಸಿದ್ದರಾಮಯ್ಯ ಸರ್ಕಾರ : ಒತ್ತುವರಿ ಮಾಹಿತಿಗೆ ಸಂಗ್ರಹಕ್ಕೆ ಹೊಸ ಆ್ಯಪ್

ಜೆಸ್ಕಾಂ ಸಿಬ್ಬಂದಿಗಳು ಈ ಕುರಿತು ಪ್ರತಿಭಟನೆಯನ್ನು ನಡೆಸಿದ್ದು, ಆರೋಪಿಯ ವಿರುದ್ದ ಕ್ರಮಕ್ಕೆ ಆಗ್ರಹಿಸಿದ್ದರು. ಇದರ ಬೆನ್ನಲ್ಲೇ ಹಿರಿಯ ಅಧಿಕಾರಿಗಳು ತನಿಖೆಯನ್ನು ನಡೆಸಿದ್ದರು. ಲೈಂಗಿಕ ಕಿರುಕುಳ ನೀಡಿರುವ ಕುರಿತು ಸಾಕ್ಷಾಧಾರ ಲಭ್ಯವಾದ ಹಿನ್ನೆಲೆಯಲ್ಲಿ ಶ್ರೀನಿವಾಸ್‌ ಅವರನ್ನು ಸಸ್ಪೆಂಡ್‌ ಮಾಡಲಾಗಿದೆ.

ಕ್ಷುಲಕ ಕಾರಣಕ್ಕೆ ಪತಿಯ ಮೈ ಮೇಲೆ ಕಾರಪುಡಿ ಮಿಶ್ರಿತ ಬಿಸಿನೀರು ಸುರಿದ ಪತ್ನಿ ;

ಇನ್ನು ಕ್ಷುಲಕ ಕಾರಣಕ್ಕೆ ಪತ್ನಿಯೋರ್ವಳು ತನ್ನ ಪತಿಯ ಮೈ ಮೇಲೆ ಕಾರಪುಡಿಯನ್ನು ಕುದಿಯುವ ನೀರಿನಲ್ಲಿ ಬೆರೆಸಿ ಎರಚಿದ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ. ಸದ್ಯ ಗಾಯಗೊಂಡಿರುವ ಪತಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Mangalore husband gave triple talaq to his wife, who had come 2nd baby Delivery while sitting abroad
Image Credit To Original Source

ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಕಟಪಾಡಿ ಸಮೀಪದ ಮಣಿಪುರ ಗ್ರಾಮದ ಗುಜ್ಜಿ ಎಂಬಲ್ಲಿ ಈ ಘಟನೆ ನಡೆದಿದೆ. ಇನ್ನಾದ ನಿವಾಸಿ ಮುಹಮ್ಮದ್‌ ಆಸೀಫ್‌ ಎಂಬಾತನೇ ಪತ್ನಿ ಆಫ್ರಿನ್‌ ಎಂಬಾಕೆಯಿಂದಲೇ ಹಲ್ಲೆಗೆ ಒಳಗಾದವನು. ಇನ್ನು ಘಟನೆಯಲ್ಲಿ ಮುಹಮ್ಮದ್‌ ಆಸೀಫ್‌ ದೇಹ, ಬೆನ್ನು, ಬಲಗೈ ಸುಟ್ಟು ಹೋಗಿದೆ. ಸದ್ಯ ಆಸೀಫ್‌ನನ್ನು ಉಡುಪಿಯ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ದೇಹದ ಬಹುತೇಕ ಭಾಗ ಸುಟ್ಟು ಹೋಗಿದೆ.

ಮುಹಮ್ಮದ್‌ ಆಸೀಫ್‌ ಬೇರೆ ಹುಡುಗಿಯ ಜೊತೆಯಲ್ಲಿ ಅನೈತಿಕ ಸಂಬಂಧ ಹೊಂದಿದ್ದ ಅನ್ನುವ ಅನುಮಾನದ ಹಿನ್ನೆಲೆಯಲ್ಲಿ ಪತ್ನಿ ಆತ ಸ್ಥಾನ ಮಾಡುವ ವೇಳೆಯಲ್ಲಿ ಮೈ ಮೇಲೆ ಕುದಿಯುವ ಬಿಸಿ ನೀರು ಎರಚಿದ್ದಾಳೆ. ಈ ಕುರಿತು ಕಾಫು ಠಾಣೆಯ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ತನಿಖೆ ಯನ್ನು ನಡೆಸುತ್ತಿದ್ದಾರೆ. ಪೊಲೀಸರ ತನಿಖೆಯ ನಂತರವಷ್ಟೇ ಸತ್ಯಾಸತ್ಯತೆ ಹೊರಬರಲು ಸಾಧ್ಯ.

