ಮಹಾಲಯ ಅಮವಾಸ್ಯೆ ಯ (Mahalaya Amavasya 2023) ದಿನವಾದ ಇಂದು ಸೂರ್ಯಗ್ರಹಣ (Solar eclipse October 2023) ಸಂಭವಿಸಲಿದೆ. ಈ ಸೂರ್ಯಗ್ರಹಣವನ್ನು ರಿಂಗ್ ಆಫ್ ಫೈರ್’ ಸೌರ ಗ್ರಹಣ ಎಂದೂ ಕರೆಯಲಾಗುತ್ತದೆ. ಅಕ್ಟೋಬರ್ ತಿಂಗಳಲ್ಲೇ ಸೂರ್ಯಗ್ರಹಣ (Solar eclipse October 2023) ಹಾಗೂ ಚಂದ್ರಗ್ರಹಣ (lunar eclipse 2023) ಸಂಭವಿಸುತ್ತಿದೆ. ಸೂರ್ಯಗ್ರಹಣದ ಸಮಯ, ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಅಮವಾಸ್ಯೆಯ ದಿನದಂದು ಗೋಚರಿಸುವ ಸೂರ್ಯಗ್ರಹಣವು ಭಾರತದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಭಾರತೀಯ ಕಾಲಮಾದ ಪ್ರಕಾರ ಇಂದು ರಾತ್ರಿ 11.29 ಕ್ಕೆ ಆರಂಭಗೊಳ್ಳಲಿರುವ ಸೂರ್ಯಗ್ರಹಣವು 11.34ಕ್ಕೆ ಕೊನೆಗೊಳ್ಳುತ್ತದೆ. ಸುಮಾರು ಐದು ನಿಮಿಷಗಳ ಕಾಲ ಗ್ರಹಣ ಗೋಚರವಾಗಲಿದೆ.
ಅಕ್ಟೋಬರ್ 14 ರಂದು ಸಂಭವಿಸುತ್ತಿರುವ ಸೂರ್ಯಗ್ರಹಣವು ವರ್ಷದ ಕೊನೆಯ ಸೂರ್ಯಗ್ರಹಣವಾಗಿದೆ. ಅಮೇರಿಕಾದಲ್ಲಿ ವಾರ್ಷಿಕ ಸೂರ್ಯಗ್ರಹಣ ವು ಒರೆಗಾನ್‌ನಲ್ಲಿ ಬೆಳಗ್ಗೆ 9:13 ಗಂಟೆಗೆ ಆರಂಭಗೊಂಡು ಟೆಕ್ಸಾಸ್‌ನಲ್ಲಿ ಮಧ್ಯಾಹ್ನ 12:03ಕ್ಕೆ ಕೊನೆಗೊಳ್ಳುತ್ತದೆ.

ಅಮೇರಿಕಾದಲ್ಲಿ ಈ ಸೂರ್ಯಗ್ರಹಣ ಕಾಣಿಸುತ್ತದೆ. ಅದ್ರಲ್ಲೂ ಯುನೈಟೆಡ್ ಸ್ಟೇಟ್ಸ್, ಮೆಕ್ಸಿಕೋ, ಮಧ್ಯ ಅಮೇರಿಕಾ ಹಾಗೂ ದಕ್ಷಿಣ ಅಮೇರಿಕಾ ಭಾಗಗಳಲ್ಲಿ ಸೂರ್ಯಗ್ರಹಣ ಗೋಚರಿಸಲಿದೆ. ನಾಸಾದ ಮಾಹಿತಿಯ ಪ್ರಕಾರ ಗ್ರಹಣವು ಸೂರ್ಯನ ಮಧ್ಯಭಾಗವನ್ನು ಮಾತ್ರವೇ ಆವರಿಸುತ್ತದೆ. ಹೊರ ಅಂಚು ಉಂಗುರದಂತೆ ಗೋಚರಿಸುತ್ತದೆ. ಆದರೆ ಸಂಪೂರ್ಣವಾಗಿ ಸೂರ್ಯನನ್ನು ಗ್ರಹಣ ಆವರಿಸುವುದಿಲ್ಲ ಎಂದಿದ್ದಾರೆ.
ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆ : ಇದೇ ಕಾರಣಕ್ಕೆ 9 ಲಕ್ಷ ಜನರಿಗೆ ಸಿಗಲ್ಲ ಗೃಹಲಕ್ಷ್ಮೀ ಮೊದಲ ಕಂತಿನ ಹಣ
ಏನಿದು ರಿಂಗ್ ಆಫ್ ಫೈರ್ ಸೂರ್ಯಗ್ರಹಣ ?
ಇಂದು ಗೋಚರಿಸಲಿರುವ ಸೂರ್ಯಗ್ರಹಣವನ್ನು ರಿಂಗ್ ಆಫ್ ಫೈರ್ ಸೂರ್ಯಗ್ರಹಣ ಎಂದು ಕರೆಯಲಾಗುತ್ತದೆ. ಈ ಗ್ರಹಣ ಗೋಚರಿಸುವ ವೇಳೆಯಲ್ಲಿ ಸೌರಮಂಡಲದಲ್ಲಿ ಅಪರೂಪದ ಘಟನೆಗಳು ನಡೆಯಲಿವೆ. ಅದ್ರಲ್ಲೂ ಇಂದು ಸಂಭವಿಸುವ ಸೂರ್ಯಗ್ರಹಣ ಅತ್ಯಂತ ಮಹತ್ವದ್ದಾಗಿದೆ.
ಗ್ರಹಣ ಸಮಯದಲ್ಲಿ ಸೂರ್ಯನು ಅತ್ಯಂತ ಚಿಕ್ಕದಾಗಿ ಕಾಣಿಸುತ್ತಾನೆ. ಚಂದ್ರನು ಭೂಮಿ ಮತ್ತು ಸೂರ್ಯನ ನಡುವೆ ಹೋದಾಗ ಸೂರ್ಯನ ದೂರವು ಸರಾಸರಿಗಿಂತ ಹೆಚ್ಚಳವಾಗುತ್ತದೆ. ಹೀಗಾಗಿ ಸೂರ್ಯನ ಹೊರ ಭಾಗವು ಮಾತ್ರವೇ ಗೋಚರಿಸುತ್ತದೆ.
ಸೂರ್ಯನ ಸಂಪೂರ್ಣ ಭಾಗವು ಚಂದ್ರನಿಂದಲೇ ಆವೃತವಾಗುತ್ತದೆ. ಇದರಿಂದಾಗಿ ರಿಂಗ್ ಆಫ್ ಫೈರ್ ಸೃಷ್ಟಿಯಾಗುತ್ತದೆ. ಇದೇ ಕಾರಣಕ್ಕೆ ಇಂದಿನ ಸೂರ್ಯಗ್ರಹಣವನ್ನು ರಿಂಗ್ ಆಫ್ ಫೈರ್ ಎಕ್ಲಿಪ್ಸ್ ಎಂದು ಕರೆಯುತ್ತಾರೆ. ಈ ಕೌತುಕವನ್ನು ನೋಡಲು ಇಡೀ ವಿಶ್ವವೇ ಕಾತರವಾಗಿದೆ.
ಇದನ್ನೂ ಓದಿ : RBL ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಬಜಾಜ್ ಫೈನಾನ್ಸ್‌ಗೆ ಭಾರಿ ದಂಡ ವಿಧಿಸಿದ RBI
178 ವರ್ಷಗಳ ಬಳಿಕ ಅಮವಾಸ್ಯೆ ದಿನದಂದೇ ಸೂರ್ಯಗ್ರಹಣ !
178 ವರ್ಷಗಳ ಬಳಿಕ ಮಹಾಲಯ ಅಮವಾಸ್ಯೆಯ ದಿನದಂದೇ ಸೂರ್ಯಗ್ರಹಣ ಸಂಭವಿಸುತ್ತಿದೆ. 1845 ರಲ್ಲಿ ಮೊದಲ ಬಾರಿಗೆ ಮಹಾಲಯ ಅಮವಾಸ್ಯೆಯ ದಿನದಂದು ಇಂತಹ ಗ್ರಹಣ ಸಂಭವಿಸಿತ್ತು. ಅಕ್ಟೋಬರ್ ತಿಂಗಳಲ್ಲಿ ಸೂರ್ಯಗ್ರಹಣ ಹಾಗೂ ಚಂದ್ರಗ್ರಹಣ ಸಂಭವಿಸುತ್ತಿರೋದು ಮತ್ತೊಂದು ವಿಶೇಷ.

ಅದರಲ್ಲೂ ಶನಿವಾರದಿಂದ ಗ್ರಹಣ ಸಂಭವಿಸುತ್ತಿರುವುದರಿಂದ ಜ್ಯೋತಿಷ್ಯ ಶಾಸ್ತ್ರದ ಪ್ರಕಾರವಾಗಿಯೂ ಈ ಗ್ರಹಣ ಹೆಚ್ಚು ಮಹತ್ವವನ್ನು ಪಡೆದುಕೊಂಡಿದೆ. ಅದ್ರಲ್ಲೂ ಹಲವು ರಾಶಿಗಳ ಮೇಲೆ ಈ ಗ್ರಹಣವು ಪರಿಣಾಮವನ್ನು ಬೀರುತ್ತದೆ. ಅಕ್ಟೋಬರ್ 29 ರಂದು ಚಂದ್ರಗ್ರಹಣ ಸಂಭವಿಸಲಿದೆ.
ಒಂದೇ ತಿಂಗಳಲ್ಲಿ ಎರಡೆರಡು ಗ್ರಹಣ
ಅಕ್ಟೋಬರ್ ತಿಂಗಳಿನಲ್ಲಿ ಸೂರ್ಯಗ್ರಹಣ ಹಾಗೂ ಚಂದ್ರಗ್ರಹಣ ಸಂಭವಿಸಲಿದೆ. ಒಂದೇ ತಿಂಗಳಲ್ಲಿ ಎರಡು ಗ್ರಹಣಗಳು ಗೋಚರಿಸುತ್ತಿರುವುದು ತೀರಾ ವಿರಳ. ಇಂದು ರಾತ್ರಿ ಸೂರ್ಯಗ್ರಹಣ ಸಂಭವಿಸಿದ್ರೆ, ಅಕ್ಟೋಬರ್ 29 ರಂದು ಚಂದ್ರ ಗ್ರಹಣ ಸಂಭವಿಸಲಿದೆ. ಎರಡು ವಾರಗಳ ಅಂತರದಲ್ಲಿ ಎರಡು ಗ್ರಹಣಗಳು ಎದುರಾಗಲಿವೆ.
ಇದನ್ನೂ ಓದಿ : ದಿನಭವಿಷ್ಯ 14 ಅಕ್ಟೋಬರ್ 2023 : ಸೂರ್ಯಗ್ರಹಣದಿಂದ ಇಂದು ಯಾವ ರಾಶಿಗೆ ಶುಭ
ಭಾರತದಲ್ಲಿ ಸೂರ್ಯಗ್ರಹಣ ಆಚರಣೆ ಇಲ್ಲ
ಅಪರೂಪದ ಈ ಸೂರ್ಯಗ್ರಹಣವು ಇಂದು ಗೋಚರಿಸುತ್ತಿದೆ. ಆದರೆ ಭಾರತದಲ್ಲಿ ಈ ಗ್ರಹಣ ಭಾರತದ ಯಾವುದೇ ಕಡೆಯಲ್ಲಿ ಗೋಚರ ಆಗದೇ ಇರುವ ಹಿನ್ನೆಲೆಯಲ್ಲಿ ಭಾರತದಲ್ಲಿ ಗ್ರಹಣದ ಆಚರಣೆಯನ್ನು ಮಾಡಬೇಕಿಲ್ಲ. ಜೊತೆಗೆ ಭಾರತೀಯರಿಗೆ ಈ ಗ್ರಹಣವು ಯಾವುದೇ ಫಲಾಫಲಗಳನ್ನು ತರುವುದಿಲ್ಲ ಎನ್ನುತ್ತಾರೆ ಜ್ಯೋತಿಷಿಗಳು.
Solar eclipse October 2023 on Mahalaya Amavasya: What is special, when visible, eclipse celebration in India ?