ಮ್ಯಾಟ್ರಿಮೋನಿ ಸೈಟ್‌ನಲ್ಲಿ ಯುವತಿಯ ಪರಿಚಯ : 1 ತಿಂಗಳಲ್ಲೇ ಸಾಫ್ಟ್‌ವೇರ್‌ ಇಂಜಿನಿಯರ್‌ಗೆ 1 ಕೋಟಿ ರೂಪಾಯಿ ವಂಚನೆ

ಮ್ಯಾಟ್ರಿಮೊನಿ ಸೈಟ್‌ನಲ್ಲಿ (software engineer) ಪರಿಚಯವಾಗಿದ್ದ ಮಹಿಳೆಯನ್ನು ನಂಬಿ ಸಾಫ್ಟ್‌ವೇರ್‌ ಇಂಜಿನಿಯರ್‌ (software engineer) ಓರ್ವ ಒಂದೇ ತಿಂಗಳಿನಲ್ಲಿ ಬರೋಬ್ಬರಿ  1 ಕೋಟಿ ರೂಪಾಯಿ ಕಳೆದುಕೊಂಡಿದ್ದಾನೆ.

ಅಹಮದಾಬಾದ್‌ : ಮೋಸ ಹೋಗುವವರು ಎಲ್ಲಿಯ ವರೆಗೆ ಇರುತ್ತಾರೋ ಅಲ್ಲಿಯ ವರೆಗೆ ಮೋಸ ಮಾಡುವವರು ಇದ್ದೇ ಇರುತ್ತಾರೆ. ಪದೇ ಪದೆ ಸೈಬರ್‌ ವಂಚನೆಯ ಪ್ರಕರಣಗಳು ಬೆಳಕಿಗೆ ಬರುತ್ತಿದ್ದರೂ ಕೂಡ ಜನ ಮೋಸ ಹೋಗುವುದು ಮಾತ್ರ ತಪ್ಪಿಲ್ಲ. ಮ್ಯಾಟ್ರಿಮೊನಿ ಸೈಟ್‌ನಲ್ಲಿ (software engineer) ಪರಿಚಯವಾಗಿದ್ದ ಮಹಿಳೆಯನ್ನು ನಂಬಿ ಸಾಫ್ಟ್‌ವೇರ್‌ ಇಂಜಿನಿಯರ್‌ (software engineer) ಓರ್ವ ಒಂದೇ ತಿಂಗಳಿನಲ್ಲಿ ಬರೋಬ್ಬರಿ  1 ಕೋಟಿ ರೂಪಾಯಿ ಕಳೆದುಕೊಂಡಿದ್ದಾನೆ.

ಗುಜರಾತ್‌ನ ಅಹಮದಾಬಾದ್‌ (Ahamedabad) ಮೂಲದ ಸಾಫ್ಟ್‌ವೇರ್‌ ಇಂಜಿನಿಯರ್‌ ಹೆಸರು ಲದೀಪ್ ಪಟೇಲ್ ಎಂಬಾತನೇ ವಂಚನೆಗೆ ಒಳಗಾಗಿರುವ ಸಾಫ್ಟ್‌ವೇರ್‌ ಇಂಜಿನಿಯರ್. ಗಾಂಧಿನಗರದ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿರುವ ಲದೀಪ್‌ ಪಟೇಲ್‌ ಕಳೆದ ಎರಡು ದಿನಗಳ ಹಿಂದೆ ಸೈಬರ್‌ ಕ್ರೈಮ್‌ ಪೊಲೀಸರನ್ನು ಸಂಪರ್ಕಿಸಿ ತಾನು ಕ್ರಿಪ್ಟೋಕರೆನ್ಸಿ ಹಗರಣಕ್ಕೆ ಬಲಿಯಾಗಿ 1 ಕೋಟಿ ರುಪಾಯಿ ವಂಚನೆಗೆ ಒಳಗಾಗಿರುವ ಕುರಿತು ದೂರು ದಾಖಲಿಸಿದ್ದಾನೆ ಎಂದು TOI ವರದ ಮಾಡಿದೆ.

software engineer loses Rs 1 crore in a month, cheated by matrimonial site woman in Ahamedabad
Image Credit To Original Source

ಲದೀಪ್‌ ಪಟೇಲ್‌ಗೆ ಮ್ಯಾಟ್ರಿಮೊನಿ ಸೈಟ್‌ ಮೂಲಕ ಅದಿತಿ ಮಹಿಳೆಯೊಬ್ಬಳ ಪರಿಚಯವಾಗಿತ್ತು. ಅದಿತಿ ತಾನು ಯುಕೆಯಲ್ಲಿ ಆಮದು ಮತ್ತು ರಫ್ತು ವ್ಯವಹಾರವನ್ನು ಹೊಂದಿದ್ದೇನೆ ಎಂದು ಹೇಳಿಕೊಂಡಿದ್ದಳು. ಒಂದಿಷ್ಟು ಸಮಯ ಇಬ್ಬರೂ ಕೂಡ ಪೋನಿನಲ್ಲಿ ಮಾತನಾಡುತ್ತಾ ಸಲುಗೆ ಬೆಳೆಸಿಕೊಂಡಿದ್ದರು. ಟೆಕ್ಕಿ ಮಹಿಳೆಯನ್ನು ಸಂಪೂರ್ಣವಾಗಿ ನಂಬಿಬಿಟ್ಟಿದ್ದಾನೆ.

ಇದನ್ನೂ ಓದಿ : Xiaomi Redmi Note 13 Pro :ಅತ್ಯಂತ ಕಡಿಮೆ ಬೆಲೆಗೆ 200 MP ಕ್ಯಾಮರಾ ಪೋನ್ : Iphone ಮೀರಿಸುತ್ತೆ ರೆಡ್‌ಮೀ 13 ಪ್ರೋ

ತಿಂಗಳು ಕಳೆಯುವಾಗ ಅದಿತಿ ಅತೀ ಹೆಚ್ಚು ಲಾಭವನ್ನು ಗಳಿಸಲು ಬನೊಕಾಯಿನ್ (Banocoin) ಕ್ರಿಪ್ಟೋ ಕರೆನ್ಸಿನಲ್ಲಿ ಹೂಡಿಕೆ ಮಾಡಲು ಸೂಚನೆ ನೀಡಿದ್ದಳು. ಹೂಡಿಕೆ ಮಾಡಲು ಲದೀಪ್‌ ಪಟೇಲ್‌ ಒಪ್ಪಿಗೆ ಸೂಚಿಸಿದ್ದ. ಅಲ್ಲದೇ ಬನೋಕಾಯಿನ್‌ ಸಂಸ್ಥೆಯ ಗ್ರಾಹಕ ಸೇವಾ ಕೇಂದ್ರದ ಪ್ರತಿನಿಧಿಯೊಂದಿಗೆ ಮಾತನಾಡಿದ್ದ. ನಂತರದ ಲದೀಪ್‌ ಪಟೇಲ್‌ಗೆ ಅಕೌಂಟ್‌ ಓಪನ್‌ ಮಾಡಿಕೊಟ್ಟಿದ್ದರು.

ಅತೀ ಹೆಚ್ಚು ಲಾಭ ಪಡೆಯುವ ಆಸೆಯಿಂದ ಲದಿತ್‌ ಪಟೇಲ್‌, ಮೊದಲ ಬಾರಿಗೆ 1 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದರು. ಕೂಡಲೇ ಕ್ರಿಪ್ಟೋ ಖಾತೆಗೆ ಹೆಚ್ಚುವರಿಯಾಗಿ 78 USDT (US ಡಾಲರ್ ) ಲಾಭ ಬಂದಿತ್ತು. ನಂತರ ಹಣವನ್ನು ಹೂಡಿಕೆ ಮಾಡಿದಾಗಲೆಲ್ಲಾ ಹೆಚ್ಚೆಚ್ಚು ಲಾಭವನ್ನು ನೀಡುತ್ತಾ ಹೋಗಿತ್ತು. ಅಂತಿಮವಾಗಿ ಪಟೇಲ್‌ ಸುಮಾರು 18 ವಹಿವಾಟುಗಳಲ್ಲಿ 1.34 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದ.

ಇದನ್ನೂ ಓದಿ : 72 ಲಕ್ಷಕ್ಕೂ ಅಧಿಕ ಖಾತೆಗಳನ್ನು ನಿಷೇಧಿಸಿದ ವಾಟ್ಸಾಪ್ : ನಿಮ್ಮ ಖಾತೆ ಬ್ಯಾನ್‌ ಆಗುತ್ತಾ ಚೆಕ್‌ ಮಾಡಿ

ಕೇವಲ ಜುಲೈ 20 ರಿಂದ ಆಗಸ್ಟ್ 31ರ ನಡುವಿನ ಅವಧಿಯಲ್ಲಿ ಲದೀಪ್‌ ಪಟೇಲ್‌ ಕೋಟಿಗೂ ಅಧಿಕ ಹಣವನ್ನು ಹೂಡಿಕೆ ಮಾಡಿದ್ದನು. ಆದರೆ ಈ ನಡುವಲ್ಲೇ ಸೆಪ್ಟೆಂಬರ್ 3 ರಂದು ಪಟೇಲ್ ತನ್ನ ಖಾತೆಯಿಂದ 2.59 ಲಕ್ಷ ರೂಪಾಯಿಗಳನ್ನು ಹಿಂಪಡೆಯಲು ಯತ್ನಿಸಿದಾಗ ಖಾತೆಯನ್ನು ಸ್ಥಗಿತಗೊಳಿಸಲಾಗಿತ್ತು.

software engineer loses Rs 1 crore in a month, cheated by matrimonial site woman in Ahamedabad
Image Credit To Original Source

ಕೂಡಲೇ ಕಂಪೆನಿಯ ಕಸ್ಟಮರ್‌ ಕೇರ್‌ ಪ್ರತಿನಿಧಿಯನ್ನು ಸಂಪರ್ಕಿಸಿದಾಗ ಖಾತೆಯನ್ನು ಡಿ- ಪ್ರೀಜ್‌ ಮಾಡಲು ಇನ್ನೂ ಹೆಚ್ಚುವರಿಯಾಗಿ 35 ಲಕ್ಷ ರೂಪಾಯಿ ಹಣವನ್ನು ಹೂಡಿಕೆ ಮಾಡುವಂತೆ ಸೂಚನೆಯನ್ನು ನೀಡಿದ್ದರು. ಕೂಡಲೇ ಲದೀತ್‌ ಪಟೇಲ್‌ ಅದಿತಿಯನ್ನು ಸಂಪರ್ಕ ಮಾಡಿದ್ದ. ಆದರೆ ಆಕೆ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಇದರಿಂದಾಗಿ ತಾನು ಮೋಸ ಹೋಗಿರುವುದು ಅರಿವಿಗೆ ಬಂದಿತ್ತು.

ಇದನ್ನೂ ಓದಿ : ಕೇವಲ ರೂ.999ಕ್ಕೆ ಸಿಗುತ್ತೆ 4ಜಿ ಮೊಬೈಲ್‌ : ಸ್ಮಾರ್ಟ್‌ಪೋನ್‌ ಫೀಚರ್ಸ್‌ಗಳನ್ನೇ ಮೀರಿಸುತ್ತೆ Jio Bharat 4G

ಕೂಡಲೇ ಲದೀತ್‌ ಪಟೇಲ್‌ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡಿರುವ ಅಹಮದಾಬಾದ್‌ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ. ಕಷ್ಟಪಟ್ಟು ದುಡಿದ ಹಣವನ್ನು ಯಾರದೋ ಮಾತಿಗೆ ಮರುಳಾಗಿ ಕಳೆದುಕೊಳ್ಳುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಕ್ರಿಫ್ಟೋ ಕರೆನ್ಸಿಯ ವ್ಯಾಮೋಹಕ್ಕೆ ಒಳಗಾಗಿ ಇದೀಗ ಲದೀತ್‌ ಪಟೇಲ್‌ ತನ್ನ ದುಡಿಮೆ ಎಲ್ಲಾ ಹಣವನ್ನು ಕಳೆದುಕೊಂಡು ಕಂಗಲಾಗಿದ್ದಾನೆ. ಯಾರೇ ಆಗಿದ್ದರೂ ಕೂಡ ಹಣವನ್ನು ಹೂಡಿಕೆ ಮಾಡುವಾಗ ಬಲು ಎಚ್ಚರಿಕೆಯಿಂದ ಇರಬೇಕು. ಅಪರಿಚಿತರ ಜೊತೆಗೆ ವ್ಯವಹಾರ ಮಾಡಿ ಮೋಸ ಹೋಗುವ ಮೊದಲೇ ಎಚ್ಚೆತ್ತುಕೊಳ್ಳುವುದು ಒಳಿತು.

software engineer loses Rs 1 crore in a month, cheated by matrimonial site woman in Ahamedabad

Comments are closed.