ಇದನ್ನೂ ಓದಿ : ಮ್ಯಾಟ್ರಿಮೋನಿ ಸೈಟ್‌ನಲ್ಲಿ ಯುವತಿಯ ಪರಿಚಯ : 1 ತಿಂಗಳಲ್ಲೇ ಸಾಫ್ಟ್‌ವೇರ್‌ ಇಂಜಿನಿಯರ್‌ಗೆ 1 ಕೋಟಿ ರೂಪಾಯಿ ವಂಚನೆ

ಇನ್ನು ಕ್ಷುಲಕ ಕಾರಣಕ್ಕೆ ಪತ್ನಿಯೋರ್ವಳು ತನ್ನ ಪತಿಯ ಮೈ ಮೇಲೆ ಕಾರಪುಡಿಯನ್ನು ಕುದಿಯುವ ನೀರಿನಲ್ಲಿ ಬೆರೆಸಿ ಎರಚಿದ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ. ಸದ್ಯ ಗಾಯಗೊಂಡಿರುವ ಪತಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಕಟಪಾಡಿ ಸಮೀಪದ ಮಣಿಪುರ ಗ್ರಾಮದ ಗುಜ್ಜಿ ಎಂಬಲ್ಲಿ ಈ ಘಟನೆ ನಡೆದಿದೆ. ಇನ್ನಾದ ನಿವಾಸಿ ಮುಹಮ್ಮದ್‌ ಆಸೀಫ್‌ ಎಂಬಾತನೇ ಪತ್ನಿ ಆಫ್ರಿನ್‌ ಎಂಬಾಕೆಯಿಂದಲೇ ಹಲ್ಲೆಗೆ ಒಳಗಾದವನು.

ಇನ್ನು ಘಟನೆಯಲ್ಲಿ ಮುಹಮ್ಮದ್‌ ಆಸೀಫ್‌ ದೇಹ, ಬೆನ್ನು, ಬಲಗೈ ಸುಟ್ಟು ಹೋಗಿದೆ. ಸದ್ಯ ಆಸೀಫ್‌ನನ್ನು ಉಡುಪಿಯ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ದೇಹದ ಬಹುತೇಕ ಭಾಗ ಸುಟ್ಟು ಹೋಗಿದೆ. ಮುಹಮ್ಮದ್‌ ಆಸೀಫ್‌ ಬೇರೆ ಹುಡುಗಿಯ ಜೊತೆಯಲ್ಲಿ ಅನೈತಿಕ ಸಂಬಂಧ ಹೊಂದಿದ್ದ ಅನ್ನುವ ಅನುಮಾನ ಹೊಂದಿದ್ದ.

ಇದನ್ನೂ ಓದಿ : Chaitra Kundapura Case : ಚೈತ್ರಾ ಕುಂದಾಪುರ ವಂಚನೆ ಪ್ರಕರಣ : ಅಭಿನವ ಹಾಲಶ್ರೀ ಸ್ವಾಮೀಜಿ ಅರೆಸ್ಟ್‌

ಹಿನ್ನೆಲೆಯಲ್ಲಿ ಪತ್ನಿ ಆತ ಸ್ಥಾನ ಮಾಡುವ ವೇಳೆಯಲ್ಲಿ ಮೈ ಮೇಲೆ ಕುದಿಯುವ ಬಿಸಿ ನೀರು ಎರಚಿದ್ದಾಳೆ. ಈ ಕುರಿತು ಕಾಫು ಠಾಣೆಯ (Kaup Police Station)  ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ತನಿಖೆಯನ್ನು ನಡೆಸುತ್ತಿದ್ದಾರೆ. ಪೊಲೀಸರ ತನಿಖೆಯ ನಂತರವಷ್ಟೇ ಸತ್ಯಾಸತ್ಯತೆ ಹೊರಬರಲು ಸಾಧ್ಯ.

Mangalore husband gave triple talaq to his wife, who had come 2nd baby Delivery while sitting abroad

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular